Whatsapp new features: ವಾಟ್ಸಪ್‌ನಿಂದ ಹೊಸ ಚಾಟ್‌ ಮೆಮೊರಿ ಫೀಚರ್‌; ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತೆ ಮೆಟಾ ಎಐ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Whatsapp New Features: ವಾಟ್ಸಪ್‌ನಿಂದ ಹೊಸ ಚಾಟ್‌ ಮೆಮೊರಿ ಫೀಚರ್‌; ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತೆ ಮೆಟಾ ಎಐ

Whatsapp new features: ವಾಟ್ಸಪ್‌ನಿಂದ ಹೊಸ ಚಾಟ್‌ ಮೆಮೊರಿ ಫೀಚರ್‌; ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತೆ ಮೆಟಾ ಎಐ

whatsapp new features: ವಾಟ್ಸಪ್‌ನಲ್ಲಿ ಹೊಸ ಫೀಚರ್‌ ಶೀಘ್ರದಲ್ಲಿ ಆಗಮಿಸುವ ಸೂಚನೆ ಇದೆ. ವರದಿಗಳ ಪ್ರಕಾರ ಚಾಟ್‌ ಮೆಮೊರಿ ಎಂಬ ಹೊಸ ಮೆಟಾ ಎಐ ಆಗಮಿಸುವ ಸೂಚನೆ ಇದೆ. ಇದು ಹೇಗೆ ಕೆಲಸ ಮಾಡುತ್ತೆ, ಈ ಫೀಚರ್‌ನಿಂದ ಏನು ಪ್ರಯೋಜನ ತಿಳಿಯೋಣ ಬನ್ನಿ.

ವಾಟ್ಸಪ್‌ ಹೊಸ ಫೀಚರ್‌ಗಳ ಮಾಹಿತಿ
ವಾಟ್ಸಪ್‌ ಹೊಸ ಫೀಚರ್‌ಗಳ ಮಾಹಿತಿ (WhatsApp )

whatsapp new features: ವಾಟ್ಸಪ್‌ನಲ್ಲಿ ಬಹುತೇಕರು ಎಐ ಚಾಲಿತ ಚಾಟ್‌ಬೂಟ್‌ ಅನ್ನು ಎಲ್ಲರೂ ಬಳಸುತ್ತಿದ್ದಾರೆ. ಮೆಟಾ ಎಐ ಹೆಸರಿನ ಈ ಫೀಚರ್‌ನಲ್ಲಿ ಸಾಕಷ್ಟು ಪ್ರಯೋಜನವಿದೆ. ಇದೀಗ ಕಂಪನಿಯು ಮೆಟಾ ಎಐನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾದ ಫೀಚರ್‌ಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ವರದಿಗಳ ಪ್ರಕಾರ ವಾಟ್ಸಪ್‌ ಮೆಟಾ ಎಐಗೆ ಹೊಸ ಚಾಟ್‌ ಮೆಮೊರಿ ಫೀಚರ್‌ ಪರಿಚಯಿಸಲಿದೆಯಂತೆ. ಬಳಕೆದಾರರ ಈ ಹಿಂದಿನ ಚಾಟ್‌ ಇತಿಹಾಸ ನೆನಪಿಸಿಕೊಂಡು ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡಲಿದೆಯಂತೆ.

ಮೆಟಾ ಎಐ ಚಾಟ್‌ ಮೆಮೊರಿ ಫೀಚರ್‌ ಬಗ್ಗೆ

ವಾಬೀಟಾಇನ್ಫೋ ವರದಿ ಪ್ರಕಾರ ವಾಟ್ಸಪ್‌ ಎಐ ಚಾಲಿತ ಚಾಟ್‌ ಮೆಮೊರಿ ಫೀಚರ್‌ ಅಭಿವೃದ್ಧಿಪಡಿಸುತ್ತಿದೆ. ಚಾಟ್‌ ಮೆಮೊರಿಯು ಈ ಹಿಂದಿನ ಚಾಟಿಂಗ್‌, ಮಾತುಕತೆಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಬಳಕೆದಾರರ ವೈಯಕ್ತಿಕ ಮಾಹಿತಿ, ಹುಟ್ಟುಹಬ್ಬಗಳು, ಶಿಫಾರಸುಗಳು, ಶೆಡ್ಯೂಲ್‌ಗಳು ಸೇರಿದಂತೆ ಹಲವು ಅಂಶಗಳನ್ನು ನೆನಪಿಸಿಕೊಂಡು ಆಯಾ ಸಮಯಕ್ಕೆ ನೆನಪಿಸಲು ನೆರವಾಗುತ್ತದೆ.

