logo
ಕನ್ನಡ ಸುದ್ದಿ  /  ಜೀವನಶೈಲಿ  /  Pomegranate Benefits For Fertility: ದಾಳಿಂಬೆ ಹಣ್ಣಿನಲ್ಲಿದೆ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ?: ಆಹಾ..! ಖುಷಿ ಖುಷಿ ಸುದ್ದಿ ನಿಮಗಾಗಿ..

Pomegranate Benefits for Fertility: ದಾಳಿಂಬೆ ಹಣ್ಣಿನಲ್ಲಿದೆ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ?: ಆಹಾ..! ಖುಷಿ ಖುಷಿ ಸುದ್ದಿ ನಿಮಗಾಗಿ..

HT Kannada Desk HT Kannada

Dec 15, 2022 03:03 PM IST

google News

ಸಾಂದರ್ಭಿಕ ಚಿತ್ರ

    • ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದನ್ನೂ ಮಾಡುತ್ತದೆ. ದಾಳಿಂಬೆ ಹಣ್ಣು ಪುರುಷರಿಗೆ ಹಾಗೂ ಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ದಾಳಿಂಬೆ ಹಣ್ಣು ಪರಿಣಾಮಕಾರಿ ಎಂಬುದು ವಿಶೇಷ. ದಾಳಿಂಬೆ ಸೇವನೆಯಿಂದಾಗುವ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ದಾಳಿಂಬೆ ಹಣ್ಣು ಅದರಲ್ಲೂ ದಾಳಿಂಬೆ ಹಣ್ಣಿನ ಜ್ಯೂಸ್‌ ಅಂದ್ರೆ ಯಾರಿಗೆ ತಾನೆ ಇಷ್ಟ ಹೇಳಿ? ಕೆಂಪು ಬಣ್ಣದ ದಾಳಿಂಬೆ ಹಣ್ಣು ಅಥವಾ ಜ್ಯೂಸ್‌ ನೋಡಿದರೆ ಬಾಯಲ್ಲಿ ನೀರೂರದೇ ಇರದು. ಹಾಗೆಯೇ ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದನ್ನೂ ಮಾಡುತ್ತದೆ. ಅದರಂತೆ ದಾಳಿಂಬೆ ಹಣ್ಣಿನ ಸೇವನೆ ಮತ್ತು ಅದರ ಜ್ಯೂಸ್‌ ಸೇವೆನೆಯಿಂದಾಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ.

ದಾಳಿಂಬೆ ಹಣ್ಣು ಪುರುಷರಿಗೆ ಹಾಗೂ ಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ದಾಳಿಂಬೆ ಹಣ್ಣು ಪರಿಣಾಮಕಾರಿ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಸಂಶೋಧನೆಯೊಂದರ ಪ್ರಕಾರ ದಾಳಿಂಬೆ ಹಣ್ಣು ತಿನ್ನುವುದರಿಂದ ಪುರುಷರಿಗೆ ಹಾಗೂ ಮಹಿಳೆಯರಿಗೆ ದೇಹದಲ್ಲಿ ರಕ್ತ ಸಂಚಾರ ಅಧಿಕವಾಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಗರ್ಭಕೋಶದ ಭಾಗದಲ್ಲಿನ ಮಾಂಸ ಖಂಡಗಳು ಸದೃಢಗೊಳ್ಳುತ್ತವೆ. ಇದು ಭವಿಷ್ಯದಲ್ಲಿ ಮಕ್ಕಳಾಗುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಎನ್ನುತ್ತದೆ ಸಂಶೋಧನೆ.

ಮಹಿಳೆಯರು ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದರಿಂದ, ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಆದರೆ ದಾಳಿಂಬೆ ಹಣ್ಣನ್ನು ಮಹಿಳೆಯರು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂದು ಸಂಶೋಧಕರು ಸಲಹೆ ನೀಡುತ್ತಾರೆ. ಅಧಿಕ ಸೇವೆನೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ದಾಳಿಂಬೆ ಹಣ್ಣಿನಲ್ಲಿ ಪೌಷ್ಠಿಕಾಂಶಗಳು ಹೆಚ್ಚಿರುವುದರಿಂದ, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ದೊರೆಯುತ್ತದೆ. ಇದು ಆರೋಗ್ಯಕರ ಮಗುವಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ ಎನ್ನುತ್ತದೆ ಸಂಶೋಧನೆ.

