Lava Agni 3: ಅಕ್ಟೋಬರ್‌ 4ರಂದು ಸ್ವದೇಶಿ ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ ಬಿಡುಗಡೆ; ಥೇಟ್‌ ಐಫೋನ್‌ 16ನಂತಹ ಫೀಚರ್‌
ಕನ್ನಡ ಸುದ್ದಿ  /  ಜೀವನಶೈಲಿ  /  Lava Agni 3: ಅಕ್ಟೋಬರ್‌ 4ರಂದು ಸ್ವದೇಶಿ ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ ಬಿಡುಗಡೆ; ಥೇಟ್‌ ಐಫೋನ್‌ 16ನಂತಹ ಫೀಚರ್‌

Lava Agni 3: ಅಕ್ಟೋಬರ್‌ 4ರಂದು ಸ್ವದೇಶಿ ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ ಬಿಡುಗಡೆ; ಥೇಟ್‌ ಐಫೋನ್‌ 16ನಂತಹ ಫೀಚರ್‌

Lava Agni 3: ಭಾರತದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಲಾವಾ ಇಂಟರ್‌ನ್ಯಾಷನಲ್‌ ಅಕ್ಟೋಬರ್‌ 3ರಂದು ಲಾವಾ ಅಗ್ನಿ 4 ಎಂಬ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ. ಐಫೋನ್‌ 16ನಲ್ಲಿರುವಂತಹ ಕ್ಯಾಮೆರಾ ಬಟನ್‌ ಫೀಚರ್‌ ಇದರಲ್ಲಿ ಇರಲಿದೆ.

ಲಾವಾ ಅಗ್ನಿ 3 ಸರಣಿಯಲ್ಲಿ ಸಾಕಷ್ಟು ಹೊಸ ಫೀಚರ್‌ಗಳು ಇರುವ ನಿರೀಕ್ಷೆಯಿದೆ. ಐಫೋನ್‌ 16ನಂತೆ ಕ್ಯಾಮೆರಾ ಕಂಟ್ರೋಲ್‌ ಬಟನ್‌ ಇರುವ ನಿರೀಕ್ಷೆಯಿದೆ.
ಲಾವಾ ಅಗ್ನಿ 3 ಸರಣಿಯಲ್ಲಿ ಸಾಕಷ್ಟು ಹೊಸ ಫೀಚರ್‌ಗಳು ಇರುವ ನಿರೀಕ್ಷೆಯಿದೆ. ಐಫೋನ್‌ 16ನಂತೆ ಕ್ಯಾಮೆರಾ ಕಂಟ್ರೋಲ್‌ ಬಟನ್‌ ಇರುವ ನಿರೀಕ್ಷೆಯಿದೆ. (Lava)

ಸ್ವದೇಶಿ ಸ್ಮಾರ್ಟ್‌ಫೋನ್‌ ಕಂಪನ ಲಾವಾ ಇಂಡಿಯಾವು ಅಗ್ನಿ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ. ಇದರ ಹೆಸರು ಲಾವಾ ಅಗ್ನಿ 3 ಎಂದಿರಲಿದೆ. ಇದು ಅಕ್ಟೋಬರ್‌ 4ರಂದು ಬಿಡುಗಡೆಯಾಗಲಿದೆ. ಕಳೆದ ವರ್ಷ ಬಿಡುಗಡೆಯಾದ ಲಾವಾ ಅಗ್ನಿ 2ರ ಮುಂದಿನ ಆವೃತ್ತಿ ಇದಾಗಿದೆ. ಇದು ಪ್ರೀಮಿಯಂ ಗ್ಲಾಸ್‌ ಬ್ಯಾಕ್‌, ಮೆಟಲ್‌ ಕನ್‌ಸ್ಟ್ರಕ್ಷನ್‌, ಕರ್ವ್‌ರ್ಡ್‌ ಡಿಸ್‌ಪ್ಲೇ ಹೊಂದಿತ್ತು.

ಇದೀಗ ಲಾವಾ ಅಗ್ನಿ 3 ಸರಣಿಯಲ್ಲಿ ಸಾಕಷ್ಟು ಹೊಸ ಫೀಚರ್‌ಗಳು ಇರುವ ನಿರೀಕ್ಷೆಯಿದೆ. ಐಫೋನ್‌ 16ನಂತೆ ಕ್ಯಾಮೆರಾ ಕಂಟ್ರೋಲ್‌ ಬಟನ್‌ ಇರುವ ನಿರೀಕ್ಷೆಯಿದೆ. ಜತೆಗೆ, ಲಾವಾದ ಕ್ಯಾಮೆರಾ ಇನ್ನಷ್ಟು ಉತ್ತಮವಾಗಿರುವ ಸೂಚನೆಯಿದೆ. ಹೊಸ ವಿನ್ಯಾಸದಲ್ಲಿ ಆಗಮಿಸಲಿರುವ ನೂತನ ಅಗ್ನಿ 3 ಕುರಿತು ಸಾಕಷ್ಟು ನಿರೀಕ್ಷೆಗಳು ಮೂಡಿವೆ.

