logo
ಕನ್ನಡ ಸುದ್ದಿ  /  ಜೀವನಶೈಲಿ  /  Google One Lite Plan: ಜಿಮೇಲ್‌ ಇಮೇಲ್‌ ಖಾತೆ ಫುಲ್‌ ಆಯ್ತಾ? ಚಿಂತಿಸಬೇಡಿ ಭಾರತದಲ್ಲಿ ಗೂಗಲ್‌ ಒನ್‌ ಲೈಟ್‌ ಆರಂಭ

Google One Lite Plan: ಜಿಮೇಲ್‌ ಇಮೇಲ್‌ ಖಾತೆ ಫುಲ್‌ ಆಯ್ತಾ? ಚಿಂತಿಸಬೇಡಿ ಭಾರತದಲ್ಲಿ ಗೂಗಲ್‌ ಒನ್‌ ಲೈಟ್‌ ಆರಂಭ

Praveen Chandra B HT Kannada

Sep 13, 2024 06:45 PM IST

google News

Google One Lite Plan: ಗೂಗಲ್‌ ಕಂಪನಿಯು ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಪರಿಚಯಿಸುತ್ತಿದೆ.

  • Google One Lite Plan: ಸಾಕಷ್ಟು ಜನರ ಜಿಮೇಲ್‌ ಖಾತೆ ಫುಲ್‌ ಆಗಿರಬಹುದು. 15 ಜಿಬಿಗಿಂತ ಹೆಚ್ಚು ಸ್ಥಳಾವಕಾಶ ಬಯಸಿದರೆ ಇದೀಗ ಗೂಗಲ್‌ ಕಂಪನಿಯ ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಪರಿಚಯಿಸಿದೆ. ಕೇವಲ 59 ರೂಪಾಯಿ ನೀಡಿ ಹೆಚ್ಚಿನ ಸಂಗ್ರಹ ಸ್ಥಳಾವಕಾಶ ನಿಮ್ಮದಾಗಿಸಿಕೊಳ್ಳಬಹುದು.

Google One Lite Plan:  ಗೂಗಲ್‌ ಕಂಪನಿಯು ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಪರಿಚಯಿಸುತ್ತಿದೆ.
Google One Lite Plan: ಗೂಗಲ್‌ ಕಂಪನಿಯು ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಪರಿಚಯಿಸುತ್ತಿದೆ. (Google One)

Google One Lite Plan: ಹಲವು ವರ್ಷಗಳಿಂದ ಜೀಮೇಲ್‌ ಬಳಸುವವರ 15 ಜಿಬಿ ಸ್ಥಳಾವಕಾಶ ಫುಲ್‌ ಆಗಿರಬಹುದು. ಹಳೆಯ ಇಮೇಲ್‌ ಎಲ್ಲಾ ಡಿಲೀಟ್‌ ಮಾಡುತ್ತಾ? ಇನ್ನು ಯಾವ ಇಮೇಲ್‌ ಡಿಲೀಟ್‌ ಮಾಡುವಂತೆ ಇಲ್ಲ ಎನ್ನುವ ಸ್ಥಿತಿಗೆ ಬಂದಿರಬಹುದು. ಸ್ಥಳಾವಕಾಶ ಹೆಚ್ಚಿಸಿಕೊಳ್ಳೋಣ ಅಂದ್ರೆ ಕಡಿಮೆ ಪ್ಲ್ಯಾನ್‌ ಇಲ್ಲ ಎಂಬ ಚಿಂತೆ ಸಾಕಷ್ಟು ಜನರಿಗೆ ಇರಬಹುದು. ಇದೀಗ ಗೂಗಲ್‌ ಕಂಪನಿಯು ಗೂಗಲ್‌ ಒನ್‌ ಲೈಟ್‌ ಪರಿಚಯಿಸಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಕ್ಲೌಡ್‌ ಸ್ಟೋರೇಜ್‌ ಚಂದಾದಾರಿಕೆಯನ್ನು ಗೂಗಲ್‌ ಪರಿಚಯಿಸಿದೆ. ಇದಕ್ಕೆ ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಎಂಬ ಹೆಸರಿಡಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ 100 ಜಿಬಿ ಸ್ಟೋರೇಜ್‌ ಪ್ಲ್ಯಾನ್‌ಗೆ ಹೋಲಿಸಿದರೆ ಇದು ಅಗ್ಗವಾಗಿದೆ. ಕಡಿಮೆ ದರದಲ್ಲಿ ಹೆಚ್ಚು ಕ್ಲೌಡ್‌ ಸ್ಟೋರೇಜ್‌ ಪಡೆಯಲು ಗೂಗಲ್‌ ಬಳಕೆದಾರರಿಗೆ ಸಾಧ್ಯವಾಗಲಿದೆ. ತಮ್ಮ ಫೈಲ್‌ಗಳು, ಫೋಟೋಗಳು ಮತ್ತು ಇತರೆ ಡೇಟಾಗಳನ್ನು ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ನಲ್ಲಿ ಇಡಬಹುದು.

ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌: ದರ ಮತ್ತು ಸ್ಟೋರೇಜ್‌

ಜಿಮೇಲ್‌, ಫೋಟೋಸ್‌, ಡಾಕ್ಸ್‌ ಫೈಲ್‌ಗಳನ್ನು ಸಂಗ್ರಹಿಸಿಡಲು ಗೂಗಲ್‌ ಒನ್‌ ಎಂಬ ಕ್ಲೌಡ್‌ ಸ್ಟೋರೇಜ್‌ ನೆರವಾಗುತ್ತದೆ. ಸಾಮಾನ್ಯ ಪ್ಲ್ಯಾನ್‌ಗೆ ಕಡಿಮೆಯೆಂದರೂ 130 ರೂಪಾಯಿ ನೀಡಬೇಕು. ಇಷ್ಟು ಹಣಕ್ಕೆ 100 ಜಿ.ಬಿ. ಸ್ಪೇಸ್‌ ದೊರಕುತ್ತದೆ. ಆದರೆ, ಇದೀಗ ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಅನ್ನು ಪರಿಚಯಿಸಲಿದೆ ಎಂಬ ಸುದ್ದಿ ಬಂದಿದೆ. ಕಡಿಮೆ ದರ ಹೊಂದಿರಲಿದೆ. ಅಂದರೆ, 30 ಜಿಬಿ ಸ್ಟೋರೇಜ್‌ಗೆ 59 ರೂಪಾಯಿ ಇರುತ್ತದೆ.

ಆದರೆ, ಸದ್ಯ ಭಾರತದಲ್ಲಿ ಈ ಪ್ಲ್ಯಾನ್‌ ಕಾಣಿಸುತ್ತಿಲ್ಲ. ಒನ್‌ ಆಪ್‌ ಮೂಲಕ ಖರೀದಿದಾರರು ತಮ್ಮ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು. ಭಾರತದಲ್ಲಿ ಕೆಲವರಿಗೆ ಈಗಾಗಲೇ ಈ ಫೀಚರ್‌ ಕಾಣಿಸುತ್ತಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವರದಿಗಾರರಿಗೆ ಸದ್ಯ ಈ ಪ್ಲ್ಯಾನ್‌ ಗೂಗಲ್‌ ಒನ್‌ನಲ್ಲಿ ಕಾಣಿಸಿಲ್ಲ.

ಸದ್ಯ ಪ್ರಯೋಗಾರ್ಥವಾಗಿ ಗೂಗಲ್‌ ಒಂದಿಷ್ಟು ಜನರಿಗೆ ಈ ಪ್ಲ್ಯಾನ್‌ ಅನ್ನು ಗೂಗಲ್‌ ಪರಿಚಯಿಸಿರಬಹುದು. ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಗೂಗಲ್‌ ಒನ್‌ ಲೈಟ್‌ ಪ್ಲ್ಯಾನ್‌ ಕಾಣಿಸಬಹುದು. ಗೂಗಲ್‌ ಒನ್‌ ಲೈಟ್‌ ನಿಮ್ಮ ಗೂಗಲ್‌ ಒನ್‌ನಲ್ಲಿ ಇರುವುದೇ ಎಂದು ಈಗಲೇ one.google.com/ಗೆ ಹೋಗಿ ನೋಡಬಹುದು.

ಗಮನಿಸಿ, ತಿಂಗಳಿಗೆ 59 ರೂಪಾಯಿ ಅಂದ್ರೆ ವರ್ಷಕ್ಕೆ 708 ರೂಪಾಯಿ ಪಾವತಿಸಲು ನೀವು ರೆಡಿ ಇರಬೇಕು. ವಾರ್ಷಿಕ ಪ್ಲ್ಯಾನ್‌ಗಳ ದರ ಇನ್ನೂ ಕಡಿಮೆ ಇರುವುದೇ ಕಾದು ನೋಡಬೇಕಿದೆ. ಆದರೆ, ಇದರಲ್ಲಿ ಕೆಲವೊಂದು ಫೀಚರ್‌ಗಳು ಕಡಿಮೆ ಇರಲಿವೆ. ಎಐ ಫೀಚರ್‌ಗಳು ದೊರಕದು. ಆದರೆ, ಇಮೇಲ್‌ ಮತ್ತು ಫೋಟೋಗಳಿಗೆ ಇನ್ನಷ್ಟು ಸ್ಥಳಾವಕಾಶ ಹುಡುಕುವವರಿಗೆ ಇದು ನೆರವಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