Tata Curvv: ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಕರ್ವ್; ಬೆಲೆ ಕೇವಲ 9.99 ಲಕ್ಷ, ಹಲವು ಹೊಚ್ಚಹೊಸ ಫೀಚರ್ಸ್-technology news tata curvv launched know ex showroom price specs tata motors suv internal combustion engine jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tata Curvv: ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಕರ್ವ್; ಬೆಲೆ ಕೇವಲ 9.99 ಲಕ್ಷ, ಹಲವು ಹೊಚ್ಚಹೊಸ ಫೀಚರ್ಸ್

Tata Curvv: ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಕರ್ವ್; ಬೆಲೆ ಕೇವಲ 9.99 ಲಕ್ಷ, ಹಲವು ಹೊಚ್ಚಹೊಸ ಫೀಚರ್ಸ್

ಟಾಟಾ ಕರ್ವ್ ಕಾರು ಬೆಲೆಯು 9.99 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಹಲವು ಹೊಸ ಫೀಚರ್‌ಗಳೊಂದಿಗೆ ಕೈಗೆಟಕುವ ಬೆಲೆಯಲ್ಲಿ ಅದ್ಧೂರಿ ಕಾರು ಖರೀದಿಸಬಹುದು. ಈ ಬೆಲೆಯು ಮೊದಲ ಎರಡು ತಿಂಗಳು ಬುಕಿಂಗ್‌ ಮಾಡುವವರಿಗೆ ಮಾತ್ರ ಲಭ್ಯವಾಗಲಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಕರ್ವ್
ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಕರ್ವ್

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ಟಾಟಾ ಕರ್ವ್- ಎಸ್‌ಯುವಿ ಕೂಪ್ ಅನ್ನು ಬಿಡುಗಡೆ ಮಾಡಿದೆ. ಕೇವಲ 9.99 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಾರಿನೊಂದಿಗೆ ಕಂಪನಿ ಹಲವು ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಆಕರ್ಷಕ ಬಾಡಿ ಸ್ಟೈಲ್ ಹೊಂದಿರುವ ಐಸಿಇ ವೇರಿಯಂಟ್‌ಗಳ ಮೂಲಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಿಡ್-ಎಸ್‌ಯುವಿ ವಿಭಾಗಕ್ಕೆ ಅದ್ದೂರಿಯಾಗಿ ಪ್ರವೇಶಿಸುತ್ತಿದೆ. ಈ ಕಾರಿನ ವಿಶೇಷತೆ ಏನೇನು ಎಂಬುದನ್ನು ನೋಡೋಣ.

ಪ್ರಸ್ತುತ ಟಾಟಾ ಮೋಟಾರ್ಸ್ ಮೂರು ಎಂಜಿನ್ ಆಯ್ಕೆಗಳಲ್ಲಿ ಕರ್ವ್ ಅನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಆಯ್ಕೆಗಳಲ್ಲಿಯೂ ಅತ್ಯಾಧುನಿಕ ಡ್ಯುಯಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಲಭ್ಯವಿದೆ. ಹೊಸ ಶಕ್ತಿಶಾಲಿ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್, 1.2 ಲೀ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಮತ್ತು ಹೊಸ 1.5ಲೀ ಕ್ರಯೋಜೆಟ್ ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಕರ್ವ್ ಲಭ್ಯವಿದೆ. ವಿಶೇಷವಾಗಿ ಇದೇ ಮೊದಲ ಬಾರಿಗೆ ಡೀಸೆಲ್‌ ವಿಭಾಗದಲ್ಲಿ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಒದಗಿಸುತ್ತಿದೆ. ಈ ಮೂಲಕ ಕಂಪನಿಯು ಗ್ರಾಹಕರಿಗೆ ಅವರವರ ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡಲು ವಿವಿಧ ಆಯ್ಕೆಗಳನ್ನು ನೀಡುತ್ತಿದೆ.

