ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು? ಎಲ್ಲರೂ ತಿಳಿಯಬೇಕಾದ ವಿವರಗಳಿವು

Parenting: ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು? ಎಲ್ಲರೂ ತಿಳಿಯಬೇಕಾದ ವಿವರಗಳಿವು

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯೊಬ್ಬಳ ಹಸ್ತಮೈಥುನ ಕುರಿತ ಲೇಖನ ವೈರಲ್ ಆಗಿತ್ತು. ಹಸ್ತಮೈಥುನವು ಯಾವಾಗ ಸಹಜ ಮತ್ತು ಯಾವಾಗ ಅಪಾಯಕಾರಿ ಆಗಬಲ್ಲುದು ಎನ್ನುವ ಕುರಿತು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಈ ಬರಹದಲ್ಲಿ ವಿವರಿಸಿದ್ದಾರೆ.

ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು?
ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು?

ಹಸ್ತು ಮೈಥುನದ ಅಪಾಯಗಳು: ಯಾವುದೇ ವ್ಯಕ್ತಿಯ ಬದುಕಿನಲ್ಲಿ ಹರೆಯ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಬಾಲ್ಯದ ಹುಡುಕಾಟ ಮತ್ತು ಪ್ರೌಢ ಬದುಕಿನ ಗಾಂಭೀರ್ಯದ ನಡುವಣ ಸ್ಥಿತಿ ಅದು. ತಮ್ಮದೇ ದೇಹದಲ್ಲಿ ಆಗುವ ಬದಲಾವಣೆಗಳು ಈ ವಯೋಮಾನದವರಲ್ಲಿ ಕುತೂಹಲ ಮತ್ತು ಪ್ರಯೋಗಶೀಲತೆಗೆ ಕಾರಣವಾಗುತ್ತವೆ. ಕುತೂಹಲಗಳು ಸರಿಯಾದ ರೀತಿಯಲ್ಲಿ ತಣಿಯದಿದ್ದರೆ ಅನಾಹುತಕಾರಿ ಪರಿಸ್ಥಿತಿ ಉದ್ಭವಿಸಬಹುದು. ಕೆಲವೊಮ್ಮೆ ಈ ವಯೋಮಾನದ ಹುಡುಗ-ಹುಡುಗಿಯರ ಸಹಜ ವರ್ತನೆಯನ್ನೂ ಹೆತ್ತವರು, ಅದೇ ವಯೋಮಾನದ ಇತರರು ಸರಿಯಾಗಿ ಗ್ರಹಿಸದೇ ತಪ್ಪಾಗಿ ಅರ್ಥೈಸಿಕೊಂಡು ಮಾನಸಿಕ ಹಿಂಸೆ ಕೊಡಬಹುದು. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಈ ಕುರಿತ ಫೇಸ್‌ಬುಕ್ ಪೋಸ್ಟ್ ಒಂದು ವೈರಲ್ ಆಗಿತ್ತು. ಇದೀಗ ‘ಹಿಂದೂಸ್ತಾನ್ ಟೈಮ್ಸ್‌ ಕನ್ನಡ’ದ ಅಂಕಣಕಾರರೂ ಆಗಿರುವ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್ ತಮ್ಮ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಹಸ್ತಮೈಥುನದ ಇನ್ನಷ್ಟು ಆಯಾಮಗಳು, ಅಪಾಯಗಳು ಮತ್ತು ಪರಿಹಾರಗಳ ಬಗ್ಗೆ ವಿವರ ಕೊಟ್ಟಿದ್ದಾರೆ. ಅವರ ಫೇಸ್‌ಬುಕ್ ಪೋಸ್ಟ್‌ ಅನ್ನು ಇಲ್ಲಿ ಯಥಾವತ್ತಾಗಿ ಮರುಪ್ರಕಟಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