ಮಹಿಳೆಯರು ಪ್ರತಿದಿನ ಒಂದರಿಂದ ಎರಡು ಕಪ್ ದಾಳಿಂಬೆ ಬೀಜಗಳನ್ನು ತಿನ್ನಬಹುದು ಅಥವಾ ಒಂದು ಕಪ್ ರುಚಿಯಾದ ದಾಳಿಂಬೆ ಹಣ್ಣಿನ ಜ್ಯೂಸ್ ಕೂಡ ಸೇವನೆ ಮಾಡಬಹುದು. ಇದೆಲ್ಲಾ ಮಹಿಳೆಯರಿಗೆ ಆಗುವ ಪ್ರಯೋಜನವಾದರೆ, ಪುರುಷರಿಗೂ ದಾಳಿಂಬೆ ಹಣ್ಣು ಅಥವಾ ಜ್ಯೂಸ್‌ ಸೇವನೆಯಿಂದ ಹಲವು ರೀತಿಯ ಪ್ರಯೋಜನವಾಗುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್ ಪುರುಷರಲ್ಲಿ ಎದುರಾಗುವ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಲು ದಾಳಿಂಬೆ ಹಣ್ಣು ನೆರವಾಗುತ್ತದೆ.

ದಾಳಿಂಬೆಯ ಅನ್ಯ ಪ್ರಯೋಜನಗಳು:

ದಾಳಿಂಬೆ ಹಣ್ಣಿನ ಸೇವನೆಯಿಂದ ಹೃದಯದ ಭಾಗಕ್ಕೆ ರಕ್ತ ಸಂಚಾರವನ್ನು ಅಧಿಕಗೊಳಿಸುತ್ತದೆ. ಅಲ್ಲದೇ ಕೀಲು ನೋವು, ಮೂಳೆಗಳ ತೊಂದರೆ ಕೂಡ ಮಾಯವಾಗುತ್ತದೆ. ಅನೀಮಿಯ ಸಮಸ್ಯೆ ಇರುವವರು ಕೂಡ ದಾಳಿಂಬೆ ಹಣ್ಣು ಸೇವೆನೆಯಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ದಾಳಿಂಬೆ ಹಣ್ಣಿನ ಜ್ಯೂಸ್ ಮಾನಸಿಕ ಒತ್ತಡವನ್ನು ಸಹ ನಿವಾರಣೆ ಮಾಡುತ್ತದೆ. ದಾಳಿಂಬೆ ಹಣ್ಣಿನ ರಸ ಸೇವಿಸುವುದರಿಂದ ದೇಹಕ್ಕೆ ವಿಟಮಿನ್ ಸಿ, ಪಾಲಿಫಿನಾಲ್, ನೈಟ್ರಿಕ್ ಆಕ್ಸೈಡ್ ಎಲ್ಲವೂ ಸಿಗುತ್ತದೆ. ಇವು ಮಹಿಳೆಯರಿಗೆ ಅತ್ಯವಶ್ಯ ಎಂದು ಹೇಳಲಾಗಿದೆ.

ದಾಳಿಂಬೆ ಹಣ್ಣು ಅಥವಾ ರಸ ಸೇವೆನೆಯಿಂದ ದೇಹದ ಎಲ್ಲಾ ಭಾಗದಲ್ಲಿ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಲೈಂಗಿಕ ಜೀವನ ಸುಖಮಯವಾಗಿರುತ್ತದೆ.

ಒಟ್ಟಿನಲ್ಲಿ ದಾಳಿಂಬೆ ಹನ್ಝು ಮತ್ತು ಜ್ಯೂಸ್‌ ಸೇವನೆಯಿಂದ ಪುರುಷರು ಮತ್ತು ಮಹಿಳೆಯರಿಗೆ ಹಲವು ರೀತಿಯ ಪ್ರಯೋಜನಗಳಿದ್ದು, ಪ್ರಮುಖವಾಗಿ ಲೈಂಗಿಕ ಸಮಸ್ಯೆಗಳಿಂದ ನೀವು ದೂರವಾಗಬಹುದಾಗಿದೆ. ಹಾಗಾದರೆ ಮತ್ತಷ್ಟು ತಡ ಮಾಡದೇ ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ದಾಳಿಂಬೆ ಹಣ್ಣಿಗೆ ಮಹತ್ವ ಕೊಡುವುದನ್ನು ಇಂದಿನಿಂದಲೇ ಆರಂಭಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