ಟಾಟಾ ಮೋಟಾರ್ಸ್ ಅದರ ಡಿಎನ್‌ಎಗೆ ಅನುಗುಣವಾಗಿ ಸಿದ್ಧಪಡಿಸಿರುವ ಕರ್ವ್ ಜಾಗತಿಕವಾಗಿ ಬಹಳ ಮನ್ನಣೆಗೆ ಒಳಪಟ್ಟಿರುವ ಪ್ರೀಮಿಯಂ ಎಸ್‌ಯುವಿ ಕೂಪ್ ವಿನ್ಯಾಸವನ್ನು ಹೊಂದಿದೆ. ಕರ್ವ್ ವರ್ಗದಲ್ಲಿಯೇ ಅತ್ಯುತ್ತಮವಾದ ಸುರಕ್ಷತೆ ಹೊಂದಿದ್ದು, ವಿಭಾಗದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ಹಲವಾರು ಫೀಚರ್‌ಗಳನ್ನು ಹೊಂದಿದೆ. ವಿವಿಧ ಮತ್ತು ವಿಶಿಷ್ಟ ಪವರ್‌ಟ್ರೇನ್ ಆಯ್ಕೆಗಳಲ್ಲಿ ಕರ್ವ್ ಲಭ್ಯವಿದೆ. ಗೋಲ್ಡ್ ಎಸೆನ್ಸ್, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಪ್ಯೂರ್ ಗ್ರೇ ಮತ್ತು ಒಪೇರಾ ಬ್ಲೂ ಎಂಬ ಆರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುವ ಟಾಟಾ ಕರ್ವ್ ಅನ್ನು ಅಕಂಪ್ಲಿಶ್ಡ್, ಕ್ರಿಯೇಟಿವ್, ಪ್ಯೂರ್ ಮತ್ತು ಸ್ಮಾರ್ಟ್ ಎಂಬ ಹೆಸರಿನ ನಾಲ್ಕು ಪರ್ಸೋನಾಗಳು ಅಥವಾ ವೇರಿಯಂಟ್‌ ಗಳಲ್ಲಿ ಒದಗಿಸಲಾಗುತ್ತದೆ

ಪ್ರಮುಖ ಫೀಚರ್‌ಗಳು

ಕನೆಕ್ಟೆಡ್ ಟೈಲ್-ಲ್ಯಾಂಪ್‌ಗಳು, ಮಿಶ್ರಲೋಹದ ಚಕ್ರಗಳು, ಮೂಡ್ ಲೈಟಿಂಗ್‌ ಜೊತೆಗೆ ವಾಯ್ಸ್ ಅಸಿಸ್ಟೆಡ್ ಪ್ಯಾನಾರಮಿಕ್ ಸನ್‌ರೂಫ್, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ವಿಶಿಷ್ಟ ವೆಲ್ ಕಮ್ ಆಂಡ್ ಗುಡ್ ಬೈ ಆಯ್ಕೆಗಳನ್ನು ಇದರಲ್ಲಿ ಒದಗಿಸಲಾಗಿದೆ.

ಟಾಟಾ ಮೋಟಾರ್ಸ್‌ ಜನಪ್ರಿಯ ಸುರಕ್ಷತೆಯ ಡಿಎನ್‌ಎ ಹೊಂದಿದ ಕರ್ವ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಜೊತೆಗೆ ಸಮಗ್ರ ಐ ಎಸ್ ಪಿ ಮತ್ತು 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್ ಸೇರಿದಂತೆ 20 ಕಾರ್ಯನಿರ್ವಹಣೆಗಳನ್ನು ಹೊಂದಿರುವ ಎಡಿಎಎಸ್ ಲೆವೆಲ್ 2 ಅನ್ನು ನೀಡುತ್ತದೆ. ಈ ಎಸ್‌ಯುವಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಆಟೋ ಹೋಲ್ಡ್‌ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ.

ಕರ್ವ್‌ನ ಒಳಭಾಗವು ಐಷಾರಾಮಿತನಕ್ಕೆ ಸಾಕ್ಷಿಯಾಗಿದೆ. ಗೆಶ್ಚರ್ ಕಂಟ್ರೋಲ್‌ ಜೊತೆಗೆ ವಿಭಾಗದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿರುವ ಟೈಲ್‌ಗೇಟ್‌, 500ಲೀ ನ ವಿಭಾಗ ಶ್ರೇಷ್ಠ ಬೂಟ್ ಸ್ಪೇಸ್‌, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು ರಿಕ್ಲೈನ್ ಆಯ್ಕೆ ಜೊತೆಗೆ 60:40 ಸ್ಪ್ಲಿಟ್ ರೇರ್ ಸೀಟ್ ಸೌಲಭ್ಯವನ್ನು ಒಳಗೊಂಡಿದೆ.

