Bank Holidays: ಕಾರ್ಮಿಕರ ದಿನ, ಬಸವ ಜಯಂತಿಗೆ ಬ್ಯಾಂಕ್‌ಗಳಿಗೆ ರಜೆ; ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bank Holidays: ಕಾರ್ಮಿಕರ ದಿನ, ಬಸವ ಜಯಂತಿಗೆ ಬ್ಯಾಂಕ್‌ಗಳಿಗೆ ರಜೆ; ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ

Bank Holidays: ಕಾರ್ಮಿಕರ ದಿನ, ಬಸವ ಜಯಂತಿಗೆ ಬ್ಯಾಂಕ್‌ಗಳಿಗೆ ರಜೆ; ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ

Bank Holidays In May: ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಆರ್‌ಬಿಐ ಬಿಡುಗಡೆ ಮಾಡಿದೆ. ಕಾರ್ಮಿಕ ದಿನ, ಬಸವ ಜಯಂತಿ ಸೇರಿ ಕೆಲವು ದಿನಗಳಂದು ಬ್ಯಾಂಕುಗಳನ್ನು ತೆರೆಯುವುದಿಲ್ಲ. ಆ ಪಟ್ಟಿ ಇಲ್ಲಿದೆ.

ಆರ್‌ಬಿಐ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆರ್‌ಬಿಐ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದೆಹಲಿ: ಬ್ಯಾಂಕ್‌ಗಳಿಗೆ ಭೇಟಿ ಕೊಟ್ಟು ನೇರ ವಹಿವಾಟು ನಡೆಸಬೇಕಾದರೆ ಬ್ಯಾಂಕ್ ರಜಾ ದಿನಗಳ ಬಗ್ಗೆ ತಿಳಿದಿರಬೇಕು. ಮೇ ತಿಂಗಳಲ್ಲಿ ಕಾರ್ಮಿಕರ ದಿನ, ಬಸವ ಜಯಂತಿ, ಮಹಾರಾಷ್ಟ್ರ ದಿನದಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಬರೋಬ್ಬರಿ 14 ದಿನ ರಜೆ ಇರುತ್ತದೆ. ಇದರ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'-ಆರ್‌ಬಿಐ ಮೇ ತಿಂಗಳ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ 2024 ರ ಮೇನಲ್ಲಿ 14 ದಿನಗಳು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಇದರಲ್ಲಿ ಸೇರಿವೆ. ಆರ್‌ಬಿಐ ರಜಾದಿನಗಳ ಪಟ್ಟಿಯ ಟಿಪ್ಪಣಿಗಳ ಪ್ರಕಾರ, 2024ರ ಮೇ 1 ರಂದು ಕಾರ್ಮಿಕರ ದಿನಾಚರಣೆ, ಮಹಾರಾಷ್ಟ್ರ ದಿನಾಚರಣೆ ಇರುವುದರಿಂದ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಅಂತಾರಾಷ್ಟ್ರೀಯ ಕಾರ್ಮಿಕರ ದಿನ

ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನು ಮೇ ದಿನ ಅಥವಾ ಕಾರ್ಮಿಕರ ದಿನ ಅಂತ ಕರೆಯಲಾಗುತ್ತದೆ. ಇದನ್ನು ಅಂತಾರಾಷ್ಟ್ರೀಯ ಕಾರ್ಮಿಕ ಹೋರಾಟ ಸಮಿತಿ ಆಚರಿಸುತ್ತದೆ. ಕರ್ನಾಟಕ, ತಮಿಳುನಾಡು, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಕೇರಳ, ಮಹಾರಾಷ್ಟ್ರ, ಬಂಗಾಳ, ಗೋವಾ ಹಾಗೂ ಬಿಹಾರದಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗಿರುತ್ತದೆ.

ಮಹಾರಾಷ್ಟ್ರ ದಿನ

ಮಹಾರಾಷ್ಟ್ರ ದಿನವು ಭಾರತದ ಪ್ರಮುಖ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ರಾಜ್ಯ ರಚನೆಯ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ಮೇ 1 ರಂದು ಆಚರಿಸಲಾಗುತ್ತದೆ.

ಬಸವ ಜಯಂತಿಯಂದು ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ

ಪ್ರತಿ ವರ್ಷ ಮೇ 10 ರಂದು ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದು ಅಕ್ಷಯ ತೃತೀಯ ಕೂಡ ಇದೆ. ಬಸವ ಜಯಂತಿಯಂದು ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.

2024ರ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

ಮೇ 7 (ಮಂಗಳವಾರ): ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಗೋವಾದಲ್ಲಿ ಮೇ 7ರಂದು ಲೋಕಸಭಾ ಚುನಾವಣೆ ನಡೆಯಲಿದ್ದು ಅಂದು ಆ ಭಾಗದಲ್ಲಿ ಸಾರ್ವತ್ರಿಕ ರಜೆ ಇರುತ್ತದೆ.

ಮೇ 8 (ಬುಧವಾರ): ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.

ಮೇ 10 (ಶುಕ್ರವಾರ): ಬಸವ ಜಯಂತಿ/ ಅಕ್ಷಯ ತೃತೀಯ, ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಘೋಷಣೆ

ಮೇ 13 (ಮಂಗಳವಾರ): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಸಾರ್ವತ್ರಿಕ ರಜೆ ಇರುತ್ತದೆ

ಮೇ 16 (ಗುರುವಾರ): ರಾಜ್ಯ ಸಂಸ್ಥಾಪನಾ ದಿನ ಹಿನ್ನೆಲೆಯಲ್ಲಿ ಸಿಕ್ಕಿಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.

ಮೇ 20 (ಸೋಮವಾರ): ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.

ಮೇ 23 (ಗುರುವಾರ): ಬುದ್ಧ ಪೂರ್ಣಿಮಾ ಹಿನ್ನೆಲೆಯಲ್ಲಿ ತ್ರಿಪುರಾ, ಮಿಜೋರಾಂ, ಮಧ್ಯಪ್ರದೇಶ, ಚಂಡೀಗಢ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಜಮ್ಮು, ಲಕ್ನೋ, ಬಂಗಾಳ, ದೆಹಲಿ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ, ಶ್ರೀನಗರದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಮೇ 25 (ಶನಿವಾರ): ನಜ್ರುಲ್ ಜಯಂತಿ ಹಾಗೂ ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ತ್ರಿಪುರಾ, ಒರಿಸ್ಸಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮೇ 25 ರಂದು ನಾಲ್ಕನೇ ಶನಿವಾರ ಇರುತ್ತದೆ.

ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

ಮಹಾರಾಷ್ಟ್ರ ದಿನ / ಮೇ ದಿನ (ಕಾರ್ಮಿಕ ದಿನ), ಬಸವ ಜಯಂತಿ / ಅಕ್ಷಯ ತೃತೀಯ, ಲೋಕಸಭಾ ಸಾರ್ವತ್ರಿಕ ಚುನಾವಣೆ 2024, ಲೋಕಸಭಾ ಚುನಾವಣೆ 2024, ರವೀಂದ್ರನಾಥ ಟ್ಯಾಗೋರ್ ಜನ್ಮದಿನ, ರಾಜ್ಯ ರಚನೆ ದಿನ, ಬುದ್ಧ ಪೂರ್ಣಿಮಾ ಹಾಗೂ ನಜ್ರುಲ್ ಜಯಂತಿಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ಮೇ 5, 12, 19 ಹಾಗೂ 26 ರಂದು ಭಾನುವಾರ ಕಾರಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.