ಸೂಪರ್ ಟೇಸ್ಟಿಯಾಗಿರುತ್ತೆ ಈ ಟೊಮೆಟೊ ಧನಿಯಾ ಪಚಡಿ; ಇಡ್ಲಿ, ದೋಸೆ, ಚಪಾತಿ ಯಾವುದರ ಜೊತೆ ಬೇಕಾದರೂ ಸವಿಯಿರಿ
ಭಾರತೀಯರಿಗೆ ಹೆಚ್ಚಿನ ಹುಳಿ ಹಾಗೂ ಖಾರದ ಪದಾರ್ಥ ತುಂಬಾ ಇಷ್ಟವಾಗುತ್ತದೆ. ಅದರಲ್ಲೂ ಇಡ್ಲಿ, ದೋಸೆ, ಚಪಾತಿ ಮತ್ತು ಅನ್ನ ದಿನನಿತ್ಯದ ಆಹಾರ. ಇದರ ಜೊತೆಗೆ ತಿನ್ನಲು ಟೊಮೆಟೊ ಧನಿಯಾ ಪಚಡಿ ಮಾಡಿಕೊಂಡರೆ ಅದರ ಟೇಸ್ಟ್ ನೆಕ್ಸ್ಟ್ ಲೆವಲ್! ನೀವೂ ಟ್ರೈ ಮಾಡಿ, ಇಲ್ಲೇ ಇದೆ ರೆಸಿಪಿ.
ಇಡ್ಲಿ, ದೋಸೆ, ಚಪಾತಿ ಮತ್ತು ಅನ್ನ ಯಾವುದರ ಜೊತೆ ಬೇಕಾದರೂ ನೀವು ಈ ಟೊಮೆಟೊ ಧನಿಯಾ ಪಚಡಿ ತಿನ್ನಿ. ಇದು ತುಂಬಾ ರುಚಿಯಾಗಿರುತ್ತದೆ. ನೀವು ತೆಂಗಿನ ಕಾಯಿ ಬಳಸಿ ಮಾಡುವ ಪದಾರ್ಥಗಳಿಗಿಂತ ಇದು ಇನ್ನೂ ಸ್ವಲ್ಪ ಹೆಚ್ಚಿನ ರುಚಿಯನ್ನೇ ನೀಡುತ್ತದೆ ಎಂದರೆ ತಪ್ಪಾಗಲಾರದು. ಇದನ್ನು ತುಂಬಾ ದಿನಗಳ ಕಾಲ ಶೇಖರಣೆ ಮಾಡಿ ಕೂಡ ಇಡಬಹುದು. ದಕ್ಷಿಣ ಭಾರತೀಯ ಅಡುಗೆಯಲ್ಲಿ ಇದು ವಿಶೇಷ ಸ್ಥಾನವನ್ನು ಹೊಂದಿದೆ. ಅತ್ಯದ್ಭುತ ಪರಿಮಳ ಹಾಗೂ ರುಚಿಕರವಾದ ಪ್ಲೇವರ್ ಹೊಂದಿರುವ ಟೊಮೆಟೊ ಮತ್ತು ಧನಿಯಾ ಪಚಡಿಯನ್ನು ಮನೆಯಲ್ಲೇ ಮಾಡಬಹುದು.
ಸಾಂಪ್ರದಾಯಿಕ ತೆಂಗಿನ ಕಾಯಿ ಚಟ್ನಿ ಹಾಗೂ ಪುದೀನ ಚಟ್ನಿಯನ್ನು ಹೊರತುಪಡಿಸಿ ನೀವು ಟೊಮ್ಯಾಟೋ ಮತ್ತು ಧನಿಯಾ ಪಚಡಿಯನ್ನು ಸಹ ಮಾಡಿ ಸವಿಯಬಹುದು. ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ಇದರ ಪ್ರಕಾರ ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ತುಂಬಾ ರುಚಿಕರವಾಗಿರುತ್ತದೆ.
