logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಗು-ಪೋಷಕರ ನಡುವೆ ಅಂತರ ಸೃಷ್ಟಿಯಾಗಲು ಇವೇ ಪ್ರಮುಖ ಕಾರಣಗಳು; ಮಕ್ಕಳ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನ ಮಾಡದಿರಿ

ಮಗು-ಪೋಷಕರ ನಡುವೆ ಅಂತರ ಸೃಷ್ಟಿಯಾಗಲು ಇವೇ ಪ್ರಮುಖ ಕಾರಣಗಳು; ಮಕ್ಕಳ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನ ಮಾಡದಿರಿ

Reshma HT Kannada

Jul 11, 2024 02:41 PM IST

google News

ಮಕ್ಕಳ ವಿಚಾರದಲ್ಲಿ ಎಂದಿಗೂ ಈ ತಪ್ಪು ಮಾಡದಿರಿ

    • ಪೋಷಕರು ಹಾಗೂ ಮಕ್ಕಳ ನಡುವಿನ ಬಂಧ ಮಧುರವಾದದ್ದು. ಆದರೆ ಕೆಲವೊಮ್ಮೆ ಮಕ್ಕಳು ತಂದೆ-ತಾಯಿಯಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ. ಪೋಷಕರನ್ನು ಪ್ರೀತಿಸುವ ಬದಲು ದ್ವೇಷದಿಂದ ನೋಡಲು ಆರಂಭಿಸುತ್ತಾರೆ. ಇದಕ್ಕೆ ಪೋಷಕರು ಮಾಡುವ ಈ ತಪ್ಪುಗಳೇ ಕಾರಣ. ಅಂತಹ ತಪ್ಪುಗಳ ಬಗ್ಗೆ ಗಮನ ಹರಿಸಿದೇ ಇದ್ದರೆ ಭವಿಷ್ಯದಲ್ಲಿ ತೊಂದರೆ ಎದುರಾಗುವುದು ಖಚಿತ.
ಮಕ್ಕಳ ವಿಚಾರದಲ್ಲಿ ಎಂದಿಗೂ ಈ ತಪ್ಪು ಮಾಡದಿರಿ
ಮಕ್ಕಳ ವಿಚಾರದಲ್ಲಿ ಎಂದಿಗೂ ಈ ತಪ್ಪು ಮಾಡದಿರಿ (Shutterstock)

ಪೋಷಕರು ಹಾಗೂ ಮಕ್ಕಳ ನಡುವಿನ ಸಂಬಂಧ ಪರಿಶುದ್ಧವಾದದ್ದು. ಇದು ಜಗತ್ತಿನಲ್ಲಿ ಯಾವುದೇ ಫಿಲ್ಟರ್‌ ಇಲ್ಲದ ಸಂಬಂಧ. ತಂದೆ-ತಾಯಿ, ಮಕ್ಕಳ ನಡುವಿನ ನಡುವಿನ ಪ್ರೀತಿ, ಅನುಬಂಧ ಯಾವುದೇ ಕಲಬೆರಕೆ ಇಲ್ಲದ್ದು. ಪೋಷಕರಿಗೆ ತಮ್ಮ ಮಕ್ಕಳ ಏಳಿಗೆಯೇ ಪ್ರಧಾನ. ಮಕ್ಕಳ ಒಳಿತಾಗಿ ಪೋಷಕರು ಏನು ಬೇಕಾದ್ರೂ ಮಾಡ್ತಾರೆ.

ತಂದೆ-ತಾಯಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಲು ಮತ್ತು ಪಾಲನೆ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಪೋಷಕರು ನೀಡಿದ ಮೌಲ್ಯಗಳು ಮಕ್ಕಳ ನಡವಳಿಕೆಯಲ್ಲಿಯೂ ಪ್ರತಿಬಿಂಬಿತವಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ಹಾಗೂ ಮಕ್ಕಳ ನಡುವೆ ಅಂತರ ಹೆಚ್ಚುತ್ತಿದೆ. ಪೋಷಕರ ಪ್ರಕಾರ ಅವರು ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುತ್ತಾರೆ, ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆ, ಪೋಷಕರು ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿರುತ್ತಾರೆ. ಆದರೂ ಮಕ್ಕಳು ವಿಭಿನ್ನವಾಗಿ ಬೆಳೆಯುತ್ತಾರೆ. ಇದಕ್ಕೆ ಕಾರಣ ತಂದೆ-ತಾಯಿಗಳು ತಮಗೇ ಅರಿಯದೆ ಮಾಡುವ ತಪ್ಪುಗಳು. ಈ ತಪ್ಪುಗಳಿಂದಾಗಿ ಪೋಷಕರು ಹಾಗೂ ಮಕ್ಕಳ ನಡುವಿನ ಸಂಬಂಧ ಹದಗೆಡುತ್ತಾ ಹೋಗುತ್ತದೆ. ಮಕ್ಕಳು ಪೋಷಕರಿಂದ ದೂರಾಗುತ್ತಾರೆ, ಮಾತ್ರವಲ್ಲ ಪೋಷಕರನ್ನು ದ್ವೇಷಿಸಲು ಆರಂಭಿಸುತ್ತಾರೆ. ಆರಂಭದಲ್ಲಿ ತೋರ್ಪಡಿಸದ ಮಕ್ಕಳು ಮನಸ್ಸಿನಲ್ಲೇ ಪೋಷಕರನ್ನು ದ್ವೇಷ ಮಾಡಲು ಆರಂಭಿಸುತ್ತಾರೆ. ಹಾಗಾದರೆ ಪೋಷಕರು ಮಕ್ಕಳ ವಿಚಾರದಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ನೋಡಿ.

