logo
ಕನ್ನಡ ಸುದ್ದಿ  /  ಜೀವನಶೈಲಿ  /  Baby Cry: ಪುಟ್ಟ ಮಗು ಅಳೋದು ಹಸಿವಿನಿಂದ ಮಾತ್ರವಲ್ಲ; ಈ ಕಾರಣಗಳಿಂದಲೂ ಅಳುತ್ತವೆ, ಆತಂಕ ಬೇಡ ಅಮ್ಮಾ

Baby Cry: ಪುಟ್ಟ ಮಗು ಅಳೋದು ಹಸಿವಿನಿಂದ ಮಾತ್ರವಲ್ಲ; ಈ ಕಾರಣಗಳಿಂದಲೂ ಅಳುತ್ತವೆ, ಆತಂಕ ಬೇಡ ಅಮ್ಮಾ

Jayaraj HT Kannada

Sep 26, 2024 04:22 PM IST

google News

ಪುಟ್ಟ ಮಗು ಅಳೋದು ಹಸಿವಿನಿಂದ ಮಾತ್ರವಲ್ಲ; ಈ ಕಾರಣಗಳಿಂದಲೂ ಅಳುತ್ತವೆ

    • Baby Crying: ಪುಟ್ಟ ಮಗು ಹಸಿವಾದಾಗ ಮಾತ್ರ ಅಳುತ್ತದೆ ಎಂದು ಹೆಚ್ಚಿನ ತಾಯಂದಿರು ಭಾವಿಸುತ್ತಾರೆ. ಆದರೆ, ನವಜಾತ ಶಿಶು ಮೊದಲ ನಾಲ್ಕು ತಿಂಗಳು ಹೊಟ್ಟೆ ತುಂಬಿದರೂ ಅಳುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಈ ಬಗ್ಗೆ ಹಮನ ಹರಿಸಿ.
ಪುಟ್ಟ ಮಗು ಅಳೋದು ಹಸಿವಿನಿಂದ ಮಾತ್ರವಲ್ಲ; ಈ ಕಾರಣಗಳಿಂದಲೂ ಅಳುತ್ತವೆ
ಪುಟ್ಟ ಮಗು ಅಳೋದು ಹಸಿವಿನಿಂದ ಮಾತ್ರವಲ್ಲ; ಈ ಕಾರಣಗಳಿಂದಲೂ ಅಳುತ್ತವೆ (Pixabay)

ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದೇ ತಾಯಿಗೆ ಒಂದು ಸವಾಲು. ನವಜಾತ ಶಿಶುಗಳು ಹುಟ್ಟಿದ ಮೊದಲ ನಾಲ್ಕು ತಿಂಗಳು ಹೆಚ್ಚು ಅಳುತ್ತವೆ. ರಾತ್ರಿ ಇರಲಿ ಅಥವಾ ಹಗಲಿರಲಿ, ಕೆಲವೊಮ್ಮೆ ಅಳುತ್ತಾ ಇರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಮಗು ಹಸಿವಿನಿಂದ ಅಳುತ್ತಿದೆ ಎಂದು ತಾಯಿ ಭಾವಿಸುತ್ತಾಳೆ. ಆದರೆ, ಅದನ್ನೂ ಮೀರಿ ಮಕ್ಕಳು ಕೆಲವು ಕಾರಣಗಳಿಂದ ಅಳಬಹುದು. ಪುಟ್ಟ ಮಕ್ಕಳ ಪ್ರತಿಯೊಂದು ಅಗತ್ಯವನ್ನು ಅರ್ಥಮಾಡಿಕೊಳ್ಳುವುದು ತಾಯಿಗೆ ಕಷ್ಟವಾಗುತ್ತದೆ. ಶಿಶುಗಳು ಸಾಮಾನ್ಯವಾಗಿ ದಿನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಅಳುತ್ತವೆ. ಹಾಗಂತಾ ಹಸಿವಾದಾಗ ಮಾತ್ರ ಮಕ್ಕಳು ಅಳುವುದಲ್ಲ. ಇನ್ನೂ ಹಲವು ಕಾರಣಗಳಿಂದ ಕೂಸು ಅಳುತ್ತದೆ. ಹಾಗಿದ್ದರೆ ಇದಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ.

