logo
ಕನ್ನಡ ಸುದ್ದಿ  /  ಜೀವನಶೈಲಿ  /  Natural Hair Color: ರಾಸಾಯನಿಕ ಬಳಸದೆ ನೀವೇ ಕೂದಲಿಗೆ ಬಣ್ಣ ತಯಾರಿಸಿಕೊಳ್ಳಬೇಕಾ; ಈ ಮನೆಮದ್ದು ತಯಾರಿಸಿಕೊಳ್ಳಿ

Natural Hair Color: ರಾಸಾಯನಿಕ ಬಳಸದೆ ನೀವೇ ಕೂದಲಿಗೆ ಬಣ್ಣ ತಯಾರಿಸಿಕೊಳ್ಳಬೇಕಾ; ಈ ಮನೆಮದ್ದು ತಯಾರಿಸಿಕೊಳ್ಳಿ

Raghavendra M Y HT Kannada

Dec 22, 2024 02:28 PM IST

google News

ಮನೆಯಲ್ಲಿ ನೈಸರ್ಗಿಕವಾಗಿ ಯಾವುದೇ ರಾಸಾಯನಿಕರಗಳನ್ನು ಬಳಸದೆ ಕೂದಲಿನ ಬಣ್ಣವನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ

    • ನೈಸರ್ಗಿಕ ಕೂದಲಿನ ಬಣ್ಣ: ತಲೆಯ ಬೂದು ಕೂದಲನ್ನು ಮರೆಮಾಚಲು ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಣ್ಣಗಳನ್ನು ಬಳಸುತ್ತಾರೆ. ಈ ಬಣ್ಣಗಳಿನಲ್ಲಿನ ರಾಸಾಯನಿಕಗಳು ಕೂದಲಿನ ಆರೋಗ್ಯವನ್ನು ಮತ್ತಷ್ಟು ಹಾಳುಮಾಡುತ್ತವೆ. ಹೀಗಾಗಿ ಈ ಬಣ್ಣಗಳು ತುಂಬಾ ಅಪಾಯಕಾರಿ. ಬದಲಿಗೆ ಮನೆಯಲ್ಲೇ ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕ ಕೂದಲಿನ ಬಣ್ಣ ತಯಾರಿಸಿಕೊಳ್ಳಬಹುದು.
ಮನೆಯಲ್ಲಿ ನೈಸರ್ಗಿಕವಾಗಿ ಯಾವುದೇ ರಾಸಾಯನಿಕರಗಳನ್ನು ಬಳಸದೆ ಕೂದಲಿನ ಬಣ್ಣವನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ
ಮನೆಯಲ್ಲಿ ನೈಸರ್ಗಿಕವಾಗಿ ಯಾವುದೇ ರಾಸಾಯನಿಕರಗಳನ್ನು ಬಳಸದೆ ಕೂದಲಿನ ಬಣ್ಣವನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಸಾಮಾನ್ಯವಾಗಿದೆ. ವಯಸ್ಸಿನ ಭೇದವಿಲ್ಲದೆ ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಿಳಿ ಕೂದಲನ್ನು ಮರೆಮಾಚಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಣ್ಣಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು ಕೂದಲನ್ನು ಕಪ್ಪಾಗಿಸುತ್ತವೆ, ಆದರೆ ಕೂದಲಿನ ಆರೋಗ್ಯವನ್ನ ಹಾಳು ಮಾಡುತ್ತವೆ. ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವುದರಿಂದ ದೀರ್ಘಾವಧಿಯಲ್ಲಿ ಕೂದಲು ಉದುರುವಿಕೆಯು ಹಾಗೂ ಕೂದಲಿನ ಬೆಳವಣಿಗೆ ನಿಲ್ಲುವ ಸಾಧ್ಯತೆ ಇರುತ್ತದೆ.

ಯಾವುದೇ ರಾಸಾಯನಿಕಗಳನ್ನು ಬಳಸದೆ ನೀವೇ ನಿಮ್ಮ ಕೂದಲಿಗೆ ಬಣ್ಣವನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಈ ನೈಸರ್ಗಿಕ ಕೂದಲಿನ ಬಣ್ಣವನ್ನು ಅನ್ವಯಿಸುವುದರಿಂದ ಕೂದಲನ್ನು ರೇಷ್ಮೆಯಂತೆ ಮೃದುವಾಗಿ ಮತ್ತು ಬಲವಾಗಿ ಮಾಡುತ್ತದೆ. ಜೊತೆಗೆ ಕೂದಲು ಕಪ್ಪಾಗುತ್ತದೆ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಕೂದಲು ಕಪ್ಪಾಗಲು ನೈಸರ್ಗಿಕ ಹೇರ್ ಮಾಸ್ಕ್‌ಗಳನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.

