logo
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾತಂತ್ರ್ಯೋತ್ಸವಕ್ಕೆ ಗೂಗಲ್​ನಿಂದ ಬಂತು ಒಂದಲ್ಲ ಎರಡಲ್ಲ ಮೂರು ಸ್ಮಾರ್ಟ್​ಫೋನ್‌: ಪಿಕ್ಸೆಲ್ 9 ಸರಣಿ ಬಿಡುಗಡೆ, ಫೀಚರ್ಸ್‌ ವಿವರ ಇಲ್ಲಿದೆ

ಸ್ವಾತಂತ್ರ್ಯೋತ್ಸವಕ್ಕೆ ಗೂಗಲ್​ನಿಂದ ಬಂತು ಒಂದಲ್ಲ ಎರಡಲ್ಲ ಮೂರು ಸ್ಮಾರ್ಟ್​ಫೋನ್‌: ಪಿಕ್ಸೆಲ್ 9 ಸರಣಿ ಬಿಡುಗಡೆ, ಫೀಚರ್ಸ್‌ ವಿವರ ಇಲ್ಲಿದೆ

Reshma HT Kannada

Aug 15, 2024 11:53 AM IST

google News

ಸ್ವಾತಂತ್ರೋತ್ಸವಕ್ಕೆ ಗೂಗಲ್​ನಿಂದ ಬಂತು ಒಂದಲ್ಲ ಎರಡಲ್ಲ ಮೂರು ಸ್ಮಾರ್ಟ್​ಫೋನ್‌: ಪಿಕ್ಸೆಲ್ 9 ಸರಣಿ ಬಿಡುಗಡೆ, ವೈಶಿಷ್ಟ್ಯ ಹೀಗಿದೆ

    • ಪಿಕ್ಸೆಲ್ 9 ಪ್ರೊ XL ಈ ಬಾರಿ ಹೊಸದಾಗಿ ಸೇರ್ಪಡೆಯಾದ ಸ್ಮಾರ್ಟ್​ಫೋನ್ ಆಗಿದೆ. ಇದು ಪಿಕ್ಸೆಲ್‌ಗಳಲ್ಲಿ ಅತಿ ದೊಡ್ಡ ಡಿಸ್‌ಪ್ಲೇ ಮತ್ತು ಬ್ಯಾಟರಿಯನ್ನು ಹೊಂದಿದೆ. ಪಿಕ್ಸೆಲ್ 9 ಸರಣಿಯು ಗೂಗಲ್ AI ನೊಂದಿಗೆ ಬರುತ್ತದೆ, ಇದು ಒಂದು ವರ್ಷದವರೆಗೆ ಗೂಗಲ್ One ಸದಸ್ಯತ್ವವನ್ನು ಹೊಂದಿದೆ. (ಬರಹ: ವಿನಯ್‌ ಭಟ್‌)
ಸ್ವಾತಂತ್ರೋತ್ಸವಕ್ಕೆ ಗೂಗಲ್​ನಿಂದ ಬಂತು ಒಂದಲ್ಲ ಎರಡಲ್ಲ ಮೂರು ಸ್ಮಾರ್ಟ್​ಫೋನ್‌: ಪಿಕ್ಸೆಲ್ 9 ಸರಣಿ ಬಿಡುಗಡೆ, ವೈಶಿಷ್ಟ್ಯ ಹೀಗಿದೆ
ಸ್ವಾತಂತ್ರೋತ್ಸವಕ್ಕೆ ಗೂಗಲ್​ನಿಂದ ಬಂತು ಒಂದಲ್ಲ ಎರಡಲ್ಲ ಮೂರು ಸ್ಮಾರ್ಟ್​ಫೋನ್‌: ಪಿಕ್ಸೆಲ್ 9 ಸರಣಿ ಬಿಡುಗಡೆ, ವೈಶಿಷ್ಟ್ಯ ಹೀಗಿದೆ

ಪ್ರಸಿದ್ಧ ಗೂಗಲ್ ಕಂಪನಿ ಸ್ವಾತಂತ್ರೋತ್ಸವದ ಪ್ರಯುಕ್ತ ಭಾರತದಲ್ಲಿ ಮೂರು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಇದೀಗ ಗೂಗಲ್ ಪಿಕ್ಸೆಲ್ 9 ಸರಣಿಯ ಫೋನುಗಳು ಅಧಿಕೃತವಾಗಿ ಅನಾವರಣಗೊಂಡಿದೆ. ಈ ಬಾರಿ ಇದರಲ್ಲಿ ಫೋಲ್ಡಬಲ್ ಫೋನ್ ಕೂಡ ಸೇರ್ಪಡೆಯಾಗಿದೆ. ಪಿಕ್ಸೆಲ್ 9, ಪಿಕ್ಸೆಲ್ 9 ಪ್ರೊ ಮತ್ತು ಪಿಕ್ಸೆಲ್ 9 ಪ್ರೊ XL ಹೀಗೆ ಮೂರು ಫೋನುಗಳು ಇದರಲ್ಲಿವೆ. ಇವುಗಳ ಬೆಲೆಗಳು, ವಿಶೇಷಣಗಳು ಮತ್ತು ಲಭ್ಯತೆ ಸೇರಿದಂತೆ ಎಲ್ಲ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಗೂಗಲ್ ಪಿಕ್ಸೆಲ್ 9 ಸರಣಿಯ ಬೆಲೆ, ಲಭ್ಯತೆ