ಮಕ್ಕಳು ದೇವರ ಸಮಾನ ಎಂದು ಹಿರಿಯರು ಹೇಳುವುದುಂಟು. ಹಸುಗೂಸು ಅಳುವ ಮೂಲಕ ಎಲ್ಲವನ್ನೂ ತನ್ನ ತಾಯಿಗೆ ಹೇಳುವ ಪ್ರಯತ್ನ ಮಾಡುತ್ತದೆ. ಏಕೆಂದರೆ ಮಗುವಿಗೆ ತಿಳಿದಿರುವ ಏಕೈಕ ಭಾಷೆ ಅಳುವುದು. ಬೇರೆ ಯಾವ ರೀತಿಯಿಂದಲೂ ಮಗುವಿಗೆ ಮಾತು ಅಥವಾ ಸನ್ನೆಗಳನ್ನು ಮಾಡಲು ಬರುವುದಿಲ್ಲ. ಹೀಗಾಗಿ ತಾಯಿ ಆ ಮಗುವಿನ ಅಳುವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಹಸಿವಿನಿಂದ ಶಿಶು ಅತ್ತರೆ, ಹಾಲು ಕುಡಿದು ಸುಮ್ಮನಾಗುತ್ತದೆ. ಜನನವಾದ ಮೊದಲ ಮೂರು ತಿಂಗಳವರೆಗೆ ಪ್ರತಿ ಗಂಟೆಗೆ ಮಗುವಿಗೆ ಹಸಿವು ಆಗುತ್ತದೆ. ಸಣ್ಣ ಧ್ವನಿಯಲ್ಲಿ ಅಳುವ ಮೂಲಕ ತನಗೆ ಹಾಲು ಬೇಕು ಎಂದು ಹೇಳುತ್ತದೆ. ಹಸಿವಿನಿಂದ ಮಾತ್ರವಲ್ಲದೆ ಇತರ ಕಾರಣಗಳಿಗಾಗಿಯೂ ಮಗು ಅಳುತ್ತದೆ.

ಅತಿಯಾದ ಫೀಡಿಂಗ್‌

ಕೆಲವು ಬಾರಿ ಮಗು ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆಚ್ಚು ಹಾಲು ಕುಡಿಯುತ್ತದೆ. ತಾಯಿಗೂ ಈ ಪ್ರಮಾಣದ ಅರಿವಿರುವುದಿಲ್ಲ. ಹೀಗಾಗಿ ಮಗುವಿಗೆ ತನ್ನ ಹೊಟ್ಟೆ ಅಹಿತಕರವಾಗುತ್ತದೆ. ಆ ಕಾರಣದಿಂದಲೂ ಮಗು ಅಳಲು ಆರಂಭಿಸುತ್ತದೆ. ಹೊಟ್ಟೆಯಲ್ಲಿ ಅಜೀರ್ಣ, ಹೊಟ್ಟೆ ಉಬ್ಬಿದಂತ ಸಮಸ್ಯೆ ಕಾಣಿಸಬಹುದು. ಇದೇ ಕಾರಣದಿಂದ ಹಾಲು ಕುಡಿದ ನಂತರ ಮಗುವಿನ ಬಾಯಿಂದ ಬರುತ್ತದೆ. ಅದಕ್ಕೆ ಚಿಂತಿಸಬೇಡಿ. ಮಗುವಿನ ಹೊಟ್ಟೆ ತುಸು ಶಾಂತವಾಗುತ್ತದೆ.