ಅತಿಯಾದ ನಿಯಂತ್ರಣ

ಮಕ್ಕಳನ್ನು ಅತಿಯಾಗಿ ನಿಯಂತ್ರಿಸುವುದು, ಮಕ್ಕಳನ್ನು ಕಟ್ಟುನಿಟ್ಟಾಗಿಡುವುದು, ಅವರ ಚಲನವಲನಗಳ ಮೇಲೆ ಕಣ್ಣಿಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಆದರೆ ತುಂಬಾ ಕಟ್ಟುನಿಟ್ಟಾಗಿರುವುದು ಯಾವುದೇ ಅರ್ಥದಲ್ಲಿ ಸರಿಯಲ್ಲ. ಅತಿಯಾದ ನಿಯಂತ್ರಣವು ಮಕ್ಕಳಿಗೆ ಉಸಿರುಗಟ್ಟಿಸಬಹದು. ಇದರಿಂದಾಗಿ ಮಕ್ಕಳು ತಮ್ಮ ಯಾವುದೇ ವಿಷಯವನ್ನು ಹೆತ್ತವರ ಮುಂದೆ ಬಹಿರಂಗವಾಗಿ ಇಡಲು ಹಿಂಜರಿಯಬಹುದು ಮತ್ತು ಕ್ರಮೇಣ ಅವರಿಂದ ದೂರ ಸರಿಯಲು ಪ್ರಾರಂಭಿಸಬಹುದು.

ಭಾವನಾತ್ಮಕ ಬೆಂಬಲ ನೀಡದೇ ಇರುವುದು

ಮಕ್ಕಳು ಪೋಷಕರಿಂದ ದೂರವಿರಲು ಬಯಸಲು ಇನ್ನೊಂದು ಪ್ರಮುಖ ಕಾರಣವೆಂದರೆ ಮಕ್ಕಳಿಗೆ ಭಾವನಾತ್ಮಕ ಬೆಂಬಲವನ್ನು ನೀಡದೇ ಇರುವುದು. ಮಕ್ಕಳು ತಮ್ಮ ಹೆತ್ತವರಿಂದ ಹೆಚ್ಚು ಭಾವನಾತ್ಮಕ ಬೆಂಬಲವನ್ನು ಬಯಸುತ್ತಾರೆ. ಯಾವುದೇ ತೊಂದರೆಯಲ್ಲಿದ್ದಾಗ ಅಥವಾ ತಪ್ಪು ಸಂಭವಿಸಿದಾಗ, ಮಕ್ಕಳು ತಮ್ಮ ಹೆತ್ತವರಿಂದ ಭಾವನಾತ್ಮಕ ಬೆಂಬಲವನ್ನು ನಿರೀಕ್ಷಿಸುತ್ತಾರೆ. ಆದರೆ ಅಂತಹ ಸಂದರ್ಭಗಳಲ್ಲಿ, ಪೋಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಉಪಸ್ಥಿತರಿರುವುದಿಲ್ಲ ಮತ್ತು ಅವರು ತಪ್ಪು ಮಾಡಿದಾಗ ಪ್ರೀತಿಯಿಂದ ಕೇಳುವ ಬದಲು, ಅವರು ಮೇಲೆ ಕೋಪಗೊಳ್ಳಲು ಪ್ರಾರಂಭಿಸುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳು ಪೋಷಕರಿಂದ ದೂರವಿರಲು ಪ್ರಾರಂಭಿಸುತ್ತಾರೆ.

