Healthy Millet Soup Recipes: ಅರೆ! ರಾಗಿ ಸೂಪ್ ಮಾಡೋದು ಇಷ್ಟು ಸುಲಭವೇ?: ಆರೋಗ್ಯದ ಪರಿಣಾಮಗಳನ್ನು ಎಣಿಸೋಣವೇ?
Dec 15, 2022 03:34 PM IST
ಸಾಂದರ್ಭಿಕ ಚಿತ್ರ
- ಸಾಮಾನ್ಯ ರೋಗದ ವಿರುದ್ಧ ಹೋರಾಡಲು ಸಾಕಷ್ಟು ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಅವಶ್ಯ. ರಾಗಿ ಇಂತಹ ಉತ್ತಮ ಆಹಾರಗಳಲ್ಲಿ ಒಂದಾಗಿದ್ದು, ರಾಗಿ ಸೂಪ್ ನಿಮ್ಮ ಬಹುತೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ಬೆಂಗಳೂರು: ಚಳಿಗಾಲ ಎಂದ ಮೇಲೆ ಜ್ವರ, ನೆಗಡಿ, ಕೆಮ್ಮು ಮುಂತಾದ ವೈರಲ್ ಕಾಯಿಲೆಗಳು ಸಾಮಾನ್ಯ. ಆದರೆ ಸಾಮಾನ್ಯ ಎಂದು ಇವುಗಳನ್ನು ನಿರ್ಲಕ್ಷಿಸುವಂತೆಯೂ ಇಲ್ಲವಲ್ಲ. ಹಾಗಾಗಿ ಸಾಮಾನ್ಯ ರೋಗದ ವಿರುದ್ಧ ಹೋರಾಡಲು ಸಾಕಷ್ಟು ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಅವಶ್ಯ. ರಾಗಿ ಇಂತಹ ಉತ್ತಮ ಆಹಾರಗಳಲ್ಲಿ ಒಂದಾಗಿದ್ದು, ರಾಗಿ ಸೂಪ್ ನಿಮ್ಮ ಬಹುತೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ಸೂಪ್‌ಗಳು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಲು ಸಹಾಯ ಮಾಡುತ್ತವೆ. ಸೂಪ್‌ಗಳು ದ್ರವ ರೂಪದಲ್ಲಿರುವುದರಿಂದ, ಅದು ನಿಮ್ಮನ್ನು ದೀರ್ಘಕಾಲದವರೆಗೆ ಹೈಡ್ರೀಕರಿಸುತ್ತವೆ. ಅದರಂತೆ ಚಳಿಗಾಲದಲ್ಲಿ ಸುಲಭವಾಗಿ ಮಾಡಬಹುದಾದ ರಾಗಿ ಸೂಪ್, ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ರಾಗಿ ಸೇವನೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ರಾಗಿಯನ್ನು ಸುಮಾರು 5,000 ವರ್ಷಗಳಿಂದ ಭಾರತೀಯ ಉಪಖಂಡದಲ್ಲಿ ಬೆಳೆಯಲಾಗುತ್ತಿದೆ. ಅಷ್ಟೇ ಅಲ್ಲದೇ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲೂ ರಾಗಿ ಅತ್ಯಂತ ಜನಪ್ರಿಯವಾಗಿದೆ. ರಾಗಿಯು ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ, ಬೊಜ್ಜು, ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ ಮತ್ತು ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ರಾಗಿ ಸ್ವಲ್ಪ ಸಿಹಿಯಾದ ದಾನ್ಯ.ಅಕ್ಕಿಯಂತೆಯೇ, ರಾಗಿ ತನ್ನದೇ ಆದ ಸೌಮ್ಯವಾದ ಪರಿಮಳವನ್ನು ಹೊಂದಿರುತ್ತದೆ. ಆದರೆ ಇತರ ಆಹಾರಗಳಿಂದ ಸುವಾಸನೆಗಳನ್ನು ಹೀರಿಕೊಳ್ಳುವ ಉತ್ತಮ ಕೆಲಸವನ್ನು ಮಾಡುತ್ತದೆ.