ಭಾರತದಲ್ಲಿ ಗೂಗಲ್ ಪಿಕ್ಸೆಲ್ 9 ಬೆಲೆ 79,999 ರೂ. ಇದು 12GB RAM ಮತ್ತು 256GB ಸಂಗ್ರಹಣೆಯ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ. ಗೂಗಲ್ ಪಿಕ್ಸೆಲ್ 9 ಪ್ರೊನ ಆರಂಭಿಕ ಬೆಲೆ 1,09,999 ರೂ, ಮತ್ತು ಗೂಗಲ್ ಪಿಕ್ಸೆಲ್ 9 ಪ್ರೊ XL ಬೆಲಲೆ 1,24,999 ರೂ. ಆಗಿದೆ. ಹೊಸ ಪಿಕ್ಸೆಲ್ ಫೋನ್‌ಗಳು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮತ್ತು ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾ ಫಿಸಿಕಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.

ಗೂಗಲ್ ಪಿಕ್ಸೆಲ್ 9 ಫೀಚರ್ಸ್

ಡಿಸ್​ಪ್ಲೇ: 6.3-ಇಂಚಿನ OLED ಸೂಪರ್ ಆಕ್ಟುವಾ ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ, 1,800 nits HDR ಬ್ರೈಟ್‌ನೆಸ್ ಮತ್ತು 2,700 nits ಗರಿಷ್ಠ ಬ್ರೈಟ್​ನೆಸ್.

ಪ್ರೊಸೆಸರ್: ಟೈಟಾನ್ M2 ಭದ್ರತಾ ಕೊಪ್ರೊಸೆಸರ್ ಜೊತೆಗೆ ಗೂಗಲ್ ಟೆನ್ಸರ್ G4.

ಕ್ಯಾಮೆರಾಗಳು: 50MP ಪ್ರಾಥಮಿಕ ಕ್ಯಾಮೆರಾ, 48MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 10.5MP ಸೆಲ್ಫಿ ಕ್ಯಾಮೆರಾ.

ಬ್ಯಾಟರಿ, ಚಾರ್ಜಿಂಗ್: 4,700mAh ಬ್ಯಾಟರಿ, 45W ವೇಗದ ವೈರ್ಡ್ ಚಾರ್ಜಿಂಗ್, ವೇಗದ ವೈರ್‌ಲೆಸ್ ಚಾರ್ಜಿಂಗ್. ಇದು 30 ನಿಮಿಷಗಳಲ್ಲಿ 55 ಪ್ರತಿಶತ ಚಾರ್ಜ್ ಆಗುತ್ತದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 14 ಔಟ್ ಆಫ್ ದಿ ಬಾಕ್ಸ್, 7 ವರ್ಷಗಳ OS ಭದ್ರತೆ ಮತ್ತು ಪಿಕ್ಸೆಲ್ ಡ್ರಾಪ್ ಅಪ್‌ಡೇಟ್‌ಗಳು.

ಗೂಗಲ್ ಪಿಕ್ಸೆಲ್ 9 ಪ್ರೊ, ಪಿಕ್ಸೆಲ್ 9 ಪ್ರೊ XL ಫೀಚರ್ಸ್

ಡಿಸ್‌ಪ್ಲೇ: 6.3-ಇಂಚಿನ (ಪಿಕ್ಸೆಲ್ 9 ಪ್ರೊ) ಮತ್ತು 6.8-ಇಂಚಿನ (ಪಿಕ್ಸೆಲ್ 9 ಪ್ರೊ XL) LTPO OLED ಸೂಪರ್ ಆಕ್ಟುವಾ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ 2, 2,000 ನಿಟ್ಸ್ HDR ಬ್ರೈಟ್‌ನೆಸ್ ಮತ್ತು 3,000 ನಿಟ್ಸ್ ಗರಿಷ್ಠ ಬ್ರೈಟ್​ನೆಸ್.

