logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವೇನು? ಬ್ಲಡ್‌ ಕ್ಲಾಟ್‌ ಲಕ್ಷಣ, ಮನೆಮದ್ದು ತಿಳ್ಕೊಂಡಿರಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವೇನು? ಬ್ಲಡ್‌ ಕ್ಲಾಟ್‌ ಲಕ್ಷಣ, ಮನೆಮದ್ದು ತಿಳ್ಕೊಂಡಿರಿ

Jayaraj HT Kannada

Dec 02, 2024 03:34 PM IST

google News

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವೇನು? ಬ್ಲಡ್‌ ಕ್ಲಾಟ್‌ ಲಕ್ಷಣ, ಮನೆಮದ್ದು

    • ಚಳಿಗಾಲ ಅಥವಾ ಶೀತ ವಾತಾವರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಸಮಸ್ಯೆ ಕಾಡುತ್ತದೆ. ಅತಿಯಾದ ಚಳಿಗೆ ದೇಹದ ಜಡತ್ವ ಹೆಚ್ಚಾಗಿ ಇಂಥಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ರಕ್ತ ದಪ್ಪಾಗಾಗುವಿಕೆಯ ಲಕ್ಷಣ, ಚಿಕಿತ್ಸೆ ಹಾಗೂ ಮನೆಔಷಧಗಳ ಬಗ್ಗೆ ತಿಳಿಯಿರಿ.
ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವೇನು? ಬ್ಲಡ್‌ ಕ್ಲಾಟ್‌ ಲಕ್ಷಣ, ಮನೆಮದ್ದು
ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವೇನು? ಬ್ಲಡ್‌ ಕ್ಲಾಟ್‌ ಲಕ್ಷಣ, ಮನೆಮದ್ದು (Pixabay)

ಚಳಿಗಾಲ ಬಂತೆಂದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡಾ ಜೊತೆಗೆ ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರಿಗೆ ಜ್ವರ, ಕೆಮ್ಮು ಇಂತಹ ಸಮಸ್ಯೆ ಕಾಡಿದರೆ, ಇನ್ನೂ ಕೆಲವರ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳು ಉಲ್ಬಣವಾಗುತ್ತದೆ. ಅತಿಯಾದ ಶೀತದ ವಾತಾವರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕೂಡಾ ಕೆಲವರಲ್ಲಿ ಸಂಭವಿಸಬಹುದಾದ ಮತ್ತೊಂದು ಸಮಸ್ಯೆಯಾಗಿದೆ. ರಕ್ತ ಹೆಪ್ಪುಗಟ್ಟುವಿಕೆ, ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ರೂಪುಗೊಂಡ ಥ್ರಂಬಿ ಎಂದು ಕರೆಯಲಾಗುವ ಜೆಲ್ ತರಹದ ದ್ರವ್ಯರಾಶಿಯ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಚಳಿ ಸಮಯದಲ್ಲಿ ಇದರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಒಂದು ನೈಸರ್ಗಿಕ ಮತ್ತು ಅಗತ್ಯ ಪ್ರಕ್ರಿಯೆ. ರಕ್ತನಾಳವು ಗಾಯಗೊಂಡಾಗ ಅತಿಯಾದ ರಕ್ತಸ್ರಾವವನ್ನು ಈ ರಕ್ತಹೆಪ್ಪುಗಟ್ಟಿಸುವ ಪ್ರಕ್ರಿಯೆ ತಡೆಯುತ್ತದೆ. ಆದರೆ, ಅಸಹಜ ಹೆಪ್ಪುಗಟ್ಟುವಿಕೆ ಸಂಭವಿಸುವುದು ಒಳ್ಳೆಯದಲ್ಲ. ಇದು ರಕ್ತ ಹೆಪ್ಪುಗಟ್ಟುವಿಕೆಯ ಅಸಮರ್ಪಕ ರಚನೆಗೆ ಕಾರಣವಾಗುತ್ತದೆ. ಕ್ರಮೇಣ ಗಂಭೀರ ಆರೋಗ್ಯ ಅಪಾಯಗಳು ಎದುರಾಗುತ್ತದೆ. ಇದೇ ಕಾರಣಕ್ಕೆ ಚಳಿಗಾಲದಲ್ಲಿ ಹೆಚ್ಚುವರಿ ಅಲರ್ಟ್‌ನೆಸ್‌ ಅಗತ್ಯ.

