JIO Prepaid Plan: ಮತ್ತೊಮ್ಮೆ ಹೊಸ ಪ್ರಿಪೇಯ್ಡ್ ಪ್ಲಾನ್ ಘೋಷಿಸಿದ ಜಿಯೊ, ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ 12 ಒಟಿಟಿ
Sep 04, 2024 09:10 PM IST
ಮತ್ತೊಮ್ಮೆ ಹೊಸ ಪ್ರಿಪೇಯ್ಡ್ ಪ್ಲಾನ್ ಘೋಷಿಸಿದ ಜಿಯೊ
- ಜಿಯೋ ಘೋಷಿಸಿರುವ ಹೊಸ ಪ್ರಿಪೇಯ್ಡ್ ಯೋಜನೆಯಲ್ಲಿ 12 ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಅನಿಯಮಿತ 5ಜಿ ಡೇಟಾ ಮತ್ತು ಉಚಿತ ಕರೆಗಳನ್ನು ಸಹ ಪಡೆಯಬಹುದು. ಈ ಯೋಜನೆಯ ಕುರಿತ ವಿವರ ಇಲ್ಲಿದೆ.
ರಿಲಯನ್ಸ್ ಜಿಯೋ (Jio) ತನ್ನ ಬಳಕೆದಾರರಿಗೆ ಮತ್ತೊಂದು ಬೊಂಬಾಟ್ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. 500 ರೂಪಾಯಿಗಿಂತಲೂ ಕಡಿಮೆ ಬೆಲೆಯ ಈ ಯೋಜನೆಯೊಂದಿಗೆ ಹಲವು ಪ್ರಯೋಜನಗಳು ಬಳಕೆದಾರರಿಗೆ ಲಭಿಸಲಿವೆ. ಕಂಪನಿ ಘೋಷಿಸಿರುವ ಹೊಸ ಯೋಜನೆ ಕೇವಲ 448 ರೂಪಾಯಿಯದ್ದು. ಆದರೆ ಪ್ರಯೋಜನೆಗಳು ಹತ್ತು ಹಲವು. ಇದು ಒಟಿಟಿ ಪ್ಲಾನ್. ಈ ಯೋಜನೆ ಮೂಲಕ ಬಳಕೆದಾರರು ಅನಿಯಮಿತ 5ಜಿ ಡೇಟಾ ಮತ್ತು ಉಚಿತ ಕರೆಗಳನ್ನು ಪಡೆಯುತ್ತಾರೆ. ಮುಖ್ಯವಾಗಿ ಜಿಯೋ ತನ್ನ ಬಳಕೆದಾರರಿಗೆ 12 ಜನಪ್ರಿಯ ಒಟಿಟಿ ಅಪ್ಲಿಕೇಶಮ್‌ಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ. ಜಿಯೋದ ಈ ಯೋಜನೆಯಲ್ಲಿ ನೀಡಲಾಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಕಂಪನಿಯ ಈ ಯೋಜನೆಯು ಒಟ್ಟು 28 ದಿನಗಳಿಗೆ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಕಂಪನಿಯು ಇಂಟರ್ನೆಟ್ ಬಳಸಲು ಪ್ರತಿದಿನ ಗರಿಷ್ಠ 2 ಜಿಬಿ ಡೇಟಾವನ್ನು ನೀಡುತ್ತಿದೆ. ಜಿಯೋದ ಈ ಯೋಜನೆಯಲ್ಲಿ ಅರ್ಹ ಬಳಕೆದಾರರು ಅನಿಯಮಿತ 5ಜಿ ಡೇಟಾವನ್ನು ಪಡೆಯುತ್ತಾರೆ. ಈ ಹಿಂದಿನ ಯೋಜನೆಗಳಂತೆಯೇ ಪ್ರತಿದಿನ 100 ಉಚಿತ ಎಸ್ಎಂಎಸ್ ಕಳುಹಿಸಬಹುದು. ದೇಶಾದ್ಯಂತದ ಎಲ್ಲಾ ನೆಟ್ವರ್ಕ್‌ಗಳಿಗೆ ಅನಿಯಮಿತ ಕರೆಗಳನ್ನು ಮಾಡಬಹುದು.
