logo
ಕನ್ನಡ ಸುದ್ದಿ  /  ಜೀವನಶೈಲಿ  /  ಚರ್ಮಕ್ಕೆ ಹೊಳಪು ನೀಡುವುದರಿಂದ ಮೊಡವೆ ಹೋಗಲಾಡಿಸುವವರೆಗೆ: ಸ್ನಾನದ ನೀರಿಗೆ ಅರಿಶಿನ ಸೇರಿಸುವುದರ ಪ್ರಯೋಜನಗಳಿವು

ಚರ್ಮಕ್ಕೆ ಹೊಳಪು ನೀಡುವುದರಿಂದ ಮೊಡವೆ ಹೋಗಲಾಡಿಸುವವರೆಗೆ: ಸ್ನಾನದ ನೀರಿಗೆ ಅರಿಶಿನ ಸೇರಿಸುವುದರ ಪ್ರಯೋಜನಗಳಿವು

Priyanka Gowda HT Kannada

Dec 19, 2024 11:08 AM IST

google News

ಸ್ನಾನದ ನೀರಿಗೆ ಅರಿಶಿನ ಸೇರಿಸುವುದರ ಪ್ರಯೋಜನಗಳಿವು

  • ಪ್ರತಿದಿನ ಸ್ನಾನ ಮಾಡುವುದರಿಂದ ದೇಹದಲ್ಲಿರುವ ಕೊಳೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಮನಸ್ಸು ಶಾಂತವಾಗಲು ನೆರವಾಗುತ್ತದೆ. ಸ್ನಾನದ ಪ್ರಯೋಜನಗಳನ್ನು ಹೆಚ್ಚಿಸಲು ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು. ಸ್ನಾನದ ನೀರಿನಲ್ಲಿ ಒಂದು ಚಮಚ ಅರಿಶಿನವನ್ನು ಸೇರಿಸಬೇಕು. ಇದರಿಂದ ಏನು ಪ್ರಯೋಜನವಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸ್ನಾನದ ನೀರಿಗೆ ಅರಿಶಿನ ಸೇರಿಸುವುದರ ಪ್ರಯೋಜನಗಳಿವು
ಸ್ನಾನದ ನೀರಿಗೆ ಅರಿಶಿನ ಸೇರಿಸುವುದರ ಪ್ರಯೋಜನಗಳಿವು (PC: Pixabay)

ದಿನನಿತ್ಯ ಸ್ನಾನ ಮಾಡುವುದು ನಮ್ಮ ದೇಹಕ್ಕೆ ಬಹಳ ಅಗತ್ಯ. ಪ್ರತಿದಿನ ಸ್ನಾನ ಮಾಡುವುದರಿಂದ ದೇಹದಲ್ಲಿರುವ ಕೊಳೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಮನಸ್ಸು ಶಾಂತವಾಗಲು ನೆರವಾಗುತ್ತದೆ. ಸ್ನಾನದ ಪ್ರಯೋಜನಗಳನ್ನು ಹೆಚ್ಚಿಸಲು ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು. ಇದನ್ನು ಮಾಡಲು, ಸ್ನಾನದ ನೀರಿನಲ್ಲಿ ಒಂದು ಚಮಚ ಅರಿಶಿನವನ್ನು ಸೇರಿಸಬೇಕು. ಅರಿಶಿನವು ಆಯುರ್ವೇದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಸ್ನಾನದ ನೀರಿಗೆ ಅರಿಶಿನವನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಸ್ನಾನದ ನೀರಿಗೆ ಅರಿಶಿನ ಸೇರಿಸುವುದರ ಪ್ರಯೋಜನಗಳು

ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ: ಸ್ನಾನದ ನೀರಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಆ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಬಣ್ಣ ಸುಧಾರಿಸುತ್ತದೆ. ಅರಿಶಿನವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಲ್ಲಿ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಅರಿಶಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ವಯಸ್ಸಾದ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವು ಚರ್ಮವನ್ನು ಬಿಗಿಗೊಳಿಸಲು ಸಹ ಕೆಲಸ ಮಾಡುತ್ತದೆ.

