logo
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾತಂತ್ರ್ಯ ದಿನಾಚರಣೆಗೆ ಅಡುಗೆಯೂ ವಿಭಿನ್ನವಾಗಿರಲಿ; ತ್ರಿವರ್ಣದಲ್ಲಿ ಈ ರೆಸಿಪಿಗಳನ್ನು ಟ್ರೈ ಮಾಡಿ

ಸ್ವಾತಂತ್ರ್ಯ ದಿನಾಚರಣೆಗೆ ಅಡುಗೆಯೂ ವಿಭಿನ್ನವಾಗಿರಲಿ; ತ್ರಿವರ್ಣದಲ್ಲಿ ಈ ರೆಸಿಪಿಗಳನ್ನು ಟ್ರೈ ಮಾಡಿ

Jayaraj HT Kannada

Aug 14, 2024 02:40 PM IST

google News

ಸ್ವಾತಂತ್ರ್ಯ ದಿನಾಚರಣೆಗೆ ಅಡುಗೆಯೂ ವಿಭಿನ್ನವಾಗಿರಲಿ; ತ್ರಿವರ್ಣದಲ್ಲಿ ಈ ರೆಸಿಪಿಗಳನ್ನು ಟ್ರೈ ಮಾಡಿ

    • ಸ್ವಾತಂತ್ರ್ಯ ದಿನಾಚರಣೆಗೆ ತ್ರಿವರ್ಣ ಧ್ವಜದ ಬಣ್ಣಗಳ ಬಟ್ಟೆ ತೊಡುವ ಸಂಭ್ರಮ ಮಕ್ಕಳು ಹಾಗೂ ಯುವಕರದ್ದು. ರಂಗೋಲಿ ಸೇರಿದಂತೆ ಅಲಂಕಾರಗಳು ಕೂಡಾ ಈ ಬಣ್ಣದಲ್ಲೇ ಇರಬೇಕೆಂಬ ಆಸೆ ಹೆಚ್ಚಿನವರಿಗೆ. ಇದೇ ವೇಳೆ ನೀವು ಮಾಡುವ ಅಡುಗೆ ಕೂಡಾ ಈ ಮೂರು ಬಣ್ಣಗಳಲ್ಲಿದ್ದರೆ ಇನ್ನೂ ಚೆನ್ನಾಗಿರುತ್ತದೆ ಅಲ್ವೇ?
ಸ್ವಾತಂತ್ರ್ಯ ದಿನಾಚರಣೆಗೆ ಅಡುಗೆಯೂ ವಿಭಿನ್ನವಾಗಿರಲಿ; ತ್ರಿವರ್ಣದಲ್ಲಿ ಈ ರೆಸಿಪಿಗಳನ್ನು ಟ್ರೈ ಮಾಡಿ
ಸ್ವಾತಂತ್ರ್ಯ ದಿನಾಚರಣೆಗೆ ಅಡುಗೆಯೂ ವಿಭಿನ್ನವಾಗಿರಲಿ; ತ್ರಿವರ್ಣದಲ್ಲಿ ಈ ರೆಸಿಪಿಗಳನ್ನು ಟ್ರೈ ಮಾಡಿ

ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನ ಬಂದರೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲಿಲ್ಲದ ಉತ್ಸಾಹ. 1947ರಲ್ಲಿ ಬ್ರಿಟೀಷರ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾಗಿ ಭಾರತಮಾತೆ ಸ್ವತಂತ್ರಳಾದ ದಿನವಿದು. ಈ ಬಾರಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶಕ್ಕಾಗೋ ಹೋರಾಡಿದ, ಅಮರರಾದ, ತ್ಯಾಗ ಬಲಿದಾನಗಳನ್ನು ಮಾಡಿದ ವೀರಯೋಧರನ್ನು ಸ್ಮರಿಸುವ ದಿನವಿದು. ಭಾರತದ ತ್ರಿವರ್ಣ ಧ್ವಜವು ಭಾನೆತ್ತರಕ್ಕೆ ಹಾರಿ ದೇಶದ ಬಗ್ಗೆ ಪ್ರತಿಯೊಬ್ಬರೂ ಅತೀವ ಹೆಮ್ಮ ಪಡುವ ವಿಶೇಷ ದಿನದಂದು, ಎಲ್ಲೆಲ್ಲೂ ತ್ರಿವರ್ಣಗಳೇ ಕಾಣಿಸುತ್ತದೆ. ಈ ದಿನ ನೀವು ಅಡುಗೆಯಲ್ಲೂ ತ್ರಿವರ್ಣಗಳು ಕಾಣಿಸುವಂತೆ ಮಾಡಿದರೆ ಇನ್ನೂ ಸೊಗಸು. ಈ ಸ್ವಾತಂತ್ರ್ಯ ದಿನದಂದು ತ್ರಿವರ್ಣಗಳಲ್ಲಿ ಕಾಣಿಸುವ ವಿಶೇಷ ಅಡುಗೆ ಮಾಡಿ. ರೆಸಿಪಿ ನಾವ್‌ ಹೇಳ್ತೀವಿ.

ತ್ರಿವರ್ಣ ಲಡ್ಡು

ತ್ರಿವರ್ಣ ಲಡ್ಡು
  • ಬೇಕಾಗುವ ಸಾಮಾಗ್ರಿಗಳು
  • ಪಾಲಕ್ ಪ್ಯೂರಿ -1 ಕಪ್ (ಹಸಿರು ಬಣ್ಣಕ್ಕಾಗಿ)
  • ತುರಿದ ಕ್ಯಾರೆಟ್ - 1 ಕಪ್ (ಕೇಸರಿ ಬಣ್ಣಕ್ಕೆ)
  • ರವೆ -1/2 ಕಪ್ (ಬಿಳಿ ಬಣ್ಣಕ್ಕೆ
  • ಕೊಬ್ಬರಿ ತುರಿ - 1/2 ಕಪ್
  • ತೆಂಗಿನಕಾಯಿ ಬೆಲ್ಲದ ಸಿರಪ್ - 6 ಟೀಸ್ಪೂನ್
  • ಏಲಕ್ಕಿ ಪುಡಿ - 2 ಟೀಸ್ಪೂನ್
  • ತುಪ್ಪ - 7-8 ಟೀಸ್ಪೂನ್
  • ಹಾಲು - 1 ಲೀಟರ್
  • ನೀರು - 200 ಮಿಲೀ

ಮಾಡುವ ವಿಧಾನ

  • ರವೆಯನ್ನು 5ರಿಂದ 7 ನಿಮಿಷಗಳ ಕಾಲ ಪರಿಮಳ ಬರುವವರೆಗೆ ಹುರಿಯಿರಿ. ತುಸು ಬಣ್ಣ ಬರಲು ಆರಂಭವಾಗುವ ಮೊದಲು ನೀರು ಮತ್ತು ಅರ್ಧದಷ್ಟು ಹಾಲನ್ನು ಸೇರಿಸಿ.
  • ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ.
  • ರವೆ ಚೆನ್ನಾಗಿ ಬೇಯುವವರೆಗೆ (10 ನಿಮಿಷಗಳ ಕಾಲ) ಬೇಯಿಸಿ.
  • 2-3 ಟೀಸ್ಪೂನ್ ಬೆಲ್ಲದ ಸಿರಪ್ ಮತ್ತು 1 ಟೀಸ್ಪೂನ್ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಎರಡು ಭಾಗಗಳಾಗಿ ವಿಭಜಿಸಿ ಪಕ್ಕಕ್ಕೆ ಇರಿಸಿ.
  • ಪ್ರತ್ಯೇಕ ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪ ಹಾಕಿ. ಇದಕ್ಕೆ ಪಾಲಕ್ ಪ್ಯೂರಿ ಸೇರಿಸಿ, ದಪ್ಪವಾಗುವವರೆಗೆ ಬೇಯಿಸಿ.
  • ಈ ಪ್ಯೂರಿಗೆ, ಆಗಲೇ ಮಾಡಿಟ್ಟ ಅರ್ಧ ಭಾಗ ಮಿಶ್ರಣವನ್ನು ಸೇರಿಸಿ. ಪಾಲಕ್ ಚೆನ್ನಾಗಿ ಸೇರುವವರೆಗೆ 5 ನಿಮಿಷಗಳ ಕಾಲ ಬೇಯಿಸಿ. ಅದನ್ನು ಪಕ್ಕಕ್ಕೆ ಇರಿಸಿ ತಣ್ಣಗಾಗಲು ಬಿಡಿ.

ಇದನ್ನೂ ಓದಿ | Independence day 2024: ಮೈಸೂರಲ್ಲಿ ಓರಿಗಾಮಿ ಚೆಂಡು, ಪುನರ್‌ ಬಳಕೆ ವಸ್ತು ಬಳಸಿ ರಾಷ್ಟ್ರ ಧ್ವಜ ನಿರ್ಮಾಣ, ಪೂರ್ಣಚೇತನ ಶಾಲೆ ಮಕ್ಕಳ ದಾಖಲೆ

  • ಮೂರನೇ ಬಾಣಲೆಯಲ್ಲಿ 3 ಟೀಸ್ಪೂನ್ ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತರ ಅದಕ್ಕೆ ತುರಿದ ಕ್ಯಾರೆಟ್ ಸೇರಿಸಿ. ಕ್ಯಾರೆಟ್‌ನಲ್ಲಿರುವ ನೀರು ಆವಿಯಾಗುವವರೆಗೆ 10-15 ನಿಮಿಷಗಳ ಕಾಲ ಹುರಿಯಿರಿ.
  • ಈ ಮಿಶ್ರಣಕ್ಕೆ ಹಾಲಿ, ಏಲಕ್ಕಿ ಪುಡಿ ಮತ್ತು ಉಳಿದ ಬೆಲ್ಲದ ಸಿರಪ್ ಸೇರಿಸಿ.
  • ಕ್ಯಾರೆಟ್ ಬೇಯುವವರೆಗೆ ಚೆನ್ನಾಗಿ ಬೇಯಿಸಿ, ಮಿಶ್ರಣವು ದಪ್ಪಗಾಗುವಂತೆ ಮಾಡಿ. ಅದನ್ನು ತಣ್ಣಗಾಗಲು ಪಕ್ಕಕ್ಕೆ ಇರಿಸಿ.
  • ಸಮತಟ್ಟಾದ ತಟ್ಟೆಯಲ್ಲಿ ತೆಂಗಿನಕಾಯಿ ತುರಿಯನ್ನು ಹರಡಿ ಮತ್ತು ಎಲ್ಲಾ ಮೂರು ಮಿಶ್ರಣಗಳನ್ನು ಬಳಸಿ ಲಡ್ಡು ಮಾಡಿ.

ತ್ರಿವರ್ಣ ಬ್ರೆಡ್ ಪಕೋಡ

ಬೇಕಾಗುವ ಪದಾರ್ಥಗಳು

  • ಬ್ರೌನ್ ಬ್ರೆಡ್ / ಸ್ಯಾಂಡ್ವಿಚ್ ಬ್ರೆಡ್
  • ಹಸಿರು ಚಟ್ನಿ
  • ಮಯನೇಸ್
  • ಟೊಮೆಟೊ ಕೆಚಪ್
  • 2 ಕಪ್ ಕಡ್ಲೆಹಿಟ್ಟು
  • 1 ಟೀಸ್ಪೂನ್ ಅಡಿಗೆ ಸೋಡಾ
  • 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು
  • ಎಣ್ಣೆ (ಡೀಪ್‌ ಫ್ರೈ)

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ಅದರಲ್ಲಿ ಕಡ್ಲೆಹಿಟ್ಟು, ಮೆಣಸಿನ ಪುಡಿ, ಸೋಡಾ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಎಣ್ಣೆಗೆ ಬಿಡಲು ಅನುಕೂಲವಾಗುವಂತೆ ತಯಾರು ಮಾಡಿ. ಪ್ರತ್ಯೇಕವಾಗಿ, ಬ್ರೆಡ್ ಚೂರುಗಳನ್ನು ತೆಗೆದುಕೊಂಡು ಹಸಿರು ಚಟ್ನಿ, ಮಯನೇಸ್ ಮತ್ತು ಟೊಮೆಟೊ ಕೆಚಪ್ ಅನ್ನು ಹರಡಿ ಸ್ಯಾಂಡ್‌ವಿಚ್‌ಗಳನ್ನು ರೆಡಿ ಮಾಡಿ. ನಂತರ, ಸ್ಯಾಂಡ್‌ವಿಚ್‌ಗಳನ್ನು ಕಡ್ಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