ಮತ್ತೆ ಮತ್ತೆ ಟೊಮೆಟೊ ದರ ಏರಿಕೆಯಾಗ್ತಿದೆ ಅಂತ ಯೋಚಿಸಬೇಡಿ, ಮನೆಯಲ್ಲೇ ಸುಲಭವಾಗಿ ಟೊಮೆಟೊ ಗಿಡ ಬೆಳೆಸಲು ಈ ಸಲಹೆ ಪಾಲಿಸಿ
Oct 08, 2024 08:21 PM IST
ಮನೆಯಲ್ಲೇ ಟೊಮೆಟೊ ಬೆಳೆದುಕೊಳ್ಳುವ ವಿಧಾನ
- ಟೊಮೆಟೊ ದರ 100ರ ಗಟಿ ದಾಟಿದೆ. ಕಳೆದ ವರ್ಷದಂತೆ ಈ ವರ್ಷವೂ ಟೊಮೆಟೊ ಇನ್ನಷ್ಟು ಹುಳಿಯಾಗುವುದು ಖಂಡಿತ. ಪದೇ ಪದೇ ಟೊಮೆಟೊ ದರ ಜಾಸ್ತಿ ಆಗ್ತಾ ಇದ್ರೆ ಏನಪ್ಪಾ ಮಾಡೋದು ಅಂತ ಚಿಂತೆ ಮಾಡ್ಬೇಡಿ, ಮನೆಯಲ್ಲಿ ಟೊಮೆಟೊ ಬೆಳ್ಕೊಂಡ್ರೆ ಯಾವಾಗ ಟೊಮೆಟೊ ದರ ಹೆಚ್ಚಾದ್ರೂ ಯೋಚ್ನೆ ಇರೋಲ್ಲ. ಕುಂಡದಲ್ಲಿ ಟೊಮೆಟೊ ಹೇಗೆ ಬೆಳೆಯೋದು ನೋಡಿ.
ಕಳೆದ ವರ್ಷ ಭಾರಿ ಏರಿಕೆ ಕಂಡು ಗೃಹಿಣಿಯರ ಕಣ್ಣೀರಿಗೆ ಕಾರಣವಾಗಿದ್ದ ಟೊಮೆಟೊ ದರ ಇದೀಗ ಮತ್ತೆ ಏರಿಕೆಯಾಗುತ್ತಿದೆ. ಈ ವರ್ಷ ಇಳುವರಿ ಕುಸಿತದ ಕಾರಣ ಪುನಃ ಟೊಮೆಟೊ ದರ ಏರಿಕೆಯಾಗಿದೆ. ಈಗಾಗಲೇ 100ರೂ ದಾಟಿರುವ ಟೊಮೆಟೊ ದರ ಇನ್ನಷ್ಟು ಏರಿಕೆಯಾಗುವ ಸಂಭವವಿದೆ. ಇದರಿಂದ ಗೃಹಿಣಿಯರು ಗಾಬರಿಗೆ ಒಳಗಾಗಿರುವುದು ಸುಳ್ಳಲ್ಲ.
ಪದೇ ಪದೇ ಟೊಮೆಟೊ ದರ ಜಾಸ್ತಿ ಆಗ್ತಾ ಇದ್ರೆ ಟೊಮೆಟೊ ತರೋದು ಕಷ್ಟ ಆಗುತ್ತೆ, ಹಾಗಂತ ಟೊಮೆಟೊ ಇಲ್ಲ ಅಂದ್ರೆ ಅಡುಗೆನೂ ರುಚಿ ಆಗಲ್ಲ. ಅದರ ಬದಲು ಏನಪ್ಪಾ ಮಾಡೋದು ಅಂತ ಚಿಂತೆ ನಿಮಗಿದ್ರೆ ಮನೆಯಲ್ಲೇ ಟೊಮೆಟೊ ಬೆಳ್ಕೊಳ್ಳಿ, ಇದ್ರಿಂದ ಯಾವಾಗ ಟೊಮೆಟೊ ದರ ಹೆಚ್ಚಾದ್ರೂ ನಿಮಗೆ ಚಿಂತೆ ಇರೊಲ್ಲ. ಮನೆಯಲ್ಲಿ ಹೇಗೆಪ್ಪಾ ಟೊಮೆಟೊ ಬೆಳಿಯೋದು ಅಂತ ಯೋಚಿಸ್ತಾ ಇದ್ದೀರಾ, ಮನೆಯಲ್ಲೇ ಸುಲಭವಾಗಿ ಟೊಮೆಟೊ ಬೆಳೆದುಕೊಳ್ಳುವ ವಿಧಾನ ಇಲ್ಲಿದೆ ನೋಡಿ.
