logo
ಕನ್ನಡ ಸುದ್ದಿ  /  ಜೀವನಶೈಲಿ  /  Ppf: ತೆರಿಗೆ ವಿನಾಯಿತಿಗಾಗಿ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ; ಇದರ 5 ಪ್ರಯೋಜನ ತಿಳಿದುಕೊಳ್ಳಿ

PPF: ತೆರಿಗೆ ವಿನಾಯಿತಿಗಾಗಿ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ; ಇದರ 5 ಪ್ರಯೋಜನ ತಿಳಿದುಕೊಳ್ಳಿ

HT Kannada Desk HT Kannada

Jan 13, 2024 04:02 PM IST

ತೆರಿಗೆ ಉಳಿಸಲು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ.

    • Tax Saving Schemes: ಪಿಪಿಎಫ್‌ ಹೂಡಿಕೆಗಳ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುವುದರ ಜೊತೆಗೆ, ಪಿಪಿಎಫ್‌ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಇತರ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ತೆರಿಗೆ ವಿನಾಯಿತಿಗಾಗಿ ನೀವು ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಸಿಗುವ 5 ಪ್ರಯೋಜನಗಳು ಹೀಗಿವೆ.
ತೆರಿಗೆ ಉಳಿಸಲು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ.
ತೆರಿಗೆ ಉಳಿಸಲು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ. (HT File Photo)

ಗಳಿಸಿದ ಹಣವನ್ನು ಸರಿಯಾಗಿ ಹೂಡಿಕೆ ಮಾಡುವುದು ಜಾಣತನ. ಉಳಿತಾಯ ಯೋಜನೆಗಳಲ್ಲಿ ಮಾಡುವ ಹೂಡಿಕೆಯು ಬಡ್ಡಿ ದರ, ತೆರಿಗೆ ಪ್ರಯೋಜನಗಳನ್ನು ನೀಡುವಂತಿರಬೇಕು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಯೋಜನೆಗಳಿವೆ. ಆದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಉತ್ತಮ ಆಯ್ಕೆಯಾಗಿದೆ. ಇದರಿಂದ ನಿಮಗೆ ಉತ್ತಮ ಪ್ರಮಾಣದ ತೆರಿಗೆ ಉಳಿತಾಯವಾಗುತ್ತದೆ. ಪ್ರಸ್ತುತ ಸರ್ಕಾರವು ಪಿಪಿಎಫ್‌ (PPF) ಮೇಲೆ ಶೇ 7.1 ಬಡ್ಡಿಯನ್ನು ಪಾವತಿಸುತ್ತಿದೆ. ಈ ಯೋಜನೆಯಲ್ಲಿ ಕಡಿಮೆ ಬಡ್ಡಿದರದ ಹೊರತಾಗಿಯೂ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ತೆರಿಗೆ ಉಳಿತಾಯದಂತಹ ದೊಡ್ಡ ಪ್ರಯೋಜನವನ್ನು ಪಿಪಿಎಫ್ ನೀಡುತ್ತದೆ. ಹೂಡಿಕೆ ಮಾಡಲು ಪಿಪಿಎಫ್‌ ಅನ್ನು ಆಯ್ದುಕೊಳ್ಳಲು ನಿಮಗೆ ಸಹಾಯ ಮಾಡುವ 5 ಪ್ರಮುಖ ಕಾರಣಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇದನ್ನೂ ಓದಿ: FD rates: ಈ ಬ್ಯಾಂಕ್​​ಗಳಲ್ಲಿ 3 ವರ್ಷದ ಎಫ್​ಡಿ ಮಾಡಿದ್ರೆ ನಿಮಗೆ ಸಿಗತ್ತೆ ಅಧಿಕ ಬಡ್ಡಿ

ಪಿಪಿಎಫ್‌ (PPF) ಯೋಜನೆಯ ಪ್ರಯೋಜನಗಳು

1) 18 ವರ್ಷ ಮೇಲ್ಪಟ್ಟ ಭಾರತೀಯರು ಇದರ ಪ್ರಯೋಜನಗಳನ್ನು ಪಡೆಯಬಹುದು. ಈ ಉಳಿತಾಯ ಯೋಜನೆಗೆ ಸರ್ಕಾರ ಭದ್ರತೆಯನ್ನು ಒದಗಿಸುತ್ತದೆ. ಆದಾಯವೂ ಖಚಿತ. ಪ್ರಸ್ತುತ ಪಿಪಿಎಫ್ ಮೇಲಿನ ಬಡ್ಡಿಯು ಶೇಕಡಾ 7.1 ರಷ್ಟಿದೆ.