ಮನೆಯಲ್ಲಿ ಹೇರ್ ಕಲರ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಮೊಸರು - ಕಾಲು ಕಪ್

ಅರಿಶಿನ - ಟೀ ಚಮಚ

ಇಂಡಿಗೋ ಪೌಡರ್ - ಒಂದು ಟೀ ಚಮಚ

ಮೆಂತ್ಯ - ಎರಡು ಟೀಚಮಚ (ರಾತ್ರಿ ನೆನೆಸಿಟ್ಟಿರಬೇಕು)

ಕಾಫಿ ಪುಡಿ - ಒಂದು ಟೀಚಮಚ

ಅಲೋವೆರಾ ತಿರುಳು - ಒಂದು ಟೀಚಮಚ

ಮನೆಯಲ್ಲಿ ಹೇರ್ ಮಾಸ್ಕ್ ಮಾಡುವುದು ಹೇಗೆ

  • ನೆನೆಸಿದ ಮೆಂತ್ಯ, ಮೊಸರು ಮತ್ತು ಅಲೋವೆರಾ ತಿರುಳನ್ನು ಪೇಸ್ಟ್ ಮಾಡಲು ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಅರಿಶಿನವನ್ನು ಕಬ್ಬಿಣದ ಬಾಣಲೆ ಅಥವಾ ಕಡಾಯಿಯಲ್ಲಿ ಹಾಕಿ ಹುರಿಯಿರಿ
  • ನಂತರ ಅದೇ ಬಾಣಲೆಯಲ್ಲಿ ಇಂಡಿಗೋ ಪೌಡರ್ ಹಾಕಿ ಫ್ರೈ ಮಾಡಿ. ಬಣ್ಣ ಬದಲಾಗುತ್ತಿದ್ದಂತೆ ಒಲೆಯನ್ನು ಆ್ಯಪ್ ಮಾಡಿ
  • ಈಗ ಸಿದ್ಧಪಡಿಸಿದ ಮೊಸರು ಮತ್ತು ಅಲೋವೆರಾ ತಿರುಳಿಗೆ ಅರಿಶಿನ ಮತ್ತು ಇಂಡಿಗೋ ಪುಡಿ ಸೇರಿಸಿ ಮಿಶ್ರಣ ಮಾಡಿ
  • ಈ ಪದಾರ್ಥಗಳನ್ನು ಸಂಪೂರ್ಣವಾಗಿ ಮಿಶ್ರಣ ಮಾಡಿದ ನಂತರ ಅದಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಸೇರಿಸಿ.
  • ಅರಿಶಿನ, ಕಾಫಿ ಪುಡಿ, ಇಂಡಿಗೋ ಪೌಡರ್, ಮೊಸರು ಹಾಗೂ ಅಲೋವೆರಾ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ
  • ಅಂತಿಮವಾಗಿ ಮನೆಯಲ್ಲಿ ನೈಸರ್ಗಿಕ ಕೂದಲಿನ ಬಣ್ಣ ರೆಡಿಯಾಗುತ್ತೆ

ಬಣ್ಣವನ್ನು ಹೇಗೆ ಅನ್ವಯಿಸಬೇಕು

  • ನೀವು ಸಿದ್ಧಪಡಿಸಿದ ಕೂದಲಿನ ಬಣ್ಣವನ್ನು ತಲೆಗೆ ಅನ್ವಯಿಸುವ ಮೊದಲು, ನಿಮ್ಮ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
  • ಸ್ವಚ್ಛವಾದ ತಲೆಗೆ ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ಸಂಪೂರ್ಣ ಬಿಳಿ ಕೂದಲಿನವರೆಗೆ ಚೆನ್ನಾಗಿ ಹಚ್ಚಬೇಕು
  • ಬಣ್ಣವನ್ನು ಹಚ್ಚಿದ ನಂತರ ಮೂರರಿಂದ ನಾಲ್ಕು ಗಂಟೆಗಳ ಕಾಲ ಹಾಗೆ ಬಿಡಿ
  • ನಂತರ ತಣ್ಣೀರಿನಿಂದ ಅಥವಾ ಉಗುರುಬೆಚ್ಚನೆಯ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ
  • ಯಾವುದೇ ರಾಸಾಯನಿಕಗಳಿಲ್ಲದೆ ನಿಮ್ಮ ಎಲ್ಲಾ ಕೂದಲು ಸುಲಭವಾಗಿ ಕಪ್ಪಾಗುತ್ತದೆ.
  • ಕೂದಲು ನೈಸರ್ಗಿಕವಾಗಿ ಕಪ್ಪು ಮತ್ತು ಹೊಳೆಯುತ್ತದೆ. ಮೃದುತ್ವವೂ ಹೆಚ್ಚುತ್ತದೆ.

(ಗಮನಿಸಿ: ಇದು ಕೆಲವು ವರದಿಗಳನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