ರಾಗಿ ಸೂಪ್ ಪಾಕವಿಧಾನ:
ರಾಗಿ ಸೂಪ್ ಮಾಡುವುದು ಅತ್ಯಂತ ಸರಳವಾಗಿದ್ದು, ಇದು ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ರಾಗಿಯನ್ನು ಚೆನ್ನಾಗಿ ತೊಳೆದು, ಹಲವು ಬಗೆಯ ಪೂರಕ ತರಕಾರಿಗಳನ್ನು ಕತ್ತರಿಸಿ, ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಬೀಟ್‌ರೂಟ್, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಸೇರಿಸಿ ಮತ್ತು ಕಡಿಮೆ ಶಾಖದಲ್ಲಿ 5 ನಿಮಿಷ ಬೇಯಿಸಿ.
ಬಳಿಕ ಉಪ್ಪು, ಮೆಣಸು ಮತ್ತು ಓರೆಗಾನೊವನ್ನು ರುಚಿಗೆ ತಕ್ಕಂತೆ ಸೇರಿಸಿ ಮತ್ತು 2 ನಿಮಿಷ ಬೇಯಿಸಿ. ರಾಗಿ ಸೇರಿಸಿ ಮತ್ತು ತ್ವರಿತವಾಗಿ ಬೆರೆಸಿ. 1 ಮತ್ತು 1/2 ಕಪ್ ನೀರು ಸೇರಿಸಿ, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ 5 ಸೀಟಿ ಬರುವವೆರಗೂ ಬೇಯಿಸಿ. ಬಳಿಕ ಪ್ರಶೆರ್ ಕುಕ್ಕರ್ ತಣ್ಣಗಾದ ಮೇಲೆ ನೀರು ಮತ್ತು ಹಾಲು ಸೇರಿಸಿ ಚೆನ್ನಾಗಿ ಕಲಿಸಿ.
ಹೀಗೆ ಸಿದ್ಧವಾದ ರಾಗ ಸೂಪ್‌ಗೆ ಕಾಳುಮೆಣಸಿನ ಪುಡಿಯನ್ನು ಬೆರೆಸಿ ನಿಮ್ಮ ಪ್ರೀತಿ ಪಾತ್ರರಿಗೆ ಉಣಬಡಿಸಿ. ಚಳಿಗಾಲದಲ್ಲಿ ರಾಗಿ ಸೂಪ್ ನಿಮ್ಮ ಆರೋಗ್ಯದ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ನಿಮ್ಮ ದೈನಂದಿನ ಆಹಾರ ಪಟ್ಟಿಯಲ್ಲಿ ರಾಗಿ ಸೂಪ್‌ಗೆ ಪ್ರಥಮ ಆದ್ಯತೆ ನೀಡಿ.
ಇಂದಿನ ಪ್ರಮುಖ ಸುದ್ದಿ
Ayodhya Ram Mandir: ಅಯೋಧ್ಯೆ ರಾಮ ಮಂದಿರ ತಲುಪಿದ ರಾಮ ನಗರದ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ, ಶಲ್ಯ, ಮೊಳಗಿದ ಜೈಶ್ರೀರಾಮ್ ಘೋಷ
ರಾಮನಗರದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಅಯೋಧ್ಯೆಗೆ ತೆರಳಿರುವ 150 ಯಾತ್ರಾರ್ಥಿಗಳ ತಂಡವು ಗುರುವಾರ ಅಲ್ಲಿನ ರಾಮಮಂದಿರದಲ್ಲಿ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ ಮತ್ತು ಶಲ್ಯಗಳನ್ನು ರಾಮ ಮಂದಿರ ನ್ಯಾಸದ ಪದಾಧಿಕಾರಿಗಳಿಗೆ ಹಸ್ತಾಂತರಿಸಿತು. ಅಲ್ಲದೆ, ಈ ತಂಡವು ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಸ್ವೀಕರಿಸಿತು. ಈ ಕುರಿತು ಹೆಚ್ಚಿನ ಮಾಹಿತಿಗಹೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