ಮಾತನಾಡದೇ ಇರುವುದು

ಇಂದಿನ ವೇಗದ ಜೀವನದಲ್ಲಿ, ಪ್ರತಿಯೊಬ್ಬರೂ ಹಣ ಸಂಪಾದನೆಯ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಈ ಓಟದಲ್ಲಿ, ಸಂಬಂಧಗಳು ಎಲ್ಲೋ ಹಿಂದೆ ಬೀಳುತ್ತಿವೆ. ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸ ಮಾಡುವ ಕಾರಣ ಇಬ್ಬರೂ ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗದ ಕಾರಣ, ಮಾತುಕತೆಯು ಅಷ್ಟಕಷ್ಟೆ. ಸಂವಹನದ ಕೊರತೆಯಿಂದಾಗಿ, ಎರಡೂ ಕಡೆಯವರು ಪರಸ್ಪರರ ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಇದು ಎಲ್ಲೋ ಸಂಬಂಧಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.

ಅತಿಯಾದ ನಿರೀಕ್ಷೆ

ಅನೇಕ ಬಾರಿ ಪೋಷಕರು ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇರಿಸಿಕೊಳ್ಳಲು ಆರಂಭಿಸುತ್ತಾರೆ. ಮಕ್ಕಳ ಸಾಮರ್ಥ್ಯದ ಬಗ್ಗೆ ಗಮನ ಹರಿಸದಿರುವ ಮೂಲಕ, ಅವರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಯಶಸ್ಸನ್ನು ಅವರಿಂದ ನಿರೀಕ್ಷಿಸಲು ಪ್ರಾರಂಭಿಸುತ್ತಾರೆ. ಈ ನಿರೀಕ್ಷೆಯಿಂದಾಗಿ, ಅವರು ತಮ್ಮ ಮಕ್ಕಳ ಮೇಲೆ ಅನಗತ್ಯ ಮಾನಸಿಕ ಒತ್ತಡವನ್ನು ಹೇರಲು ಪ್ರಾರಂಭಿಸುತ್ತಾರೆ. ಇದು ಕೂಡ ಮಕ್ಕಳು ಪೋಷಕರಿಂದ ದೂರಾಗಲು ಬಯಸಲು ಹಾಗೂ ಅವರನ್ನು ದ್ವೇಷ ಮಾಡಲು ಪ್ರಮಖ ಕಾರಣವಾಗುತ್ತದೆ.

ಸಣ್ಣಪುಟ್ಟ ತಪ್ಪಿಗೂ ಬಯ್ಯುವುದು 

ಕೆಲವೊಮ್ಮೆ ಪೋಷಕರು ಮಕ್ಕಳನ್ನು ಸರಿಪಡಿಸುವ ಸಲುವಾಗಿ ಸಣ್ಣ ವಿಷಯಗಳಿಗೆ ಬೈಯಲು ಪ್ರಾರಂಭಿಸುತ್ತಾರೆ. ಅವರು ಪ್ರತಿಯೊಂದು ತಪ್ಪಿಗೂ ಅವರನ್ನು ಟೀಕಿಸಲು ಪ್ರಾರಂಭಿಸುತ್ತಾರೆ. ಮಕ್ಕಳ ಸಣ್ಣಪುಟ್ಟ ಸಾಧನೆಗಳಿಂದ ಸಂತೋಷಪಡುವ ಬದಲು, ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಪ್ರಾರಂಭಿಸುತ್ತಾರೆ. ಈ ಎಲ್ಲಾ ವಿಷಯಗಳು ಮಕ್ಕಳನ್ನು ಅವರ ಹೆತ್ತವರಿಂದ ದೂರವಿಡುತ್ತವೆ.

ಮಕ್ಕಳ ವಿಚಾರದಲ್ಲಿ ಪೋಷಕರು ಈ ಮೇಲಿನ ತಪ್ಪುಗಳನ್ನು ಎಂದಿಗೂ ಮಾಡಬಾರದು. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಒಮ್ಮೆ ಅವರಿಗೆ ಪೋಷಕರು ನಮ್ಮ ಪರವಾಗಿಲ್ಲ ಎನ್ನಿಸಿದರೆ ಅದು ಜೀವನಪೂರ್ತಿ ಅವರು ಪೋಷಕರನ್ನು ದ್ವೇಷ ಮಾಡಲು ಕಾರಣವಾಗಬಹುದು. ಹಾಗಾಗಿ ಮಕ್ಕಳನ್ನು ಪ್ರೀತಿಸಿ, ಅವರ ಆಸೆ-ಕನಸಗಳನ್ನು ಗೌರವಿಸಿ. ಆಗ ಮಕ್ಕಳು ಕೂಡ ನಿಮ್ಮ ಆಸೆ-ಆಕಾಂಕ್ಷೆಗಳನ್ನು ಪೂರೈಸಲು ಗಮನ ನೀಡುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