ಏನು ನಿರೀಕ್ಷಿಸಬಹುದು?

ಈಗಾಗಲೇ ಲಾವಾ ಇಂಡಿಯಾವು ಅಧಿಕೃತವಾಗಿ ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ನ ಟೀಸರ್‌ ಬಿಡುಗಡೆ ಮಾಡಿದೆ. ಟೀಸರ್‌ನಲ್ಲಿ ಈ ಫೋನ್‌ನಲ್ಲಿ ಟ್ರಿಪಲ್‌ ಕ್ಯಾಮೆರಾ ಇರುವುದು ಕಾಣಿಸಿದೆ. ಆಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೇಷನ್‌ ಫೀಚರ್‌ ಇರಲಿದೆ. ಇದರೊಂದಿಗೆ ಇದರ ವಿನ್ಯಾಸ ಮತ್ತು ನಿರ್ಮಾಣ ವಿಚಾರವೂ ಟೀಸರ್‌ನಲ್ಲಿ ಕಾಣಿಸಿದೆ. ಲಾವಾ ಬ್ಲೇಜ್‌ 3 ಮತ್ತು ಲಾವಾ ಅಗ್ನಿ 2ನಲ್ಲಿರುವಂತಹ ಕರ್ವ್‌ಡ್‌ ಡಿಸ್‌ಪ್ಲೇ ಇದೆ. ಈ ಹಿಂದಿನ ಟ್ರೆಂಡ್‌ಗಳನ್ನು ಗಮನಿಸಿದರೆ ಇದರಲ್ಲಿಯೂ ಹಿಂಬದಿ ಗ್ಲಾಸ್‌ ಇರುವ ಸೂಚನೆ ಇದೆ.

ಲಾವಾದ ಕಡೆಯಿಂದ ಸರ್‌ಪ್ರೈಸ್‌ ಏನೆಂದರೆ ಇದಕ್ಕೆ ಐಫೋನ್‌ 16ನಂತೆ ಇರುವ ಕ್ಯಾಪ್ಚರ್‌ ಬಟನ್‌ ಅಥವಾ ಆಕ್ಷನ್‌ ಬಟನ್‌ ಅಳವಡಿಸಲಿದೆಯಂತೆ. ಪವರ್‌ ಬಟನ್‌ಗಿಂತ ಕೆಳಭಾಗದ ಚಿತ್ರವನ್ನು ಗಮನಿಸಿದಾಗ ಇಂತಹ ಫೀಚರ್‌ ಇರುವ ಸಾಧ್ಯತೆಯನ್ನು ಟೆಕ್‌ ಪಂಡಿತರು ಊಹಿಸಿದ್ದಾರೆ.

ಲಾವಾ ಅಗ್ನಿ 3 ಬಿಡುಗಡೆ ದಿನಾಂಕ ಮತ್ತು ಸ್ಪೆಸಿಫಿಕೇಷನ್‌

ಲಾವಾ ಕಂಪನಿಯು ಲಾವಾ ಅಗ್ನಿ 3 ಬಿಡುಗಡೆ ಕುರಿತು ಅಧಿಕೃತವಾಗಿ ವಿವರ ನೀಡಿದೆ. ಅಕ್ಟೋಬರ್‌ 4ರಂದು ಲಾಂಚ್‌ ಆಗಲಿದೆ. ಅಂದರೆ, ಇನ್ನು ಕೆಲವೇ ದಿನಗಳಿವೆ. ವರದಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಎಫ್‌ಎಚ್‌ಡಿ ಪ್ಲಸ್‌ ಅಮೊಲೆಡ್‌ ಪ್ಯಾನೆಲ್‌ ಹೊಂದಿರಲಿದೆ. ಇದು 120ಎಚ್‌ಝಡ್‌ ರಿಪ್ರೆಶ್‌ ದರ ಹೊಂದಿರಲಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 7300 ಎಸ್‌ಒಸಿ ಹೊಂದಿರಲಿದೆ. ಮೊಟೊರೊಲಾ ಎಡ್ಜ್‌ 50 ನಿಯೋ ಮತ್ತು ನಥಿಂಗ್‌ ಸಿಎಂಎಫ್‌ ಫೋನ್‌ 1ರನಲ್ಲೂ ಇದೆ ಮೀಡಿಯಾಟೆಕ್‌ ಟೆಕ್ನಾಲಜಿ ಇದೆ. ಮೇನ್‌ ಕ್ಯಾಮೆರಾವು 64 ಮೆಗಾ ಫಿಕ್ಸೆಲ್‌ ಇರುವ ನಿರೀಕ್ಷೆಯಿದೆ. ಇದರೊಂದಿಗೆ 8 ಮೆಗಾ ಫಿಕ್ಸೆಲ್‌ನ ಅಲ್ಟ್ರಾವೈಡ್‌ ಮತ್ತು 2ಎಂಪಿ ಡೆಪ್ತ್‌ ಸೆನ್ಸಾರ್‌ ಕೂಡ ಇರುವ ನಿರೀಕ್ಷೆಯಿದೆ.

Whats_app_banner