ಡಯಪರ್ ಕಿರಿಕಿರಿ

ಪುಟ್ಟ ಮಕ್ಕಳಿಗೆ ಹಾಕಿರುವ ಡಯಪರ್‌ನಲ್ಲಿ ಕಿರಿಕಿರಿ ಉಂಟಾಗಬಹುದು. ಒದ್ದೆಯಾದ ಬಟ್ಟೆ ಅಥವಾ ಡಯಪರ್ ಮಕ್ಕಳ ಸುಖನಿದ್ದೆಗೆ ಅವಕಾಶ ಕೊಡುವುದಿಲ್ಲ. ಹೀಗಾಗಿ ಅಳಲು ಆರಂಭಿಸುತ್ತವೆ. ಹೀಗಾಗಿ ಹಾಲುಣಿಸಿದ ನಂತರವೂ ಮಗು ಅಳುತ್ತಿದ್ದರೆ ಡಯಪರ್ ಪರೀಕ್ಷಿಸಲು ಮರೆಯಬೇಡಿ. ಮಗುವಿನ ಡಯಪರ್ ಒದ್ದೆಯಾಗಿದೆಯೇ ಎಂದು ಪರಿಶೀಲಿಸಿ. ಒದ್ದೆಯಾಗಿದ್ದರೆ ಅದನ್ನು ತಕ್ಷಣ ಬದಲಾಯಿಸಿ.

ಧರಿಸಿದ ಬಟ್ಟೆಯಿಂದ ಸುಖನಿದ್ದೆಗೆ ಭಂಗ

ಹವಾಮಾನಕ್ಕೆ ತಕ್ಕನಾಗಿ ಮಗುವಿಗೆ ಬಟ್ಟೆಗಳನ್ನು ಧರಿಸಬೇಕು. ಕೆಲವೊಮ್ಮೆ ಧರಿಸುವ ಬಟ್ಟೆಗಳು ಮಗುವಿಗೆ ಕಿರಿಕಿರಿ ಆಗಬಹುದು. ಇದರಿಂದಲೂ ಮಗು ಅಳಲು ಆರಂಭಿಸುತ್ತದೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಅದರೊಳಗೆ ಡಯಪರ್‌, ಮೇಲಿಂದ ಒಂದಷ್ಟು ಬಟ್ಟೆಗಳನ್ನು ಹಾಕಿದರೆ ಸುಖನಿದ್ದೆಗೆ ಭಂಗವಾಗುತ್ತದೆ. ಹೀಗಾಗಿ ಮಕ್ಕಳಿಗೆ ಸಡಿಲವಾದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ಮಕ್ಕಳು ರಾತ್ರಿ ಮಲಗಲ್ಲ ಎಂಬುದು ಹೆತ್ತವರ ಸಾಮಾನ್ಯ ರೋದನೆ. ಇದು ಸಾಮಾನ್ಯ. ಮಕ್ಕಳಲ್ಲಿ ಸಿರ್ಕಾಡಿಯನ್ ರಿದಮ್ ನಾಲ್ಕು ತಿಂಗಳ ವಯಸ್ಸಿನವರೆಗೆ ಹೊಂದಿಸಲ್ಪಡುವುದಿಲ್ಲ. ಅಂದರೆ ಯಾವ ಸಮಯಕ್ಕೆ ಮಲಗಬೇಕು ಮತ್ತು ಯಾವಾಗ ಎದ್ದೇಳಬೇಕು ಎಂಬುದು ಮಕ್ಕಳಿಗೆ ಗೊತ್ತಿರುವುದಿಲ್ಲ. ಹೀಗಾಗಿ ತಾಯಿ ತಾಳ್ಮೆಯಿಂದಿರಬೇಕು. ನಾಲ್ಕು ತಿಂಗಳ ನಂತರ ಬಹುತೇಕ ಮಕ್ಕಳ ನಿದ್ರೆಯ ಸಮಯವು ಸ್ಥಿರವಾಗುತ್ತಾ ಸಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