ಮನೆಯಲ್ಲಿ ಇದ್ದರೆ ಚಿನ್ನ, ಚಿಂತೆಯೂ ಏಕೆ ಅಣ್ಣಾ... ಗೂಗಲ್ ಪೇ ಯುಪಿಐನಲ್ಲಿ ಚಿನ್ನ ಅಡವಿಡಬಹುದು ಕಣಣ್ಣಾ...!
ಗೂಗಲ್ ಪೇ ಈಗ ಯುಪಿಐ ಹಣ ವರ್ಗಾವಣೆಗ ಮಾತ್ರ ಸೀಮಿತವಾಗಿಲ್ಲ. ಚಿನ್ನ ಅಡವಿಟ್ಟು ಹಣ ಸಾಲ ಪಡೆಯುವ ಅವಕಾಶ ಸೇರಿದಂತೆ ಹಲವು ಫೀಚರ್‌ಗಳು ಗೂಗಲ್ ಪೇಗೆ ಸೇರ್ಪಡೆಯಾಗುತ್ತಿದೆ. ಚಿನ್ನದ ಮೇಲಿನ ಸಾಲಕ್ಕಾಗಿ ಇದೀಗ ಗೂಗಲ್ ಪೇ ಮತ್ತು ಮುತ್ತೂಟ್ ಫೈನಾನ್ಸ್ ಮೈತ್ರಿ ಮಾಡಿಕೊಂಡಿವೆ.
ಬೆಂಗಳೂರು: ಗೂಗಲ್ ಪೇಯಲ್ಲಿ ಅನೇಕ ವ್ಯವಹಾರಗಳನ್ನು ನಡೆಸಬಹುದು. ಚಿನ್ನದ ನಾಣ್ಯಗಳನ್ನು ಖರೀದಿಸಬಹುದು. ರೈಲು ಟಿಕೆಟ್ ಸೇರಿದಂತೆ ಅನೇಕ ಸೇವೆಗಳನ್ನು ಪಡೆಯಬಹುದು. ಸಾಲ ನೀಡುವ ವ್ಯವಸ್ಥೆಯೂ ಗೂಗಲ್ ಪೇಯಲ್ಲಿದೆ. ಇದೀಗ ಗೂಗಲ್ ಕಂಪನಿಯು ಮುತ್ತೂಟ್ ಫೈನಾನ್ಸ್ ಜತೆ ಮೈತ್ರಿ ಮಾಡಿಕೊಂಡಿದೆ. "ಮನೆಯಲ್ಲಿ ಇದ್ದರೆ ಚಿನ್ನ, ಚಿಂತೆಯೂ ಏಕೆ ಅಣ್ಣಾ... ಗೂಗಲ್ ಪೇ ಮೂಲಕ ಸಾಲ ಪಡೆಯಬಹುದಣ್ಣ" ಎಂಬಂತೆ ಸಾಕಷ್ಟು ಜನರಿಗೆ ಮೈತ್ರಿ ನೆರವಾಗಲಿವೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಸಾಲ ಸೌಲಭ್ಯ ಪಡೆಯಲು ಈ ಫೀಚರ್ ನೆರವಾಗಲಿದೆ.
ಗೂಗಲ್ ತನ್ನ ಮೊಬೈಲ್ ಪಾವತಿ ಸೇವೆ ಜಿಪೇಮೂಲಕ ಚಿನ್ನದ ಬೆಂಬಲಿತ ಸಾಲಗಳನ್ನು ಒದಗಿಸಲು ಮುತ್ತೂಟ್ ಫೈನಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದೇ ಸಮಯದಲ್ಲಿ ಗೂಗಲ್ ಜೆಮಿನಿ ಲೈವ್ ಹಿಂದಿಯಲ್ಲಿ ಲಭ್ಯವಿರುತ್ತದೆ. ಕನ್ನಡ ಸೇರಿದಂತೆಎಂಟು ಭಾರತೀಯ ಭಾಷೆಗಳನ್ನು ಸೇರಿಸಲಾಗುವುದು ಎಂದು ಗೂಗಲ್ ಘೋಷಿಸಿದೆ.