ಜಿಯೋದ ಹೊಸ ಯೋಜನೆಯಲ್ಲಿ ಸೋನಿ ಲಿವ್, ಜಿಯೋ ಸಿನೆಮಾ ಪ್ರೀಮಿಯಂ, ಜೀ 5, ಜಿಯೋ ಟಿವಿ ಮತ್ತು ಫ್ಯಾನ್‌ಕೋಡ್ ಸೇರಿದಂತೆ 12 ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಸಿಗುತ್ತದೆ.
449 ರೂಪಾಯಿಗಳ ಯೋಜನೆ
ಒಂದು ವೇಳೆ ಕಂಪನಿಯ ದೈನಂದಿನ ಅನಿಯಮಿತ 5ಜಿ ಡೇಟಾಕ್ಕೆ ನೀವು ಅರ್ಹರಲ್ಲದಿದ್ದರೆ, ಹೆಚ್ಚಿನ ದೈನಂದಿನ ಡೇಟಾಕ್ಕಾಗಿ ನೀವು 449 ರೂಪಾಯಿಗಳ ಕೈಗೆಟುಕುವ ಯೋಜನೆಯನ್ನು ಆಯ್ಕೆ ಮಾಡಬಹುದು. ಈ ಯೋಜನೆಯಲ್ಲಿ, ಕಂಪನಿಯು ಇಂಟರ್ನೆಟ್ ಬಳಕೆದಾರರಿಗೆ ಪ್ರತಿದಿನ 3 ಜಿಬಿ ಡೇಟಾವನ್ನು ನೀಡುತ್ತಿದೆ. ಇದರಲ್ಲಿಯೂ ಅರ್ಹ ಬಳಕೆದಾರರು ಅನಿಯಮಿತ ಡೇಟಾವನ್ನು ಪಡೆಯುತ್ತಾರೆ.
28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ, ಕಂಪನಿಯು ಪ್ರತಿದಿನ 100 ಉಚಿತ ಎಸ್ಎಂಎಸ್ ಮತ್ತು ಉಚಿತ ಕಾಲ್‌ಗಳನ್ನು ಪಡೆಯುತ್ತದೆ. ಈ ಯೋಜನೆಯು ಜಿಯೋ ಟಿವಿ ಮತ್ತು ಜಿಯೋ ಸಿನೆಮಾದೊಂದಿಗೆ ಜಿಯೋ ಕ್ಲೌಡ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಅಲ್ಲದೆ ಈ ಯೋಜನೆಯಲ್ಲಿ, ಕಂಪನಿಯು ಜಿಯೋ ಸಿನೆಮಾ ಅಪ್ಲಿಕೇಶನ್‌ನಲ್ಲಿ ಪ್ರೀಮಿಯಂಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
10 ಒಟಿಟಿ ಅಪ್ಲಿಕೇಶನ್‌ಗಳ ಅಗ್ಗದ ಯೋಜನೆ
ಉಚಿತ ಒಟಿಟಿ ನೀಡಲು ಜಿಯೋದ ಅಗ್ಗದ ಯೋಜನೆ 175 ರೂಪಾಯಿಯಲ್ಲಿದೆ. ಈ ಯೋಜನೆಯಲ್ಲಿ, ಕಂಪನಿಯು 28 ದಿನಗಳ ಮಾನ್ಯತೆ ಮತ್ತು 10 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಸೋನಿ ಲಿವ್, ಜೀ5, ಜಿಯೋ ಸಿನೆಮಾ ಪ್ರೀಮಿಯಂ ಮತ್ತು ಲಯನ್ಸ್‌ಗೇಟ್ ಪ್ಲೇ ಸೇರಿದಂತೆ 10 ಉಚಿತ ಒಟಿಟಿ ಅಪ್ಲಿಕೇಶನ್‌ಗಳನ್ನು ನೀಡಲಾಗುತ್ತಿದೆ. ಆದರೆ, ಈ ಯೋಜನೆಯಲ್ಲಿ ಉಚಿತ ಕರೆ ಮತ್ತು ಎಸ್ಎಂಎಸ್ ಪ್ರಯೋಜನಗಳಿಲ್ಲ. ಬದಲಿ ಕರೆ ಹಾಗೂ ಇಂಟರ್ನೆಟ್ ವ್ಯವಸ್ಥೆ ಇರುವವರು ಕೇವಲ ಒಟಿಟಿ ಚಂದಾದಾರಿಕೆಗಾಗಿ ಈ ಪ್ಲಾನ್ ಬಳಸಿಕೊಳ್ಳಬಹುದು.