logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್‌ ಆಗುತ್ತಿರುವ ಗ್ರೀಸಿಯಾ ಮುನೋಜ್‌ ಯಾರು; ಜೊಮ್ಯಾಟೊ ಸಿಇಒ ಕೈಹಿಡಿದ ಮೆಕ್ಸಿಕನ್‌ ಮಾಡೆಲ್‌ ಕುರಿತ 5 ವಿಚಾರಗಳು

ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್‌ ಆಗುತ್ತಿರುವ ಗ್ರೀಸಿಯಾ ಮುನೋಜ್‌ ಯಾರು; ಜೊಮ್ಯಾಟೊ ಸಿಇಒ ಕೈಹಿಡಿದ ಮೆಕ್ಸಿಕನ್‌ ಮಾಡೆಲ್‌ ಕುರಿತ 5 ವಿಚಾರಗಳು

Reshma HT Kannada

Mar 22, 2024 03:18 PM IST

google News

ಗ್ರೀಸಿಯಾ ಮುನೋಜ್‌ (ಎಡಚಿತ್ರ) ದೀಪಿಂದರ್‌ ಗೋಯಲ್‌ (ಬಲಚಿತ್ರ)

    • ಭಾರತದ ಜನಪ್ರಿಯ ಫುಡ್‌ ಡೆಲಿವರಿ ಕಂಪನಿ ಜೊಮ್ಯಾಟೊದ ಸಿಇಒ ದೀಪಿಂದರ್‌ ಗೋಯಲ್‌ ಮೆಕ್ಸಿಕನ್‌ ಮಾಡೆಲ್‌ ಗ್ರೀಸಿಯಾ ಮುನೋಜ್‌ ಅವರನ್ನು ಮದುವೆಯಾಗಿದ್ದಾರೆ. ಇತ್ತೀಚಿಗೆ ಹನಿಮೂನ್‌ ಮುಗಿಸಿ ಬಂದಿದೆ ಜೋಡಿ. ಇದೀಗ ಯಾರೀಕೆ ಗ್ರೀಸಿಯಾ ಮುನೋಜ್‌ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಆಕೆಯ ಕುರಿತ ಒಂದಿಷ್ಟು ವಿಚಾರಗಳು ಇಲ್ಲಿವೆ. 
ಗ್ರೀಸಿಯಾ ಮುನೋಜ್‌ (ಎಡಚಿತ್ರ) ದೀಪಿಂದರ್‌ ಗೋಯಲ್‌  (ಬಲಚಿತ್ರ)
ಗ್ರೀಸಿಯಾ ಮುನೋಜ್‌ (ಎಡಚಿತ್ರ) ದೀಪಿಂದರ್‌ ಗೋಯಲ್‌ (ಬಲಚಿತ್ರ)

ಜೊಮ್ಯಾಟೊ ಕಂಪನಿ ಸಿಇಒ ದೀಪಿಂದರ್‌ ಗೋಯಲ್‌ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾರೆ. ಮೆಕ್ಸಿಕನ್‌ ಮೂಲದ ಮಾಡೆಲ್‌ ಒಬ್ಬರನ್ನು ಮದುವೆಯಾಗಿರುವ ದೀಪಿಂದರ್‌ ಇತ್ತೀಚೆಗಷ್ಟೇ ಹನಿಮೂನ್‌ ಮುಗಿಸಿ ಬಂದಿದ್ದಾರೆ. ಇವರು ಕೈ ಹಿಡಿದಿದ್ದು ಗ್ರೀಸಿಯಾ ಮುನೋಜ್‌ ಎಂಬುವವರನ್ನು. ಈ ಜೋಡಿಯ ಮದುವೆ ವಿಚಾರ ತಿಳಿಯುತ್ತಿದ್ದಂತೆ ಯಾರು ಈ ಗ್ರೀಸಿಯಾ ಮುನೋಜ್‌ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.

ಮೆಕ್ಸಿಕನ್‌ ಮೂಲದ ಮಾಡೆಲ್‌ ಆಗಿರುವ ಗ್ರೀಸಿಯಾ ಮುನೋಜ್‌ ಕಳೆದ ಎರಡು ತಿಂಗಳ ಹಿಂದೆಯೇ ದೀಪಿಂದರ್‌ ಅವರನ್ನು ಮದುವೆಯಾಗಿದ್ದರು. ಆದರೆ ಇವರು ಮದುವೆಯ ವಿಚಾರವನ್ನು ಎಲ್ಲಿಯೂ ಬಹಿರಂಗ ಮಾಡಿರಲಿಲ್ಲ. ಮದುವೆಯ ಬಗ್ಗೆ ಹಾಗೂ ಮಡದಿಯ ಬಗ್ಗೆ ದೀಪಿಂದರ್‌ ಕೂಡ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಆಪ್ತ ಮೂಲಗಳ ಪ್ರಕಾರ ಗ್ರೀಸಿಯಾ ಇನ್ನು ಮುಂದೆ ಮಾಡೆಲಿಂಗ್‌ನಲ್ಲಿ ಮುಂದುವರಿಯುವುದಿಲ್ಲ.

