Infertility: ಪುರುಷರನ್ನು ಕಾಡುವ ಬಂಜೆತನ ಸಮಸ್ಯೆಗೆ ಅಶ್ವಗಂಧವೇ ಮದ್ದು; ಉತ್ತಮ ಫಲಿತಾಂಶಕ್ಕೆ ಹೀಗಿರಲಿ ಬಳಕೆ
ಕನ್ನಡ ಸುದ್ದಿ  /  ಜೀವನಶೈಲಿ  /  Infertility: ಪುರುಷರನ್ನು ಕಾಡುವ ಬಂಜೆತನ ಸಮಸ್ಯೆಗೆ ಅಶ್ವಗಂಧವೇ ಮದ್ದು; ಉತ್ತಮ ಫಲಿತಾಂಶಕ್ಕೆ ಹೀಗಿರಲಿ ಬಳಕೆ

Infertility: ಪುರುಷರನ್ನು ಕಾಡುವ ಬಂಜೆತನ ಸಮಸ್ಯೆಗೆ ಅಶ್ವಗಂಧವೇ ಮದ್ದು; ಉತ್ತಮ ಫಲಿತಾಂಶಕ್ಕೆ ಹೀಗಿರಲಿ ಬಳಕೆ

ಭಾರತದಲ್ಲಿ ಸಿಗುವ ಹಲವು ಗಿಡಮೂಲಿಕೆಗಳು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಅಶ್ವಗಂಧ. ಇದರ ಸೇವನೆಯಿಂದ ಹಲವು ರೀತಿಯಲ್ಲಿ ದೇಹಕ್ಕೆ ಉಪಯೋಗವಾಗುತ್ತದೆ. ಪುರುಷರ ಬಂಜೆತನ ನಿವಾರಣೆಗೆ ಅಶ್ವಗಂಧ ನಿಜಕ್ಕೂ ಉತ್ತಮ ಔಷಧಿ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇತ್ತೀಚಿನ ಒತ್ತಡದ ಯುಗದಲ್ಲಿ ಬಂಜೆತನ ಸಮಸ್ಯೆ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರನ್ನೂ ಬಂಜೆತನ ಕಾಡುತ್ತಿದೆ. ಅಸಮರ್ಪಕ ಆಹಾರ, ಜಡ ಜೀವನಶೈಲಿ, ಅತಿಯಾದ ಒತ್ತಡ ಸೇರಿದಂತೆ ಹಲವು ಕಾರಣಗಳು ಬಂಜೆತನ ಸಮಸ್ಯೆ ಹೆಚ್ಚಲು ಕಾರಣವಾಗುತ್ತಿದೆ. ಈ ಸಮಸ್ಯೆಯಿಂದಾಗಿ ಮಹಿಳೆಯರಲ್ಲಿ ಗರ್ಭ ಧರಿಸಲು ತೊಂದರೆ ಉಂಟಾಗುತ್ತಿದೆ. ಹಲವರಿಗೆ ಮಕ್ಕಳಾಗದೇ ನೋವು ಅನುಭವಿಸುತ್ತಿದ್ದಾರೆ. ಆದರೆ ಬಂಜೆತನ ಸಮಸ್ಯೆ ತಪ್ಪಿಸಲು ಆಹಾರ ಹಾಗೂ ಜೀವನಶೈಲಿಯಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಳ್ಳುವುದು ಉತ್ತಮ.

ಬಂಜೆತನ ನಿವಾರಣೆಗೆ ಆಯುರ್ವೇದದಲ್ಲಿ ಕೆಲವು ಗಿಡಮೂಲಿಕೆಗಳನ್ನು ಹೇಳಲಾಗಿದೆ. ಇವುಗಳ ಸೇವನೆಯಿಂದ ಬಂಜೆತನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ನೀವು ಪರಿಹಾರ ಪಡೆಯುತ್ತೀರಿ. ಈ ಆಯುರ್ವೇದ ಗಿಡಮೂಲಿಕೆಗಳಲ್ಲಿ ಅಶ್ವಗಂಧ ಕೂಡ ಒಂದು. ಬಂಜೆತನ ನಿವಾರಣೆಗೆ ಅಶ್ವಗಂಧ ಬಹಳ ಮುಖ್ಯ ಎನ್ನಲಾಗುತ್ತದೆ. ಹಾಗಾದರೆ ಅಶ್ವಗಂಧ ಸೇವನೆಯಿಂದ ಉಂಟಾಗುವ ಲಾಭ ಮತ್ತು ಅದನ್ನು ಹೇಗೆ ಸೇವಿಸಬೇಕು ಎಂದು ಬಗ್ಗೆ ಇಲ್ಲಿದೆ ವಿವರ.

