Relationship Tips: ರಿಲೇಷನ್‌ಶಿಪ್‌ನಲ್ಲಿ ತಾಳ್ಮೆ ಎಷ್ಟು ಮುಖ್ಯ? ತಾಳ್ಮೆಯೊಂದಿದ್ದರೆ ನೀವು ಎಷ್ಟೆಲ್ಲ ಖುಷಿಯಾಗಿರಬಹುದು ನೋಡಿ
Sep 30, 2024 11:30 AM IST
ರಿಲೇಷನ್‌ಶಿಪ್‌ನಲ್ಲಿ ತಾಳ್ಮೆ ತುಂಬಾ ಮುಖ್ಯ
- ಸಂಬಂಧದಲ್ಲಿ ತಾಳ್ಮೆ ಮುಖ್ಯ: ಕೆಲವರು ಅಂದುಕೊಳ್ಳುತ್ತಾರೆ ಸಮಸ್ಯೆಗಳು ಅಥವಾ ಸಂಕಟಗಳನ್ನು ಸಹಿಸಿಕೊಳ್ಳುವುದು ತಾಳ್ಮೆ ಎಂದು. ಆದರೆ ನಿಜವಾದ ಅರ್ಥ ಅದಲ್ಲ. ನಿಮಗೆ ಏನು ಸಮಸ್ಯೆಗಳು ಅಥವಾ ಸಂಕಟಗಳು ಎದುರಾಗುತ್ತಿದೆಯೋ ಅದನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು.
ತಾಳ್ಮೆ ಸಂಬಂಧದಲ್ಲಿ ತುಂಬಾ ಮುಖ್ಯವಾದ ವಿಚಾರ. ಯಾರ ಬಗ್ಗೆಯಾದರೂ ನಾವು ತಕ್ಷಣ ತೆಗೆದುಕೊಳ್ಳುವ ನಿರ್ಧಾರ ಮತ್ತು ತಾಳ್ಮೆಯಿಂದ ಆಲೋಚಿಸಿ ತೆಗೆದುಕೊಳ್ಳುವ ನಿರ್ಧಾರ ಎರಡೂ ನಿರ್ಧಾರಗಳಲ್ಲಿ ಬಹಳ ಅಂತರವಿರುತ್ತದೆ. ನಾವು ತಾಳ್ಮೆ ಕಳೆದುಕೊಂಡಾಗ ಇನ್ನೊಬ್ಬರ ಮೇಲೆ ಕೂಗಾಡಿ, ರೇಗಾಡಿ ಅವಾಂತರ ಸೃಷ್ಟಿ ಮಾಡಿ ಬಿಡುತ್ತೇವೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಜವಾಬ್ಧಾರಿ. ಸಂದರ್ಭಗಳು ಯಾವಾಗಲೂ ನಾವು ಅಂದುಕೊಂಡ ರೀತಿಯಲ್ಲಿ ಇರುವುದಿಲ್ಲ. ಕೆಲ ಸಂದರ್ಭಗಳಲ್ಲಿ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಬದಲಾವಣೆಯಾಗಿ ನಿಯಂತ್ರಣತಪ್ಪಿ ಸಂಬಂಧವನ್ನೇ ನಾವು ಕಳೆದುಕೊಳ್ಳಬೇಕಾಗಿ ಬರಬಹುದು.
ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ
ಹಠಾತ್ ಆಗಿ ಪ್ರತಿಕ್ರಿಯಿಸುವ ಬದಲು ಚಿಂತನಶೀಲರಾಗಿ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಅಥವಾ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಸಂಬಂಧದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಇದೇ ರೀತಿ ಅರ್ಥ ಮಾಡಿಕೊಂಡು ಮುನ್ನಡೆದಾಗ ಯಾವ ಸಮಸ್ಯೆ ಅಥವಾ ಭಿನ್ನಾಭಿಪ್ರಾಯವೂ ಬರುವುದಿಲ್ಲ.
