logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಟಿಎಂನಲ್ಲಿ ಆಧಾರ್‌ ಸಂಖ್ಯೆ ಬಳಸಿ ಹಣ ವಿತ್‌ಡ್ರಾ ಮಾಡುವುದು ಹೇಗೆಂದು ಗೊತ್ತೆ? ಈ ವಿಧಾನ ಅನುಸರಿಸಿ

ಎಟಿಎಂನಲ್ಲಿ ಆಧಾರ್‌ ಸಂಖ್ಯೆ ಬಳಸಿ ಹಣ ವಿತ್‌ಡ್ರಾ ಮಾಡುವುದು ಹೇಗೆಂದು ಗೊತ್ತೆ? ಈ ವಿಧಾನ ಅನುಸರಿಸಿ

Praveen Chandra B HT Kannada

Oct 20, 2024 01:09 PM IST

google News

Aadhaar Micro ATM & AEPS: ಎಟಿಎಂನಲ್ಲಿ ಆಧಾರ್‌ ಸಂಖ್ಯೆ ಬಳಸಿ ಹಣ ವಿತ್‌ಡ್ರಾ ಮಾಡುವುದು ಹೇಗೆ

    • Aadhaar Micro ATM and AEPS: ಈಗ ದೇಶದ ಹಲವು ಕಡೆ ಆಧರ್‌ ಮೈಕ್ರೊ ಎಟಿಎಂ ಮತ್ತು ಎಇಪಿಎಸ್‌ ಅಳವಡಿಸಲಾಗಿದೆ. ಆಧಾರ್‌ ಎನೇಬಲ್ಡ್‌ ಪೇಮೆಂಟ್‌ ಸಿಸ್ಟಮ್‌ (ಎಇಪಿಎಸ್‌) ಮೂಲಕ ಸುಲಭವಾಗಿ ನಗದು ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯವಿದೆ.
Aadhaar Micro ATM & AEPS:  ಎಟಿಎಂನಲ್ಲಿ ಆಧಾರ್‌ ಸಂಖ್ಯೆ ಬಳಸಿ ಹಣ ವಿತ್‌ಡ್ರಾ  ಮಾಡುವುದು ಹೇಗೆ
Aadhaar Micro ATM & AEPS: ಎಟಿಎಂನಲ್ಲಿ ಆಧಾರ್‌ ಸಂಖ್ಯೆ ಬಳಸಿ ಹಣ ವಿತ್‌ಡ್ರಾ ಮಾಡುವುದು ಹೇಗೆ

Aadhaar Micro ATM & AEPS: ಈಗ ಭಾರತದಲ್ಲಿ ಡಿಜಿಟಲ್‌ ಹಣ ವರ್ಗಾವಣೆ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಂಗಡಿಗೆ ಹೋಗಿ ಹಣ ಪಾವತಿಸುವುದು ಇರಬಹುದು, ಕರೆಂಟ್‌ ಬಿಲ್‌, ಮೊಬೈಲ್‌ ಬಿಲ್‌ ಪಾವತಿ, ಆನ್‌ಲೈನ್‌ ಖರೀದಿ ಎಲ್ಲದಕ್ಕೂ ಡಿಜಿಟಲ್‌ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಹಿಂದೆ ಜನರು ಬ್ಯಾಂಕ್‌ಗಳಿಗೆ ಅಥವಾ ಎಟಿಎಂಗಳಿಗೆ ಹೋಗಿ ಹಣ ಪಡೆಯುತ್ತಿದ್ದರು. ಇದೀಗ ಜನರು ಇನ್ನಷ್ಟು ಸುಲಭವಾ ವಿಧಾನವನ್ನು ಬಳಸಬಹುದು. ಅದೇ, ಆಧಾರ್‌ ಕಾರ್ಡ್‌ ಬಳಸಿ ಹಣ ವಿತ್‌ಡ್ರಾ ಮಾಡಿಕೊಳ್ಳುವುದು. ಇದಕ್ಕಾಗಿ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಆಧಾರ್‌ ಚಾಲಿತ ಪಾವತಿ ವ್ಯವಸ್ಥೆ (ಎಇಪಿಎಸ್‌) ಎಂಬ ಸೇವೆಯನ್ನು ಆರಂಭಿಸಿದೆ.

ಎಇಪಿಎಸ್‌ ಮೂಲಕ ಬಳಕೆದಾರರರು ತಮ್ಮ ಆಧಾರ್‌ ಸಂಖ್ಯೆ ಮತ್ತು ಬಯೋಮೆಟ್ರಿಕ್‌ ದೃಢೀಕರಣದ ಮೂಲಕ ಬ್ಯಾಂಕಿಂಗ್‌ ವಹಿವಾಟು ನಡೆಸಬಹುದು. ಆಧಾರ್‌ ಕಾರ್ಡ್‌ ಕೈಯಲ್ಲಿ ಇಲ್ಲದೆ ಇದ್ದರೂ ಕೇವಲ ಆಧಾರ್‌ ಸಂಖ್ಯೆ ಬಳಕೆ ಮಾಡಿ ಹಣ ವಿತ್‌ಡ್ರಾ ಮಾಡಬಹುದು. ಎಇಪಿಎಸ್‌ನಲ್ಲಿ ಹಣ ವಿತ್‌ಡ್ರಾ, ಬ್ಯಾಲೆನ್ಸ್‌ ನೋಡುವುದು, ಹಣ ವರ್ಗಾವಣೆ ಇತ್ಯಾದಿ ಕಾರ್ಯಗಳನ್ನು ಮೂಲಕ ಮಾಡಬಹುದು. ಈ ವ್ಯವಹಾರವನ್ನು ಮೈಕ್ರೊ ಎಟಿಎಂಗಳು ಅಥವಾ ಇತರೆ ಬ್ಯಾಂಕಿಂಗ್‌ ಏಜೆಂಟ್‌ ನೆರವಿನಿಂದ ಮಾಡಬಹುದು.

