logo
ಕನ್ನಡ ಸುದ್ದಿ  /  ಜೀವನಶೈಲಿ  /  Rrb Recruitment: ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕೊಟ್ಟ ಆರ್‌ಆರ್‌ಬಿ, ಕೊನೆಯ ದಿನಾಂಕವೂ ಘೋಷಣೆ

RRB Recruitment: ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕೊಟ್ಟ ಆರ್‌ಆರ್‌ಬಿ, ಕೊನೆಯ ದಿನಾಂಕವೂ ಘೋಷಣೆ

Umesh Kumar S HT Kannada

Sep 29, 2024 12:59 PM IST

google News

ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ಆರ್‌ಆರ್‌ಬಿ ಕೊಟ್ಟಿದೆ. (ಸಾಂಕೇತಿಕ ಚಿತ್ರ)

  • ರೈಲ್ವೆ ಉದ್ಯೋಗಾಕಾಂಕ್ಷಿಗಳಿಗೆ ಖುಷಿ ಸುದ್ದಿ. ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ನೀಡಿದೆ. ಇದಕ್ಕೆ ಕೊನೆಯ ದಿನಾಂಕವನ್ನೂ ಘೋಷಿಸಿ ಮತ್ತೊಂದು ಅಧಿಸೂಚನೆಯನ್ನೂ ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ. 

ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ಆರ್‌ಆರ್‌ಬಿ ಕೊಟ್ಟಿದೆ. (ಸಾಂಕೇತಿಕ ಚಿತ್ರ)
ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ಆರ್‌ಆರ್‌ಬಿ ಕೊಟ್ಟಿದೆ. (ಸಾಂಕೇತಿಕ ಚಿತ್ರ) (Pexel)

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ವಿಶೇಷವಾಗಿ ರೈಲ್ವೆ ಉದ್ಯೋಗ ಹುಡುಕುತ್ತಿರುವವರಿಗೆ ಖುಷಿ ಸುದ್ದಿ. ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ನೀಡಿದೆ. ಇದಕ್ಕೆ ಕೊನೆಯ ದಿನಾಂಕವನ್ನೂ ಘೋಷಿಸಿ ಮತ್ತೊಂದು ಅಧಿಸೂಚನೆಯನ್ನೂ ಬಿಡುಗಡೆ ಮಾಡಿದೆ. ಈ ನೋಟಿಸ್‌ನಲ್ಲಿ ಹೊಸ ಅಭ್ಯರ್ಥಿಗಳಿಗಷ್ಠೇ ಅಲ್ಲ ಈಗಾಗಲೇ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಿಗೂ ಮುಖ್ಯ ಸೂಚನೆ ಇದೆ. ಹಾಗಾಗಿ ಪೂರ್ತಿಯಾಗಿ ಗಮನಿಸುವುದು ಮುಖ್ಯ. ಆರ್‌ಆರ್‌ಬಿ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಂಡೋ ಅಕ್ಟೋಬರ್ 2 ರಂದು ಪುನಃ ತೆರೆಯಲಿದೆ. ಇದು ಅಕ್ಟೋಬರ್ 16 ರ ತನಕ ತೆರೆದಿರಲಿದ್ದು, ಅಷ್ಟರೊಳಗೆ ಹೊಸ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರು ಅರ್ಜಿ ವಿವರದಲ್ಲಿ ತಪ್ಪುಗಳಾಗಿದ್ದರೆ ಅದರ ತಿದ್ದುಪಡಿಯನ್ನು ಮಾಡಬಹುದು. ರೈಲ್ವೇ ನೇಮಕಾತಿ ಮಂಡಳಿ ಪ್ರಕಟಿಸಿರುವ ಅಧಿಸೂಚನೆಯನ್ನು ಹೊಸ ಮತ್ತು ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಗಮನಿಸಬೇಕು. ಅದರಲ್ಲಿ ನೆನಪಿಡಬೇಕಾದ ಕೆಲವು ಅಂಶಗಳಿವೆ.