ಸಂಶೋಧನೆಯ ಪ್ರಕಾರ, ಶೀತ ತಾಪಮಾನವು ನಮ್ಮ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಪರಿಣಾಮ ರಕ್ತ ಪರಿಚಲನೆಯು ಹದಗೆಡುತ್ತದೆ. ದೇಹದ ಹಲವಾರು ಭಾಗಗಳಿಗೆ ಆಮ್ಲಜನಕದ ಪೂರೈಕೆಗೆ ಅಡ್ಡಿಯಾಗುತ್ತದೆ. ಈ ಕಾರಣದಿಂದ, ರಕ್ತವು ದಪ್ಪವಾಗಿ, ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಿಸುತ್ತದೆ. ಇದು ಶೀತ ವಾತಾವರಣಕ್ಕೆ ದೇಹದ ನೈಸರ್ಗಿಕ ಪ್ರತಿಕ್ರಿಯೆಯಿಂದ ಸಂಭವಿಸುತ್ತದೆ. ಅದು ರಕ್ತವನ್ನು ದಪ್ಪವಾಗಿಸುವ ಮೂಲಕ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ದೇಹ ಅದರದ್ದೇ ಪ್ರಯತ್ನ ಮಾಡುತ್ತದೆ. ದೀರ್ಘಕಾಲ ಶೀತ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ.

ರಕ್ತ ಪರಿಚಲನೆಯ ಮೇಲೆ ಶೀತ ವಾತಾವರಣದ ಪರಿಣಾಮಗಳು

  • ಚರ್ಮದ ಮೇಲ್ಮೈ ಸಮೀಪವಿರುವ ರಕ್ತನಾಳಗಳು ಶೀತ ತಾಪಮಾನಕ್ಕೆ ಪ್ರತಿಕ್ರಿಯೆಯಾಗಿ ಸಂಕುಚಿತಗೊಳ್ಳುತ್ತವೆ. ಶೀತ ವಾತಾವರಣವು ರಕ್ತ ದಪ್ಪಗಾಗುವುದನ್ನು ಹೆಚ್ಚಿಸಬಹುದು, ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು.
  • ದೇಹವು ತನ್ನ ಅಗತ್ಯದ ತಾಪಮಾನವನ್ನು ಕಾಪಾಡಿಕೊಳ್ಳಲು ಶೀತ ವಾತಾವರಣದಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇದು ಒಟ್ಟಾರೆ ಹೃದಯರಕ್ತನಾಳದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
  • ಶೀತ ಹವಾಮಾನವು ಬೆರಳುಗಳು ಮತ್ತು ಕಾಲ್ಬೆರಳುಗಳ ರಕ್ತನಾಳಗಳಲ್ಲಿ ಸೆಳೆತವನ್ನು ಉಂಟುಮಾಡುತ್ತದೆ. ಇದು ರಕ್ತದ ಹರಿವು ಕಡಿಮೆಯಾಗಲು ಕಾರಣವಾಗುತ್ತದೆ.
  • ಶೀತ ಹವಾಮಾನದಲ್ಲಿ ಹೊರಾಂಗಣ ವ್ಯಾಯಾಮ ಕಡಿಮೆಯಾಗುತ್ತದೆ. ಜೀವನಶೈಲಿಯಲ್ಲಿ ಜಡತ್ವ, ಉದಾಸೀನ ತರುತ್ತದೆ. ಇದು ರಕ್ತಪರಿಚಲನೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
  • ಶೀತ ಹವಾಮಾನದಿಂದ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುವ ಹೃದಯದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅಪಧಮನಿಯ ಕ್ರಿಯೆಯ ಮೇಲೆ ಪ್ರಭಾವ ಬೀರಬಹುದು.