ಚರ್ಮದ ತುರಿಕೆ, ದದ್ದುಗೆ ಶಮನಕಾರಿ: ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಚರ್ಮದ ಮೇಲೆ ತುರಿಕೆ ಅಥವಾ ದದ್ದುಗಳಿಂದ ಬಳಲುತ್ತಿದ್ದರೆ, ಅರಿಶಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದು. ಬ್ಯಾಕ್ಟೀರಿಯಾದ ಸೋಂಕನ್ನು ತೆಗೆದುಹಾಕುವಲ್ಲಿ ಅರಿಶಿನ ಸ್ನಾನವು ತುಂಬಾ ಸಹಾಯಕವಾಗಿದೆ.

ಮೊಡವೆಗಳನ್ನು ಹೋಗಲಾಡಿಸಲು ಸಹಕಾರಿ: ಹಾರ್ಮೋನುಗಳ ಅಸಮತೋಲನದಿಂದಾಗಿ ಮುಖದ ಮೇಲೆ ಮೊಡವೆಗಳು ಸಾಮಾನ್ಯವಾಗಿದೆ. ಬಹಳಷ್ಟು ಬಾರಿ ವಿವಿಧ ಸೌಂದರ್ಯವರ್ಧಕಗಳನ್ನು ಬಳಸಿದರೂ ಅವುಗಳಿಂದ ಮುಕ್ತಿ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರಿಶಿನದ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಅಥವಾ ಅರಿಶಿನದ ನೀರಿನಿಂದ ಮುಖ ತೊಳೆದರೂ ಮೊಡವೆಗಳನ್ನು ಕಡಿಮೆ ಮಾಡಬಹುದು.

ಚರ್ಮದ ಮೇಲಿನ ಕಲೆಗಳು, ಪಿಗ್ಮೆಂಟೇಶನ್ ಕಡಿಮೆ ಮಾಡಲು ಸಹಕಾರಿ: ದೇಹದ ಮೇಲಿರುವ ಕಲೆಗಳನ್ನು ಹೋಗಲಾಡಿಸಲು ಅರಿಶಿನ ನೀರಿನಲ್ಲಿ ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಅರಿಶಿನವು ಚರ್ಮದ ಮೇಲಿನ ಕಲೆಗಳು ಮತ್ತು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುವ ಅನೇಕ ಸಂಯುಕ್ತಗಳನ್ನು ಒಳಗೊಂಡಿದೆ. ಅಲ್ಲದೆಅತಿಯಾದ ಬಿಸಿಲಿನಿಂದ ಟ್ಯಾನ್ ಆಗಿದ್ದರೆ ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಇದು ತುಂಬಾ ಸಹಾಯಕವಾಗಿದೆ.

ಯಾವುದೇ ಗಾಯಗಳನ್ನು ಗುಣಪಡಿಸಲು ಅರಿಶಿನ ನೀರು ತುಂಬಾ ಸಹಾಯಕವಾಗಿದೆ. ಅರಿಶಿನವು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ದೇಹದ ಮೇಲೆ ಗಾಯವಿದ್ದಲ್ಲಿ ಅರಿಶಿನದ ನೀರಿನಲ್ಲಿ ಸ್ನಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಇದು ಗಾಯವನ್ನು ವೇಗವಾಗಿ ಗುಣವಾಗುವಂತೆ ಮಾಡುತ್ತದೆ.

ಅರಿಶಿನವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇಂತಹ ಸ್ಥಿತಿಯಲ್ಲಿ ಅರಿಶಿನದ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ನೋವಿನಿಂದ ಮುಕ್ತಿ ಸಿಗುತ್ತದೆ. ಕೀಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ. ದೇಹವು ದಣಿದಿದ್ದರೆ ಹಳದಿ ನೀರಿನಿಂದ ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿ.

(ಗಮನಿಸಿ: ಅಧ್ಯಯನಗಳು ಮತ್ತು ಆರೋಗ್ಯ ನಿಯತಕಾಲಿಕಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಇದು ಕೇವಲ ಮಾಹಿತಿಯಾಗಿದೆ. ಇದು ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯದ ಬಗ್ಗೆ ಅನುಮಾನವಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