Birthday wishes: ಹುಟ್ಟುಹಬ್ಬದಂದು ಗರ್ಲ್‌ಫ್ರೆಂಡ್‌ಗೆ ಕಳುಹಿಸಲು ಪ್ರೇಮ ಸಂದೇಶಗಳು; ಸಂತಸದ ಜನುಮದಿನ ಜೇನಿನ ಹೊಳೆಯಾಗಿ...!-relationship beautiful birthday wishes collection for girlfriend send these messages to sweetheart pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Birthday Wishes: ಹುಟ್ಟುಹಬ್ಬದಂದು ಗರ್ಲ್‌ಫ್ರೆಂಡ್‌ಗೆ ಕಳುಹಿಸಲು ಪ್ರೇಮ ಸಂದೇಶಗಳು; ಸಂತಸದ ಜನುಮದಿನ ಜೇನಿನ ಹೊಳೆಯಾಗಿ...!

Birthday wishes: ಹುಟ್ಟುಹಬ್ಬದಂದು ಗರ್ಲ್‌ಫ್ರೆಂಡ್‌ಗೆ ಕಳುಹಿಸಲು ಪ್ರೇಮ ಸಂದೇಶಗಳು; ಸಂತಸದ ಜನುಮದಿನ ಜೇನಿನ ಹೊಳೆಯಾಗಿ...!

Birthday wishes for girlfriend: ಗರ್ಲ್‌ಫ್ರೆಂಡ್‌ ಹುಟ್ಟುಹಬ್ಬದಂದು ಆಕೆಯ ಮನಸ್ಸಿಗೆ ಇಷ್ಟವಾಗುವಂತೆ ಹುಟ್ಟುಹಬ್ಬದ ಸಂದೇಶ ಕಳುಹಿಸುವುದು ಬಾಯ್‌ಫ್ರೆಂಡ್‌ಗೆ ಅತೀವ ಖುಷಿ ನೀಡೋ ವಿಚಾರ. ನಿಮ್ಮ ಪ್ರೀತಿಯ ನಲ್ಲೆಗೆ ಬರ್ತ್‌ಡೇ ಮೆಸೆಜ್‌, ಬರ್ತ್‌ಡೇ ವಿಶಸ್‌ ಹುಡುಕುತ್ತಿದ್ದಾರೆ ಈ "ಸಂದೇಶ ಸಂಗ್ರಹ" ಪರಿಶೀಲಿಸಿ.

Birthday wishes: ಹುಟ್ಟುಹಬ್ಬದಂದು ಗರ್ಲ್‌ಫ್ರೆಂಡ್‌ಗೆ ಕಳುಹಿಸಲು ಪ್ರೇಮ ಸಂದೇಶಗಳು
Birthday wishes: ಹುಟ್ಟುಹಬ್ಬದಂದು ಗರ್ಲ್‌ಫ್ರೆಂಡ್‌ಗೆ ಕಳುಹಿಸಲು ಪ್ರೇಮ ಸಂದೇಶಗಳು

