ಮೈಸೂರು-ಹಾಸನ 2 ದಿನಗಳ ಪ್ರವಾಸ‌ ಪ್ಯಾಕೇಜ್; ಕಡಿಮೆ ಬಜೆಟ್‌ನಲ್ಲಿ ಅರಮನೆ ಸೌಂದರ್ಯ, ಶಿಲ್ಪಕಲೆಯ ಶ್ರೀಮಂತಿಕೆ ನೋಡ ಬನ್ನಿ-mysore hassan tour package from kstdc from bengaluru beluru halebeedu shravanabelagola travel guide jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮೈಸೂರು-ಹಾಸನ 2 ದಿನಗಳ ಪ್ರವಾಸ‌ ಪ್ಯಾಕೇಜ್; ಕಡಿಮೆ ಬಜೆಟ್‌ನಲ್ಲಿ ಅರಮನೆ ಸೌಂದರ್ಯ, ಶಿಲ್ಪಕಲೆಯ ಶ್ರೀಮಂತಿಕೆ ನೋಡ ಬನ್ನಿ

ಮೈಸೂರು-ಹಾಸನ 2 ದಿನಗಳ ಪ್ರವಾಸ‌ ಪ್ಯಾಕೇಜ್; ಕಡಿಮೆ ಬಜೆಟ್‌ನಲ್ಲಿ ಅರಮನೆ ಸೌಂದರ್ಯ, ಶಿಲ್ಪಕಲೆಯ ಶ್ರೀಮಂತಿಕೆ ನೋಡ ಬನ್ನಿ

ಬೆಂಗಳೂರಿನಿಂದ ಮೈಸೂರು ಕಡೆಗೆ ಕಡಿಮೆ ಬಜೆಟ್‌ನಲ್ಲಿ ಪ್ರವಾಸದ ಯೋಜನೆ ಮಾಡುತ್ತಿದ್ದರೆ, ಈ ಪ್ಯಾಕೇಜ್‌ ನಿಮಗೆ ನೆರವಾಗಬಹುದು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಈ ಪ್ರವಾಸ ಯೋಜನೆಯಲ್ಲಿ ನೀವು ಯಾವುದೇ ಚಿಂತೆಯಿಲ್ಲದೆ ಎರಡು ದಿನ ಪ್ರವಾಸ ಮುಗಿಸಬಹುದು.

ಮೈಸೂರು-ಹಾಸನ 2 ದಿನಗಳ ಪ್ರವಾಸ‌ ಪ್ಯಾಕೇಜ್; ಕಡಿಮೆ ಬಜೆಟ್‌ನಲ್ಲಿ ಅರಮನೆ ಸೌಂದರ್ಯ ಸವಿಯಿರಿ
ಮೈಸೂರು-ಹಾಸನ 2 ದಿನಗಳ ಪ್ರವಾಸ‌ ಪ್ಯಾಕೇಜ್; ಕಡಿಮೆ ಬಜೆಟ್‌ನಲ್ಲಿ ಅರಮನೆ ಸೌಂದರ್ಯ ಸವಿಯಿರಿ (Pixabay)

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಪ್ರವಾಸ ಪ್ರಿಯರಿಗಾಗಿ ಹಲವು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಬೆಂಗಳೂರು ಮಾತ್ರವಲ್ಲದೆ ಗಾರ್ಡನ್‌ ಸಿಟಿಯ ಹೊರಭಾಗಕ್ಕೂ ರಾಜ್ಯ ಸಾರಿಗ್‌ ಬಸ್‌ನಲ್ಲೇ ಪ್ರವಾಸದ ವ್ಯವಸ್ಥೆ ಮಾಡಿದೆ. ಒಂದು ದಿನ ಮಾತ್ರವಲ್ಲದೆ ಒಂದಕ್ಕಿಂತ ಹೆಚ್ಚು ದಿನಗಳ ಪ್ಯಾಕೇಜ್‌ ಕೂಡಾ ಇದರಲ್ಲಿದೆ. ಕಡಿಮೆ ಬಜೆಟ್‌ನಲ್ಲಿ ನೀವು ಮೈಸೂರು ಪ್ರವಾಸ ಮುಗಿಸಬೇಕು ಎಂದರೆ ಎರಡು ದಿನಗಳ ಪ್ರವಾಸ ಪ್ಯಾಕೇಜ್‌ ನಿಮಗೆ ಇಷ್ಟವಾಗಬಹುದು.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು, ಹಲವು ಪ್ರವಾಸಿ ತಾಣಗಳ ತವರು. ಶ್ರೀಮಂತ ಇತಿಹಾಸವನ್ನು ಸಾರುವ ನಗರಕ್ಕೆ ಬೆಂಗಳೂರಿನಿಂದ ಸುಲಭವಾಗಿ ಪ್ರವಾಸ ಮಾಡಲು ಅತ್ಯುತ್ತಮ ಪ್ಯಾಕೇಜ್‌ ಇದಾಗಿದೆ. ಮೈಸೂರು ನಗರದ ರಾಜವೈಭವದ ಜೊತೆಗೆ, ಶಿಲ್ಪಕಲೆಗಳ ತವರು ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ಕೂಡಾ ಈ ಪ್ಯಾಕೇಜ್‌ನಲ್ಲಿ ನೋಡಬಹುದು. ಇಷ್ಟೇ ಅಲ್ಲದೆ ಅತಿ ದೊಡ್ಡ ಗೋಮಟೇಶ್ವರನ ವಿಗ್ರಹವಿರುವ ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆಯನ್ನು ಕೂಡಾ ನೋಡಬಹುದು.

