Used mobiles: ಭಾರತದಲ್ಲಿ ಹಳೆ ಮೊಬೈಲ್‌ ಖರೀದಿ ಟ್ರೆಂಡಿಂಗ್‌; ಐಫೋನ್‌, 5ಜಿ ಪರಿಣಾಮ ಮಾತ್ರನಾ, ಬೇರೆ ಕಾರಣ ಇರುವುದೇ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Used Mobiles: ಭಾರತದಲ್ಲಿ ಹಳೆ ಮೊಬೈಲ್‌ ಖರೀದಿ ಟ್ರೆಂಡಿಂಗ್‌; ಐಫೋನ್‌, 5ಜಿ ಪರಿಣಾಮ ಮಾತ್ರನಾ, ಬೇರೆ ಕಾರಣ ಇರುವುದೇ?

Used mobiles: ಭಾರತದಲ್ಲಿ ಹಳೆ ಮೊಬೈಲ್‌ ಖರೀದಿ ಟ್ರೆಂಡಿಂಗ್‌; ಐಫೋನ್‌, 5ಜಿ ಪರಿಣಾಮ ಮಾತ್ರನಾ, ಬೇರೆ ಕಾರಣ ಇರುವುದೇ?

ಭಾರತದಲ್ಲಿ ಬಳಕೆ ಮಾಡಿದ ಫೋನ್‌ಗಳನ್ನು ಖರೀದಿಸುವವರ ಪ್ರಮಾಣ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಹೊಸ ಐಫೋನ್‌ ಖರೀದಿಸುವಷ್ಟು ಹಣ ಇಲ್ಲದೆ ಇರುವುದು ಮತ್ತು 5ಜಿ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗುವ ಕಾರಣದಿಂದ ಹೆಚ್ಚು ಜನರು ಹಳೆ ಫೋನ್‌ಗೆ ಹಾಯ್‌ ಹೇಳುತ್ತಿದ್ದಾರಂತೆ.

Used mobiles: ಭಾರತದಲ್ಲಿ ಹಳೆ ಮೊಬೈಲ್‌ ಖರೀದಿ ಟ್ರೆಂಡಿಂಗ್‌; ಐಫೋನ್‌, 5ಜಿ ಪರಿಣಾಮ
Used mobiles: ಭಾರತದಲ್ಲಿ ಹಳೆ ಮೊಬೈಲ್‌ ಖರೀದಿ ಟ್ರೆಂಡಿಂಗ್‌; ಐಫೋನ್‌, 5ಜಿ ಪರಿಣಾಮ

ಬೆಂಗಳೂರು: ಭಾರತೀಯರು ಹೊಸ ಫೋನ್‌ಗಳ ಬದಲು, ಬಳಸಿದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಆದ್ಯತೆ ನೀಡಲು ಪ್ರಾರಂಭಿಸುತ್ತಿದ್ದಾರೆ ಎಂದು ಐಡಿಸಿಯ ಅಧ್ಯಯನ ತಿಳಿಸಿದೆ. “ 2024 ರಲ್ಲಿ ಸುಮಾರು 20 ದಶಲಕ್ಷ ಬಳಸಿದ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಇದು ಶೇಕಡ 9.6ರಷ್ಟು ಪ್ರಗತಿಯಾಗಿದೆ. ಇದು ಹೊಸ ಸ್ಮಾರ್ಟ್‌ಫೋನ್‌ಗಳ ಮಾರಾಟದ ಪ್ರಗತಿಗಿಂತಲೂ ಹೆಚ್ಚಾಗಿದೆ. ಹೊಸ ಫೋನ್‌ಗಳ ಮಾರಾಟ 154 ದಶಲಕ್ಷ ತಲುಪಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಪ್ರಗತಿ ಶೇಕಡ 5.5ಷ್ಟಿದೆ. 5ಜಿ ಫೋನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಐಫೋನ್‌ನಂತಹ ಪ್ರೀಮಿಯಂ ಫೋನ್‌ಗಳನ್ನು ಖರೀದಿಸಲು ಹೆಚ್ಚಾದ ಆಸಕ್ತಿಯೂ ಬಳಸಿದ ಫೋನ್‌ಗಳ ಬೇಡಿಕೆ ಹೆಚ್ಚಿಸಿದೆ” ಎಂದು ಐಡಿಸಿ ತಿಳಿಸಿದೆ.

ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಇನ್ನಿಲ್ಲದ ಬೇಡಿಕೆ

ಅತ್ಯಧಿಕ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಹೆಚಚು ಹಣ ಪಾವತಿಸುವ ಬದಲು, ಈಗಾಗಲೇ ಬಳಸಿದ, ರಿಫರ್ಬಿಷ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. ಈ ಮೂಲ ದುಬಾರಿ ಫೋನ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸುವ ತಮ್ಮ ಕನಸು ಈಡೇರಿಸಿಕೊಳ್ಳುತ್ತಿದ್ದಾರೆ. ಇಂತಹ ಟ್ರೆಂಡ್‌ ಹೆಚ್ಚಾಗುತ್ತಿರುವುದರಿಂದ ಹಳೆಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಶೇಕಡ 9.6ರಷ್ಟು ಹೆಚ್ಚಾಗಿದೆ.

ದೇಶದಲ್ಲಿ 5G ಜನಪ್ರಿಯತೆ ಹೆಚ್ಚುತ್ತಿರುವುದು ಹಳೆಯ ಫೋನ್‌ಗಳ ಬೇಡಿಕೆ ಹೆಚ್ಚಲು ಕಾರಣವಾದ ಮಹತ್ವದ ಅಂಶವಾಗಿದೆ. ಭಾರತದಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರರು 5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ. 4G ಮತ್ತು 5G ಸ್ಮಾರ್ಟ್‌ಫೋನ್‌ಗಳ ನಡುವಿನ ಹೆಚ್ಚಿನ ಬೆಲೆಯ ಅಂತರವನ್ನು ಗಮನಿಸಿದರೆ, ಹೆಚ್ಚಿನ ಗ್ರಾಹಕರು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುತ್ತಾರೆ.

ಭಾರತೀಯ ಬಳಸಿದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಮುಂದಿನ ಐದು ವರ್ಷಗಳಲ್ಲಿ ಶೇಕಡ 8ರಷ್ಟು ಪ್ರಗತಿ ಕಾಣಲಿದೆ, 2028 ರ ವೇಳೆಗೆ ವಾರ್ಷಿಕ 26.5 ದಶಲಕ್ಷ ಯುನಿಟ್‌ಗಳನ್ನು ತಲುಪುತ್ತದೆ ಎಂದು ಐಡಿಸಿ ಊಹಿಸಿದೆ.

ಹಳೆಯ ಐಫೋನ್‌ ಅಂದ್ರೆ ಎಲ್ಲರಿಗೂ ಇಷ್ಟ

ಹಳೆಯ ಫೋನ್‌ಗಳಲ್ಲಿ ಐಫೋನ್‌ಗೆ ಅತ್ಯಧಿಕ ಭೇಡಿಕೆಯಿದೆ. ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಐಫೋನ್‌ಗೆ ಬೇಡಿಕೆ ಹೆಚ್ಚಾಗಿದೆ. ಹೊಸ ಐಫೋನ್‌ ಖರೀದಿಸಲಾಗದವರು ಹಳೆಯ ಐಫೋನ್‌ ಖರೀದಿಸಿ ಆಸೆ ಈಡೇರಿಸಿಕೊಳ್ಳುತ್ತಾರೆ. ಐಡಿಸಿಯ ತ್ರೈಮಾಸಿಕ ಡಿವೈಸ್‌ ಟ್ರಾಕರ್‌ ಪ್ರಕಾರ ಐಫೋನ್‌ 11, ಐಫೋನ್‌ 12, ಐಫೋನ್‌ 13ಕ್ಕೆ ಬೇಕೆ ಹೆಚ್ಚಾಗಿದೆ. ಈಗ ಬಳಸಿದ ಐಫೋನ್‌ 13ರಂತಹ ಸಾಧನಗಳು 25-35 ಸಾವಿರ ರೂಪಾಯಿಗೆ ದೊರಕುತ್ತದೆ.

ಸಾಕಷ್ಟು ಜನರು ಹೊಸ ಐಫೋನ್‌ ಖರೀದಿಸುವುದಕ್ಕಿಂತ 25-35 ಸಾವಿರ ರೂಪಾಯಿ ನೀಡಿ ಹಳೆಯ ಐಫೋನ್‌ ಖರೀದಿಸುತ್ತಿದ್ದಾರೆ. ಇದೇ ಸಮಯದಲ್ಲಿ ಹಳೆಯ ಪ್ರೊ ಮಾಡೆಲ್‌ಗಳ ಖರೀದಿ ಹೆಚ್ಚಾಗುತ್ತಿದೆ ಎಂದು ಐಡಿಸಿ ತಿಳಿಸಿದೆ.

Whats_app_banner

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.