ಮುತ್ತೂಟ್ ಫೈನಾನ್ಸ್‌ನ ಸಹಯೋಗದೊಂದಿಗೆ ಚಿನ್ನದ ಬೆಂಬಲಿತ ಸುರಕ್ಷಿತ ಸಾಲಗಳನ್ನು ಪರಿಚಯಿಸುವ ಮೂಲಕ ಗೂಗಲ್ ಪೇ ತನ್ನ ಕೊಡುಗೆಗಳನ್ನು ವಿಸ್ತರಿಸುತ್ತಿದೆ. "ವಿಶ್ವದ ಶೇಕಡಾ 11 ರಷ್ಟು ಚಿನ್ನವು ಭಾರತದಲ್ಲಿದೆ. ಚಿನ್ನದ ಮೇಲೆ ಸಾಲ ಪಡೆಯುವ ಅವಕಾಶವನ್ನು ವಿಸ್ತರಿಸಲಾಗುತ್ತಿದೆ" ಎಂದು ಗೂಗಲ್ ಇಂಡಿಯಾ ಎಂಡಿ ರೋಮಾ ದತ್ತಾ ಚೋಬೆ ಹೇಳಿದ್ದಾರೆ.
ಭಾರತದಾದ್ಯಂತ ಜನರು ಈಗ ಈ ಕ್ರೆಡಿಟ್ ಉತ್ಪನ್ನವನ್ನು ಪ್ರವೇಶಿಸಬಹುದು, ಕೈಗೆಟುಕುವ ಬಡ್ಡಿ ದರಗಳ ಮೂಲಕ ಸಾಲ ಪಡೆಯಬಹುದು. ಇದರಿಂದ ಸಾಲಗಾರನಿಗೆ ಸರಳ ಆಯ್ಕೆಗಳು ಮತ್ತು ಸಾಲದಾತನಿಗೆ ಭದ್ರತೆಯನ್ನು ಒದಗಿಸುತ್ತದೆ ಎಂದು ಗೂಗಲ್ ಹೇಳಿದೆ. ಇಷ್ಟು ಮಾತ್ರವಲ್ಲದೆ ಗೂಗಲ್ ಪೇಯಲ್ಲಿ ಎಐ ಚಾಲಿತ ಮಾರ್ಗದರ್ಶಿ ಇರಲಿದೆ. ಇದರಿಂದ ಗೂಗಲ್ ಪೇ ಬಳಕೆದಾರರು ಸಾಲ ಮರುಪಾವತಿ ಅವಧಿಗಳು, ಅರ್ಹತೆಯ ಮಾನದಂಡಗಳು, ಇಎಂಐಗಳು, ಸಾಲ ಪಡೆಯಲು ಷರತ್ತುಗಳು, ನಿಯಮಗಳು ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆಯಬಹುದು.
ಆದಿತ್ಯಾ ಬಿರ್ಲಾ ಫೈನಾನ್ಸ್ ಲಿಮಿಟೆಡ್ ಅನ್ನು ತನ್ನ ಪೋರ್ಟ್‌ಪೋಲಿಯೋಗೆ ಸೇರಿಸಿಕೊಂಡಿದೆ. ಮುತ್ತೂಟ್ ಫೈನಾನ್ಸ್ ಅನ್ನು ಗೂಗಲ್ ತನ್ನ ಗೂಗಲ್ ಪೇಗೆ ಸೇರಿಸಿಕೊಂಡಿದೆ. ಈ ಮೂಲಕ ಗ್ರಾಹಕರು ಸಾಲ ಅಡವಿಟ್ಟು ಸಾಲ ಪಡೆಯಬಹುದು. ವಿಶೇಷವಾಗಿ ಗ್ರಾಮೀಣ ಭಾರತದ ಜನರಿಗೆ ಇದು ನೆರವಾಗಲಿದೆ ಎಂದು ಗೂಗಲ್ ತಿಳಿಸಿದೆ.