ಟೊಮೆಟೊ ಬೆಳೆಯು ವಿಧಾನ
* ಮೊದಲು ಮಾರುಕಟ್ಟೆಯಿಂದ ಟೊಮೆಟೊ ಬೀಜಗಳನ್ನು ತನ್ನಿ. ನಂತರ ಅದಕ್ಕಾಗಿ ಮಣ್ಣನ್ನು ಸಿದ್ಧಪಡಿಸಬೇಕಾಗುತ್ತದೆ. ಮಣ್ಣಿನಲ್ಲಿ 6.0 ರಿಂದ 6.8 ಪಿಎಚ್ ಅಂಶ ಇರುವುದು ಟೊಮೆಟೊಗೆ ಉತ್ತಮವಾಗಿದೆ. ನಿಮ್ಮ ಮನೆಯ ಗಾರ್ಡನ್ ಅಥವಾ ಕುಂಡದಲ್ಲೂ ಟೊಮೆಟೊ ಗಿಡ ಬೆಳೆಸಬಹುದು. ದಕ್ಕಾಗಿ, ಮಣ್ಣನ್ನು ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಒಣಗಿಸಿ, ಅದಕ್ಕೆ ಕಾಂಪೋಸ್ಟ್ ಗೊಬ್ಬರವನ್ನು ಸೇರಿಸಿ.
* ಬೀಜಗಳಿಂದ ಸಸ್ಯಗಳನ್ನು ಬೆಳೆಸಲು ಸಣ್ಣ ಕಾಗದದ ಕಪ್‌ಗಳನ್ನು ಸಹ ಬಳಸಬಹುದು. ಆದರೆ ನೀರು ಹಾಕುತ್ತಲೇ ಇರಬೇಕು. 8 ರಿಂದ 10 ದಿನಗಳಲ್ಲಿ ಸಣ್ಣ ಗಿಡಗಳು ಬೆಳೆಯಲು ಪ್ರಾರಂಭಿಸುತ್ತದೆ. ನಂತರ ಟೊಮೆಟೊ ಸಸಿಯನ್ನು ದೊಡ್ಡ ಪಾತ್ರೆಯಲ್ಲಿ ಇರಿಸಿ. ಅವಶ್ಯಕತೆಗೆ ಅನುಗುಣವಾಗಿ ಮಣ್ಣು ಸೇರಿಸಿ. ನಂತರ, ಸಣ್ಣ ಗಿಡವನ್ನು ಅದರ ಬೇರುಗಳಿಗೆ ಹಾನಿಯಾಗದಂತೆ ಕುಂಡದಲ್ಲಿ ನೆಟ್ಟು, ಕಾಲಕಾಲಕ್ಕೆ ನೀರು ಹಾಕುತ್ತಿರಿ.
* ಸಸ್ಯದಲ್ಲಿ ಹೂವುಗಳು ಅರಳಲು ಪ್ರಾರಂಭಿಸಿದಾಗ, ಗೊಬ್ಬರ ಮತ್ತು ಸಗಣಿ ಸೇರಿಸಿ ಮತ್ತೊಮ್ಮೆ ಮಣ್ಣಿಗೆ ಬುಡ ಮಾಡಿ. ಮೂರರಿಂದ ನಾಲ್ಕು ತಿಂಗಳುಗಳಲ್ಲಿ, ಟೊಮೆಟೊ ಹಣ್ಣು ಚೆನ್ನಾಗಿ ಬೆಳೆಯಲು ಆರಂಭವಾಗುತ್ತದೆ, ಮಣ್ಣನ್ನು ಬಳಸುವ ಮೊದಲು, ಅದನ್ನು ಬಿಸಿಲಿನಲ್ಲಿ ಒಣಗಿಸುವುದನ್ನು ಮರೆಯಬೇಡಿ. ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಸಸ್ಯಗಳನ್ನು ನೋಡಿಕೊಳ್ಳಿ ಮತ್ತು ರಾಸಾಯನಿಕಗಳ ಬಳಕೆಯನ್ನು ತಪ್ಪಿಸಿ.
* ಆದರೆ ಮನೆಯಲ್ಲಿ ಯಾವುದೇ ಗಿಡ ಬೆಳೆಸುವ ಮುನ್ನ ನೀವು ಈ ಅಂಶಗಳನ್ನು ಗಮನಿಸಿ. ಗಿಡ ಬೆಳೆಸುವಾಗ ಬೀಜ ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು. ಟೊಮೆಟೊ ಗಿಡವನ್ನು ಬೆಳೆಯಲು, ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ಬಳಸಬೇಕು ಅಥವಾ ಮನೆಯಲ್ಲಿ ಲಭ್ಯವಿರುವ ಟೊಮೆಟೊ ಬೀಜಗಳನ್ನು ತೆಗೆದುಕೊಳ್ಳಬೇಕು. ಆದರೆ ಸಸಿಗಳನ್ನು 4 ಇಂಚಿನ ಮಡಕೆ ಅಥವಾ ಕುಂಡದಲ್ಲಿ ನೆಡಲು ಮರೆಯದಿರಿ.
* ಗಿಡಗಳ ಬೆಳೆಸಿದ ನಂತರ ಹಕ್ಕಿಗಳು ಹಾಗೂ ಇಲಿಗಳು ಕಾಂಡವನ್ನು ಕತ್ತರಿಸದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ನೈಸರ್ಗಿಕ ಗೊಬ್ಬರವನ್ನೇ ಬಳಸಿ.
ವಿಭಾಗ