ತಾಳ್ಮೆಯು ಭಿನ್ನಾಭಿಪ್ರಾಯಗಳನ್ನು ದೂರ ಮಾಡುತ್ತದೆ
ತಾಳ್ಮೆಯು ಭಿನ್ನಾಭಿಪ್ರಾಯಗಳನ್ನು ದೂರ ಮಾಡುತ್ತದೆ. ಯಾರ ಬಗ್ಗೆಯಾದರೂ ನಿಮಗೆ ದೂರುಗಳಿದ್ದರೆ ಅದನ್ನು ಅವರ ಬಳಿಯೇ ಚರ್ಚೆ ಮಾಡುವಷ್ಟು ತಾಳ್ಮೆ ನಿಮಗಿರಬೇಕು. ಅದನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮಾತುಗಳನ್ನು ಮತ್ತು ಅವರ ದೃಷ್ಟಿಕೋನದಲ್ಲಿ ಅವರು ಮಾಡಿದ್ದು ಸರಿಯೇ? ಅಥವಾ ತಪ್ಪೇ? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಹೀಗಾದಾಗ ಜಗಳ ಆಗುವುದಿಲ್ಲ.
ಮುಂದೇನಾಗುವುದೋ ಅಥವಾ ಈ ಹಿಂದೆ ಏನಾಗಿದೆಯೋ ಎಂಬುದನ್ನು ಯೋಚಿಸುತ್ತಾ ಕಾಲ ಕಳೆಯುವುದರ ಬದಲು ತಾಳ್ಮೆಯಿಂದ ಇಂದೇನು ಮಾಡಬಹುದು ಎನ್ನುವುದರ ಕಡೆಗೆ ಗಮನಕೊಡಿ. ನಿಮ್ಮ ಸಾಂಸಾರಿಕ ಜೀವನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ಇದು ತುಂಬಾ ಸಹಕಾರಿಯಾಗಿರುತ್ತದೆ.
ಸಮಸ್ಯೆಗಳು ಅಥವಾ ಸಂಕಟಗಳನ್ನು ಸಹಿಸಿಕೊಳ್ಳುವುದು ತಾಳ್ಮೆಯಲ್ಲ
ಕೆಲವರು ಅಂದುಕೊಳ್ಳುತ್ತಾರೆ ಸಮಸ್ಯೆಗಳು ಅಥವಾ ಸಂಕಟಗಳನ್ನು ಸಹಿಸಿಕೊಳ್ಳುವುದು ತಾಳ್ಮೆ ಎಂದು. ಆದರೆ ನಿಜವಾದ ಅರ್ಥ ಅದಲ್ಲ. ನಿಮಗೆ ಏನು ಸಮಸ್ಯೆಗಳು ಅಥವಾ ಸಂಕಟಗಳು ಎದುರಾಗುತ್ತಿದೆಯೋ ಅದನ್ನು ತಾಳ್ಮೆಯಿಂದ ಸಿಕ್ಕುಗಟ್ಟಿದ ಕೂದಲನ್ನು ಬಿಡಿಸುವ ಹಾಗೆ ಬಿಡಿಸುವುದೇ ತಾಳ್ಮೆ. ನಂತರ ಎಲ್ಲಾ ಸಿಕ್ಕುಗಳು ಕಾಳಜಿ ನಿರಾಳರಾಗುತ್ತೀರಿ.
ಗಂಡ-ಹೆಂಡತಿ
ಗಂಡ-ಹೆಂಡತಿ ಇಬ್ಬರೂ ತಾಳ್ಮೆಯಿಂದ ವರ್ತಿಸಿದಲ್ಲಿ ಖಂಡಿತ ಹೆಚ್ಚಿನ ಖುಷಿ ಮತ್ತು ಸಮಾಧಾನ ದೊರೆಯುತ್ತದೆ. ಇಲ್ಲವಾದರೆ ಪ್ರತಿದಿನವೂ ಜಗಳ, ಕಿರಿಕಿರಿ ಮತ್ತು ಅಸಹನೆಯಿಂದ ದಿನ ಕಳೆಯುತ್ತದೆ. ತಾಳ್ಮೆ ನಿಮಗೆ ಎಷ್ಟೆಲ್ಲ ಖುಷಿ ತರುತ್ತದೆ ಎಂಬುದನ್ನು ನೀವೇ ಟ್ರೈ ಮಾಡಿ ನೋಡಿ.
ವಿಭಾಗ