logo
ಕನ್ನಡ ಸುದ್ದಿ  /  ಜೀವನಶೈಲಿ  /  ದಾಂಪತ್ಯ ಜೀವನವನ್ನು ಹಾಳು ಮಾಡಲು ಈ ಸಣ್ಣ ತಪ್ಪುಗಳೇ ಸಾಕು: ಸುಖೀ ಸಂಸಾರಕ್ಕೆ ಎಂದಿಗೂ ಈ ರೀತಿ ಮಾಡದಿರಿ

ದಾಂಪತ್ಯ ಜೀವನವನ್ನು ಹಾಳು ಮಾಡಲು ಈ ಸಣ್ಣ ತಪ್ಪುಗಳೇ ಸಾಕು: ಸುಖೀ ಸಂಸಾರಕ್ಕೆ ಎಂದಿಗೂ ಈ ರೀತಿ ಮಾಡದಿರಿ

Priyanka Gowda HT Kannada

Oct 04, 2024 05:05 PM IST

google News

ಪತಿ-ಪತ್ನಿಯ ನಡುವೆ ಅಂತರ ಹೆಚ್ಚಾಗಲು ಅಥವಾ ಜಗಳ ಹೆಚ್ಚಾಗಲು ಏನು ಕಾರಣವಿದ್ದಿರಬಹುದು ಎಂಬುದು ಇಲ್ಲಿದೆ.

    • ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಉಂಡು ಮಲಗಿದ ಮೇಲೂ ಜಗಳ ಹೆಚ್ಚಾದರೆ ಅದು ವಿಚ್ಛೇದನ ಹಂತದವರೆಗೂ ಹೋಗಬಹುದು. ವೈವಾಹಿಕ ಜೀವನದಲ್ಲಿ ಗೊತ್ತಿದ್ದೋ, ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಗಂಡ-ಹೆಂಡತಿಯ ನಡುವಿನ ಸಂಬಂಧದ ಮೇಲೆ ಭಾರಿ ಪರಿಣಾಮ ಬೀರಬಹುದು. 
ಪತಿ-ಪತ್ನಿಯ ನಡುವೆ ಅಂತರ ಹೆಚ್ಚಾಗಲು ಅಥವಾ ಜಗಳ ಹೆಚ್ಚಾಗಲು ಏನು ಕಾರಣವಿದ್ದಿರಬಹುದು ಎಂಬುದು ಇಲ್ಲಿದೆ.
ಪತಿ-ಪತ್ನಿಯ ನಡುವೆ ಅಂತರ ಹೆಚ್ಚಾಗಲು ಅಥವಾ ಜಗಳ ಹೆಚ್ಚಾಗಲು ಏನು ಕಾರಣವಿದ್ದಿರಬಹುದು ಎಂಬುದು ಇಲ್ಲಿದೆ. (freepik)

ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಜಗಳಗಳಿರುವುದು ತೀರಾ ಸಾಮಾನ್ಯವಾಗಿದೆ. ಪ್ರೀತಿ ಇರುವಲ್ಲಿ ಸಂಘರ್ಷವೂ ಇರುತ್ತದೆ ಎಂದು ಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು. ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಉಂಡು ಮಲಗಿದ ಮೇಲೂ ಜಗಳ ಹೆಚ್ಚಾದರೆ ಅದು ವಿಚ್ಛೇದನ ಹಂತದವರೆಗೂ ಹೋಗಬಹುದು. ವೈವಾಹಿಕ ಜೀವನದಲ್ಲಿ ಗೊತ್ತಿದ್ದೋ, ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಗಂಡ-ಹೆಂಡತಿಯ ನಡುವಿನ ಸಂಬಂಧದ ಮೇಲೆ ಭಾರಿ ಪರಿಣಾಮ ಬೀರಬಹುದು. ಅಂತಹ ತಪ್ಪುಗಳಿಂದಾಗಿ, ನಿಮ್ಮ ಸಂಬಂಧವು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇಂಥ ತಪ್ಪೇ ವಿಚ್ಛೇದನಕ್ಕೆ ಕಾರಣವಾಗಬಹುದು. ಗಂಡ-ಹೆಂಡತಿ ಅಂದ್ರೆ ಕೆಲವೊಂದು ಮಾತುಗಳು ಬರುತ್ತವೆ, ಹೋಗುತ್ತವೆ. ಹಾಗಂತ ಅದನ್ನು ದೊಡ್ಡ ವಿಷಯ ಮಾಡದೆ ಇಬ್ಬರೂ ಹೊಂದಿಕೊಂಡು ಜೀವನ ಮಾಡಿದರೆ ಬಾಳು ಸುಖೀ ಸಂಸಾರವಾಗಿರುತ್ತದೆ. ತಾನು ಹೇಳಿದ್ದೇ ಸರಿ, ತನ್ನ ಮಾತೇ ನಡೆಯಬೇಕು ಎಂಬ ದರ್ಪವಿದ್ದರೆ ಇಂತಹ ಸಂಬಂಧಗಳು ಇಂದಿನ ಕಾಲಘಟ್ಟದಲ್ಲಿ ಹೆಚ್ಚು ದಿನ ಉಳಿಯಲಿಕ್ಕಿಲ್ಲ. ಪತಿ-ಪತ್ನಿಯ ನಡುವೆ ಗ್ಯಾಪ್ ಆಗಲು ಅಥವಾ ಜಗಳ ಹೆಚ್ಚಾಗಲು ಏನು ಕಾರಣವಿದ್ದಿರಬಹುದು ಎಂಬುದು ಇಲ್ಲಿದೆ.

ಪತಿ-ಪತ್ನಿಯ ನಡುವಿನ ಜಗಳ ಹೆಚ್ಚಾಗಲು ಅಥವಾ ವೈಮನಸ್ಸು ಮೂಡಲು ಕಾರಣಗಳು

ವಿವಾದಗಳನ್ನು ಪರಿಹರಿಸುವುದಿಲ್ಲ: ಕೆಲವೊಮ್ಮೆ ದಂಪತಿ ತಮ್ಮ ನಡುವಿನ ವಿವಾದಗಳನ್ನು ಪರಿಹರಿಸುವ ಬದಲು ಹೆಚ್ಚಿಸಲು ಪ್ರಾರಂಭಿಸುತ್ತಾರೆ. ಬಗೆಹರಿಸಲಾಗದ ವಿವಾದಗಳು ಇಬ್ಬರ ನಡುವೆ ತಪ್ಪು ತಿಳುವಳಿಕೆಯ ಗೋಡೆಯನ್ನು ಸೃಷ್ಟಿಸಬಹುದು. ತಾನು ಸರಿ, ತಾನು ಸರಿ ಎನ್ನುತ್ತಾ ಜಗಳ ಹೆಚ್ಚಾಗಲು ಕಾರಣವಾಗಬಹುದು. ವಿವಾದ ಏತಕ್ಕಾಗಿ ಆಯಿತು, ತನ್ನಿಂದ ತಪ್ಪಾಯಿತಿ ಅಂತೆಲ್ಲಾ ಯೋಚಿಸಲು ಹೋಗುವುದಿಲ್ಲ. ವಿವಾದಗಳನ್ನು ಪರಿಹರಿಸದಿದ್ದಲ್ಲಿ ಮಾತ್ರ ಪತಿ-ಪತ್ನಿಯ ನಡುವಿನ ಅಂತರ ಹೆಚ್ಚಾಗುತ್ತದೆ.

