logo
ಕನ್ನಡ ಸುದ್ದಿ  /  ಜೀವನಶೈಲಿ  /  ಮರೆವಿನ ಸಮಸ್ಯೆ ಕಾಡ್ತಾ ಇದ್ಯಾ, ಹಾಗಾದ್ರೆ ಯೋಗಾಭ್ಯಾಸ ಮಾಡಿ; ನೆನಪಿನ ಶಕ್ತಿ ಹೆಚ್ಚಿಸುವ 5 ಯೋಗಾಸನಗಳಿವು

ಮರೆವಿನ ಸಮಸ್ಯೆ ಕಾಡ್ತಾ ಇದ್ಯಾ, ಹಾಗಾದ್ರೆ ಯೋಗಾಭ್ಯಾಸ ಮಾಡಿ; ನೆನಪಿನ ಶಕ್ತಿ ಹೆಚ್ಚಿಸುವ 5 ಯೋಗಾಸನಗಳಿವು

Reshma HT Kannada

Nov 16, 2023 10:39 AM IST

google News

ನೆನಪಿನ ಶಕ್ತಿ ಹೆಚ್ಚಿಸುವ 5 ಯೋಗಾಸನಗಳಿವು

    • ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕು ಗಮನಶಕ್ತಿ ಹಾಗೂ ನೆನಪಿನ ಶಕ್ತಿ ಕುಂಠಿತವಾಗುವಂತೆ ಮಾಡುತ್ತಿರುವುದು ಸಹಜ. ಆದರೆ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅಂತಹ ಕೆಲವು ಆಸನಗಳ ಬಗ್ಗೆ ಇಲ್ಲಿದೆ ಮಾಹಿತಿ.
ನೆನಪಿನ ಶಕ್ತಿ ಹೆಚ್ಚಿಸುವ 5 ಯೋಗಾಸನಗಳಿವು
ನೆನಪಿನ ಶಕ್ತಿ ಹೆಚ್ಚಿಸುವ 5 ಯೋಗಾಸನಗಳಿವು

ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿ ಎಲ್ಲರಿಗೂ ತಿಳಿದಿದೆ. ಆರೋಗ್ಯವಿದ್ದರಷ್ಟೇ ಬದುಕು ಎಂಬುದು ತಿಳಿದಿರುವ ವಿಚಾರ. ಆದರೂ ಹಲವರು ಆರೋಗ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ. ಇತ್ತೀಚಿನ ಒತ್ತಡದ ಬದುಕಿನಲ್ಲಿ ಇಲ್ಲಸಲ್ಲದ ಸಮಸ್ಯೆಗಳು ಮನುಷ್ಯರನ್ನು ಕಾಡುತ್ತಿರುವುದು ಸುಳ್ಳಲ್ಲ. ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅವಶ್ಯ. ಈ ಎರಡೂ ಸಮತೋಲನದಲ್ಲಿದ್ದರೆ ಮಾತ್ರ ಮನುಷ್ಯ ಸಂಪೂರ್ಣ ಆರೋಗ್ಯವಂತನಾಗಿದ್ದಾನೆ ಎಂದರ್ಥ. ಮಾನಸಿಕ ಸಮಸ್ಯೆ ಎಂದರೆ ಗಮನಶಕ್ತಿ ಯ ಕೊರತೆ, ನೆನಪಿನ ಶಕ್ತಿಯ ಕೊರತೆ ಇದು ಕೂಡ ಸೇರಿರುತ್ತದೆ. ಮಾನಸಿಕ ಯೋಗಕ್ಷೇಮ ವೃದ್ಧಿಗೆ ಯೋಗ ಮಾಡುವುದು ಉತ್ತಮ ಪರಿಹಾರ. ಅದರಲ್ಲೂ ಮರೆವಿನ ಸಮಸ್ಯೆ ನಿವಾರಣೆಗಾಗಿ ಒಂದಿಷ್ಟು ಯೋಗಾಸನಗಳಿವೆ. ಇವು ದೇಹ, ಮನಸ್ಸಿನಲ್ಲಿ ಚೈತನ್ಯ ಹೆಚ್ಚುವಂತೆ ಮಾಡುವುದು ಮಾತ್ರವಲ್ಲ, ಮನಸನ್ನೂ ಶಾಂತವಾಗಿರಿಸಲು ಸಹಾಯ ಮಾಡುತ್ತದೆ.