Birthday wishes for girlfriend: ಗರ್ಲ್‌ಫ್ರೆಂಡ್‌ ಅಥವಾ ನಲ್ಲೆಯನ್ನು ಖುಷಿ ಪಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಆಕೆಗೆ ಏನು ಗಿಫ್ಟ್‌ ನೀಡುವುದು? ಆಕೆಗೆ ಏನು ಸಂದೇಶ ಕಳುಹಿಸುವುದು ಎಂದೆಲ್ಲ ಬಾಯ್‌ ಫ್ರೆಂಡ್‌ ಯೋಚಿಸಬಹುದು. ಉಳಿದ ದಿನಗಳಲ್ಲಿ ಯಾವ ಸಂದೇಶ ಕಳುಹಿಸಿದರೂ ಅಲ್ಲಿ ಅನುರಾಗ ಅರಳುತ್ತದೆ. ಆದರೆ, ಹುಟ್ಟುಹಬ್ಬದಂದು "ಹ್ಯಾಪಿ ಬರ್ತ್‌ಡೇ" ಎಂದು ಎರಡು ಪದ ಕಳುಹಿಸಲಾಗದು. ಆಕೆಯ ಹೃದಯ ತಟ್ಟುವಂತೆ ಪ್ರೀತಿ ಉಕ್ಕಿ ಹರಿಯುವಂತೆ ಏನಾದರೂ ಒಂದು ಸಂದೇಶ ಇರಲೇಬೇಕು. ಹಳೆಯ ಕಾಲದಲ್ಲಿಯಾದರೆ ಸಂತಸದ ಜನುಮದಿನ ಜೇನಿನ ಹೊಳೆಯಾಗಿ ಈ ನಿನ್ನ ಬಾಳಲ್ಲಿ ಆಯಾಗಲಿ, ಆಸೆ ಹೂವಾಗಿ ಹೂವು ಹಣ್ಣಾಗಿ ಎಂದೆಂದೂ ಆನಂದ ತರಲಿ ಎಂದು ಎಸ್‌ ಜಾನಕಿ ಮತ್ತು ಪಿಬಿ ಶ್ರೀನಿವಾಸ ಮಧುರ ಕಂಠದಲ್ಲಿ ಮೂಡಿಬಂದ, ಅಂಬರೀಶ್‌, ಆರತಿ ನಟನೆಯ ಜಗ್ಗು ಸಿನಿಮಾದ ಹಳೆಯ ಹಾಡನ್ನು ಹೇಳಬಹುದು.

