Pomegranate Peel Tea Benefits: ದಾಳಿಂಬೆ ಸಿಪ್ಪೆ ಬಿಸಾಡುವ ಮುನ್ನ.. ವಿಭಿನ್ನ ಚಹಾ ರುಚಿ ನೋಡಿದರೆ ಚೆನ್ನ
Dec 15, 2022 04:48 PM IST
ಸಾಂದರ್ಭಿಕ ಚಿತ್ರ
- ಅದೇ ರೀತಿ ದಾಳಿಂಬೆ ಹಣ್ಣಿನ ಸಿಪ್ಪೆ ಕೂಡ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದ್ದು, ಪ್ರಮುಖವಾಗಿ ದಾಳಿಂಬೆ ಹಣ್ಣಿನ ಸಿಪ್ಪೆಯ ಚಹಾ ಸೇವನೆಯಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ದಾಳಿಂಬೆ ಹಣ್ಣಿನ ಸಿಪ್ಪೆಯ ಪ್ರಯೋಜನ ಮತ್ತು ಇದರ ಸಿಪ್ಪೆಯಿಂದ ಚಹಾ ತಯಾರಿಸುವ ಬಗೆ ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
ಬೆಂಗಳೂರು: ಪ್ರಪಂಚದಾದ್ಯಂತದ ಹಲವಾರು ಅಧ್ಯಯನಗಳು, ಹಣ್ಣು ಮತ್ತು ತರಕಾರಿ ಸಿಪ್ಪೆಗಳು ನಾವು ಸೇವಿಸುವ ಭಾಗಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಸಂಗ್ರಹಿಸುತ್ತವೆ ಎಂಬುದನ್ನು ಸಾಧಿಸಿ ತೋರಿಸಿವೆ. ಅದೇ ರೀತಿ ದಾಳಿಂಬೆ ಹಣ್ಣಿನ ಸಿಪ್ಪೆ ಕೂಡ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದ್ದು, ಪ್ರಮುಖವಾಗಿ ದಾಳಿಂಬೆ ಹಣ್ಣಿನ ಸಿಪ್ಪೆಯ ಚಹಾ ಸೇವನೆಯಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ದಾಳಿಂಬೆಯ ಸಿಪ್ಪೆಗಳು ಸಹ ಅತ್ಯಂತ ಪೌಷ್ಟಿಕವಾಗಿದೆ. ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ತುಂಬಿರುವ ದಾಳಿಂಬೆ ಸಿಪ್ಪೆಗಳನ್ನು, ಒಟ್ಟಾರೆ ಆರೋಗ್ಯ ಪ್ರಯೋಜನಗಳಿಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ದಾಳಿಂಬೆ ಸಿಪ್ಪೆಯನ್ನು ಬಳಸಲು ಅತ್ಯಂತ ಸುಲಭವಾದ ಮತ್ತು ಉತ್ತಮವಾದ ಮಾರ್ಗವೆಂದರೆ, ದಾಳಿಂಬೆ ಸಿಪ್ಪೆಯ ಚಹಾ ತಯಾರಿಸುವುದಾಗಿದೆ.
ದಾಳಿಂಬೆ ಸಿಪ್ಪೆಯ ಚಹಾದ 5 ಆರೋಗ್ಯ ಪ್ರಯೋಜನಗಳು:
1. ದಾಳಿಂಬೆ ಸಿಪ್ಪೆಯ ಚಹಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಗಂಟಲು ನೋವು, ಕೆಮ್ಮು ಮತ್ತು ನೆಗಡಿಗೆ ಚಿಕಿತ್ಸೆಯಾಗಿಯೂ ಕೆಲಸ ಮಾಡುತ್ತದೆ.
2. ದಾಳಿಂಬೆ ಸಿಪ್ಪೆಯು ವಿಟಮಿನ್ ಸಿ ಯಿಂದ ಕೂಡಿದ್ದು, ಇದು ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಜೀವಕೋಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ. ಅಲ್ಲದೇ ರಕ್ತವನ್ನು ಶುದ್ಧೀಕರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ.
3. ದಾಳಿಂಬೆ ಸಿಪ್ಪೆಯಿಂದ ಮಾಡಿದ ಚಹಾ ಕರುಳಿನ ಕಾರ್ಯಾಚರಣೆಯನ್ನು ಸುಧಾರಿಸುತ್ತದೆ. ದಾಳಿಂಬೆ ಸಿಪ್ಪೆಗಳು ಟ್ಯಾನಿನ್‌ಗಳನ್ನು ಹೊಂದಿರುವುದರಿಂದ, ಇದು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಈ ಅಂಶಗಳು ಮತ್ತಷ್ಟು ಸಹಾಯ ಮಾಡುತ್ತವೆ.