ಗ್ರೀಸಿಯಾ ಮುನೋಜ್‌ ಕುರಿತ 5 ವಿಚಾರಗಳು

* ಮೆಕ್ಸಿಕೊ ದೇಶದವರಾದ ಗ್ರೀಸಿಯಾ ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ʼಸದ್ಯ ಭಾರತದಲ್ಲಿದೆ ನನ್ನ ಮನೆʼ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಾವು ಭಾರತದ ಹುಡುಗನನ್ನು ಮದುವೆಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

* ಥ್ರೆಡ್‌ ಬಯೋದಲ್ಲಿ ತನ್ನನ್ನು ತಾನು ಟೆಲಿವಿಷನ್‌ ಹೋಸ್ಟ್‌ ಎಂದು ಹೇಳಿಕೊಂಡಿದ್ದಾರೆ.

* ಜನವರಿಯಲ್ಲಿ ಈಕೆ ದೆಹಲಿಯ ಪ್ರಸಿದ್ಧ ಪ್ರವಾಸಿ ತಾಣಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

* 2022ರಲ್ಲಿ ಅಮೆರಿಕದಲ್ಲಿ ನಡೆದ ಮೆಟ್ರೊಪಾಲಿಟನ್‌ ಫ್ಯಾಷನ್‌ ವೀಕ್‌ ವಿಜೇತರಾಗಿದ್ದರು.

* ಇನ್‌ಸ್ಟಾಗ್ರಾಂ ಬಯೋ ಪ್ರಕಾರ ದೀಪಿಂದರ್‌ ಅವರಿಗಿದು ಎರಡನೇ ಮದುವೆ. ಗ್ರೀಸಿಯಾ ಅವರನ್ನು ಮದುವೆಯಾಗುವ ಮೊದಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ದೆಹಲಿಯಲ್ಲಿ ಓದುತ್ತಿದ್ದಾಗ ಪರಿಚಯವಾಗಿದ್ದ ಕಾಂಚನ್‌ ಜೋಶಿ ಎಂಬುವವರನ್ನು ಮದುವೆಯಾಗಿದ್ದರು.

ದೀಪಿಂದರ್‌ ಗೋಯಲ್‌

ಗುರುಗ್ರಾಮ ಮೂಲದ ದೀಪಿಂದರ್‌ ಗೋಯಲ್‌ ಪಂಜಾನ್‌ನ ಮುಕ್ತಸರ್‌ ಪಟ್ಟಣದಲ್ಲಿ ತಮ್ಮ ಬಾಲ್ಯವನ್ನು ಕಳೆಯುತ್ತಾರೆ. 2008 ರಲ್ಲಿ ಕನ್ಸಲ್ಟಿಂಗ್ ಫರ್ಮ್ ಬೈನ್ & ಕಂಪನಿಯಲ್ಲಿ ಕೆಲಸ ಬಿಟ್ಟ ನಂತರ ತಮ್ಮ ಗೆಳೆಯರೊಂದಿಗೆ ಸೇರಿ ಫುಡ್‌ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸ್ಥಾಪಿಸಿದರು. ಸಸ್ಯಹಾರಿಗಳಾಗಿ

ಪ್ಯುರ್‌ ವೆಜ್‌ ಮೋಡ್‌ ಹಾಗೂ ಪ್ಯುರ್‌ ವೆಜ್‌ ಫ್ಲೀಟ್‌ ಎಂಬ ಪ್ರತ್ಯೇಕ ಹಸಿರು ಸಮವಸ್ತ ಹಾಗೂ ಬ್ಯಾಗ್‌ ತರುವ ಯೋಜನೆಯ ಬಗ್ಗೆ ತಿಳಿಸಿದ್ದ ದೀಪಿಂದರ್‌ ಈ ವಿಚಾರವಾಗಿ ಭಾರಿ ಮುಖಭಂಗ ಅನುಭವಿಸಿದ್ದರು.

ನಂತರ ಈ ಯೋಜನೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದು ಮಾತ್ರವಲ್ಲ ಎಂದಿನಂತೆ ಫುಡ್‌ ಡೆಲಿವರಿ ಏಜೆಂಟ್‌ಗಳು ಕೆಂಪು ಶರ್ಟ್‌ ಹಾಗೂ ಟೀ ಶರ್ಟ್‌ ಧರಿಸಲಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಸ್ಯ ದೀಪಿಂದರ್‌ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಇದು 650 ಮಿಲಿಯನ್‌ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