Realme GT5 Pro: ಲಾಂಚ್ ಆಯ್ತು ರಿಯಲ್ಮಿ ಜಿಟಿ5 ಪ್ರೊ; ಬೆಲೆ, ವೈಶಿಷ್ಟ್ಯ ಹೀಗಿದೆ
Dec 09, 2023 10:16 AM IST
ರಿಯಲ್ಮಿ ಜಿಟಿ5 ಪ್ರೊ
- Realme GT5 Pro Features: ರಿಯಲ್ಮಿ ಜಿಟಿ5 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದ್ದು, ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದರ ವೈಶಿಷ್ಟ್ಯ, ಬೆಲೆ ತಿಳಿಯೋಣ ಬನ್ನಿ..
ರಿಯಲ್ಮಿ ಕಂಪನಿಯು ತನ್ನ ರಿಯಲ್ಮಿ ಜಿಟಿ5 ಪ್ರೊ (Realme GT5 Pro) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಸದ್ಯ ಈ ಮೊಬೈಲ್ ಚೀನಾದಲ್ಲಿ ಲಾಂಚ್ ಆಗಿದ್ದು, ಇದರ ವೈಶಿಷ್ಟ್ಯ ತಿಳಿಯೋಣ.
12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಈ ಸ್ಮಾರ್ಟ್ಫೋನ್ನಲ್ಲಿ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಇದೆ. IMX890 ಸೆನ್ಸಾರ್ ಜೊತೆ ಪೆರಿಸ್ಕೋಪ್ ಲೆನ್ಸ್ ಒಳಗೊಂಡಿರುವ ರಿಯಲ್ಮಿ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಕಂಪನಿ ತಿಳಿಸಿದೆ. ರಿಯಲ್ಮಿ ಜಿಟಿ5 ಪ್ರೊ ಸ್ಮಾರ್ಟ್‌ಫೋನ್ 3VC ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ.
6.78-ಇಂಚಿನ 1.5K ಕರ್ವ್ಡ್ ಎಡ್ಜ್ AMOLED ಡಿಸ್ಪ್ಲೇ, 100W ಫಾಸ್ಟ್ ಚಾರ್ಜರ್, 5400mAh ಬ್ಯಾಟರಿ, IMX890 ಟೆಲಿಫೋಟೋ ಕ್ಯಾಮೆರಾ, Sony LYT-808 ಸೆನ್ಸಾರ್, 32 MP ಫ್ರಂಟ್ ಕ್ಯಾಮೆರಾ, 50MP+8MP=50MP rear ಕ್ಯಾಮೆರಾ ಹೊಂದಿದೆ.
70 nit ಕನಿಷ್ಠ ಬ್ರೈಟ್ನೆಸ್, 4500 nits ಹೈ ಬ್ರೈಟ್ನೆಸ್, 1000 nits ಮ್ಯಾನುಯಲ್ ಬ್ರೈಟ್ನೆಸ್ ಮತ್ತು 1600 nits ಗ್ಲೋಬಲ್ ಮ್ಯಾಕ್ಸಿಮಮ್ ಬ್ರೈಟ್ನೆಸ್ ಹೊಂದಿದೆ.
Realme GT5 Pro ಮೂರು ಬಣ್ಣಗಳಲ್ಲಿ ಲಭ್ಯವಿದೆ: ರೆಡ್ ರಾಕ್, ಬ್ರೈಟ್ ಮೂನ್ ಮತ್ತು ಸ್ಟಾರಿ ನೈಟ್.
ಮೂರು ಬಗೆಯ ಸ್ಟೋರೇಜ್ ಸಾಮರ್ಥ್ಯದಲ್ಲಿ ರಿಯಲ್ಮಿ ಜಿಟಿ5 ಪ್ರೊ ಮೊಬೈಲ್ಗಳು ಇವೆ. ಒಂದು 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೊಂದು 16GB + 512GB, ಮತ್ತೊಂದು 16GB + 1TB ಸ್ಟೋರೇಜ್ ಕೆಪಾಸಿಟಿ ಇದೆ.
Realme GT5 Pro ಬೆಲೆ ಎಷ್ಟು?
12GB RAM + 256GB----ಅಂದಾಜು 39,900 ರೂ. (ಚೀನಾ ಕರೆನ್ಸಿ CNY 3,399)
16GB RAM + 512GB----ಅಂದಾಜು 46,900 ರೂ. (ಚೀನಾ ಕರೆನ್ಸಿ CNY 3,999)
16GB RAM + 1TB----ಅಂದಾಜು 50,400 ರೂ. (ಚೀನಾ ಕರೆನ್ಸಿ CNY 4,299)