Mobile Recharge: ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಹಬ್ಬದ ಋತುವಿನ ಭರಪೂರ ಕೊಡುಗೆ, ಈ ಪ್ಲ್ಯಾನ್‌ಗಳನ್ನ ರಿಚಾರ್ಜ್‌ ಮಾಡಿಕೊಂಡ್ರೆ ಲಾಭವೋ ಲಾಭ-technology news airtel and jio have launched exclusive festive prepaid plans for users here prepaid plans details pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mobile Recharge: ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಹಬ್ಬದ ಋತುವಿನ ಭರಪೂರ ಕೊಡುಗೆ, ಈ ಪ್ಲ್ಯಾನ್‌ಗಳನ್ನ ರಿಚಾರ್ಜ್‌ ಮಾಡಿಕೊಂಡ್ರೆ ಲಾಭವೋ ಲಾಭ

Mobile Recharge: ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಹಬ್ಬದ ಋತುವಿನ ಭರಪೂರ ಕೊಡುಗೆ, ಈ ಪ್ಲ್ಯಾನ್‌ಗಳನ್ನ ರಿಚಾರ್ಜ್‌ ಮಾಡಿಕೊಂಡ್ರೆ ಲಾಭವೋ ಲಾಭ

Airtel and Jio Prepaid offers: ಹಬ್ಬದ ಋತುವಿನಲ್ಲಿ ಸೀಮಿತ ಅವಧಿಗೆ ಏರ್‌ಟೆಲ್‌ ಮತ್ತು ಜಿಯೋ ಬಳಕೆದಾರರಿಗೆ ಭರ್ಜರಿ ಆಫರ್‌ಗಳು ದೊರಕಿವೆ. ಕೆಲವೊಂದು ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಡೇಟಾ, ಒಟಿಟಿ ಚಂದಾದಾರಿಕೆ, ವೋಚರ್‌ಗಳನ್ನು ಪಡೆಯಬಹುದು.

ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಹಬ್ಬದ ಋತುವಿನ ಭರಪೂರ ಕೊಡುಗೆ
ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಹಬ್ಬದ ಋತುವಿನ ಭರಪೂರ ಕೊಡುಗೆ

Airtel and Jio Prepaid offers: ಈ ಹಬ್ಬದ ಋತುವಿನಲ್ಲಿ ಮೊಬೈಲ್‌ ಫೋನ್‌ ಬಳಕೆದಾರರಿಗೂ ವಿವಿಧ ಆಫರ್‌ಗಳು ದೊರಕುತ್ತಿವೆ. ಏರ್‌ಟೆಲ್‌ ಮತ್ತು ಜಿಯೋ ಕಂಪನಿಗಳು ತಮ್ಮ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡುತ್ತಿವೆ. ಕೆಲವು ವಿಶೇಷ ಪ್ಲ್ಯಾನ್‌ಗಳನ್ನು ಏರ್‌ಟೆಲ್‌ ಮತ್ತು ಜಿಯೋ ಹೊರತಂದಿದ್ದು, ಗ್ರಾಹಕರಿಗೆ ಹೆಚ್ಚುವರಿ ಡೇಟಾ, ಒಟಿಟಿ ಚಂದಾದಾರಿಕೆ, ಉಚಿತ ವೋಚರ್‌ಗಳಂತಹ ಅನೇಕ ಕೊಡುಗೆಗಳು ದೊರಕುತ್ತಿವೆ. ಅಂದಹಾಗೆ, ಈ ಹಬ್ಬದ ಕೊಡುಗೆ ಸೀಮಿತ ಅವಧಿಗೆ ಮಾತ್ರ. ಗ್ರಾಹಕರು ತಮ್ಮ ಮೊಬೈಲ್‌ಗೆ ಈ ರಿಚಾರ್ಜ್‌ಗಳನ್ನು ಮಾಡಿಕೊಳ್ಳುವ ಮೂಲಕ ಹಬ್ಬದ ಆಫರ್‌ ತಮ್ಮದಾಗಿಸಿಕೊಳ್ಳಬಹುದು.

ಜಿಯೋ ಹಬ್ಬದ ಋತುವಿನ ಪ್ಲ್ಯಾನ್‌ಗಳು

ರಿಲಯೆನ್ಸ್‌ ಜಿಯೋ ಗ್ರಾಹಕರಿಗೆ ವಿವಿಧ ಪ್ಲ್ಯಾನ್‌ಗಳು ಹಬ್ಬದ ಕೊಡುಗೆಯಾಗಿ ಬಂದಿವೆ. ಡೇಟಾ, ಒಟಿಟಿ ಚಂದಾದಾರಿಕೆ ಸೇರಿದಂತೆ ಅನೇಕ ಲಾಭಗಳು ಗ್ರಾಹಕರಿಗೆ ದೊರಕಲಿದೆ.