ಯಾವೆಲ್ಲಾ ಸ್ಥಳಗಳನ್ನು ನೋಡಬಹುದು?

ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸಂತ ಫಿಲೋಮಿನಾ ಚರ್ಚ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಬೃಂದಾವನ ಗಾರ್ಡನ್, ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳ.

ಎರಡು ದಿನಗಳ ಈ ಪ್ರವಾಸವನ್ನು ಹವಾನಿಯಂತ್ರಿತ ಡಿಲಕ್ಸ್ ಕೋಚ್ ಬಸ್‌ನಲ್ಲಿ ಆನಂದಿಸಬಹುದು. ಇದೇ ವೇಳೆ ಕೆಆರ್‌ಎಸ್ ಹೋಟೆಲ್ ಮಯೂರ ಕಾವೇರಿಯಲ್ಲಿ ರಾತ್ರಿಯ ವಾಸ್ತವ್ಯ ಹೂಡಬಹುದು. ಪ್ರವಾಸದ ವೇಳೆ ವೃತ್ತಿಪರ ಮಾರ್ಗದರ್ಶಿಗಳಿಂದ ಮಾರ್ಗದರ್ಶನವನ್ನೂ ನೀಡಲಾಗುತ್ತದೆ.

ಪ್ರವಾಸದ ರೂಟ್‌ ಮ್ಯಾಪ್‌ ಹೀಗಿದೆ…

ಮೊದಲ ದಿನ

  • ಬೆಳಗ್ಗೆ 6.30ಕ್ಕೆ ಕೆಎಸ್‌ಟಿಡಿಸಿ ಯಶವಂತಪುರ ಬೆಂಗಳೂರಿನಿಂದ ಬಸ್‌ ನಿರ್ಗಮನ
  • ಬೆಳಗ್ಗೆ 08.30 – 9.00 ಚನ್ನಪಟ್ಟಣದಲ್ಲಿ ಉಪಾಹಾರ
  • 10.30 - 11.00 ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್ ಭೇಟಿ
  • 11.15 - 11.45 ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ
  • 12.15ರಿಂದ 12.30ರವರೆಗೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್
  • ಮಧ್ಯಾಹ್ನ 1.00 - 2.00 ಹೋಟೆಲ್ ಮಯೂರ ಹೊಯ್ಸಳದಲ್ಲಿ ಊಟ
  • 2.30 - 3.30 ಮೈಸೂರು ಅರಮನೆ ಭೇಟಿ
  • 03.45ರಿಂದ 4.45 ಶ್ರೀ ಜಯಚಾಮರಂದ್ರ ಒಡೆಯರ್ ಮೃಗಾಲಯಕ್ಕೆ ಭೇಟಿ
  • ಸಂಜೆ 04.45 - 05.30 ಚಾಮುಂಡಿ ಬೆಟ್ಟ
  • ಸಂಜೆ 05.30 - 06.30ಕ್ಕೆ ಬೃಂದಾವನ ಉದ್ಯಾನ ಕೆಆರ್‌ಎಸ್‌ಗೆ ಭೇಟಿ
  • ಆ ಬಳಿಕ ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿ ವಾಸ್ತವ್ಯ

ಎರಡನೇ ದಿನ

  • ಬೆಳಗ್ಗಿನ ಉಪಾಹಾರದ ನಂತರ 7.00 ಗಂಟೆಗೆ ಕೆಆರ್‌ಎಸ್‌ನಿಂದ ನಿರ್ಗಮನ
  • ಬೆಳಗ್ಗೆ 8.30 - 10.00 ಶ್ರವಣಬೆಳಗೊಳ ಪ್ರಯಾಣ
  • ಮಧ್ಯಾಹ್ನ 12.00 ಗಂಟೆಗೆ ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ಭೇಟಿ
  • ಮಧ್ಯಾಹ್ನ 01.30 - 02.00 ಮಧ್ಯಾಹ್ನ ಹೋಟೆಲ್ ಮಯೂರ ವೇಲಾಪುರಿಯಲ್ಲಿ ಊಟ
  • ಮಧ್ಯಾಹ್ನ 02.30 - 03.30 ಗಂಟೆಗೆ ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು ಭೇಟಿ
  • 03.45 ರಿಂದ 04.15 ರವರೆಗೆ ಬೆಳವಡಿ ವೀರನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ
  • ರಾತ್ರಿ 08.30ಕ್ಕೆ ಬೆಂಗಳೂರು ಕೆಎಸ್‌ಟಿಡಿಸಿ ಕಚೇರಿಗೆ ತಲುಪುವುದರೊಂದಿಗೆ ಪ್ರವಾಸ ಮುಕ್ತಾಯ

ಪ್ರವಾಸ ಶುಲ್ಕ ಎಷ್ಟು?

ಎರಡು ದಿನಗಳ ಪ್ರವಾಸಕ್ಕೆ ಒಬ್ಬರಿಗೆ 2772 ರೂಪಾಯಿ ಶುಲ್ಕವಿದೆ. ಇದರಲ್ಲಿ ಬಸ್‌ ಪ್ರಯಾಣ ಮತ್ತು ವಾಸ್ತವ್ಯದ ವೆಚ್ಚ ಸೇರುತ್ತದೆ. ಉಳಿದಂತೆ ಆಹಾರ ಹಾಗೂ ಪ್ರವೇಶ ಶುಲ್ಕಗಳನ್ನು ಪ್ರವಾಸಿಗರೇ ಭರಿಸಬೇಕಾಗುತ್ತದೆ ಎಂದು KSTDC ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.