logo
ಕನ್ನಡ ಸುದ್ದಿ  /  ಜೀವನಶೈಲಿ  /  Mental Health: ಭಾರತದ ಯುವಕರನ್ನು ಬಿಡದೇ ಕಾಡುತ್ತಿರುವ ಸಮಸ್ಯೆಗಳಿವು; ಇದಕ್ಕೆ ಕಾರಣವಾದ್ರೂ ಏನು; ಇಲ್ಲಿದೆ ವಿವರ

Mental Health: ಭಾರತದ ಯುವಕರನ್ನು ಬಿಡದೇ ಕಾಡುತ್ತಿರುವ ಸಮಸ್ಯೆಗಳಿವು; ಇದಕ್ಕೆ ಕಾರಣವಾದ್ರೂ ಏನು; ಇಲ್ಲಿದೆ ವಿವರ

Reshma HT Kannada

Dec 21, 2023 11:31 AM IST

google News

ಸಾಂಕೇತಿಕ ಚಿತ್ರ

    • ಗಂಡುಮಕ್ಕಳಿಗೂ ಸಮಸ್ಯೆಗಳಿರುತ್ತವೆ. ಆದರೆ ಗಂಡುಮಕ್ಕಳು ಬಿಚ್ಚು ಮನಸ್ಸಿನವರಲ್ಲ. ಈ ಕಾರಣದಿಂದಲೇ ಅವರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚಿನ ಮಾರ್ಡನ್‌ ಲೈಫ್‌ನಲ್ಲಿ ಗಂಡುಮಕ್ಕಳು ತಮ್ಮದೇ ಆದ ಕೆಲವು ಗಂಭೀರ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರಂತೆ. ಆ ಸಮಸ್ಯೆಗಳು ಯಾವುವು,  ಅದಕ್ಕೆ ಕಾರಣಗಳೇನು ತಿಳಿಯಿರಿ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಹುಡುಗ್ರು ಹೇಗೆ ಇಷ್ಟು ಬಿಂದಾಸ್‌ ಆಗಿ ಇರ್ತಾರೆ, ನಮ್ಮಂತೆ ಅವರು ಅಳೊಲ್ಲ ಯಾಕೆ, ನಮ್ಮಂತೆ ಅವರು ಬೇಸರ ಮಾಡ್‌ಕೊಳ್ಳಲ್ಲ ಯಾಕೆ, ಅವರಿಗೆ ಮನಸ್ಸೇ ಇಲ್ವಾ ಅಂತೆಲ್ಲಾ ಹೆಣ್ಣುಮಕ್ಕಳು ಅಂದ್ಕೋತಾರೆ. ಆದ್ರೆ ಗಂಡು ಮಕ್ಕಳಿಗೂ ಖಂಡಿತ ನೋವಿರುತ್ತೆ. ಅವರಲ್ಲೂ ಸಮಸ್ಯೆಗಳಿರುತ್ತವೆ ಎಂಬುದು ಮಾತ್ರ ಸುಳ್ಳಲ್ಲ. ಅದರಲ್ಲೂ ಇತ್ತೀಚಿನ ಯುವಕರು ಕೆಲವು ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರಂತೆ. ಮಾದಕ ವ್ಯಸನದ ಸಮಸ್ಯೆಗಳಿಂದ ಗಂಡುಮಕ್ಕಳಲ್ಲಿ ಕೆಲವು ಸಂಕೀರ್ಣ ಸಮಸ್ಯೆಗಳು ಎದುರಾಗುತ್ತಿವೆ ಎಂದು ಚೆನ್ನೈನ ನಿಯಮಾ ಡಿಜಿಟಲ್‌ ಹೆಲ್ತ್‌ಕೇರ್‌ನ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಶ್ರೀಕಾಂತ್‌ ಶ್ರೀನಿವಾಸನ್‌ ಹೇಳುತ್ತಾರೆ. ಹಾಗಾದ್ರೆ ಪುರುಷರು ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಕುರಿತಾದ ಒಂದು ಒಳನೋಟ ಇಲ್ಲಿದೆ.

ಅತಿಯಾದ ಮಾದಕ ವ್ಯಸನ

2016ರಲ್ಲಿ ನಿಮ್ಹಾನ್ಸ್‌ ನಡೆಸಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯು ಪುರುಷರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚಿದೆ ಎಂಬುದನ್ನು ತೋರಿಸಿತ್ತು. ಇದಕ್ಕೆ ಕಾರಣ ಹೆಚ್ಚಿದ ತಂಬಾಕು ಸೇವನೆ ಹಾಗೂ ಮದ್ಯಪಾನ. ಆದರೆ ಪುರುಷರ ಈ ಅಭ್ಯಾಸಗಳು ಮಹಿಳೆಯರಲ್ಲಿ ಆತಂಕ ಹಾಗೂ ಖಿನ್ನತೆ ಹೆಚ್ಚಲು ಕಾರಣವಾಗಿದೆ.

ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಬಹುಪಾಲು ಪುರುಷರು ಮಾದಕ ವ್ಯಸನಿಗಳಾಗಿದ್ದಾರೆ ಎಂಬುದನ್ನು ಗಮನಿಸಬಹುದು. ಇದರೊಂದಿಗೆ ಬಹಳಷ್ಟು ಮಂದಿ ತರುಣರು ಇಂಟರ್ನೆಟ್‌ ಬಳಕೆ ಹಾಗೂ ಗೇಮಿಂಗ್‌ಗಳ ಕಾರಣದಿಂದಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿದೆ ಎಂಬುದನ್ನು ಈ ವೇಳೆ ಗಮನಿಸಬಹುದು. ಇದಕ್ಕೆ ಕಾರಣಗಳು ಹಲವು. ಪುರುಷರು ಹೆಚ್ಚು ರಿಸ್ಕ್‌ ತೆಗೆದುಕೊಳ್ಳುತ್ತಾರೆ. ಬಾಲ್ಯದಿಂದಲೇ ಎಂತಹ ತೊಂದರೆಯನ್ನು ಎದುರಿಸುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ.

ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು

ಪ್ರತಿಯೊಬ್ಬರು ಬದುಕಿನಲ್ಲೂ ಒತ್ತಡಗಳು ಇರುವುದು ಸಾಮಾನ್ಯ. ಈ ಒತ್ತಡಗಳು ಉಗಿಬಂಡಿಗಳಂತೆ ಉಗಿಯನ್ನು ಹೊರ ಹಾಕುತ್ತಲೇ ಇರಬೇಕು. ಇದು ಜೀವನದಲ್ಲಿ ಅವಶ್ಯ ಕೂಡ. ನಾವು ತಮ್ಮ ಮನದ ಒತ್ತಡವನ್ನು ಹೊರ ಹಾಕದೇ ಇದ್ದರೆ ಹಲವು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಒತ್ತಡವು ಕೆಲವೊಮ್ಮೆ ಹಿಂಸಾತ್ಮಕವಾಗಿ ಸ್ಫೋಟವಾಗಬಹುದು. ಗಮನಶಕ್ತಿ ಕೊರತೆ, ನಮ್ಮ ಅಭಿವ್ಯಕ್ತಿಯಲ್ಲಿ ತೊಂದರೆ ಉಂಟಾಗುವುದು, ಆಕ್ರಮಣಶೀಲ ನಡವಳಿಕೆ, ಮಾದಕ ವ್ಯಸನ ಹಾಗೂ ಉತ್ತಮ ಶಿಕ್ಷಣ ದೊರೆಯದೇ ಇಂತಹ ಹಲವು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆ ಕಾರಣಕ್ಕೆ ತಮ್ಮ ಭಾವನೆಗಳನ್ನು ಸರಿಯಾಗಿ ಹರಿಯಬಿಡಬೇಕಾಗುತ್ತದೆ. ಅದರ ಪರಿಹಾರಕ್ಕೆ ಉತ್ತಮ ಮಾರ್ಗ ಎಂದರೆ ನಿಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳುವುದು. ನಿಮಗೆ ಆತ್ಮೀಯರು ಎನ್ನಿಸಿಕೊಂಡವರಿಗೆ ನಿಮ್ಮ ಬಗ್ಗೆ ಅಭಿಪ್ರಾಯ ಹೇಳಲು ತಿಳಿಸುವುದು ಹಾಗೂ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು. ಭಾವನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅದನ್ನು ಎದುರಿಸಲು ಇರುವ ಪರಿಣಾಮಕಾರಿ ಮಾರ್ಗ ಎಂದರೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು. ಇದನ್ನು ಯುವಕರು ಕಲಿಯಬೇಕಾಗಿದೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಿದರೆ ಎಲ್ಲಿ ನನ್ನ ಬಗ್ಗೆ ತಪ್ಪಾಗಿ ತಿಳಿಯುತ್ತಾರೋ, ನನ್ನ ಅಹಂಗೆ ಅಡ್ಡಿಯಾಗುವುದೋ ಎನ್ನುವ ಭಾವ ಬಿಡಬೇಕು.

