logo
ಕನ್ನಡ ಸುದ್ದಿ  /  ಜೀವನಶೈಲಿ  /  Green Rice Recipe: ಈ ಥರ ಗ್ರೀನ್ ರೈಸ್ ಮಾಡಿದ್ರೆ ಮಕ್ಕಳು ಖುಷಿಯಾಗಿ ತಿಂತಾರೆ, ಲಂಚ್ ಬಾಕ್ಸ್ ಕೂಡ ಖಾಲಿ ಮಾಡ್ತಾರೆ

Green Rice Recipe: ಈ ಥರ ಗ್ರೀನ್ ರೈಸ್ ಮಾಡಿದ್ರೆ ಮಕ್ಕಳು ಖುಷಿಯಾಗಿ ತಿಂತಾರೆ, ಲಂಚ್ ಬಾಕ್ಸ್ ಕೂಡ ಖಾಲಿ ಮಾಡ್ತಾರೆ

Suma Gaonkar HT Kannada

Sep 09, 2024 07:29 AM IST

google News

ಗ್ರೀನ್‌ ರೈಸ್‌

    • Recipe: ನೀವು ಬೆಳಗಿನ ತಿಂಡಿಗೆ ಏನು ಮಾಡಬೇಕು ಎಂದು ಆಲೋಚನೆ ಮಾಡುತ್ತ ಇದ್ದರೆ ಇಂದು ಇದೇ ರೀತಿ ಗ್ರೀನ್ ರೈಸ್‌ ಮಾಡಿ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಹಾಗೂ ವಿಧಾನವನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ಇದೇ ರೀತಿ ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ. 
ಗ್ರೀನ್‌ ರೈಸ್‌
ಗ್ರೀನ್‌ ರೈಸ್‌

ನೀವು ಬೆಳಗಿನ ತಿಂಡಿಗೆ ಏನು ಮಾಡಬೇಕು ಎಂದು ಆಲೋಚನೆ ಮಾಡುತ್ತ ಇದ್ದರೆ ಇಂದು ಇದೇ ರೀತಿ ಗ್ರೀನ್ ರೈಸ್‌ ಮಾಡಿ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಹಾಗೂ ವಿಧಾನವನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ಇದೇ ರೀತಿ ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ. ಇದನ್ನು ಬಹಳ ಸುಲಭವಾಗಿ ಮಾಡಬಹುದು. ಇದನ್ನು ಮಾಡಲು ಬೇಕಾಗುವ ಸಾಗ್ರಿಗಳೆಲ್ಲವೂ ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ ಹಾಗಾಗಿ ಏನೂ ಚಿಂತೆ ಮಾಡುವ ಅಥವಾ ಹೊಸ ವಸ್ತುಗಳನ್ನು ತರುವ ಅವಶ್ಯಕತೆ ಇಲ್ಲ. ಇಲ್ಲಿ ನಾವು ನೀಡಿರುವ ಪದಾರ್ಥಗಳನ್ನು ಗಮನಿಸಿ.

ಮಾಡಲು ಬೇಕಾಗುವ ಪದಾರ್ಥಗಳು

ಈರುಳ್ಳಿ
ಬೆಳ್ಳುಳ್ಳಿ
ಅಕ್ಕಿ
ಕೊತ್ತಂಬರಿ ಸೊಪ್ಪು
ಸೋಂಪು
ಚಕ್ಕೆ
ಲವಂಗ
ಪಲಾವ್ ಎಲೆ
ಉಪ್ಪು
ಸಕ್ಕರೆ
ಗೋಡಂಬಿ
ಈರುಳ್ಳಿ
ಟೊಮೆಟೊ
ಹಸಿಮೆಣಸು

ಮಾಡುವ ವಿಧಾನ:
ಮೊದಲಿಗೆ ನೀವು ಅಕ್ಕಿಯನ್ನು ತೊಳೆದು ನೆನೆ ಹಾಕಿ. ಆ ನಂತರದಲ್ಲಿ ಒಂದು ಮಿಕ್ಸಿ ತೆಗೆದುಕೊಂಡು ಅದಕ್ಕೆ ಸೋಂಪು ಸ್ವಲ್ಪ ಹಾಗೂ ಕೊತ್ತಂಬರಿ ಸೊಪ್ಪು ಒಂದರ್ಧ ಈರುಳ್ಳಿ ಹಾಗೂ ಸ್ವಲ್ಪ ಗೋಡಂಬಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಜೊತೆಗೆ ಹಸಿಮೆಣಸು ಸೇರಿಸಲು ಮರೆಯಬೇಡಿ. ಆ ನಂತರದಲ್ಲಿ ಇತ್ತ ಒಂದು ಬಾಣೆಲೆಯಲ್ಲಿ ಅಥವಾ ಕುಕ್ಕರ್‌ನಲ್ಲಿ ತುಪ್ಪ ಹಾಗೂ ಎಣ್ಣೆ ಎರಡನ್ನೂ ಸ್ವಲ್ಪ ಸ್ವಲ್ಪ ಹಾಕಿಕೊಳ್ಳಿ. ಅದಾದ ನಂತರದಲ್ಲಿ ನೀವು ನೆನೆಸಿಟ್ಟ ಅಕ್ಕಿಯ ನೀರು ಸೋಸಿಕೊಳ್ಳಿ.

ಈಗ ಬಿಸಿ ಮಾಡಲು ಇಟ್ಟ ಎಣ್ಣೆಗೆ ನೀವು ಪಲಾವ್ ಎಲೆ, ಚಕ್ಕೆ, ಮೊಗ್ಗು, ಕಲ್ಲುಹೂವು ಹೀಗೆ ಮಸಾಲೆಗೆ ಯಾವ ಪದಾರ್ಥಗಳು ಬೇಕೋ ಅದೆಲ್ಲವನ್ನು ಸೇರಿಸಿಕೊಳ್ಳಿ. ಚೆನ್ನಾಗಿ ಘಮ ಬರುವವರೆಗೆ ಹುರಿದುಕೊಳ್ಳಿ. ಅದಾದ ನಂತರದಲ್ಲಿ ನೀವು ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಿಶ್ರಣವನ್ನು ಅದಕ್ಕೆ ಸೇರಿಸಿ. ಚೆನ್ನಾಗಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ.

ಇದನ್ನೂ ಓದಿ: ಹೃದಯ ಸ್ತಂಭನದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳಿವು

ನಂತರ ನೆನೆಸಿಟ್ಟ ಅಕ್ಕಿಯನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರದಲ್ಲಿ ಬೇಕಿದ್ದರೆ ಸಕ್ಕರೆ ಸೇರಿಸಿ. ಒಣ ಮೆಣಸನ್ನೂ ಕೂಡ ಸೇರಿಸಿಕೊಳ್ಳಬಹುದು. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಆ ನಂತರದಲ್ಲಿ ನೀವು ಮೂರು ಸೀಟಿ ಹಾಕಿಸಿ. ನಂತರ ಬಡಿಸಿ. ಇದು ತುಂಬಾ ರುಚಿಯಾಗಿರುತ್ತದೆ. ನೀವು ಇದನ್ನು ಮಕ್ಕಳ ಡಬ್ಬಿಗೂ ಕೊಟ್ಟು ಕಳಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