89 ಸಾವಿರ ರೂನ ಆಪಲ್ ಐಫೋನ್ 16 ಅನ್ನು ಕೇವಲ 27 ಸಾವಿರ ರೂಗೆ ಖರೀದಿಸಿದ ಬುದ್ಧಿವಂತ, ನೀವೂ ಪ್ರಯತ್ನಿಸಿ
Oct 08, 2024 12:33 PM IST
ಐಫೋನ್ 16 ಖರೀದಿಸುತ್ತಿರುವ ಗ್ರಾಹಕರು (ಸಂಗ್ರಹ ಚಿತ್ರ)
ಐಫೋನ್ ಖರೀದಿಸುವುದು ಬಹುತೇಕರ ಕನಸು. ಆದರೆ, ಅದರ ದರ 70 ಸಾವಿರ ರೂಪಾಯಿಗಿಂತ ಹೆಚ್ಚಿರುತ್ತದೆ. ಆದರೆ, 256 ಜಿಬಿ ಸ್ಟೋರೇಜ್‌ನ ಹೊಸ ಐಫೋನ್ 16 ಅನ್ನು ಹೇಗೆ ತಾನು 27 ಸಾವಿರ ರೂಪಾಯಿಗೆ ಖರೀದಿಸಿದೆ ಎಂದು ರೆಡ್ಡಿಟ್ ಬಳಕೆದಾರನೊಬ್ಬ ತಿಳಿಸಿದ್ದಾನೆ.
ಐಫೋನ್ ಖರೀದಿಸುವುದು ಬಹುತೇಕರ ಕನಸು. ಐಫೋನ್‌ಗಾಗಿ ಹಲವು ಕೊಲೆಗಳಾಗಿವೆ. ಹೊಡೆದಾಟಗಳಾಗಿವೆ. ಐಫೋನ್‌ಗಾಗಿ ಮನೆ ಬಿಟ್ಟು ಹೋದ ಮಕ್ಕಳಿದ್ದಾರೆ. ಐಫೋನ್‌ಗಾಗಿ ಆನ್‌ಲೈನ್ ಡೆಲಿವರಿ ಬಾಯ್‌ನ ಕಥೆಯನ್ನು ಮುಗಿಸಿದ ಸುದ್ದಿಗಳಿವೆ. ಆಪಲ್ ಪ್ರಾಡಕ್ಟ್ ಕುರಿತು ಜನರಿಗೆ ಇರುವ ಮೋಹವೇ ಅಂತಹದ್ದು. ಇದರ ದುಬಾರಿ ದರ ಮತ್ತು ಪ್ರಮುಖ ಫೀಚರ್‌ಗಳು ಎಲ್ಲರನ್ನೂ ಸೆಳೆಯುತ್ತವೆ. ಐಫೋನ್ ಹೊಂದುವುದು ಪ್ರತಿಷ್ಠೆಯ ವಿಷಯವೆಂದು ಭಾರತೀಯರು ಭಾವಿಸುತ್ತಾರೆ. ಇತ್ತೀಚೆಗೆ ಆಪಲ್ ಕಂಪನಿಯು ಐಫೋನ್ 16 ಅನ್ನು ಪರಿಚಯಿಸಿತ್ತು. ಆಪಲ್ ಗ್ಲೋಟೈಮ್‌ಇವೆಂಟ್ 2024ರಲ್ಲಿ ಈ ಐಫೋನ್ ಬಿಡುಗಡೆಯಾಗಿತ್ತು. ಹೊಸ ವಿನ್ಯಾಸ, ಶಕ್ತಿಯುತ ಚಿಪ್, ಸುಧಾರಿತ ಕ್ಯಾಮೆರಾ ಮತ್ತು ಹೊಸ ಫೀಚರ್‌ಗಳಿದ್ದರೂ ಇದರ ದರ ಹಿಂದಿನ ಐಫೋನ್ ಆವೃತ್ತಿಯ ಆಸುಪಾಸಿನಲ್ಲೇ ಇತ್ತು. ಐಫೋನ್ 16 128 ಜಿಬಿ ಸ್ಟೋರೇಜ್ ದರ 79,900 ರೂಪಾಯಿಯಿಂದ ಆರಂಭವಾಗುತ್ತದೆ. 256GB ಮಾದರಿಯ ಬೆಲೆ ರೂ 89,900 ಆಗಿದೆ. ಆದರೆ, ಇದೇ 256 ಜಿಬಿಯ ಐಫೋನ್16 ಅನ್ನು ಕೇವಲ 27 ಸಾವಿರ ರೂಪಾಯಿಗೆ ಖರೀದಿಸಿದ್ದೇನೆ ಎಂದು ಭಾರತೀಯ ರೆಡ್ಡಿಟ್ ಬಳಕೆದಾರನೊಬ್ಬ ಹೇಳಿಕೊಂಡ ಬಳಿಕ ಬಹುತೇಕ ಐಫೋನ್ ಪ್ರೇಮಿಗಳು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಈ ಡೀಲ್ ಹೇಗೆ ತನ್ನದಾಗಿಸಿಕೊಂಡೆ ಎಂದು ಆತ ವಿವರಿಸಿದ್ದಾನೆ.
ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟಗಳ ಬಳಕೆ
ಆತ ಎಚ್‌ಡಿಎಫ್‌ಸಿ ಇನ್ಫಿನ್ಸಿಯಾ ಕ್ರೆಡಿಟ್ ಕಾರ್ಡ್ ಹೊಂದಿದ್ದ. ಆತನ ತನ್ನ ಪ್ರೀಮಿಯಂ ಕಾರ್ಡ್‌ನಲ್ಲಿ ಲಭ್ಯವಾಗುವ ರಿವಾರ್ಡ್ ಪಾಯಿಂಟ್‌ಗಳನ್ನು ಐಫೋನ್ ಖರೀದಿಗೆ ಬಳಸಿದ್ದಾನೆ. ತಾನು ಆಭರಣ ಖರೀದಿಸುವ ಸಮಯದಲ್ಲಿ ಅಮೆಜಾನ್ ಪೇ ಕಾರ್ಡ್ ಬಳಸಿಕೊಂಡೆ ಎಂದು ಅವರು ವಿವರಿಸಿದ್ದಾರೆ. ಆದರೆ, ಈ ರೀತಿ ಖರೀದಿಸಿದರೆ ಇನ್ಫಿನಿಯಾ ಕಾರ್ಡ್ ಪಾಯಿಂಟ್ ನೀಡುವುದಿಲ್ಲ ಎಂದು ತಿಳಿದಿದ್ದೆ. ನನಗೆ ಅಮೆಜಾನ್ ಪೇ ಮೂಲಕ ಶೇಕಡ 1 ಕ್ಯಾಶ್‌ಬ್ಯಾಕ್ ದೊರಕಿತು. ಆದರೆ, ಎಚ್‌ಡಿಎಫ್‌ಸಿ ಇನ್ಫೀನಿಯಾ ಕಾರ್ಡ್ ಆಭರಣಗಳ ಖರೀದಿಗೆ ನನಗೆ ಪಾಯಿಂಟ್ಸ್ ನೀಡಿತ್ತು ಎಂದು ಅವರು ವಿವರಿಸಿದ್ದಾರೆ.
62,930 ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಲು ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ಒಬ್ಬರು ಈ ರೆಡ್ಡಿಟ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಸುಮಾರು ಹದಿನೈದು ಲಕ್ಷ ರೂಪಾಯಿ ಎಂದು ಇನ್ನೊಬ್ಬರು ಅಂದಾಜಿಸಿದ್ದಾರೆ.
ನನ್ನಲ್ಲಿ regalia 50 ಸಾವಿರ ಪಾಯಿಂಟ್‌ಗಳಿವೆ. ಆದರೆ, ನನಗೆ ಐಫೋನ್ 13 ಖರೀದಿಸಲು ಪಾಯಿಂಟ್ ಬಳಕೆ ಆಯ್ಕೆ ಕಾಣಿಸುತ್ತಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ನನಗೆ ಕ್ರೆಡಿಟ್ ಕಾರ್ಡ್ ಬಗ್ಗೆ ಏನೂ ತಿಳಿದಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಕ್ರೆಡಿಟ್ ಕಾರ್ಡ್ ಹೊಂದುವುದು ತಪ್ಪಲ್ಲ. ಜಾಣತನದಿಂದ ಬಳಸಿದರೆ ಅದರಿಂದ ಸಾಕಷ್ಟು ಲಾಭವಿದೆ ಎನಿಸುತ್ತದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹೇಗಿದೆ ಹೊಸ ಐಫೋನ್ 16?
ಐಫೋನ್ 16ನಲ್ಲಿ ಅತ್ಯಧಿಕ ವೇಗದ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಲಾಗಿದೆ. 25 ವ್ಯಾಟ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಕ್ಯೂ 2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್ ನೀಡಲಾಗಿದೆ. ವೈರ್‌ಲೆಸ್ ಆಗಿಯೂ ಸ್ಪೀಡ್ ಆಗಿ ಚಾರ್ಜ್ ಮಾಡಲು ಇದು ನೆರವಾಗುತ್ತದೆ. ಫೋನ್ 16 ಸೀರಿಸ್‌ನಲ್ಲಿ ವೈ-ಫೈ 6ಇನಿಂದ ವೈ-ಫೈ 7 ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ. ಇದರಿಂದ ವೇಗವಾಗಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡಲು ನೆರವು ನೀಡುತ್ತದೆ. ಪಲ್ ತನ್ನ ಕ್ವಿಕ್ಟೇಕ್ ಅನ್ನು ನವೀಕರಿಸಿದೆ. ಅಂದ್ರೆ 60 ಎಫ್ಪಿಎಸ್ ಮತ್ತು ಡಾಲ್ಬಿ ವಿಷನ್ ಬೆಂಬಲದ ಜತೆ 1080 ಪಿಯಿಂದ 4 ಕೆ ರೆಸಲ್ಯೂಶನ್ ವೀಡಿಯೊಗೆ ನವೀಕರಿಸಿದೆ. ಡೀಫಾಲ್ಟ್ ಫೋಟೋ ಮೋಡ್‌ನಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಸೆರೆಹಿಡಿಯಲು ಇದರಿಂದ ಸಾಧ್ಯವಾಗಿದೆ.ಹೊಸ ಕ್ಯಾಮೆರಾಗಳು, ಕ್ಯಾಮೆರಾ ನಿಯಂತ್ರಣ ಬಟನ್ ಮತ್ತು ವಿನ್ಯಾಸದಲ್ಲಿ ಬದಲಾವಣೆ ಇತ್ಯಾದಿಗಳನ್ನು ಹೊಸ ಐಫೋನ್ 16ನಲ್ಲಿ ಗುರುತಿಸಬಹುದು.