"ಮೆಟಾ ಎಐನ ಹೊಸ ಫೀಚರ್‌ನಿಂದ ಸಲಹೆ, ಪ್ರತಿಕ್ರಿಯೆ, ರೆಕಮಂಡೇಷನ್‌ ದೊರಕುತ್ತದೆ. ಇದು ಬಳಕೆದಾರರ ನಿತ್ಯ ಚಟುವಟಿಕೆ ಮತ್ತು ಜೀವನಶೈಲಿ ಮತ್ತು ವಾಟ್ಸಪ್‌ ಬಳಕೆಯನ್ನು ಇನ್ನಷ್ಟು ಸರಳಗೊಳಿಸುತ್ತದೆ" ವಾಬೀಟಾಇನ್ಫೋ ವರದಿ ತಿಳಿಸಿದೆ. ಈ ಹಿಂದೆ ಹಲವು ಜನರ ಜತ ಮಾಡಿರುವ ಚಾಟಿಂಗ್‌ನಲ್ಲಿರುವಂತಹ ಪ್ರಮುಖ ಅಂಶಗಳನ್ನು ಇದು ನೆನಪಿನಲ್ಲಿಟ್ಟುಕೊಳ್ಳುತ್ತದೆಯಂತೆ. ಈ ಹಿಂದಿನ ಹುಟ್ಟುಹಬ್ಬದ ಶುಭಾಶಯಗಳನ್ನು ನೆನಪಿಟ್ಟುಕೊಂಡು ಮುಂದಿನ ವರ್ಷ ಅದೇ ಸಮಯಕ್ಕೆ ವಿಷ್‌ ಮಾಡಲು ಇದು ನೆರವಾಗಬಹುದು. ಆತ್ಮೀಯರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸದೆ ಬೈಸಿಕೊಳ್ಳುವುದು ಇದರಿಂದ ತಪ್ಪಲಿದೆ. ಇದೇ ರೀತಿ ನಾಳೆ ಮೀಟಿಂಗ್‌ ಇದೆ ಎಂದು ಯಾರಾದರೂ ಚಾಟ್‌ ಮಾಡಿದ್ದರೆ ನಿಮಗೆ ಆ ಮೀಟಿಂಗ್‌ ನೆನಪಿಸಿಕೊಳ್ಳಲು ಆ ಫೀಚರ್‌ ನೆರವಾಗಬಹುದು. ಈ ಫೀಚರ್‌ ಬಿಡುಗಡೆಯಾದ ಬಳಿಕ ಅದರಲ್ಲಿ ನಿಜವಾಗಿಯೂ ಏನೇನು ಇರಲಿದೆ ಎಂದು ತಿಳಿಯಲಿದೆ.

ಈಗ ಸಾಕಷ್ಟು ಜನರು ಮೆಟಾ ಎಐ ಫೀಚರ್‌ನಿಂದ ನಮ್ಮ ಖಾಸಗಿತನದ ಗತಿಯೇನು ಎಂದು ಯೋಚಿಸಬಹುದು. ಹೊಸ ಫೀಚರ್‌ನಲ್ಲಿ ಇದಕ್ಕೂ ಉತ್ತರ ಇರಲಿದೆ. ಯಾವ ಮಾಹಿತಿ ಸೇವ್‌ ಆಗಿರಬೇಕು ಎಂಬುದಕ್ಕೂ ನಿಯಂತ್ರಣ ಇರಲಿದೆ. ಸೇವ್‌ ಆಗಿರುವ ವಿವರವನ್ನು ನೋಡಲು, ಡಿಲೀಟ್‌ ಮಾಡಲು, ಪರಿಶೀಲಿಸಲು ಅವಕಾಶ ಇರುವ ಸೂಚನೆ ಇದೆ.

ಮೆಟಾ ಎಐ ಚಾಟ್‌ ಮೆಮೊರಿ ಫೀಚರ್‌ ಈಗ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ಅಪ್‌ಡೇಟ್‌ ಸಮಯದಲ್ಲಿ ಆಗಮಿಸುವ ಸೂಚನೆ ಇದೆ. ಇದೇ ಸಮಯದಲ್ಲಿ ವಾಟ್ಸಪ್‌ ಇನ್ನಷ್ಟು ಹೊಸ ಫೀಚರ್‌ಗಳನ್ನು ಪರಿಚಯಿಸಲಿದೆ. ವಾಯ್ಸ್‌ ಚಾಟ್‌ ಎಂಬ ಹೊಸ ಫೀಚರ್‌ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.