ಪುರುಷರಲ್ಲಿ ಹೆಚ್ಚುತ್ತಿದೆ ಆತ್ಮಹತ್ಯೆ ಪ್ರಕರಣ

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರು ಹಾಗೂ ಪುರುಷರು ಇಬ್ಬರಲ್ಲೂ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿದೆ. ಆದರೆ ಮಹಿಳೆಯರ ಆತ್ಮಹತ್ಯೆಯ ಪ್ರಮಾಣ ತಗ್ಗಿದೆ. ಆದರೆ ಪುರುಷರಲ್ಲಿ ಹಾಗಿಲ್ಲ. ಇದು ನಿಜಕ್ಕೂ ಎಚ್ಚರಿಕೆಯ ಗಂಟೆ. ಭಾರತದಲ್ಲಿ ಅತೀ ಹೆಚ್ಚು ಜನರು ಸಾಯಲು ಎರಡನೇ ಕಾರಣ ಆತ್ಮಹತ್ಯೆಯಾಗಿದೆ, ಇದಕ್ಕಿಂತಲೂ ಆಘಾತಕಾರಿ ಸುದ್ದಿ ಎಂದರೆ ಭಾರತದಲ್ಲಿ 15 ರಿಂದ 39 ವರ್ಷದ ಒಳಗಿನವರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಪುರುಷ ವೈದ್ಯರ ಜೊತೆ ಹೆಚ್ಚು ಕಂಫರ್ಟ್‌ ಫೀಲ್‌

ಪುರುಷರು ಬಹಳ ಭಿನ್ನವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ಅಪಸಾಮಾನ್ಯ ಕ್ರಿಯೆಯಿಂದಾಗಿಯೂ ಹಲವರು ಆತಂಕ ಹಾಗೂ ಖಿನ್ನತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಇವರು ಪುರುಷ ವೈದ್ಯರ ಜೊತೆಗಷ್ಟೇ ಮುಕ್ತವಾಗಿ ಸಂವಾದ ನಡೆಸಲು ಇಚ್ಛಿಸುತ್ತಾರೆ. ಈ ರೀತಿಯ ಲೈಂಗಿಕ ಸಮಸ್ಯೆಗಳು ಸಾಮಾನ್ಯ. ಆದರೆ ಅನಾದಿ ಕಾಲದಿಂದಲೂ ಗಂಡಸರು ಸಮಸ್ಯೆಗಳನ್ನು ಎದುರಿಸಬೇಕು. ನೋವನ್ನು ನುಂಗಿಕೊಳ್ಳಬೇಕು. ಇಂತಹ ಸಮಸ್ಯೆಗಳಿಗೆ ವೈದ್ಯರ ಬಳಿಗೆ ಹೋಗುವುದು ಸರಿಯಲ್ಲ ಎಂಬ ಭಾವನೆ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಇದು ಪುರುಷರು ವೈದ್ಯರ ಬಳಿಗೆ ಹೋಗುವುದು, ಚಿಕಿತ್ಸೆ ಪಡೆಯುವುದನ್ನು ತಡೆಯುತ್ತಿದೆ.

ವರ್ತನೆಗಳು ಬದಲಾಗಬೇಕಿದೆ

ಮಾರ್ಡನ್‌ ಯುಗದಲ್ಲಿ ಮದುವೆಯಾದ ನಂತರ ಗಂಡ-ಹೆಂಡತಿ ಇಬ್ಬರೂ ಸಂಸಾರದ ಭಾರವನ್ನು ಸಮಾನವಾಗಿ ಹೊರಬೇಕು ಎಂಬುದನ್ನು ಪುರುಷರು ಕಲಿಸುವುದಿಲ್ಲ. ಹೆಣ್ಣುಮಕ್ಕಳು ಹೊರಗೆ ತಮ್ಮಷ್ಟೇ ಸಮಾನವಾಗಿ ದುಡಿಯುತ್ತಿದ್ದರೂ ಕೂಡ ಅವರು ರೂಢಿಗತವಾಗಿ ಮನೆಗೆಲಸಗಳನ್ನೂ ಮಾಡಬೇಕು ಎಂದು ಬಯಸುತ್ತಾರೆ. ಇದರೊಂದಿಗೆ ಸಮಾಜಕ್ಕೆ ಹೆದರಿ, ಪೋಷಕರ ಒತ್ತಾಯದಿಂದ ನಡೆದ ಮದುವೆಗಳು ಕೂಡ ಪುರುಷರಲ್ಲಿ ಸಾಂಸಾರಿಕ ಜೀವನದಲ್ಲಿ ಒತ್ತಡ ಉಂಟಾಗಲು ಕಾರಣವಾಗುತ್ತಿದೆ. ಪುರುಷರು ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕು ಎನ್ನುವುದು ಸಹಜ. ಏಕೆಂದರೆ ಹಿಂದಿನಿಂದಲೂ ಹೆಂಡತಿಯ ಮೇಲೆ ಗಂಡಂದಿರಿಗೆ ಇದ್ದ ಭಾವನೆ, ವರ್ತನೆ, ಅಭಿಪ್ರಾಯಗಳು ಬದಲಾಗಲೇಬೇಕಿದೆ. ಇಂದಿನ ಕಾಲಕ್ಕೆ ತಕ್ಕಂತೆ ಮನೋಭಾವವನ್ನು ಬದಲಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