logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀವಿನ್ನೂ ಬೇಲೂರು, ಹಳೆಬೀಡು ನೋಡಿಲ್ವಾ, ಇದರ ಜತೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಹೋಗಿ ಬನ್ನಿ; ಇಲ್ಲಿದೆ ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ವಿವರ

ನೀವಿನ್ನೂ ಬೇಲೂರು, ಹಳೆಬೀಡು ನೋಡಿಲ್ವಾ, ಇದರ ಜತೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಹೋಗಿ ಬನ್ನಿ; ಇಲ್ಲಿದೆ ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ವಿವರ

Reshma HT Kannada

Nov 10, 2024 01:02 PM IST

google News

ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್

    • ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ(ಕೆಎಸ್‌ಟಿಡಿಸಿ) ವು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಐತಿಹಾಸಿಕ ತಾಣಗಳಾದ ಬೇಲೂರು, ಹಳೆಬೀಡು ನೋಡದವರು ಇದರ ಜೊತೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಹೋಗಿ ಬರಬಹುದು. 2 ದಿನಗಳ ಟೂರ್ ಪ್ಯಾಕೇಜ್ ವಿವರ ಹೀಗಿದೆ.
ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್
ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ (PC: Karnataka Tourism )

ಕರ್ನಾಟಕದಲ್ಲಿ ಹಲವು ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ತಾಣಗಳಿವೆ. ನಮ್ಮ ರಾಜ್ಯದಲ್ಲೇ ಇರುವ ಎಷ್ಟೋ ಪ್ರವಾಸಿ ತಾಣಗಳನ್ನ ನಾವಿನ್ನೂ ಕಂಡಿರುವುದಿಲ್ಲ. ಅಂತಹ ಪ್ರವಾಸಿ ತಾಣಗಳನ್ನು ಕಾಣುವ ಅವಕಾಶವನ್ನ ರಾಜ್ಯದ ಜನತೆಗೆ ಒದಗಿಸಿಕೊಡುತ್ತಿದೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ (ಕೆಎಸ್‌ಟಿಡಿಸಿ).

ಹೌದು, ಕೆಎಸ್‌ಟಿಡಿಸಿ ಇದೀಗ ಹಲವು ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್‌ಗಳ ಮೂಲಕ ನೀವು ರಾಜ್ಯದ ಹಲವು ಪ್ರಸಿದ್ಧ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಹೆರಿಟೇಜ್ ಹಾಲಿಡೇಸ್ ಹಾಗೂ ಪಿಲಿಗ್ರಿಮೇಜ್ ಹಾಲಿಡೇಸ್ ಪ್ಯಾಕೇಜ್‌ನಲ್ಲಿ ಇದೀಗ ಬೇಲೂರು, ಹಳೆಬೀಡಿನಂತಹ ಐಸಿಹಾಸಿಕ ತಾಣಗಳ ಜೊತೆಗೆ ಧರ್ಮಸ್ಥಳ, ಸುಬ್ರಹ್ಮಣ್ಯವನ್ನೂ ನೋಡಿ ಬರಬಹುದು. ಏನಿದು ಟೂರ್‌ ಪ್ಯಾಕೇಜ್‌, ಎಷ್ಟು ದಿನಗಳು, ಮಾರ್ಗ ಯಾವುದು, ದರ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ಹಳೆಬೀಡು ಬೇಲೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ

ಈ ಟೂರ್ ಪ್ಯಾಕೇಜ್ ಬೆಂಗಳೂರಿನವರಿಗೆ. ಯಶವಂತಪುರದ ಕೆಎಸ್‌ಟಿಡಿಸಿ ಮುಖ್ಯ ಕಚೇರಿಯಿಂದ ಬಸ್ ಹೊರಡುತ್ತದೆ. ಇದು ಎರಡು ಹಗಲು ಹಾಗೂ 1 ರಾತ್ರಿಯ ಪ್ಯಾಕೇಜ್ ಆಗಿದೆ. ಬೆಳಿಗ್ಗೆ 6.30ಕ್ಕೆ ಯಶವಂತಪುರದಿಂದ ಹೊರಲಾಗುತ್ತದೆ. ಇದು ಪ್ರತಿದಿನ ಇರುವ ಟೂರ್ ಪ್ಯಾಕೇಜ್ ಆಗಿದೆ.