ಪದ್ಮಾಸನ

ಪದ್ಮಾಸನ ಅಥವಾ ತಾವರೆಯ ಭಂಗಿಯು ನೆನಪಿನ ಶಕ್ತಿ ಹೆಚ್ಚಲು ಉತ್ತಮ ಆಸನ. ಈ ಆಸನದ ಪ್ರಯೋಜನ ಪಡೆಯಲು ಚಕ್ಕಳಮಕ್ಕಳ ಹಾಕಿ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಿ. ಈ ಆಸನವು ಮನಸ್ಸನ್ನು ಶಾಂತಗೊಳಿಸುತ್ತದೆ. ಮೆದುಳಿನ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಸ್ನಾಯವಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಭ್ರಮರಿ ಪ್ರಾಣಾಯಾಮ

ಇದು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮವಾಗಿದೆ. ಈ ಆಸನವನ್ನು ಅಭ್ಯಾಸ ಮಾಡುವಾಗ ಜೇನುನೊಣದಂತಹ ಝೇಂಕರಿಸುವ ಶಬ್ದ ಬರುತ್ತದೆ. ಎರಡೂ ಕಣ್ಣುಗಳನ್ನು ಕೈಗಳಿಂದ ಮುಚ್ಚಿ ಉಸಿರಾಡುವುದು ಈ ಯೋಗಾಸನ ಭಂಗಿಯ ಶೈಲಿ. ಈ ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ಕೋಪ, ಹತಾಶೆ ಮತ್ತು ಆತಂಕದಂತಹ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸುತ್ತದೆ. ಈ ವ್ಯಾಯಾಮವು ದೇಹ ಹಾಗೂ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚಲು ಸಹಕಾರಿ.

ಪಶ್ಚಿಮೋತ್ತನಾಸನ

ಹೆಚ್ಚು ಒಂದೇ ಕಡೆ ಕುಳಿತು ಕೆಲಸ ಮಾಡುವವರು ಈ ಆಸನ ಅಭ್ಯಾಸ ಮಾಡುವುದು ಉತ್ತಮ. ಇದು ನೆಲದ ಮೇಲೆ ಕಾಲು ಚಾಚಿ ಕುಳಿತು, ದೇಹವನ್ನು ಮುಂದಕ್ಕೆ ಕಾಲಿನ ಮೇಲೆ ಬಾಗಿಸಿ, ಪಾದವನ್ನು ಕೈಗಳಿಂದ ಮುಟ್ಟುವ ಆಸನ. ದೀರ್ಘಕಾಲ ಖುರ್ಚಿಯ ಮೇಲೆ ಕುಳಿತೇ ಇರುವವರಿಗೆ ಈ ಆಸನವು ಬೆನ್ನಿನ ಕೆಳಭಾಗದಲ್ಲಿ ಕಾಣಿಸುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ದೇಹವನ್ನು ಮುಂದಕ್ಕೆ ಬಾಗಿಸುವುದರಿಂದ ಹಿಂಭಾಗಕ್ಕೆ ರಕ್ತ ಪೂರೈಕೆ ಹೆಚ್ಚುತ್ತದೆ. ಈ ಆಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ.

ಪಾದಹಸ್ತಾಸನ

ಪಾದಹಸ್ತಾಸನವು ಮೆದುಳಿನ ಶಕ್ತಿಯ ಭಂಗಿಗೆ ಪ್ರಮುಖ ಯೋಗಾಸನವಾಗಿದೆ. ಇದು ನರಮಂಡಲಕ್ಕೆ ಚೈತನು ನೀಡುತ್ತದೆ. ಮೆದುಳಿನಲ್ಲಿ ರಕ್ತದ ಹರಿವು ಹೆಚ್ಚುವುದರಿಂದ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಸುಧಾರಿಸುತ್ತದೆ.

ಹಲಾಸನ

ಹಲಾಸನ ಅಥವಾ ನೇಗಿಲು ಭಂಗಿಯು ನಮ್ಮ ನರಮಂಡಲಕ್ಕೆ ಒಳ್ಳೆಯದು. ಏಕೆಂದರೆ ಇದು ನಮ್ಮ ಆಂತರಿಕ ದಿಕ್ಸೂಚಿಯನ್ನು ಮರುಮಾಪನಗೊಳಿಸುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಹಲಾಸನವು ರಕ್ತ ಪರಿಚಲನೆಯನ್ನು ಸುಧಾರಿಸಿ ದೇಹವನ್ನು ಶಮನಗೊಳಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