ಸಂವಹನ ಕೊರತೆ: ದಂಪತಿ ನಡುವೆ ಸಂವಹನ ಕೊರತೆ ಉಂಟಾಗಲು ಪ್ರಾರಂಭಿಸಿದರೆ, ಅದನ್ನು ಸಾಧ್ಯವಾದಷ್ಟು ಬೇಗ ತೆಗೆದುಹಾಕಲು ಪ್ರಯತ್ನಿಸಬೇಕು. ಸಂವಹನದ ಅಂತರವು ಭವಿಷ್ಯದಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಪ್ರತ್ಯೇಕತೆಗೆ ಮುಖ್ಯ ಕಾರಣವಾಗಬಹುದು. ಜಗಳವಾದಾಗ ಮಾತು ಬಿಡುವುದು ಸಾಮಾನ್ಯ. ಆಮೇಲೆ ತಾನೇ ಏಕೆ ಮೊದಲು ಮಾತನಾಡಬೇಕು ಎಂಬ ನಿರ್ಲಕ್ಷ್ಯ ಇಬ್ಬರಲ್ಲೂ ಉಂಟಾಗುತ್ತದೆ. ಇದು ಹೆಚ್ಚಾದಂತೆ ದಂಪತಿ ಪ್ರತ್ಯೇಕತೆಗೆ ಕಾರಣವಾಗಬಹುದು.

ಆರ್ಥಿಕ ಬಿಕ್ಕಟ್ಟು: ಕೆಲವೊಮ್ಮೆ ಪತಿ-ಪತ್ನಿಯ ನಡುವಿನ ಸಂಬಂಧದ ನಡುವೆ ಆರ್ಥಿಕ ಬಿಕ್ಕಟ್ಟು ಕೂಡ ಸಮಸ್ಯೆಗೆ ಕಾರಣವಾಗುತ್ತದೆ. ಹಣದ ಕೊರತೆಯಿಂದಾಗಿ ಪ್ರತ್ಯೇಕಗೊಳ್ಳಲು ನಿರ್ಧರಿಸುವ ಬದಲು, ಇಬ್ಬರೂ ಪರಿಸ್ಥಿತಿಯ ವಿರುದ್ಧ ಹೋರಾಡಿ ಗೆಲ್ಲಲು ಪ್ರಯತ್ನಿಸಬೇಕು. ಪತಿ ಆರ್ಥಿಕ ಸಮಸ್ಯೆಗೆ ಸಿಲುಕಿದರೆ ಆತನನ್ನು ಮೂದಲಿಸಿದೆ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಪರಸ್ಪರರ ಗೌರವ ಹೆಚ್ಚುತ್ತದೆ.

ಪರಸ್ಪರರ ಭಾವನೆಗಳನ್ನು ನಿರ್ಲಕ್ಷಿಸುವುದು: ವಿವಾಹ ಸಂಬಂಧದ ಜೀವಿತಾವಧಿಯನ್ನು ಹೆಚ್ಚಿಸಲು ನೀವು ಬಯಸಿದರೆ, ಇಬ್ಬರೂ ಭಾವನಾತ್ಮಕವಾಗಿ ಪರಸ್ಪರ ಸಂಪರ್ಕಿಸಲು ಪ್ರಯತ್ನಿಸಬೇಕು. ಪರಸ್ಪರ ಭಾವನಾತ್ಮಕ ಸಂಪರ್ಕದ ಕೊರತೆಯಿದ್ದರೆ ಸಂಗಾತಿ ಏಕಾಂಗಿಯಾಗುತ್ತಾರೆ.

ಗುರಿಗಳನ್ನು ಬೆಂಬಲಿಸುವುದಿಲ್ಲ: ಕೆಲವೊಬ್ಬರ ದಾಂಪತ್ಯದಲ್ಲಿ ಇಬ್ಬರ ಗುರಿಗಳೂ ಪರಸ್ಪರ ಭಿನ್ನವಾಗಿರುತ್ತದೆ. ಪತಿ-ಪತ್ನಿ ಇಬ್ಬರೂ ಪರಸ್ಪರರ ಗುರಿಗಳನ್ನು ಬೆಂಬಲಿಸದಿದ್ದರೆ, ಅದು ವಿಚ್ಛೇದನ ಹಂತ ತಲುಪಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