‌ಮೊದಲ ದಿನ ಪ್ರಯಾಣ ಹೀಗಿರುತ್ತೆ

  • ಬೆಳಿಗ್ಗೆ 6.30: ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡುವುದು.
  • 8.30 ಯಡಿಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ
  • 9.30ಕ್ಕೆ ಮಯೂರು ಪವಿತ್ರ ಯಡಿಯೂರಿನಲ್ಲಿ ಉಪಾಹಾರ
  • 10 ಗಂಟೆಗೆ ಶ್ರವಣ ಬೆಳಗೊಳದ ಬಾಹುಬಲಿ ಪ್ರತಿಮೆ ಇರುವ ಜಾಗಕ್ಕೆ ಭೇಟಿ
  • 12.30ಕ್ಕೆ ಶ್ರವಣ ಬೆಳಗೊಳದಿಂದ ಹೊರಡುವುದು
  • ಮಧ್ಯಾಹ್ನ 1.30ಕ್ಕೆ ಹಳೇಬೀಡಿನ ಮಯೂರ ಶಾಂತಲಾದಲ್ಲಿ ಊಟ. ನಂತರ ಅಲ್ಲೇ ಇರುವ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ದೇವಸ್ಥಾನಕ್ಕೆ ಭೇಟಿ
  • 3.30ಕ್ಕೆ ಹಳೆಬೀಡಿನಿಂದ ಹೊರಡುವುದು
  • 4 ಗಂಟೆ ಬೇಲೂರು ತಲುಪುದು
  • 4:00 ರಿಂದ 5:30 ರವರೆಗೆ ಬೇಲೂರು ಚನ್ನಕೇಶ್ವರ ದೇವಸ್ಥಾನದ ನೋಡುವುದು
  • ಸಂಜೆ 5:30ಕ್ಕೆ ಬೇಲೂರಿನಿಂದ ಹೊರಡುವುದು
  • ಆ ದಿನ ಬೇಲೂರಿನಲ್ಲಿ ಮಯೂರ ಯಗಚಿ/ ಮಯೂರ ವೇಲಾಪುರಿನಲ್ಲಿ ರಾತ್ರಿ ಉಳಿಯುವುದು.

ಇದನ್ನೂ ಓದಿ: Mysore Tour packages: ಮೈಸೂರು ದಸರಾ ಪ್ರವಾಸ ಬರುತ್ತೀದ್ದೀರಾ, ಕೆಎಸ್‌ಟಿಡಿಸಿ ಗೋವಾ, ಊಟಿ ಸಹಿತ ಹಲವು ಟೂರ್‌ ಪ್ಯಾಕೇಜ್‌ ಉಂಟು

ಎರಡನೇ ದಿನದ ಪ್ರಯಾಣ ವಿವರ

  • 8 ಗಂಟೆಗೆ ಉಪಾಹಾರ ಮುಗಿಸಿ ಧರ್ಮಸ್ಥಳಕ್ಕೆ ಹೊರಡುವುದು
  • 11:30ಕ್ಕೆ ಧರ್ಮಸ್ಥಳಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ
  • ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಿಂದ ಹೊರಡುವುದು
  • 3:30ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಆದಿ ಸುಬ್ರಹ್ಮಣ್ಯ ಮತ್ತು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ
  • ಸಂಜೆ 5ಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಡುವುದು
  • ರಾತ್ರಿ 9 ಗಂಟೆಗೆ ಯಡಿಯೂರಿನ ಮಯೂರ ಪವಿತ್ರದಲ್ಲಿ ಊಟ
  • ರಾತ್ರಿ 10.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪುವುದು

ಇದನ್ನೂ ಓದಿ: ಮೈಸೂರು-ಹಾಸನ 2 ದಿನಗಳ ಪ್ರವಾಸ‌ ಪ್ಯಾಕೇಜ್; ಕಡಿಮೆ ಬಜೆಟ್‌ನಲ್ಲಿ ಅರಮನೆ ಸೌಂದರ್ಯ, ಶಿಲ್ಪಕಲೆಯ ಶ್ರೀಮಂತಿಕೆ ನೋಡ ಬನ್ನಿ

ದರ, ಬುಕ್ಕಿಂಗ್ ವಿವರ 

ಈ ಟೂರ್ ಪ್ಯಾಕೆಟ್ ದರ ಒಬ್ಬರಿಗೆ 3999ರೂ ಆಗಿರುತ್ತದೆ. ಇದರಲ್ಲಿ ಎಸಿ ಡಿಲಕ್ಸ್ ಬಸ್ ಇರುತ್ತದೆ. ಹೆಚ್ಚಿನ ಮಾಹಿತಿಗೆ +91 80-4334 4334/36/42 ಈ ನಂಬರ್ ಅನ್ನು ಕಾಂಟ್ಯಾಕ್ಟ್ ಮಾಡಬಹುದು. ಆನ್‌ಲೈನ್ ಬುಕಿಂಗ್: www.kstdc.co.

ನೀವಿನ್ನೂ ಈ ಜಾಗಗಳನ್ನು ನೋಡಿಲ್ಲ ಎಂದಾದರೆ ನೋಡುವ ಬಯಕೆ ಇದ್ದರೆ ಈಗಲೇ ಈ ಟೂರ್ ಪ್ಯಾಕೇಜ್ ಅನ್ನು ಬುಕ್ ಮಾಡಿಕೊಳ್ಳಬಹುದು. ಬಸ್‌, ಊಟ, ಉಳಿಯುವ ವ್ಯವಸ್ಥೆಯನ್ನೂ ಎಲ್ಲವೂ ಇರುವ ಒಂದು ಉತ್ತಮ ಟೂರ್ ಪ್ಯಾಕೇಜ್ ಇದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