  • 899 ರೂಪಾಯಿ ಪ್ಲ್ಯಾನ್‌: 90 ದಿನಗಳ ಕಾಲ ಪ್ರತಿದಿನ 2 ಜಿಬಿ ಡೇಟಾ ದೊರಕಲಿದೆ. ಪ್ರತಿದಿನ ಹೆಚ್ಚು ಇಂಟರ್‌ನೆಟ್‌ ಬೇಕು ಎನ್ನುವವರು ಈ ಆಫರ್‌ ತಮ್ಮದಾಗಿಸಿಕೊಳ್ಳಬಹುದು.
  • 999 ರೂಪಾಯಿ ಪ್ಲ್ಯಾನ್‌: ಇದು ಕೂಡ 899 ರೂಪಾಯಿಯಂತಹ ಪ್ಲ್ಯಾನ್‌. ಪ್ರತಿದಿನ 2 ಜಿಬಿ ಡೇಟಾ ದೊರಕುತ್ತದೆ. ವ್ಯಾಲಿಡಿಟಿ 98 ದಿನ ಇರುತ್ತದೆ.
  • 3599 ರೂಪಾಯಿ ಪ್ಲ್ಯಾನ್‌: ಪ್ರತಿದಿನ 2.5 ಜಿಬಿ ಡೇಟಾ ಒಂದು ವರ್ಷಗಳ ಕಾಲ ದೊರಕುತ್ತದೆ. ಇದರೊಂದಿಗೆ 10 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳ ಚಂದಾದಾರಿಕೆ ದೊರಕುತ್ತದೆ. ಹೆಚ್ಚುವರಿ 10 ಜಿಬಿ ಡೇಟಾದ ವೋಚರ್‌ ಕೂಡ ಇದರೊಂದಿಗೆ ದೊರಕುತ್ತದೆ.

ಫೆಸ್ಟಿವಲ್‌ ಆಫರ್‌ ಆಗಿ ಜಿಯೋ ತನ್ನ ಗ್ರಾಹಕರಿಗೆ 3 ತಿಂಗಳ ಕಾಲ ಜೊಮೆಟೊ ಗೋಲ್ಡ್‌ ಚಂದಾದಾರಿಕೆ ಮತ್ತು 2999 ರೂಪಾಯಿಯ ಅಜಿಯೊ ಕೂಪ್‌ ನೀಡುತ್ತದೆ. ಒಟ್ಟಾರೆ, ಮನರಂಜನೆ, ಶಾಪಿಂಗ್‌, ಡಿನ್ನಿಂಗ್‌ ಕೊಡುಗೆಗಳನ್ನು ಜಿಯೋ ನೀಡುತ್ತಿದೆ

ಏರ್‌ಟೆಲ್‌ ಪ್ರೀಪೇಯ್ಡ್‌ ಗ್ರಾಹಕರಿಗೆ ಫೆಸ್ಟಿವಲ್‌ ಆಫರ್‌

ಹಬ್ಬದ ಋತುವಿನಲ್ಲಿ ತನ್ನ ಗ್ರಾಹಕರಿಗೆ ಏರ್‌ಟೆಲ್‌ ಕೂಡ ಹೊಸ ಆಫರ್‌ ಘೋಷಿಸಿದೆ. ಈಗಾಗಲೇ ಈ ಆಫರ್‌ ಆರಂಭವಾಗಿದ್ದು, ಆಸಕ್ತರು ರಿಚಾರ್ಜ್‌ ಮಾಡಿಕೊಳ್ಳಬಹುದು.

  • 979 ರೂಪಾಯಿ ಪ್ಲ್ಯಾನ್‌: ಪ್ರತಿದಿನ 2 ಜಿಬಿ ಡೇಟಾ,ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು 22 ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ದೊರಕುತ್ತದೆ. ಎಕ್ಸ್‌ಟ್ರೀಮ್‌ ಪ್ರೀಮಿಯಂ ಚಂದಾದಾರಿಕೆಯನ್ನೂ ಇದು ಒಳಗೊಂಡಿದೆ. 28 ದಿನಗಳ ವ್ಯಾಲಿಡಿಟಿಯ 10 ಜಿಬಿ ಡೇಟಾ ವೋಚ್‌ ಕೂಡ ದೊರಕುತ್ತದೆ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಹೊಂದಿದೆ.
  • 1029 ರೂಪಾಯಿ ಪ್ಲ್ಯಾನ್‌: ಪ್ರತಿದಿನ 2 ಜಿಬಿ ಡೇಟಾ,ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸಬ್‌ಸ್ಕ್ರಿಪ್ಷನ್‌ ಉಚಿತವಾಗಿ ದೊರಕುತ್ತದೆ. ಇದರೊಂದಿಗೆ 22 ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ದೊರಕುತ್ತದೆ. 28 ದಿನಗಳ ವ್ಯಾಲಿಡಿಟಿಯ 10 ಜಿಬಿ ಡೇಟಾ ವೋಚ್‌ ಕೂಡ ದೊರಕುತ್ತದೆ.
  • 3599 ರೂಪಾಯಿ ಪ್ಲ್ಯಾನ್‌: ಏರ್‌ಟೆಲ್‌ನ ಒಂದು ವರ್ಷದ ಫೆಸ್ಟಿವಲ್‌ ಯೋಜನೆ ಇದಾಗಿದೆ. ಒಂದು ವರ್ಷ ವ್ಯಾಲಿಡಿಟಿ ಜತೆಗೆ ಅನಿಯಮಿತ ಕರೆಗಳು, ಎಕ್ಸ್‌ಟ್ರೀಮ್‌ ಪ್ರೀಮಿಯಂನ 22 ಒಟಿಟಿಗಳು ದೊರಕುತ್ತದೆ. ಈ ಯೋಜನೆಯಲ್ಲೂ ದೊರಕುತ್ತದೆ. 28 ದಿನಗಳ ವ್ಯಾಲಿಡಿಟಿಯ 10 ಜಿಬಿ ಡೇಟಾ ವೋಚ್‌ ಕೂಡ ದೊರಕುತ್ತದೆ.

ಈ ಆಫರ್‌ಗಳು ಕೆಲವು ದಿನಗಳವರೆಗೆ ಮಾತ್ರ ಲಭ್ಯ ಇರುತ್ತದೆ.

mysore-dasara_Entry_Point