ಪ್ರೊಸೆಸರ್: ಟೈಟಾನ್ M2 ಭದ್ರತಾ ಕೊಪ್ರೊಸೆಸರ್ ಜೊತೆಗೆ ಗೂಗಲ್ ಟೆನ್ಸರ್ G4.

ಕ್ಯಾಮೆರಾಗಳು: 50MP ಪ್ರಾಥಮಿಕ ಸಂವೇದಕ, 48MP ಅಲ್ಟ್ರಾ-ವೈಡ್ ಸಂವೇದಕ, 48MP ಟೆಲಿಫೋಟೊ ಕ್ಯಾಮೆರಾ ಜೊತೆಗೆ 5x ಆಪ್ಟಿಕಲ್ ಜೂಮ್, ಮತ್ತು 42MP ಸೆಲ್ಫಿ ಕ್ಯಾಮೆರಾ.

ಬ್ಯಾಟರಿ, ಚಾರ್ಜಿಂಗ್: 4,700mAh ಬ್ಯಾಟರಿ (ಪಿಕ್ಸೆಲ್ 9 Pro), 5,060mAh ಬ್ಯಾಟರಿ (ಪಿಕ್ಸೆಲ್ 9 ಪ್ರೊ XL) ಜೊತೆಗೆ 45W ವೇಗದ ವೈರ್ಡ್ ಚಾರ್ಜಿಂಗ್, ವೇಗದ ವೈರ್‌ಲೆಸ್ ಚಾರ್ಜಿಂಗ.

ಸಾಫ್ಟ್‌ವೇರ್: ಆಂಡ್ರಾಯ್ಡ್ 14 ಔಟ್ ಆಫ್ ದಿ ಬಾಕ್ಸ್, 7 ವರ್ಷಗಳ OS, ಭದ್ರತೆ ಮತ್ತು ಪಿಕ್ಸೆಲ್ ಡ್ರಾಪ್ ಅಪ್‌ಡೇಟ್‌ಗಳು.

ಪಿಕ್ಸೆಲ್ 9 ಸರಣಿ: ಹೊಸದೇನಿದೆ?

ಪಿಕ್ಸೆಲ್ 9 ಪ್ರೊ XL ಈ ಬಾರಿ ಹೊಸದಾಗಿ ಸೇರ್ಪಡೆಯಾದ ಸ್ಮಾರ್ಟ್​ಫೋನ್ ಆಗಿದೆ. ಇದು ಪಿಕ್ಸೆಲ್‌ಗಳಲ್ಲಿ ಅತಿ ದೊಡ್ಡ ಡಿಸ್‌ಪ್ಲೇ ಮತ್ತು ಬ್ಯಾಟರಿಯನ್ನು ಹೊಂದಿದೆ. ಪಿಕ್ಸೆಲ್ 9 ಸರಣಿಯು ಗೂಗಲ್ AI ನೊಂದಿಗೆ ಬರುತ್ತದೆ, ಇದು ಒಂದು ವರ್ಷದವರೆಗೆ ಗೂಗಲ್ One ಸದಸ್ಯತ್ವವನ್ನು ಹೊಂದಿದೆ. ಪಿಕ್ಸೆಲ್ 9 ಸರಣಿಯೊಂದಿಗೆ ಪರಿಚಯಿಸಲಾದ ಹೊಸ ಆನ್-ಡಿವೈಸ್ AI ವೈಶಿಷ್ಟ್ಯವೆಂದರೆ 'Pixel Screenshots'. ಇದು ನಿಮ್ಮ ಸ್ಕ್ರೀನ್‌ಶಾಟ್‌ಗಳಿಂದ ಈವೆಂಟ್‌ಗಳು ಮತ್ತು ಸ್ಥಳಗಳಂತಹ ಮಾಹಿತಿಯನ್ನು ಸೇವ್ ಮಾಡುತ್ತದೆ, ನಂತರ ಸುಲಭವಾಗಿ ನಿಮಗೆ ಹುಡುಕಬಹುದು.

ನೈಟ್ ಸೈಟ್ ವಿಡಿಯೋ ಸುಧಾರಿಸಿದೆ ಮತ್ತು ವಿಡಿಯೋ ಬೂಸ್ಟ್ ವೈಶಿಷ್ಟ್ಯ ನೀಡಲಾಗಿದ್ದು 8K ರೆಸಲ್ಯೂಶನ್​ನಲ್ಲಿ ಶೂಟ್ ಮಾಡಬಹುದು. ಗೂಗಲ್ ಕೂಡ 'ಆಡ್ ಮಿ' ಎಂಬ ಹೊಸ ಎಡಿಟಿಂಗ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಿದೆ.

ಬರಹ: ವಿನಯ್ ಭಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