ಕರ್ವ್ ವಿಭಾಗದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಲಾದ 31.24 ಸೆಂಮೀ (12.3) ಹರ್ಮನ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 26.03 ಸೆಂಮೀನ (10.25) ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮತ್ತು ಐಆರ್‌ಎ ಕನೆಕ್ಟೆಡ್ ಕಾರ್ ತಂತ್ರಜ್ಞಾನದಂತಹ ಅತ್ಯಾಧುನಿಕ ಕಾರು ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದೆ.

ಹೊಸ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್, 1.5ಲೀ ಕ್ರಯೋಜೆಟ್ ಡೀಸೆಲ್ ಎಂಜಿನ್ ಮತ್ತು 1.2ಲೀ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಮಲ್ಟಿ-ಡ್ರೈವ್ ಮೋಡ್‌ಗಳು, ಪ್ಯಾಡಲ್ ಶಿಫ್ಟರ್‌ಗಳು, ಸ್ಮಾರ್ಟ್ ಇ-ಶಿಫ್ಟರ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಒಳಗೊಂಡಿದೆ.

Tata will offer six colour options with the Curvv - Daytona Grey, Pristine White, Flame, Opera Blue, Pure Grey and Gold Essence.
Tata will offer six colour options with the Curvv - Daytona Grey, Pristine White, Flame, Opera Blue, Pure Grey and Gold Essence.

ಎಕ್ಸ್‌ ಶೋರೂಂ ಬೆಲೆ

ಟಾಟಾ ಕರ್ವ್‌ನ ಬೆಲೆಯು ಎಕ್ಸ್ ಶೋರೂಂ ದರದಂತೆ 9.99 ಲಕ್ಷದಿಂದ ಆರಂಭವಾಗಿ 17.69 ಲಕ್ಷ ರೂಪಾಯಿ. ಇದು ಪರಿಚಯಾತ್ಮಕ ಬೆಲೆಯಾಗಿದ್ದು, ಅಕ್ಟೋಬರ್ 31ರವರೆಗೆ ಮಾಡುವ ಬುಕಿಂಗ್‌ಗಳಿಗೆ ಮಾತ್ರ ಅನ್ವಯ ಆಗುತ್ತವೆ.

ಸುರಕ್ಷತೆ, ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ತತ್ವಗಳನ್ನು ಒಳಗೊಂಡಿರುವ ಎಟಿಎಲ್ಎಎಸ್ ತಂತ್ರಜ್ಞಾನವು ಕರ್ವ್ ವಿವಿಧ ಪವರ್‌ಟ್ರೇನ್ ಆಯ್ಕೆಗಳು, ಸಾಕಷ್ಟು ಒಳಾಂಗಣ ಸ್ಥಳಾವಕಾಶ ಮತ್ತು ಸಮಗ್ರ ಸುರಕ್ಷತಾ ಫೀಚರ್‌ಗಳನ್ನು ಹೊಂದುವುದು ಸಾಧ್ಯವಾಗಿಸಿದೆ. ಹೀಗಾಗಿ ನಾವೀನ್ಯತೆ ಬಯಸುವ ಚಾಲಕರಿಗೆ ಸುಸಜ್ಜಿತ ಆಯ್ಕೆಯಾಗಿದೆ. ಟಾಟಾ ಮೋಟಾರ್ಸ್‌ ಸುರಕ್ಷತೆ ಬಹಳ ಮುಖ್ಯವಾಗಿರುವುದರಿಂದ ಈ ಪ್ಲಾಟ್‌ಫಾರ್ಮ್ 2 ಎಡಿಎಎಸ್ ಫೀಚರ್‌ಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಈ ತಂತ್ರಜ್ಞಾನಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉತ್ಕೃಷ್ಟ ವಿಧಾನ, ಡಿಪಾರ್ಚರ್ ಆಂಡ್ ರಾಂಪ್-ಓವರ್ ಆಂಗಲ್‌ಗಳನ್ನು ಒದಗಿಸುತ್ತದೆ. ಆ ಮೂಲಕ ವಾಹನವನ್ನು ಅತ್ಯುತ್ಕೃಷ್ಟಗೊಳಿಸುತ್ತದೆ.