ಆರ್‌ಆರ್‌ಬಿ ಟೆಕ್ನಿಷಿಯನ್ ನೇಮಕಾತಿ; ಅಭ್ಯರ್ಥಿಗಳು ನೆನಪಿಡಬೇಕಾದ ಅಂಶಗಳು

1) ಯಾವುದೇ ಒಂದು ಅಥವಾ ಹೆಚ್ಚಿನ ವರ್ಗಗಳಿಗೆ ಅರ್ಜಿ ಸಲ್ಲಿಸಿದ ಮತ್ತು ಅಗತ್ಯವಿರುವ ಶುಲ್ಕವನ್ನು ಪಾವತಿಸಿದ ಅಭ್ಯರ್ಥಿಗಳನ್ನು ಅಸ್ತಿತ್ವದಲ್ಲಿರುವ ಅಭ್ಯರ್ಥಿಗಳೆಂದು ಪರಿಗಣಿಸಲಾಗುತ್ತದೆ. ಅವರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೆ ವಿಂಡೋಕ್ಕೆ ಪ್ರವೇಶ ಪಡೆಯಬಹುದು. ಈ ಅಭ್ಯರ್ಥಿಗಳು ಅಸ್ತಿತ್ವದಲ್ಲಿರುವ ಅಥವಾ ಹೊಸದಾಗಿ ಸೇರಿಸಲಾದ ವರ್ಗಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಹಿಂದೆ ಆಯ್ಕೆ ಮಾಡಿದ ವರ್ಗಗಳನ್ನು ಬದಲಾಯಿಸಬಹುದು.

2) ಅಸ್ತಿತ್ವದಲ್ಲಿರುವ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಗಳನ್ನು ಎಡಿಟ್ ಮಾಡಲು, ಛಾಯಾಚಿತ್ರಗಳು ಮತ್ತು ಸಹಿಗಳನ್ನು ಮರು-ಅಪ್ಲೋಡ್ ಮಾಡಲು ಮತ್ತು ಆರ್‌ಆರ್‌ಬಿ ಬದಲಾವಣೆ ಮತ್ತು ಪೋಸ್ಟ್ ಆದ್ಯತೆಗಳನ್ನು ಬದಲಾಯಿಸುವ ಆಯ್ಕೆ ಮಾತ್ರ ಸಿಗುತ್ತದೆ.

3) ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೆ ಅರ್ಜಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿಲ್ಲ

4) ಹೊಸ ಅಭ್ಯರ್ಥಿಗಳು ಯಾರು?: ಈ ಹಿಂದೆ ಅರ್ಜಿಗಳನ್ನು ಸಲ್ಲಿಸಿದ್ದು, ಆದರೆ ಶುಲ್ಕವನ್ನು ಪಾವತಿಸದೇ ಬಾಕಿ ಉಳಿದಿದ್ದರೆ, ಅರ್ಜಿ ಸಲ್ಲಿಸಿದ ಮತ್ತು ವರ್ಗ 1 (ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್) ಹುದ್ದೆಗೆ ಶುಲ್ಕವನ್ನು ಪಾವತಿಸಿದ ಆದರೆ ತಂತ್ರಜ್ಞ ಗ್ರೇಡ್ 3 ಹುದ್ದೆಗೆ ಅರ್ಜಿ ಸಲ್ಲಿಸದಿರುವವರು. CEN 02/2024 ರ ಅಡಿಯಲ್ಲಿ ತಂತ್ರಜ್ಞರಿಗಾಗಿ ಈ ವರ್ಷ RRB ಗಳು ನಡೆಸಿದ ಇತರ ನೇಮಕಾತಿ ಡ್ರೈವ್‌ಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತು RRB ಗಳು ಈ ವರ್ಷ ನಡೆಸಿದ ಯಾವುದೇ ನೇಮಕಾತಿ ಡ್ರೈವ್‌ಗೆ ಅರ್ಜಿ ಸಲ್ಲಿಸದವರನ್ನು ಸಹ ಹೊಸ ಅಭ್ಯರ್ಥಿಗಳಾಗಿ ಪರಿಗಣಿಸಲಾಗುತ್ತದೆ.