ಗರ್ಲ್‌ಫ್ರೆಂಡ್‌ಗೆ ಹುಟ್ಟುಹಬ್ಬದ ಸಂದೇಶಗಳು

  1. ಸೂರ್ಯನ ಸುತ್ತ ನಿನ್ನೊಂದಿಗೆ ಮತ್ತೊಂದು ವರ್ಷ ನಿನ್ನೊಂದಿಗೆ ಕಳೆಯುವ ಅವಕಾಶ ದೊರಕಿದ ನಾನು ಅದೃಷ್ಟವಂತ, ಬಾ ಸಂಭ್ರಮಿಸೋಣ (I’m so lucky to get another year around the sun with you! Let’s celebrate!).
  2. "ನನ್ನ ಜೀವನದ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನೊಂದಿಗೆ ಕಳೆಯುವ ಪ್ರತಿದಿನವೂ ನಿನ್ನೆಗಿಂತ ಚೆನ್ನಾಗಿದೆ (Happy birthday to the love of my life! Every day with you is better than the last)
  3. ನನ್ನ ಆತ್ಮೀಯ ವ್ಯಕ್ತಿ ಜತೆ ಸಂಭ್ರಮಿಸಲು ತುಂಬಾ ಖುಷಿಯಾಗುತ್ತಿದೆ. ಬಾ ದೊಡ್ಡದಾಗಿ ಹಬ್ಬ ಮಾಡೋಣ (I’m so excited to celebrate my favorite person today. Let's do it up big)
  4. ನನ್ನ ಅರ್ಧಾಂಗಿಗೆ ಹುಟ್ಟುಹಬ್ಬದ ಶುಭಾಶಯಗಳು (Wishing my other half the happiest birthday yet)
  5. ನೀನು ನನಗೆ ಹೆಚ್ಚು ವಿಶೇಷವಾದ ವ್ಯಕ್ತಿ, ಹ್ಯಾಪಿ ಬರ್ತ್‌ಡೇ (You’re the most special thing to me. Happy birthday!)
  6. ನೀನು ಜತೆಗಿದ್ದರೆ ನನ್ನ ಜಗತ್ತು ಸುಂದರ (My world is better with you in it)
  7. ನಿನ್ನ ಎಲ್ಲಾ ಹುಟ್ಟುಹಬ್ಬದ ಶುಭಾಶಯಗಳು ಇಂದು ಮತ್ತು ಎಂದೆಂದಿಗೂ ನಿಜವಾಗಲಿ ಎಂದು ಬಯಸುವೆ (I want to make all your birthday wishes come true today and every day)
  8.  ನೀ ಜನಿಸಿದ್ದು ನನಗೆ ಸಂಭ್ರಮ.  (I’m so glad you were born!)
  9. ನನ್ನ ವಿಶೇಷ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ ( Happy birthday to my special one.)
  10.  ನನಗೆ ನೀನು ಮತ್ತು ನೀನು ಮಾತ್ರ ಸಾಕು, ಹುಟ್ಟುಹಬ್ಬದ ಶುಭಾಶಯ (You’re my one and only! Happy birthday!)
  11. ನನ್ನ ಜೀವನದ ಅದ್ಭುತ ಗೆಳತಿಗೆ ಹ್ಯಾಪಿ ಬರ್ತ್‌ಡೇ, ನನ್ನ ಕನಸು ನೀನು, ನನ್ನ ಉಸಿರು ನೀನು.... (To the most incredible girlfriend there is, happy birthday! Happy birthday to my whole heart. Happy birthday to the girl of my dreams!)
  12. ನೀನು ನನ್ನವಳಾಗಿರುವುದಕ್ಕೆ ಧನ್ಯ, ಹ್ಯಾಪಿ ಬರ್ತ್‌ಡೇ ( Thank you for being mine! Happy birthday!)
  13. ನನ್ನ ಕನಸಿನ ಹುಡುಗಿಗೆ ಹುಟ್ಟುಹಬ್ಬದ ಶುಭಾಶಯ (Happy birthday to my dream girl!)
  14. (ನಿನ್ನ ಅಮ್ಮನಿಗೆ ನನ್ನ ಕಡೆಯಿಂದ ಧನ್ಯವಾದ ಹೇಳು, ನಿನಗೆ ಜನ್ಮ ನೀಡಿದ್ದಕ್ಕೆ!!! (Tell your mom I say thanks for birthing you!!!)
  15. ಹುಟ್ಟುಹಬ್ಬದ ಶುಭಾಶಯ ಮಗು, ನಿನಗೆ ವಯಸ್ಸೇ ಆಗದು (Happy birthday, baby! You don’t look your age...or act like it either.)
  16. ನೀನು ಒಂದು ವರ್ಷ ದೊಡ್ಡವಳಾಗಿ ಎದ್ದೇಳುವೆ, ಇನ್ನಷ್ಟು ಹಾಟ್‌ ಆಗಿ ಕಾಣಿಸುವೆ (You woke up a year older, and somehow even hotter.)
  17. "ನನ್ನ ಹುಟ್ಟುಹಬ್ಬದ ಗೆಳತಿ, ನಿನ್ನನ್ನು ನನ್ನ ತೋಳುಗಳಿಂದ ಎತ್ತಿ ಎಬ್ಬಿಸುವ ಆಸೆ" (Wishing I woke up with the birthday girl in my arms.)
  18. ಈ ಭೂಮಿಯ ಚಂದದ, ಪ್ರತಿಭಾನ್ವಿತ, ಫನ್ನಿಯಾದ, ಒಳ್ಳೆಯ ಹೃದಯದ ಬರ್ತ್‌ಡೇ ಗರ್ಲ್‌ಗೆ ಶುಭ ಮುಂಜಾನೆ (Good morning to the most beautiful, talented, funny, kind-hearted birthday girl on the planet)

ಇದನ್ನೂ ಓದಿ: ಒಂದು ಮಗು ಇರುವ ಮಹಿಳೆಗೆ ಪ್ರಪೋಸ್‌ ಮಾಡಿ ಮದುವೆಯಾದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ; ಮಾಡರ್ನ್‌ ಮಾಸ್ಟರ್ಸ್‌ ಬಿಚ್ಚಿಟ್ಟ ಲವ್‌ ಸ್ಟೋರಿ

mysore-dasara_Entry_Point