ಬಂಜೆತನ ನಿವಾರಣೆಗೆ ಅಶ್ವಗಂಧ

ಅಶ್ವಗಂಧ ಸೇವನೆಯಿಂದ ಫಲವಂತಿಕೆ ಹೆಚ್ಚುತ್ತದೆ, ಮಾತ್ರವಲ್ಲ ಇದು ಬಂಜೆತನ ಸಮಸ್ಯೆಯನ್ನೂ ನಿವಾರಿಸುತ್ತದೆ. ಅಶ್ವಗಂಧದಲ್ಲಿರುವ ಗುಣಗಳು ದೇಹದಲ್ಲಿ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ಆರೋಗ್ಯದಿಂದಿರಿಸಲು ಬಹಳ ಪ್ರಯೋಜನಕಾರಿಯಾಗಿದೆ. ಬಂಜೆತನದ ಸಮಸ್ಯೆ ಇರುವ ಹೆಣ್ಣುಮಕ್ಕಳಿಗೆ ಇದರ ಸೇವನೆ ಬಹಳ ಉತ್ತಮ. ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಕಾಡಲು ಕಬ್ಬಿಣಾಂಶದ ಕೊರತೆಯೂ ಕಾರಣವಾಗಬಹುದು. ಅಶ್ವಗಂಧದಲ್ಲಿ ಸಾಕಷ್ಟ ಪ್ರಮಾಣದಲ್ಲಿ ಕಬ್ಬಿಣಾಂಶವಿರುತ್ತದೆ. ಇದು ಅಂತಃಸ್ರಾವಕ ವ್ಯವಸ್ಥೆಯು ದಕ್ಷತೆಯನ್ನು ಹೆಚ್ಚಿಸುತ್ತದೆ. ಇದು ಥೈರಾಯ್ಡ್‌ ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಆರೋಗ್ಯಕವಾಗಿರುಸತ್ತದೆ. ಬಂಜೆತನಕ್ಕೂ ಮಾನಸಿಕ ಆರೋಗ್ಯ ಸಮಸ್ಯೆಗೂ ಸಂಬಂಧಿವಿದೆ. ಅಶ್ವಗಂಧ ಸೇವನೆಯು ಮಾನಸಿಕ ಆರೋಗ್ಯ ಸುಧಾರಿಸುವಲ್ಲೂ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ.

ಪುರುಷರಿಗೆ ಅಶ್ವಗಂಧದ ಪ್ರಯೋಜನ

ಮಹಿಳೆಯರಲ್ಲಿ ಮಾತ್ರವಲ್ಲ ಪುರುಷುರಲ್ಲಿನ ಬಂಜೆತನ ನಿವಾರಣೆಗೂ ಅಶ್ವಗಂಧ ಬಹಳ ಪ್ರಯೋಜನಕಾರಿ. ಅಶ್ವಗಂಧ ಸೇವಿಸುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್‌ ಹಾರ್ಮೋನ್‌ ಮಟ್ಟ ಸುಧಾರಿಸುತ್ತದೆ. ಇದು ಫಲವಂತಿಕೆ ಹೆಚ್ಚಲು ಸಹಕಾರಿ. ಪುರುಷರಲ್ಲಿ ಲೈಂಗಿಕಾಸಕ್ತಿ ಹೆಚ್ಚಲು ಅಶ್ವಗಂಧ ಸೇವನೆ ಉತ್ತಮ. ಇದು ದೇಹದಲ್ಲಿ ಲ್ಯುಟೈನೈಜಿಂಗ್‌ ಹಾರ್ಮೋನ್‌ ಮಟ್ಟವನ್ನು ಹೆಚ್ಚಿಸಲು ತುಂಬಾ ಉಪಯುಕ್ತ ಎಂದು ಪರಿಗಣಿಸಲಾಗಿದೆ.

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ

ಅಶ್ವಗಂಧದಲ್ಲಿರುವ ಔಷಧೀಯ ಗುಣಗಳಿಂದಾಗಿ ಇದನ್ನು ಆಯುರ್ವೇದದಲ್ಲಿ ರಾಮಬಾಣವೆಂದು ಪರಿಗಣಿಸಲಾಗಿದೆ. ಇದನ್ನು ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ. ಇದು ವೀರ್ಯದ ಗುಣಮಟ್ಟವನ್ನು ಕೂಡ ಹೆಚ್ಚಿಸುತ್ತದೆ. ನೀವು ಬಂಜೆತನದ ಸಮಸ್ಯೆ ಎದುರಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಅಶ್ವಗಂಧ ಸೇವಿಸುವುದು ಉತ್ತಮ.

ಅಶ್ವಗಂಧ ಸೇವನೆ ಹೇಗೆ?

ಬಂಜೆತನ ಸಮಸ್ಯೆ ನಿವಾರಣೆಗೆ ಅಶ್ವಗಂಧವನ್ನು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಅಶ್ವಗಂಧವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲಿಗೆ 1 ಚಮಚ ಅಶ್ವಗಂಧ ಪುಡಿ, ಜೇನುತುಪ್ಪ ಹಾಗೂ ಚಿಟಿಕೆ ದಾಲ್ಚಿನ್ನಿ ಪುಡಿಯೊಂದಿಗೆ ಬೆರೆಸಿ ಕುಡಿಯಿರಿ. ಇದನ್ನು ಕೆಲವು ದಿನಗಳವರೆಗೆ ಸೇವಿಸುವುದರಿಂದ ಪುರುಷರು ಹಾಗೂ ಮಹಿಳೆಯರು ಇಬ್ಬರಿಗೂ ಸಾಕಷ್ಟು ಪ್ರಯೋಜನಗಳಿವೆ.

Whats_app_banner