ರಕ್ತ ಹೆಪ್ಪುಗಟ್ಟುವಿಕೆಯ ಪ್ರಮುಖ ಲಕ್ಷಣಗಳು

  • ನಿಮ್ಮ ಕಾಲು ಅಥವಾ ತೋಳು ಊದಿಕೊಳ್ಳಬಹುದು. ಹೆಪ್ಪುಗಟ್ಟಿದಲ್ಲಿ ನೋವು ಅನುಭವಿಸಬಹುದು.
  • ನಿರಂತರ ನೋವು ಅನುಭವಿಸಬಹುದು. ವಿಶೇಷವಾಗಿ ನಿಮ್ಮ ಕಾಲುಗಳಲ್ಲಿ ಈ ಅನುಭವ ಹೆಚ್ಚು.
  • ಹೆಪ್ಪುಗಟ್ಟುವಿಕೆಯ ಸುತ್ತಲಿನ ಚರ್ಮವು ಕೆಂಪು ಅಥವಾ ಬಣ್ಣ ಬಂದಂತೆ ಕಾಣಿಸಬಹುದು.
  • ಹೆಪ್ಪುಗಟ್ಟಿದ ಪ್ರದೇಶದಲ್ಲಿ ಚರ್ಮವು ಬೆಚ್ಚಗಿರುತ್ತದೆ.
  • ಉಸಿರಾಟದ ತೊಂದರೆ ಅಥವಾ ಎದೆ ನೋವು.
  • ಮೆದುಳಿಗೆ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುವ ಹೆಪ್ಪುಗಟ್ಟುವಿಕೆಯಿಂದ ತಲೆತಿರುಗುವಿಕೆ ಅಥವಾ ಮೂರ್ಛೆಗೆ ಕಾರಣವಾಗಬಹುದು.

ರಕ್ತ ಹೆಪ್ಪುಗಟ್ಟುವಿಕೆಗೆ ತಡೆಗಟ್ಟುವುದು ಹೇಗೆ?

  • ರಕ್ತ ಪರಿಚಲನೆಯನ್ನು ಉತ್ತೇಜಿಸಲು ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡಿ.
  • ದೇಹಕ್ಕೆ ಇಡೀ ದಿನ ವಿಶ್ರಾಂತಿ ನೀಡಬೇಡಿ. ದೇಹ ಬೆವರಿದರೆ ಒಳ್ಳೆಯದು. ಅಂತಹ ಕೆಲಸ ಅಥವಾ ವ್ಯಾಯಾಮ ಮಾಡಿ.
  • ನೀರು ಕುಡಿಯುತ್ತಾ ಇದ್ದು, ಹೈಡ್ರೇಟೆಡ್ ಆಗಿರಿ
  • ಧೂಮಪಾನ ಬಿಟ್ಟುಬಿಡಿ
  • ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.

ರಕ್ತ ತೆಳುವಾಗಲು ಕೆಲವು ಮನೆಮದ್ದು

ಶುಂಠಿ: ಶುಂಠಿಯು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ.

ಅರಿಶಿನ: ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂದು ಕರೆಯಲ್ಪಡುವ ಸಕ್ರಿಯ ಸಂಯುಕ್ತವು ಹೆಪ್ಪುಗಟ್ಟುವಿಕೆಯನ್ನು ತಡೆಯಲು ರಕ್ತದ ಪ್ಲೇಟ್‌ಲೆಟ್‌ಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರ ಔಷಧೀಯ ಗುಣಗಳು ಹೆಪ್ಪುಗಟ್ಟುವಿಕೆಯ ರಚನೆಯಿಂದ ಉಂಟಾಗುವ ನೋವನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯು ಸಲ್ಫರ್ ಸಂಯುಕ್ತಗಳನ್ನು ಹೊಂದಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸುತ್ತದೆ. ಬೆಳಗ್ಗೆ ಒಂದು ಹಸಿ ಬೆಳ್ಳುಳ್ಳಿ ಎಸಳನ್ನು ಸೇವಿಸಿದರೆ ಒಳ್ಳೆಯದು.