4. ದಾಳಿಂಬೆ ಸಿಪ್ಪೆಯಲ್ಲಿರುವ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು, ಉರಿಯೂತದ ಗುಣಲಕ್ಷಣಗಳು, ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅದರ pH ಸಮತೋಲನವನ್ನು ಪುನಃಸ್ಥಾಪಿಸುತ್ತದೆ.
5. ದಾಳಿಂಬೆ ಹಣ್ಣಿನ ಸಿಪ್ಪೆಗಳು ಆಂಟಿಕಾರಿ ಪರಿಣಾಮಗಳನ್ನು ಹೊಂದಿವೆ. ಇದು ಬಾಯಿ ಹುಣ್ಣುಗಳು, ಕ್ಷಯ, ದಂತ ಪ್ಲೇಕ್ ಮತ್ತು ಇತರ ಹಲವಾರು ಹಲ್ಲಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ದಾಳಿಂಬೆ ಸಿಪ್ಪೆಯ ಚಹಾ ತಯಾರಿಸುವ ವಿಧಾನ:
ದಾಳಿಂಬೆ ಸಿಪ್ಪೆಯ ಚಹಾದ ಪ್ರಯೋಜನಗಳ ಬಗ್ಗೆ ಈಗ ನೀವು ತಿಳಿದಿರುವಿರಿ, ದಾಳಿಂಬೆ ಚಹಾದ ಪಾಕ ವಿಧಾನದ ಬಗ್ಗೆ ಈಗ ತಿಳಿದುಕೊಳ್ಳೋಣ.
ಮೊದಲು ದಾಳಿಂಬೆ ಸಿಪ್ಪೆಯನ್ನು ತೆಗೆದುಕೊಂಡು ಅವುಗಳನ್ನು ಒಣಗಿಸಿ. ನೀವು ಸಿಪ್ಪೆಯನ್ನು ಬಿಸಿಲಿನಲ್ಲಿಟ್ಟು ಒಣಗಿಸಬಹುದು ಅಥವಾ ಅಥವಾ ಮೈಕ್ರೋವೇವ್ ಓವನ್‌ನಲ್ಲಿ ಬೇಯಿಸಬಹುದು. ಒಣಗಿದ ಸಿಪ್ಪೆಯನ್ನು ಮಿಕ್ಸರ್ ಗ್ರೈಂಡರ್‌ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದರಲ್ಲಿ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಸುರಿದು ಮುಚ್ಚಿಡಿ.
ಬಳಿಕ ಸಾಮಾನ್ಯವಾಗಿ ಚಹಾ ಮಾಡಲು ನಾವು ಅನುಸರಿಸುವ ಪ್ರಕ್ರಿಯೆಯನ್ನು ಅನುಸರಿಸಿ, ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಚಹಾ ಮಾಡಿ. ಹೀಗೆ ಸುಲಭವಾಗಿ ದಾಳಿಂಬೆ ಸಿಪ್ಪೆಯ ಚಹಾ ಮಾಡಬಹುದಾಗಿದ್ದು, ನಿಮ್ಮ ಆರೋಗ್ಯ ಹಿತರಕ್ಷಣೆಯಿಂದ ಇದನ್ನು ನಿಮ್ಮ ದೈನಂದಿನ ಆಹಾರ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.
ಇಂದಿನ ಪ್ರಮುಖ ಸುದ್ದಿ
Nilekani on Next Infosys chairman: ಇನ್ಫೋಸಿಸ್‌ನ ಮುಂದಿನ ಚೇರ್ಮನ್ ಕುರಿತು ಮಾಹಿತಿ ಹಂಚಿಕೊಂಡ ನಂದನ್ ನಿಲೇಕಣಿ
"ನಮ್ಮಲ್ಲಿ ಯಾವುದೇ ಪ್ಲ್ಯಾನ್ ಬಿ ಇಲ್ಲ. ನಾನು ಚೇರ್ಮನ್ ಹುದ್ದೆಯಿಂದ ಕೆಳಗೆ ಇಳಿದಾಗ ಕಂಪನಿಯ ಸ್ಥಾಪಕೇತರರು ಈ ಸ್ಥಾನ ಪಡೆಯಲಿದ್ದಾರೆʼʼ ಎಂದು ನಿಲೇಕಣಿ ಹೇಳಿದ್ದಾರೆ. " ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
ವಿಭಾಗ