ಬೆರಗುಗೊಳಿಸುವ ಕ್ಯಾಮೆರಾ, ಭರ್ಜರಿ ಬ್ಯಾಟರಿ ಜೊತೆ ಫಾಸ್ಟ್ ಚಾರ್ಜರ್; ಒಂದೇ ದಿನ 2 ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಹಾನರ್
ಕನ್ನಡ ಸುದ್ದಿ  /  ಜೀವನಶೈಲಿ  /  ಬೆರಗುಗೊಳಿಸುವ ಕ್ಯಾಮೆರಾ, ಭರ್ಜರಿ ಬ್ಯಾಟರಿ ಜೊತೆ ಫಾಸ್ಟ್ ಚಾರ್ಜರ್; ಒಂದೇ ದಿನ 2 ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಹಾನರ್

ಬೆರಗುಗೊಳಿಸುವ ಕ್ಯಾಮೆರಾ, ಭರ್ಜರಿ ಬ್ಯಾಟರಿ ಜೊತೆ ಫಾಸ್ಟ್ ಚಾರ್ಜರ್; ಒಂದೇ ದಿನ 2 ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಹಾನರ್

ಸ್ಮಾರ್ಟ್​ಫೋನ್ ತಯಾರಕ ಕಂಪನಿ ಹಾನರ್‌, ಏಕಕಾಲಕ್ಕೆ 2 ಫೋನುಗಳನ್ನು ರಿಲೀಸ್ ಮಾಡಿದೆ. ಭಾರತದಲ್ಲಿ ಹಾನರ್ 200 5G ಮತ್ತು ಹಾನರ್ 200 ಪ್ರೊ 5G ಫೋನ್ ಮಾರಾಟಕ್ಕೆ ಸಿದ್ಧಗಿಂಡಿವೆ. ಭರ್ಜರಿ ಕ್ಯಾಮೆರಾ ಸೆಟಪ್‌ನೊಂದಿಗೆ ಫಾಸ್ಟ್ ಚಾರ್ಜಿಂಗ್‌ ಕೂಡಾ ಈ ಫೋನ್‌ನಲ್ಲಿ ಲಭ್ಯವಿದೆ.

ಒಂದೇ ದಿನ 2 ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಹಾನರ್. ಹಾನರ್ 200 5G (ಎಡ) ಮತ್ತು ಹಾನರ್ 200 ಪ್ರೊ 5G(ಬಲ)
ಒಂದೇ ದಿನ 2 ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಹಾನರ್. ಹಾನರ್ 200 5G (ಎಡ) ಮತ್ತು ಹಾನರ್ 200 ಪ್ರೊ 5G(ಬಲ) (Htech)

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಹಾನರ್ (Honor) ಕಂಪನಿ ಇದೀಗ ದಿಢೀರ್ ಆಗಿ ಒಂದೇ ದಿನ ಎರಡು ಫೋನುಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಹಾನರ್ 200 5G ಮತ್ತು ಹಾನರ್ 200 ಪ್ರೊ 5G ಫೋನುಗಳು ಅನಾವರಣಗೊಂಡಿವೆ. ಇವೆರಡೂ 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ರಿಲೀಸ್ ಆಗಿವೆ. ಬರೋಬ್ಬರಿ 100W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಬೆಂಬಲದೊಂದಿಗೆ 5,200mAh ಬ್ಯಾಟರಿ ಕೂಡ ನೀಡಲಾಗಿದೆ. ಇವಿಷ್ಟೆ ಅಲ್ಲದೆ ಇನ್ನೂ ಅನೇಕ ಫೀಚರ್​ಗಳು ಈ ಫೋನ್​ಗಳಲ್ಲಿ ಅಡಕವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾನರ್ 200 5G, ಹಾನರ್ 200 ಪ್ರೊ 5G ಬೆಲೆ, ಲಭ್ಯತೆ

ಭಾರತದಲ್ಲಿ ಹಾನರ್ 200 5G ಮೊಬೈಲ್ ಎರಡು ಆಯ್ಕೆಗಳಲ್ಲಿ ಲಭ್ಯವಿದೆ. ಇದರ 8GB RAM + 256GB ಆಯ್ಕೆಗೆ 34,999 ರೂಪಾಯಿ ಇದೆ. ಅಂತೆಯೆ 12GB RAM + 512GB ರೂಪಾಂತರದ ಬೆಲೆ 39,999 ರೂಪಾಯಿ ಆಗಿದೆ. ಮತ್ತೊಂದೆಡೆ ಹಾನರ್ 200 ಪ್ರೊ 5G ಫೋನಿನ ಏಕೈಕ 12GB RAM + 512GB ಆಯ್ಕೆಗೆ 57,999 ರೂಪಾಯಿ ನಿಗದಿ ಮಾಡಲಾಗಿದೆ.

