logo
ಕನ್ನಡ ಸುದ್ದಿ  /  ಜೀವನಶೈಲಿ  /  Mobile Recharge Plans: 365 ದಿನಕ್ಕೆ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವಿಗಳಲ್ಲಿ ಯಾವ ವಾರ್ಷಿಕ ರಿಚಾರ್ಜ್‌ ಯೋಜನೆ ಉತ್ತಮ?

Mobile Recharge Plans: 365 ದಿನಕ್ಕೆ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವಿಗಳಲ್ಲಿ ಯಾವ ವಾರ್ಷಿಕ ರಿಚಾರ್ಜ್‌ ಯೋಜನೆ ಉತ್ತಮ?

Praveen Chandra B HT Kannada

Oct 22, 2024 03:13 PM IST

google News

Mobile Recharge Plans: 365 ದಿನಕ್ಕೆ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವಿಗಳಲ್ಲಿ ಯಾವ ವಾರ್ಷಿಕ ರಿಚಾರ್ಜ್‌ ಯೋಜನೆ ಉತ್ತಮವಾಗಿದೆ ತಿಳಿಯಿರಿ.

    • Mobile recharge plans: ಮೊಬೈಲ್‌ ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌ಗಳು: ಏರ್‌ಟೆಲ್‌, ಜಿಯೋ, ಬಿಎಸ್‌ಎಲ್‌ಎಲ್‌, ವಿ(ವೋಡಾಫೋನ್‌ ಐಡಿಯಾ)ಗಳಲ್ಲಿ ಒಂದು ವರ್ಷದ ಮೊಬೈಲ್‌ ರಿಚಾರ್ಜ್‌ ಪ್ಲ್ಯಾನ್‌ಗೆ ಯಾವುದು ಉತ್ತಮ ಎಂದು ಯೋಚಿಸುವಿರಾ? 2024ರ ಅಕ್ಟೋಬರ್‌ನಲ್ಲಿ ಲಭ್ಯವಿರುವ ಆಫರ್‌ ಪ್ರಕಾರ ರಿಚಾರ್ಜ್‌ ವಿವರ ಇಲ್ಲಿದೆ.
Mobile Recharge Plans: 365 ದಿನಕ್ಕೆ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವಿಗಳಲ್ಲಿ ಯಾವ ವಾರ್ಷಿಕ ರಿಚಾರ್ಜ್‌ ಯೋಜನೆ ಉತ್ತಮವಾಗಿದೆ ತಿಳಿಯಿರಿ.
Mobile Recharge Plans: 365 ದಿನಕ್ಕೆ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವಿಗಳಲ್ಲಿ ಯಾವ ವಾರ್ಷಿಕ ರಿಚಾರ್ಜ್‌ ಯೋಜನೆ ಉತ್ತಮವಾಗಿದೆ ತಿಳಿಯಿರಿ.

Mobile recharge plans: ಮೊಬೈಲ್‌ ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌ಗಳು: ವಿವಿಧ ಮೊಬೈಲ್‌ ನೆಟ್‌ವರ್ಕ್‌ ಕಂಪನಿಗಳ ರಿಚಾರ್ಜ್‌ ಯೋಜನೆಗಳನ್ನು ನೋಡಿದರೆ ಮನಸ್ಸಿಗೆ ಬೇಸರವಾಗುವುದು ಸಹಜ. ಅಯ್ಯೋ ಎರಡು ತಿಂಗಳು, ಮೂರು ತಿಂಗಳು ಮೊಬೈಲ್‌ ರಿಚಾರ್ಜ್‌ ಫ್ಲ್ಯಾನ್‌ 500, 600, 700, 800 ರೂಪಾಯಿಗೆ ತಲುಪಿದೆ ಎಂದು ಸಾಕಷ್ಟು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ವೈಫೈ ಇದ್ರೂ ಅನಿವಾರ್ಯವಾಗಿ ಮೊಬೈಲ್‌ ನೆಟ್‌ವರ್ಕ್‌ನ ಇಂಟರ್‌ನೆಟ್‌ಗೆ ಹಣ ಹಾಕಬೇಕಾಗುತ್ತದೆ. ವ್ಯಾಲಿಡಿಟಿ ಹೆಚ್ಚಿರುವ ಕಡಿಮೆ ದರದ ಪ್ಲ್ಯಾನ್‌ಗಳೇ ಅಪರೂಪವಾಗಿವೆ. ಇಂತಹ ಸಮಯದಲ್ಲಿ ಸಾಕಷ್ಟು ಜನರು ಅಳೆದು ತೂಗಿ ಒಂದು ವರ್ಷದ ಪ್ಲ್ಯಾನ್‌ಗಳತ್ತ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಈ ಸಮಯದಲ್ಲಿ ವಿವಿಧ ಮೊಬೈಲ್‌ ಆಪರೇಟರ್‌ಗಳು ದೀಪಾವಳಿ ಹಬ್ಬ ಹತ್ತಿರವಿರುವ ಈ ಸಮಯದಲ್ಲಿ ಯಾವೆಲ್ಲ ಒಂದು ವರ್ಷದ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ಹೊಂದಿದ್ದಾರೆ ಎಂದು ನೋಡೋಣ.

ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌

ಒಂದು ವರ್ಷ ಅಥವಾ 365 ದಿನಗಳಲ್ಲಿ ಜಿಯೋ ಮತ್ತು ಏರ್‌ಟೆಲ್‌ ರಿಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಯಾವುದು ಬೆಸ್ಟ್‌ ಎಂದು ನೋಡೋಣ. ಇಂಟರ್‌ನೆಟ್‌ ಕಾರಣದಿಂದ ಈ ಎರಡು ನೆಟ್‌ವರ್ಕ್‌ ಆಪರೇಟರ್‌ಗಳಿಗೆ ಚಂದಾದಾರರು ಹೆಚ್ಚಿದ್ದಾರೆ. ಇವೆರಡೂ 5 ಜಿ ನೆಟ್‌ವರ್ಕ್‌ ನೀಡುತ್ತಿರುವುದೂ ಗ್ರಾಹಕರಿಗೆ ವರದಾನವಾಗಿದೆ. ಇವೆರಡು ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿರುವುದರಿಂದ ಇವೆರಡು ಒಂದೇ ರೀತಿಯ ಎರಡು ಪ್ಲ್ಯಾನ್‌ಗಳನ್ನು ಹೊಂದಿವೆ. ಆದರೆ, ಇವೆರಡು ನೀಡುವ ಇಂಟರ್‌ನೆಟ್‌ ಜಿಬಿ ವ್ಯತ್ಯಾಸ ಇದೆ.

ಏರ್‌ಟೆಲ್‌ 365 ದಿನಗಳ ರಿಚಾರ್ಜ್‌ ಪ್ಲ್ಯಾನ್‌

3599 ರೂಪಾಯಿಗೆ ಪ್ರತಿದಿನಕ್ಕೆ 2 ಜಿಬಿ ಡೇಟಾದ 365 ದಿನಗಳ ವ್ಯಾಲಿಡಿಟಿ ಆಫರ್‌ ಇದೆ. ಅನ್‌ಲಿಮಿಟೆಡ್‌ 5 ಜಿ ಡೇಟಾ ಮತ್ತು ಅನಿಯಮಿತ ಬಳಕೆ ಮಾಡಬಹುದು.

3999 ರೂಪಾಯಿಗೆ 365 ದಿನದ ಇನ್ನೊಂದು ಪ್ಲ್ಯಾನ್‌ ಇದೆ. ಇದರಲ್ಲಿ ಪ್ರತಿದಿನ 2.5 ಜಿಬಿ ಡೇಟಾ ಮತ್ತು ಅನಿಯಮಿತ ಕರೆ ದೊರಕುತ್ತದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ನಲ್ಲಿ ಒಂದು ವರ್ಷಗಳ ಕಾಲ ನೋಡಬಹುದು.