2) ಸಾರ್ವಜನಿಕ ಭವಿಷ್ಯ ನಿಧಿಯು EEE ವರ್ಗದ ಅಡಿಯಲ್ಲಿ ಬರುತ್ತದೆ. EEE ವರ್ಗ ಎಂದರೆ ಹೂಡಿಕೆ, ಬಡ್ಡಿ, ಆದಾಯ ಮತ್ತು ಅವಧಿ ಪೂರ್ಣಗೊಂಡ ನಂತರದ ಗಳಿಕೆ ಹಣದ ಮೇಲಿನ ತೆರಿಗೆ ವಿನಾಯಿತಿಗಳು ಎಂದರ್ಥ. ಅದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತೀರಿ. ಮೆಚ್ಯೂರಿಟಿ ಹಣ ಮತ್ತು ಮೆಚ್ಯೂರಿಟಿ ಮೊತ್ತದ ಮೇಲಿನ ಬಡ್ಡಿ ಆದಾಯವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಇತರ ಯೋಜನೆಗಳ ಬಗ್ಗೆ ಹೇಳುವುದಾದರೆ ಉದಾಹರಣೆಗೆ, ಮ್ಯೂಚುವಲ್ ಫಂಡ್‌ಗಳು ಖಂಡಿತವಾಗಿಯೂ ಹೆಚ್ಚಿನ ಆದಾಯವನ್ನು ನೀಡುತ್ತವೆ. ಆದರೆ ದೀರ್ಘಾವಧಿಯ ಬಂಡವಾಳದ ಮೇಲಿನ ಲಾಭಗಳಿಗೆ 20 ಪ್ರತಿಶತದವರೆಗೆ ತೆರಿಗೆ ವಿಧಿಸಲಾಗುತ್ತದೆ.

3) ಪಿಪಿಎಫ್‌ನ ಮೆಚ್ಯೂರಿಟಿಯ ಅವಧಿ 15 ವರ್ಷಗಳು. ಅದರ ನಂತರವೂ ಅದನ್ನು 10 ವರ್ಷಗಳವರೆಗೆ ಹೆಚ್ಚಿಸಬಹುದು. ನಿಮಗೆ 35 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನಿವೃತ್ತಿಗಾಗಿ ನೀವು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದೀರಿ. ನೀವು ಪ್ರತಿದಿನ ರೂ.100 ಠೇವಣಿ ಮಾಡುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ 60 ವರ್ಷ ತುಂಬಿದಾಗ ನೀವು ಒಟ್ಟು ರೂ. 25 ಲಕ್ಷ ಸಿಗಲಿದೆ. ಇದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.

4) ನೀವು ಈ ಯೋಜನೆಯನ್ನು 25 ವರ್ಷಗಳವರೆಗೆ ವಿಸ್ತರಿಸಿದಾಗ, ಅಂತಿಮವಾಗಿ 25 ಲಕ್ಷ ರೂ. ಸಿಗಲಿದೆ. ಈ ಅವಧಿಯಲ್ಲಿ ನೀವು ಒಟ್ಟು ರೂ. 9,12,500 ಠೇವಣಿ ಇಡಬೇಕಾಗುತ್ತದೆ. ಮೊತ್ತದ ಬಡ್ಡಿಯಾಗಿ ರೂ.15,95,784 ಸಿಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

5) ಪಿಪಿಎಫ್‌ ಹೂಡಿಕೆಗಳ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುವುದರ ಜೊತೆಗೆ, ಪಿಪಿಎಫ್‌ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಇತರ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ಉದಾಹರಣೆಗೆ, ನೀವು ಹಣಕಾಸು ವರ್ಷದಲ್ಲಿ ಪ್ರತಿ ವರ್ಷ ರೂ.1.5 ಲಕ್ಷ ಮೊತ್ತವನ್ನು ಹೂಡಿಕೆ ಮಾಡಿದರೆ, ಆ ಮೊತ್ತಕ್ಕೆ ನೀವು ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಪಿಪಿಎಫ್‌ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆಯಾದರೂ, ಈ ಯೋಜನೆಯ ಏಕೈಕ ಅನಾನುಕೂಲವೆಂದರೆ ಅದು 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಇದು ಬಹಳ ದೀರ್ಘ ಸಮಯ. 5 ವರ್ಷಗಳ ನಂತರ ಮೊತ್ತವನ್ನು ಹಿಂಪಡೆಯಲು ಇದು ನಿಮಗೆ ಅವಕಾಶ ನೀಡುತ್ತದೆಯಾದರೂ, ನೀವು ಪಿಪಿಎಫ್‌ ಖಾತೆಯನ್ನು ತೆರೆದ ದಿನಾಂಕದಿಂದ 1 ಪ್ರತಿಶತ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು