logo
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ಬಾರಿ 4 ಸಾಧನಗಳಲ್ಲಿ ವಾಟ್ಸಪ್‌ ಖಾತೆ ಬಳಸುವುದು ಹೇಗೆ? ಮಲ್ಟಿ ಡಿವೈಸ್‌ ಸಪೋರ್ಟ್‌ ಮಾರ್ಗದರ್ಶಿ

ಒಂದೇ ಬಾರಿ 4 ಸಾಧನಗಳಲ್ಲಿ ವಾಟ್ಸಪ್‌ ಖಾತೆ ಬಳಸುವುದು ಹೇಗೆ? ಮಲ್ಟಿ ಡಿವೈಸ್‌ ಸಪೋರ್ಟ್‌ ಮಾರ್ಗದರ್ಶಿ

Praveen Chandra B HT Kannada

Oct 28, 2024 01:19 PM IST

google News

ವಾಟ್ಸಪ್‌ ಮಲ್ಟಿ ಡಿವೈಸ್‌ ಸಪೋರ್ಟ್‌

  • ಒಂದೇ ಬಾರಿ ನಾಲ್ಕು ಸಾಧನಗಳಲ್ಲಿ ವಾಟ್ಸಪ್‌ ಅಕೌಂಟ್‌ ಬಳಸಲು ಬಯಸುವಿರಾ? ವಾಟ್ಸಪ್‌ ಮಲ್ಟಿ ಡಿವೈಸ್‌ ಸಪೋಟ್‌ ಸೆಟಪ್‌ ಮಾಡುವುದು ಹೇಗೆ? ಎಂದು ತಿಳಿಯಿರಿ. ಒಂದು ಖಾತೆಯನ್ನು ಹಲವು ಮೊಬೈಲ್‌ಗಳಲ್ಲಿ, ಕಂಪ್ಯೂಟರ್‌ಗಳಲ್ಲಿ, ಲ್ಯಾಪ್‌ಟಾಪ್‌ಗಳಲ್ಲಿ ಬಳಸಬಹುದು.

ವಾಟ್ಸಪ್‌ ಮಲ್ಟಿ ಡಿವೈಸ್‌ ಸಪೋರ್ಟ್‌
ವಾಟ್ಸಪ್‌ ಮಲ್ಟಿ ಡಿವೈಸ್‌ ಸಪೋರ್ಟ್‌ (Pixabay)

ವಾಟ್ಸಪ್‌ ತನ್ನ ತಂತ್ರಜ್ಞಾನಗಳನ್ನು ಅಪ್‌ಡೇಟ್‌ ಮಾಡುತ್ತಿದೆ. ಈ ಮೂಲಕ ಬಳಕೆದಾರರ ಯೂಸರ್‌ ಎಕ್ಸ್‌ಪಿರಿಯೆನ್ಸ್‌ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದೀಗ ವಾಟ್ಸಪ್‌ ಮಲ್ಟಿ ಡಿವೈಸ್‌ ಸಪೋರ್ಟ್‌ ಪರಿಚಯಿಸಿದೆ. ಈ ಮೂಲಕ ಒಂದು ವಾಟ್ಸಪ್‌ ಅಕೌಂಟ್‌ ಅನ್ನು ಹಲವು ಸಾಧನಗಳಲ್ಲಿ ಒಂದೇ ಬಾರಿ ಲಿಂಕ್‌ ಮಾಡಬಹುದು. ಈಗಾಗಲೇ ಕಂಪ್ಯೂಟರ್‌ ಮತ್ತು ಮೊಬೈಲ್‌ನಲ್ಲಿ ಬಳಸಬಹುದು. ಇದೀಗ ಮಲ್ಟಿ ಡಿವೈಸ್‌ ಸಪೋರ್ಟ್‌ ಮೂಲಕ ಒಂದೇ ಬಾರಿ ನಾಲ್ಕು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದು.

ಇದಕ್ಕೂ ಮೊದಲು ಹಲವು ಫೋನ್‌ಗಳಲ್ಲಿ ಒಂದು ವಾಟ್ಸಪ್‌ ಬಳಸು ಪ್ರತ್ಯೇಕ ವಾಟ್ಸಪ್‌ ಫೋನ್‌ ನಂಬರ್‌ಗಳ ಅಗತ್ಯವಿತ್ತು. 2024ರ ಅಪ್‌ಡೇಟ್‌ನಲ್ಲಿ ಒಂದೇ ವಾಟ್ಸಪ್‌ ನಂಬರ್‌ ಮೂಲಕ ಹಲವು ಸಾಧನಗಳಲ್ಲಿ ಒಂದೇ ಬಾರಿ ಬಳಸಬಹುದು. ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಒಂದೆರಡು ಮೊಬೈಲ್‌ ಫೋನ್‌ಗಳಲ್ಲಿ ಒಂದೇ ವಾಟ್ಸಪ್‌ ಅಕೌಂಟ್‌ ಬಳಸಬಹುದು. ಇದಕ್ಕೆ ಕಂಪೇನಿಯನ್‌ ಮೋಡ್‌ ಎಂದು ಹೆಸರು. ಎಲ್ಲಾ ಸಾಧನಗಳಲ್ಲಿ ವಾಟ್ಸಪ್‌ ಆಕ್ಟಿವ್‌ ಆಗಿರಬೇಕಿದ್ದರೆ ಪ್ರೈಮರಿ ಸಾಧನ ಆಕ್ಟಿವ್‌ ಆಗಿರಬೇಕು.

ಮಲ್ಟಿ ಡಿವೈಸ್‌ ಸಪೋರ್ಟ್‌ ಸೆಟಪ್‌ ಮಾಡುವುದು ಹೇಗೆ?

ಒಂದು ವಾಟ್ಸಪ್‌ ಅಕೌಂಟ್‌ ಅನ್ನು ಹಲವು ಸಾಧನಗಳನ್ನು ಬಳಸಲು ಬಯಸಿದರೆ ಈ ಮುಂದಿನ ಹಂತಗಳನ್ನು ಪಾಲಿಸಿ.

1. ಕಂಪ್ಯೂಟರ್‌ಗೆ ಲಿಂಕ್‌ಮಾಡುವುದು ಹೇಗೆ?: ಮೊದಲಿಗೆ ವಿಂಡೋಸ್‌ ಕಂಪ್ಯೂಟರ್‌ಗಾಗಿ ಇರುವ ವಾಟ್ಸಪ್‌ ಡೆಸ್ಕ್‌ಟಾಪ್‌ ಅಪ್ಲಿಕೇಷನ್‌ಗೆ ಕ್ಯೂಆರ್‌ ಕೋಡ್‌ ಮೂಲಕ ಕನೆಕ್ಟ್‌ ಆಗಿ. ಈಗಾಗಲೇ ವಾಟ್ಸಪ್‌ ವೆಬ್‌ ಅಥವಾ ವೆಬ್‌ಅಪ್ಲಿಕೇಷನ್‌ ಮೂಲಕ ಬಹುತೇಕರು ಈ ವಿಧಾನ ಅನುಸರಿಸುತ್ತಾರೆ.

2. ಮತ್ತೊಂದು ಫೋನ್‌ಗೆ ಲಿಂಕ್‌ ಮಾಡುವುದು ಹೇಗೆ?: ಮತ್ತೊಂದು ಫೋನ್‌ನಲ್ಲಿ ವಾಟ್ಸಪ್‌ ಇನ್‌ಸ್ಟಾಲ್‌ ಮಾಡಿ. ಇನ್‌ಸ್ಟಾಲ್‌ ಮಾಡಿದ ಬಳಿಕ ಪ್ರೈವೇಸಿ ಪಾಲಿಸಿಗಳಿಗೆ ಅನುಮತಿ ನೀಡಿ. ಮೆನುವಿಗೆ ಹೋಗಲು ಮೇಲ್ಬಾಗದಲ್ಲಿರುವ ಮೂರು ಚುಕ್ಕಿಗಳನ್ನು ಒತ್ತಿರಿ. ಅಲ್ಲಿ ಕಂಪೇನಿಯನ್‌ ಡಿವೈಸ್‌ಗೆ ಈ ಫೋನ್‌ ಅನ್ನು ಲಿಂಕ್‌ಮಾಡಿ ಆಯ್ಕೆಯನ್ನು ಕ್ಲಿಕ್‌ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಪ್ರಾಥಮಿಕ ಫೋನ್‌ನಲ್ಲಿ ಒಂದು ಕ್ಯೂಆರ್‌ ಕೋಡ್‌ ಪ್ರಾಂಪ್ಟ್‌ ಆಗುತ್ತದೆ. ಸ್ಕ್ಯಾನ್‌ ಮಾಡಿ ಮುಂದುವರೆಯಿರಿ. ಈ ಹಂತ ಮುಗಿದ ಬಳಿಕ ಮತ್ತೊಂದು ಫೋನ್‌ನಲ್ಲಿ ವಾಟ್ಸಪ್‌ ಬಳಸಬಹುದು.

ಇದೇ ರೀತಿ ಇನ್ನಷ್ಟು ಹಲವು ಫೋನ್‌ಗಳು, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳಲ್ಲಿ ಒಂದೇ ವಾಟ್ಸಪ್‌ ಖಾತೆಯನ್ನು ಬಳಸಬಹುದು.

ಈ ರೀತಿ ಕಂಪೇನಿಯನ್‌ ಮೋಡ್‌ನಲ್ಲಿ ಕೆಲವು ಮಿತಿಗಳಿವೆ. ಈ ಕಂಪೇನಿಯನ್‌ ಮೋಡ್‌ ಮೂಲಕ ಸ್ಟೇಟಸ್‌ ಅಪ್‌ಡೇಟ್‌ ಮಾಡಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಲೈವ್‌ ಲೊಕೆಷನ್‌ ಹಂಚಿಕೊಳ್ಳಲು ಬಳಸಲು ಸಾಧ್ಯವಿಲ್ಲ. ನಿಮ್ಮ ಪ್ರಾಥಮಿಕ ಫೋನ್‌ ಇಂಟರ್‌ನೆಟ್‌ಗೆ ಸುಮಾರು 14 ದಿನಗಳ ಕಾಲ ಕನೆಕ್ಟ್‌ ಆಗಿಲ್ಲದಿದ್ದರೆ ಲಿಂಕ್‌ ಆಗಿರುವ ಎಲ್ಲಾ ಸಾಧನಗಳ ವಾಟ್ಸಪ್‌ ಡಿಸ್‌ಕನೆಕ್ಟ್‌ ಆಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