ಸ್ಟ್ಯಾಂಡರ್ಡ್ ಮಾದರಿಯು ಕಪ್ಪು ಮತ್ತು ಮೂನ್‌ಲೈಟ್ ವೈಟ್ ಬಣ್ಣಗಳಲ್ಲಿ ಬರುತ್ತದೆ. ಪ್ರೊ ಮಾದರಿಯನ್ನು ಕಪ್ಪು ಮತ್ತು ಓಷನ್ ಸಯಾನ್ ಬಣ್ಣಗಳಲ್ಲಿ ನೀಡಲಾಗಿದೆ. ಈ ಎರಡೂ ಫೋನ್ ಕಂಪನಿಯ ವೆಬ್‌ಸೈಟ್, ಅಮೆಜಾನ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಜುಲೈ 20 ರಿಂದ ಮಾರಾಟಕ್ಕೆ ಲಭ್ಯವಿರುತ್ತವೆ.

ಕಂಪನಿಯು ಜುಲೈ 20 ಮತ್ತು ಜುಲೈ 21ರಂದು ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಹಾನರ್ 200 5G ಸರಣಿಯ ಹ್ಯಾಂಡ್‌ಸೆಟ್‌ಗಳ ಖರೀದಿಯ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಈ ಸಮಯದಲ್ಲಿ, ಐಸಿಐಸಿಐ ಅಥವಾ ಎಸ್​ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ರೂ. 3,000 ವರೆಗೆ ರಿಯಾಯಿತಿ ಪಡೆಯಬಹುದು.

ಹಾನರ್ 200 5G, ಹಾನರ್ 200 ಪ್ರೊ 5G ಫೀಚರ್ಸ್

ಹಾನರ್ 200 5G ಫೋನ್ 120Hz ರಿಫ್ರೆಶ್ ರೇಟ್ ಮತ್ತು 4,000 nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.7-ಇಂಚಿನ ಪೂರ್ಣ-HD+ OLED ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಇತ್ತ ಪ್ರೊ ಮಾದರಿ ಸ್ವಲ್ಪ ದೊಡ್ಡದಾದ 6.78-ಇಂಚಿನ ಡಿಸ್​ಪ್ಲೇ ಹೊಂದಿದೆ. ಮೂಲ ಆವೃತ್ತಿಯು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 Gen 3 SoC ನಿಂದ ಚಾಲಿತವಾಗಿದೆ ಮತ್ತು ಪ್ರೊ ರೂಪಾಂತರವು ಸ್ನಾಪ್​ಡ್ರಾಗನ್ 8s Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಆಂಡ್ರಾಯ್ಡ್ 14-ಆಧಾರಿತ MagicOS 8.0 ಮೂಲಕ ರನ್ ಆಗುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಾನರ್ 200 5G ಮತ್ತು ಹಾನರ್ 200 ಪ್ರೊ 5G ಎರಡರಲ್ಲೂ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 12-ಮೆಗಾಪಿಕ್ಸೆಲ್ ಸಂವೇದಕ ಜೊತೆಗೆ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಇದೆ. ವೆನಿಲ್ಲಾ ಮಾದರಿಯು ಸೋನಿ IMX906 ಮುಖ್ಯ ಸಂವೇದಕವನ್ನು ಹೊಂದಿದ್ದು, ಪ್ರೊ ಮಾದರಿಯು H9000 ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ಗಳ ಮುಂಭಾಗದ ಕ್ಯಾಮೆರಾಗಳು 50-ಮೆಗಾಪಿಕ್ಸೆಲ್ ಲೆನ್ಸ್ ಹೊಂದಿವೆ. ಪ್ರೊ ರೂಪಾಂತರದಲ್ಲಿ ಸೆಲ್ಫಿ ಕ್ಯಾಮೆರಾದ ಜೊತೆಗೆ ಹೆಚ್ಚುವರಿ 3D ಡೆಪ್ತ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಹಾನರ್ 200 5G ಸರಣಿಯ ಹ್ಯಾಂಡ್‌ಸೆಟ್‌ಗಳು 100W ವೇಗದ ಚಾರ್ಜಿಂಗ್‌ ಜೊತೆಗೆ 5,200mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಹಾನರ್ 200 ಪ್ರೊ 5G 66W ವೈರ್‌ಲೆಸ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್‌ಗಳ ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.3, ಯುಎಸ್‌ಬಿ ಟೈಪ್-ಸಿ ಪೋರ್ಟ್ ಇದೆ ಎಂದು ಕಂಪನಿ ತಿಳಿಸಿದೆ.

Whats_app_banner