ಟೊಮೆಟೊ ಸಾಸ್ ಬಳಕೆ ಮಾಡುವುದನ್ನೇ ನೀವು ನಿಲ್ಲಿಸಿಬಿಡುತ್ತೀರಾ ಅಷ್ಟೊಂದು ಟೇಸ್ಟಿಯಾಗಿ ಇದು ಮೂಡಿ ಬರುತ್ತದೆ. ಮೊದಲನೇಯದಾಗಿ ಟೊಮೆಟೊ ಧನಿಯಾ ಪಚಡಿ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ಗಮನಿಸೋಣ
ಟೊಮೆಟೊ ಧನಿಯಾ ಪಚಡಿ ಮಾಡಲು ಬೇಕಾಗುವ ಸಾಮಗ್ರಿಗಳು
ಒಂದಷ್ಟು ಹಸಿಮೆಣಸಿನಕಾಯಿ
ಸ್ವಲ್ಪ ಹುಣಸೆಹಣ್ಣು |
ಅರಿಶಿನ
ಒಂದು ಟೀ ಸ್ಪೂನ್ ಎಣ್ಣೆ
ಸ್ವಲ್ಪ ಸಾಸಿವೆ
ಇಂಗು
ಮೆಂತೆ
ಒಂದಷ್ಟು ಕರಿಬೇವಿನ ಎಲೆಗಳು
ಬೆಲ್ಲ
ಇದನ್ನೂ ಓದಿ: ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಕೊಕೊನಟ್ ಚಿಕನ್ ರೆಸಿಪಿ, ಇನ್ನು ಏನೇನೆಲ್ಲಾ ನೋಡಬೇಕಪ್ಪಾ ದೇವ್ರೆ ಅಂದ್ರು ನೆಟ್ಟಿಗರು
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ನಂತರ ಅರಿಶಿನಪುಡಿ ಹಾಗೂ ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಣಸೆಹಣ್ಣಿನ ತಿರುಳನ್ನು ಸೇರಿಸಿ. (ಹುಣಸೆಹಣ್ಣನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನಸಿಕೊಳ್ಳಿ) ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಬೆಂಕಿಯನ್ನು ಆಫ್ ಮಾಡಿ.
ಇನ್ನೊಂದು ಕಡೆ ಟೊಮೆಟೊ ಮತ್ತು ಕೊತ್ತಂಬರಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಅದನ್ನು ಸ್ಮೂಥ್ಆಗಿ ಸ್ಮ್ಯಾಶ್ ಮಾಡಿ. ನಂತರ ಈ ಮೇಲೆ ತಿಳಿಸಿದ ಮಿಶ್ರಣಕ್ಕೆ ಇದನ್ನೂ ಸೇರಿಸಿಕೊಳ್ಳಿ. ನೈಯವಾದ ಪೇಸ್ಟ್ ಮಾಡಿ ರುಬ್ಬಿ. ಇಂಗು ಸಾಸಿವೆ ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ನೀಡಿ. ಮತ್ತೊಮ್ಮೆ ಟೇಸ್ಟ್ ನೋಡಿ. ಚೆನ್ನಾಗಿ ಕುದಿಸಿಕೊಳ್ಳಿ.
ಇದನ್ನು ಇಡ್ಲಿ, ದೋಸೆ, ಉತ್ತಪ್ಪ ಹಾಗೂ ಇತರ ತಿಂಡಿಗಳೊಂದಿಗೆ ಬಡಿಸಿ ತಿನ್ನಬಹುದು. ತುಂಬಾ ಚೆನ್ನಾಗಿರುತ್ತೆ. ಆಗಾಗ ಬಿಸಿ ಮಾಡುತ್ತಾ ಇದ್ದರೆ ಇದರ ಟೇಸ್ಟ್ ಇನ್ನು ಹೆಚ್ಚಾಗುತ್ತಾ ಹೋಗುತ್ತದೆ.
ವಿಭಾಗ