ದಾಲ್ಚಿನ್ನಿ: ದಾಲ್ಚಿನ್ನಿ ಕೂಮರಿನ್ ಅಂಶ ಹೊಂದಿರುತ್ತದೆ. ವಾರ್ಫರಿನ್ ಎಂಬುದು ಸಾಮಾನ್ಯವಾಗಿ ಬಳಸುವ ರಕ್ತ ತೆಳುಗೊಳಿಸುವ ಔಷಧ. ಚೀನೀ ಕ್ಯಾಸಿಯಾ ದಾಲ್ಚಿನ್ನಿ ಸಿಲೋನ್ ದಾಲ್ಚಿನ್ನಿಗಿಂತ ಹೆಚ್ಚಿನ ಕೂಮರಿನ್ ಅಂಶವನ್ನು ಹೊಂದಿದೆ.

ಅಗಸೆ ಮತ್ತು ಚಿಯಾ ಬೀಜ: ಈ ಸಣ್ಣ ಬೀಜಗಳು ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತವೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ರಕ್ತ ಹೆಪ್ಪುಗಟ್ಟುವಿಕೆಗೆ ಚಿಕಿತ್ಸೆಗಳು

ರಕ್ತ ಹೆಪ್ಪುಗಟ್ಟುವಿಕೆಗೆ ಚಿಕಿತ್ಸೆಗಳಿವೆ. ಇದು ಹೆಪ್ಪುಗಟ್ಟುವಿಕೆಯ ಪ್ರಕಾರ ಮತ್ತು ಸ್ಥಳ, ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಇತರ ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತದೆ. ಚಳಿಗಾಲ ಅಥವಾ ಶೀತ ವಾತಾವರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಸಾಮಾನ್ಯ ಚಿಕಿತ್ಸಾ ಆಯ್ಕೆಗಳು ಹೀಗಿವೆ.

ಹೆಪ್ಪುರೋಧಕ ಔಷಧಗಳು: ಅನ್‌ಫ್ರಾಕ್ಷೇಟೆಡ್ ಹೆಪಾರಿನ್, ಕಡಿಮೆ ಆಣ್ವಿಕ ತೂಕದ ಹೆಪಾರಿನ್, ವಾರ್ಫರಿನ್ ಹೆಪ್ಪುರೋಧಕಗಳು ಹೆಚ್ಚಾಗಿ ರಕ್ತವನ್ನು ಸಹಜ ಸ್ಥಿತಿಗೆ ತರುವ ಚಿಕಿತ್ಸೆಗಳಾಗಿವೆ.

ಥ್ರಂಬೋಲಿಟಿಕ್ ಥೆರಪಿ: ಹೆಪ್ಪುಗಟ್ಟುವಿಕೆಯ ಪ್ರಮುಖ ಅಂಶವಾದ ಫೈಬ್ರಿನ್ ಅನ್ನು ಒಡೆಯುವ ಫೈಬ್ರಿನೊಲಿಟಿಕ್ ಔಷಧಿಗಳ ಬಳಕೆ ಥ್ರಂಬೋಲಿಟಿಕ್ ಔಷಧೀಯ ಚಿಕಿತ್ಸೆಯ ಭಾಗವಾಗಿದೆ.

ಕಾಂಪ್ರೆಸ್ಡ್‌ ಸ್ಟಾಕಿಂಗ್ಸ್: ಇದು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕಾಲುಗಳು ಅಥವಾ ತೋಳುಗಳಲ್ಲಿನ ಅಸ್ವಸ್ಥತೆ ಮತ್ತು ಊತವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಈ ಸ್ಥಿತಿಯನ್ನು ಪೋಸ್ಟ್-ಥ್ರಂಬೋಟಿಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