***

ಮುಷ್ಟಿ ಮೈಥುನ ಗಂಡು‌ಮಕ್ಕಳಲ್ಲಿ ಮತ್ತು ಹಸ್ತ ಮೈಥುನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಹದಿಹರೆಯ ಅಥವಾ ಅದಕ್ಕಿಂತ ಮುಂಚಿನ ಸಮಯದಲ್ಲಿ ಕಾಣಿಸಿಕೊಳ್ಳುವ ಅಭ್ಯಾಸ. ಅವರವರ ಲೈಂಗಿಕ ಅಗತ್ಯಕ್ಕೆ ತಕ್ಕಂತೆ ಕೆಲವರು ಬಹಳ‌ಸಲ ಈ ಕ್ರಿಯೆಯಲ್ಲಿ ಕೆಲವರು ಕಡಿಮೆ ಸಮಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಕ್ರಿಯೆಗಳಿಂದ ಯಾವುದೇ ತೊಂದರೆ, ಸಮಸ್ಯೆ ಇರುವುದಿಲ್ಲ.‌

ಆದರೆ ಈಗೊಂದು ಪೋಸ್ಟ್ ಓದಿದ‌ ನಂತರ ಅನಿಸಿದ್ದು ಆ ಪೋಸ್ಟಿನಲ್ಲಿ ಹೇಳಿರುವ ಆ ಹುಡುಗಿಗೆ ಇದು ಗೀಳಾಗಿದೆ (obsession). ಗಾಯ ಆಗುವುದು, ಯಾವಾಗಲೂ ಸುಸ್ತಾಗುವುದು ಇದು ಆಕೆ ಈ ಕ್ರಿಯೆಯಲ್ಲಿ ಅತೀವವಾಗಿ ತೊಡಗಿಕೊಳ್ಳುತ್ತಿದ್ದಾಳಷ್ಟೇ ಅಲ್ಲ, ಆಕೆಗೆ ಆ ತುಡಿತವನ್ನು ನಿಯಂತ್ರಣಕ್ಕೆ ತರಲಾಗುತ್ತಿಲ್ಲ ಎಂದು ಸೂಚಿಸುತ್ತದೆ. ಇದು ಅಪಾಯಕಾರಿ ಸ್ಥಿತಿ. ಇದನ್ನು Compulsive Masturbation (OCD) ಎಂದೇ ಕರೆಯಲಾಗುತ್ತದೆ. ಆ ಹುಡುಗಿಗೆ ಮನೋಚಿಕಿತ್ಸೆಯ‌ ಅಗತ್ಯವಿದೆ ಎಂದು ಅನಿಸುತ್ತಿದೆ.

(ಅದು OCD ಅಥವಾ ಅಡಿಕ್ಷನ್ ಆಗಿದ್ದರೆ ಕೇವಲ ಉಪದೇಶದ ಮಾತಿನ ಮೂಲಕ ಕಡಿಮೆ ಆಗುವುದಿಲ್ಲ) ಇನ್ನು OCD ಅಥವಾ ಅಡಿಕ್ಷನ್ ಆಗಿಲ್ಲದ ನಿಯಂತ್ರಣವಿದ್ದೂ ಜಾಸ್ತಿ ಬೇಕು ಅನಿಸುವ ಇಂತಹ ಕ್ರಿಯೆಯ ಅರ್ಜ್ ಅನ್ನು ಹೇಗೆ ತಡೆಯಬಹುದು? (ನನಗೆ ಪರ್ಸನಲ್ ಆಗಿ ಇನ್‌ಬಾಕ್ಸ್‌ನಲ್ಲಿ ಈ ಪ್ರಶ್ನೆ ಕೇಳಿದವರು ಬಹಳ. ಅವರಿಗೂ ಸೇರಿ ಕೆಳಗಿನ ಸಂಕ್ಷಿಪ್ತ ಉತ್ತರ)

1) ಪಾರ್ನ್ ಸಿನಿಮಾ, ವಿಡಿಯೊ, ಅಥವಾ ಅದಕ್ಕೆ ಸಂಬಂಧಿಸಿದ ವಿಷಯ ನೋಡುವುದನ್ನು ನಿಲ್ಲಿಸಬೇಕು

2) ವ್ಯಾಯಾಮ, ನಡಿಗೆ, ಆಟ ಮುಂತಾದವುಗಳ‌ ಮೂಲಕ‌ ದೇಹವನ್ನು ದಣಿಸಬೇಕು

3) ಯಾವ ಸಮಯದಲ್ಲಿ ಇಂತಹ ಅರ್ಜ್ ಉಂಟಾಗುತ್ತದೆಯೋ, ಅದಕ್ಕೆ ಯಾವ ಪ್ರವರ್ತನೆ ( ಟ್ರಿಗ್ಗರ್ ಕಾರಣವಾಗುತ್ತದೋ) ಅದನ್ನು ‌ಗುರುತಿಸಿ ಆ ಸಮಯದಲ್ಲಿ ಯಾವುದಾದರೂ ಬೇರೆಯೇ ಕೆಲಸದಲ್ಲಿ ನಿರತರಾಗುವುದು.