5) ಮರು ತೆರೆದ ಅಪ್ಲಿಕೇಶನ್ ವಿಂಡೋದಲ್ಲಿ, ಹೊಸ ಅಭ್ಯರ್ಥಿಗಳು ವಿಭಾಗ 2 ರಿಂದ 40 ರಲ್ಲಿ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಆರ್‌ಆರ್‌ಬಿ ಟೆಕ್ನಿಷಿಯನ್ ನೇಮಕಾತಿ; ಇದೂ ನೆನಪಿನಲ್ಲಿರಲಿ…

ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಗಳನ್ನು ತಿದ್ದುಪಡಿ ಮಾಡಲು 250 ರೂಪಾಯಿ ಪಾವತಿಸಬೇಕು. ಇದಕ್ಕೆ ಸಂಬಂಧಿಸಿದ ವಿಂಡೋ ಅಕ್ಟೋಬರ್ 17 ರಿಂದ 21 ರವರೆಗೆ ತೆರೆದಿರುತ್ತದೆ. ಉದ್ಯೋಗ ಅಧಿಸೂಚನೆಯಲ್ಲಿ ನಿಗದಿಪಡಿಸಿದ ಷರತ್ತುಗಳ ಪ್ರಕಾರ ಹೊಸ ಅಭ್ಯರ್ಥಿಗಳು ತಮ್ಮ ನಮೂನೆಗಳನ್ನು ಎಡಿಟ್ ಮಾಡಬಹುದು. ಅಸ್ತಿತ್ವದಲ್ಲಿರುವ ಅಭ್ಯರ್ಥಿಗಳು ಎಡಿಟ್‌ ವಿಂಡೋದಲ್ಲಿ ಸೀಮಿತ ಆಯ್ಕೆ ಮಾತ್ರ ಅಂದರೆ ಶೈಕ್ಷಣಿಕ ಅರ್ಹತೆ, ವಲಯ ಮತ್ತು ಪೋಸ್ಟ್ ಆದ್ಯತೆಗಳು, ಫೋಟೋ ಮತ್ತು ಸಹಿ ಅಪ್ಲೋಡ್ ಮಾಡುವ ಅವಕಾಶ ಹೊಂದಿರುತ್ತಾರೆ.

ಎಸ್‌ಸಿ, ಎಸ್‌ಟಿ, ಮಹಿಳೆಯರು, ಟ್ರಾನ್ಸ್‌ಜೆಂಡರ್ ಮತ್ತು ಇಡಬ್ಲ್ಯುಎಸ್‌ ವರ್ಗಕ್ಕೆ ಭಾರತೀಯ ರೈಲ್ವೆಯ ಆರ್‌ಆರ್‌ಬಿ ಟೆಕ್ನಿಷಿಯನ್ ನೇಮಕಾತಿಯ ಅರ್ಜಿ ಶುಲ್ಕ 250 ರೂಪಾಯಿ ಮತ್ತು ಉಳಿದವರಿಗೆ 500 ರೂಪಾಯಿ ಇದೆ. ಹೆಚ್ಚಿನ ಮಾಹಿತಿ ಅಥವಾ ಸಂದೇಹ ಪರಿಹರಿಸಿಕೊಳ್ಳಲು ಕಚೇರಿ ಅವಧಿಯಲ್ಲಿ (ಬೆಳಗ್ಗೆ 10 ರಿಂದ ಸಂಜೆ 5) 9592011188 ಅಥವಾ 01725653333 ಕರೆ ಮಾಡಬಹುದು. ಇದಲ್ಲದೇ rrb.help@csc.gov.in ಗೆ ಇಮೇಲ್ ಕೂಡ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