1999 ರೂಪಾಯಿ: ಒಂದು ವರ್ಷ ಅನಿಯಮಿತ ಕರೆ ಸೌಲಭ್ಯ ಇರುತ್ತದೆ. ಏರ್‌ಟೆಲ್‌ನಲ್ಲಿ ಇರುವ ಇನ್ನೊಂದು ವಾರ್ಷಿಕ ಪ್ಲ್ಯಾನ್‌. ಮೊಬೈಲ್‌ ಇಂಟರ್‌ನೆಟ್‌ ಹೆಚ್ಚು ಬೇಕಿಲ್ಲ. ಮನೆಯಲ್ಲಿರುವ ವೈಫೈ ಬಳಸ್ತಿವಿ ಅನ್ನೋರಿಗೆ ಸೂಕ್ತ. ಒಂದು ವರ್ಷಕ್ಕೆ ಒಟ್ಟು 24 ಜಿಬಿ ಇಂಟರ್‌ನೆಟ್‌ ದೊರಕುತ್ತದೆ. ಈ ಪ್ಲ್ಯಾನ್‌ ಹಾಕಿಕೊಳ್ಳುವವರು ಸದಾ ಮೊಬೈಲ್‌ ಇಂಟರ್‌ನೆಟ್‌ ಆನ್‌ ಮಾಡಿ ಇಡಬೇಡಿ. ಅಗತ್ಯ ಇದ್ದಾಗ ಆನ್‌ ಮಾಡಿ, ಕೆಲಸವಾದ ಬಳಿಕ ಆಫ್‌ ಮಾಡಿ.

ಜಿಯೋ ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌

ಜಿಯೋ ಎರಡು ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ಹೊಂದಿದೆ.

3599 ರೂಪಾಯಿ ಪ್ಲ್ಯಾನ್‌ನಲ್ಲಿ 365 ದಿನಗಳ ಕಾಲ ಪ್ರತಿದಿನ 2.5 ಜಿಬಿ ಇಂಟರ್‌ನೆಟ್‌, ಅನಿಯಮಿತ ಕರೆ ದೊರಕುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ ದೊರಕುತ್ತದೆ.

3999 ರೂಪಾಯಿ ಪ್ಲ್ಯಾನ್‌ನಲ್ಲಿ 365 ದಿನಗಳ ಕಾಲ ಪ್ರತಿದಿನ 2.5 ಜಿಬಿ ಇಂಟರ್‌ನೆಟ್‌, ಅನಿಯಮಿತ ಕರೆ ದೊರಕುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ ಜತೆಗೆ ಫ್ಯಾನ್‌ ಕೋಡ್‌ ಹೆಚ್ಚುವರಿಯಾಗಿ ದೊರಕುತ್ತದೆ.

ಇವೆರಡು ಪ್ಲ್ಯಾನ್‌ನಲ್ಲಿ ಉಚಿತವಾಗಿ ದೊರಕುವ ಸಬ್‌ಕ್ರಿಪ್ಷನ್‌ ಪ್ಲ್ಯಾನ್‌ಗಳಲ್ಲಿ ವ್ಯತ್ಯಾಸ ಇರುತ್ತದೆ.

ಬಿಎಸ್‌ಎನ್‌ಎಲ್‌ ವಾರ್ಷಿಕ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ವಾರ್ಷಿಕ ಪ್ಲ್ಯಾನ್‌

ವೊಡಾಫೋನ್‌ ಐಡಿಯಾ (ವಿ) ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌

1999 ರೂಪಾಯಿಯಿಂದ 3799 ರೂವರೆಗೆ ವಿವಿಧ ಪ್ಲ್ಯಾನ್‌ ಹೊಂದಿದೆ. ಮುದಿನ ಫೋಟೋ ಗಮನಿಸಿ.

 

ವೊಡಾಫೋನ್‌ ಐಡಿಯಾ (ವಿ) ವಾರ್ಷಿಕ ರಿಚಾರ್ಜ್‌ ಪ್ಲ್ಯಾನ್‌

(ಲಭ್ಯವಿರುವ ಮಾಹಿತಿ ಆಧರಿಸಿದ ಬರಹ, ಹೆಚ್ಚಿನ ವಿವರಕ್ಕೆ ನಿಮ್ಮ ಮೊಬೈಲ್‌ ಆಪರೇಟರ್‌ ಆಪ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿ ರಿಚಾರ್ಜ್‌ ವಿವರ ಪಡೆಯಿರಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