4) ಕಾಯ‌ಕಲ್ಫ ಯೋಗ ಎಂಬ ಪ್ರಕಾರದಲ್ಲಿ, ಲೈಂಗಿಕ ಅಂಗಗಳ ಮೇಲೆ ನಿಯಂತ್ರಣದ ಒಂದು ಯೋಗಾಸನವಿದೆ. ಅದನ್ನು ಕುರಿತು ನಿಯಮಿತವಾಗಿ ಮಾಡುತ್ತಾ ಬರಬಹುದು.

5) ಇಂತಹ‌ ಅರ್ಜ್ ಬಂದಾಗ ತಣ್ಣಿರು ಸ್ನಾನ ಮಾಡುವುದೂ ಒಳ್ಳೆಯದು

6) ಸಾಧ್ಯವಾದಷ್ಟು ಕಾಮ ಪ್ರಚೋದಕ ವಿಷಯ, ಸುದ್ದಿಗಳಿಂದ ದೂರ ಇರಬೇಕು.

ಉಪಯುಕ್ತ ಮಾಹಿತಿ ಎಂದ ಓದುಗರು

ರೂಪಾ ರಾವ್ ಅವರ ಪೋಸ್ಟ್‌ಗೆ 150 ಕ್ಕೂ ಹೆಚ್ಚು ಮಂದಿ ಲೈಕ್ಸ್ ಕೊಟ್ಟಿದ್ದು, 88 ಮಂದಿ ಕಾಮೆಂಟ್ ಮಾಡಿದ್ದಾರೆ. ಒಂದಷ್ಟು ಮಂದಿ ಉಪಯುಕ್ತ ಮಾಹಿತಿ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಹಜವಾದುದನ್ನು ನಿರ್ದಿಷ್ಟ ಸಾಧನೆಯ ಉದ್ದೇಶವಿಲ್ಲದೆ ನಿಯಂತ್ರಿಸುವುದು ಅಸಹಜ ಏನಿಸೋದಿಲ್ವೇ ಎಂಬ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈಗೀನ ‌ಸಮಾಜದ ತಪ್ಪು ಎಂದರೆ.. ಕಾಮ ಎನ್ನುವುದೇ ತೀರ ಸಾಮಾನ್ಯ ಎನ್ನುವಂತೆ ತೋರಿಸುವುದು‌. Web series, Hindi movies ಗಳಲ್ಲಿ ಈರೀತಿಯ ಸೀನ್ ಇದ್ದೇ ಇರುತ್ತೆ. ಯಾವುದನ್ನು ಗೌಪ್ಯವಾಗಿ ಇಟ್ಟಿದ್ದರೋ ಅದನ್ನು ರಾಜಾ ರೋಷವಾಗಿ ತೋರಿಸುತ್ತಾರೆ.ಈ ತರಹದ ದೃಶ್ಯಗಳನ್ನೇ ಬ್ಯಾನ್ ಮಾಡ್ಬೇಕು. ಎಷ್ಟು ಬೇಕೋ ಅಷ್ಟು ತಿಳುವಳಿಕೆ ಸಾಕು. ಆ ತರಹದ ವಿಷಯಗಳಲ್ಲಿ. ವಯಸ್ಸಿಗೂ ಮೀರಿದ ಕುತೂಹಲ ಬಂದರೆ ಅದು ಅತಿಯಾಗಿ ಚಟವಾಗಿಯೇ ಆಗುತ್ತದೆ ಗಂಡು,ಹೆಣ್ಣೆಂಬ ಬೇಧವಿಲ್ಲದೆ. ಅದರ ಮೇಲೆ ನಿಯಂತ್ರಣವಿದ್ದರಷ್ಟೇ ಚಟವಾಗಲಾರದು ಎಂದು ನಿಧಿ ಎಂಬುವರು ಕಾಮೆಂಟ್ ಮಾಡಿದ್ದಾರೆ.