ಆಧಾರ್‌ ನಂಬರ್‌ ಮೂಲಕ ಎಟಿಎಂನಿಂದ ಹಣ ಪಡೆಯುವುದು ಹೇಗೆ?

ಮೊದಲಿಗೆ ಮೈಕ್ರೊ ಎಟಿಎಂಗೆ ಹೋಗಿ. ಕರ್ನಾಟಕದಲ್ಲೂ ಸಾಕಷ್ಟು ಮೈಕ್ರೊ ಎಟಿಎಂಗಳಿವೆ. ಎಇಪಿಎಸ್‌ ಬೆಂಬಲ ನೀಡುವು ಬ್ಯಾಂಕಿಂಗ್‌ ಏಜೆಂಟ್‌ ಅಥವಾ ಮೈಕ್ರೊ ಎಟಿಎಂ ಹುಡುಕಿ. ಇಂತಹ ಎಟಿಎಂಗಳನ್ನು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊಬೈಲ್‌ ಬ್ಯಾಂಕಿಂಗ್‌ ಸೇವೆ ನೀಡುವ ಬ್ಯಾಂಕ್‌ಗಳು ಕೂಡ ಇಂತಹ ಎಇಎಂಎಸ್‌ಗಳನ್ನು ಸ್ಥಾಪಿಸುತ್ತಿವೆ.

  1. ಮೈಕ್ರೊ ಎಟಿಎಂನಲ್ಲಿ ನಿಮ್ಮ 12 ಸಂಖ್ಯೆಗಳ ಆಧಾರ್‌ ಸಂಖ್ಯೆ ನಮೂದಿಸಿ. ಮುಂದುವರೆಯಿರಿ.
  2. ಫಿಂಗರ್‌ಪ್ರಿಂಟ್‌ ದೃಢೀಕರಣ ಮಾಡಿ. ಅಲ್ಲಿರುವ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ನಲ್ಲಿ ಬಯೋಮೆಟ್ರಿಕ್‌ ದೃಢೀಕರಣ ಮಾಡಿ. ನಿಮ್ಮ ಆಧಾರ್‌ ಕಾರ್ಡ್‌ನ ಬೆರಳಚ್ಚು ದಾಖಲೆ ಜತೆ ಹೋಲಿಕೆ ಮಾಡಲಾಗುತ್ತದೆ.
  3. ಟ್ರಾನ್ಸಕ್ಷನ್‌ ಟೈಪ್‌ ಆಯ್ಕೆ ಮಾಡಿ. ದೃಢೀಕರಣ ಯಶಸ್ಸಾದ ಬಳಿಕ ಕ್ಯಾಶ್‌ ವಿತ್‌ಡ್ರಾವಲ್‌ ಆಯ್ಕೆ ಮಾಡಿ.
  4. ಎಷ್ಟು ಹಣವೆಂದು ನಮೂದಿಸಿ. ಬ್ಯಾಂಕ್‌ ನಿಗದಿಪಡಿಸಿದ ಮಿತಿಯಷ್ಟೇ ಹಣ ತೆಗೆಯಲು ಸಾಧ್ಯವಾಗುತ್ತದೆ.
  5. ಹಣ ದೊರಕಿದ ನಿಮಗೆ ಎಸ್‌ಎಂಎಸ್‌ ಬರುತ್ತದೆ. ಅದನ್ನು ಖಚಿತಪಡಿಸಿ.

ಇದನ್ನೂ ಓದಿ: ಮನೆಯಲ್ಲಿ ಇದ್ದರೆ ಚಿನ್ನ, ಚಿಂತೆಯೂ ಏಕೆ ಅಣ್ಣಾ... ಗೂಗಲ್‌ ಪೇ ಯುಪಿಐನಲ್ಲಿ ಚಿನ್ನ ಅಡವಿಡಬಹುದು ಕಣಣ್ಣಾ...!

ಎಇಪಿಎಸ್‌ ವಿತ್‌ಡ್ರಾ ಲಿಮಿಟ್‌ ಎಷ್ಟು?

ಆಧಾರ್‌ ಸಂಖ್ಯೆ ಬಳಸಿ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ಇರುವ ಪ್ರತಿದಿನದ ಮಿತಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸ ಇರುತ್ತದೆ. ಅಂದರೆ, 10 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿವರೆಗೆ ವಿವಿಧ ಬ್ಯಾಂಕ್‌ಗಳಲ್ಲಿ ಮಿತಿ ವ್ಯತ್ಯಾಸ ಇರಬಹುದು. ಕೆಲವು ಬ್ಯಾಂಕ್‌ಗಳು ಭದ್ರತಾ ಕಾರಣಗಳಿಂದ ಎಇಪಿಎಸ್‌ ಸೇವೆ ನೀಡದೆ ಇರಬಹುದು.

ಎಇಪಿಎಸ್‌ ಸೌಲಭ್ಯವು ಬ್ಯಾಂಕಿಂಗ್‌ ಸೇವೆ ಸಮರ್ಪಕವಾಗಿರದೆ ಇರುವ ಗ್ರಾಮೀಣ ಪ್ರದೇಶಗಳಿಗೆ ವರದಾನವಾಗಲಿದೆ. ಜನರಿಗೆ ತುರ್ತು ಸಂದರ್ಭದಲ್ಲಿ ಹಣ ಬೇಕಾದಗ ಆಧಾರ್‌ ಸಂಖ್ಯೆ ಬಳಸಿ ಹಣ ಪಡೆಯಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