logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಯೂಟ್ಯೂಬ್‌ ಚಾನೆಲ್‌ ಹಣಗಳಿಕೆ ಹಂತ ತಲುಪಿಲ್ವ? ಕ್ಷಿಪ್ರವಾಗಿ 1 ಸಾವಿರ ಚಂದಾದಾರರು, 4 ಸಾವಿರ ಗಂಟೆ ವೀಕ್ಷಣೆ ಅವಧಿ ಹೀಗೆ ಪಡೆಯಿರಿ

ನಿಮ್ಮ ಯೂಟ್ಯೂಬ್‌ ಚಾನೆಲ್‌ ಹಣಗಳಿಕೆ ಹಂತ ತಲುಪಿಲ್ವ? ಕ್ಷಿಪ್ರವಾಗಿ 1 ಸಾವಿರ ಚಂದಾದಾರರು, 4 ಸಾವಿರ ಗಂಟೆ ವೀಕ್ಷಣೆ ಅವಧಿ ಹೀಗೆ ಪಡೆಯಿರಿ

Praveen Chandra B HT Kannada

Oct 10, 2024 02:14 PM IST

google News

ಯೂಟ್ಯೂಬ್‌ ಹಣಗಳಿಕೆ: ಕ್ಷಿಪ್ರವಾಗಿ 1 ಸಾವಿರ ಚಂದಾದಾರರು, 4 ಸಾವಿರ ಗಂಟೆ ವೀಕ್ಷಣೆ

    • Youtube Monetization Tips: ಅತ್ಯಂತ ಉತ್ಸಾಹದಿಂದ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದವರು ವರ್ಷಗಳು ಕಳೆದರೂ 1 ಸಾವಿರ ಚಂದಾದಾರರು ಮತ್ತು 4 ಸಾವಿರ ಗಂಟೆ ವಾಚ್‌ ಅವರ್‌ ಹಂತ ತಲುಪದೇ ಪರಿತಪಿಸುತ್ತಾರೆ. ಶಾರ್ಟ್ಸ್‌ ವಾಚ್‌ ಅವರ ಬೇರೆ ಇರುತ್ತದೆ. ಇಲ್ಲಿ ನೀಡಿರುವ ಸಲಹೆ ಪಾಲಿಸಿದ್ರೆ ಒಂದು ತಿಂಗಳೊಳಗೆ ನಿಮ್ಮ ಯೂಟ್ಯೂಬ್‌ ಮಾನಿಟೈಜೇಷನ್‌ ಹಂತ ತಲುಪಬಹುದು.
ಯೂಟ್ಯೂಬ್‌  ಹಣಗಳಿಕೆ: ಕ್ಷಿಪ್ರವಾಗಿ 1 ಸಾವಿರ ಚಂದಾದಾರರು, 4 ಸಾವಿರ ಗಂಟೆ ವೀಕ್ಷಣೆ
ಯೂಟ್ಯೂಬ್‌ ಹಣಗಳಿಕೆ: ಕ್ಷಿಪ್ರವಾಗಿ 1 ಸಾವಿರ ಚಂದಾದಾರರು, 4 ಸಾವಿರ ಗಂಟೆ ವೀಕ್ಷಣೆ

Youtube Monetization Tips: ಸಾಕಷ್ಟು ಜನರು ಗೂಗಲ್‌ನಲ್ಲಿ how to monetize youtube channel quickly ಎಂದು ಹುಡುಕುತ್ತಾರೆ. ಸಾಕಷ್ಟು ಜನರು ಯೂಟ್ಯೂಬ್‌ ಚಾನೆಲ್‌ ಮೂಲಕ ಸಾಕಷ್ಟು ಹಣ ಗಳಿಸುವ ಕನಸು ಕಾಣುತ್ತಾರೆ. ಅತ್ಯಂತ ಉತ್ಸಾಹದಿಂದ ಚಾನೆಲ್‌ ಆರಂಭಿಸುತ್ತಾರೆ. ಇನ್ಮುಂದೆ ಮಿಲಿಯನ್‌ ಗಟ್ಟಲೆ ವ್ಯೂಸ್‌ ಬರುತ್ತದೆ ಎಂದು ಕಾಯುತ್ತಾರೆ. ಆದರೆ, ಕಷ್ಟಪಟ್ಟು ವಿಡಿಯೋ ರಚಿಸಿ, ಅದನ್ನು ಎಡಿಟಿಂಗ್‌ ಮಾಡಿ ಅಪ್ಲೋಡ್‌ ಮಾಡಿ ಸಾಕಷ್ಟು ಸಮಯ ನೀಡಿದರೂ ಚಂದಾದಾರರು ಹೆಚ್ಚುವುದಿಲ್ಲ. ವಾಚ್‌ ಅವರ್‌ ಅಂತು ಹೆಚ್ಚಾಗುವುದೇ ಇಲ್ಲ. ಕೆಲವೊಮ್ಮೆ ಈ ರೀತಿ ಪ್ರಯತ್ನ ಪಟ್ಟು ಇನ್ನೇನೂ ನಾಲ್ಕು ಸಾವಿರ ಗಂಟೆ ವಾಚ್‌ ಅವರ್‌ ಆಗಿದೆ ಎಂದಾಗ ಒಂದು ವರ್ಷ ದಾಟುತ್ತದೆ. 365 ದಿನಗಳ ಹಿಂದೆ ಸಂಪಾದಿಸಿದ ವಾಚ್‌ ಅವರ್‌ ಮೈನಸ್‌ ಆಗುತ್ತದೆ. ಮತ್ತೆ ನಾಲ್ಕು ಸಾವಿರ ಗಂಟೆ ತಲುಪಲು ಪ್ರಯತ್ನ ಪಡೆಬೇಕಾಗುತ್ತದೆ. ಶಾರ್ಟ್ಸ್‌ ವಿಡಿಯೋ ಮೂಲಕ ಫಾಲೋವರ್ಸ್‌ ಹೆಚ್ಚಿಸಿಕೊಳ್ಳಬಹುದಾದರೂ ಅದರ ವೀಕ್ಷಣೆ ಅವಧಿ ಹತ್ತು ದಶಲಕ್ಷ ಎನ್ನುವುದನ್ನು ನೋಡಿ ಅಚ್ಚರಿಗೊಂಡಿರಬಹುದು.

ಯೂಟ್ಯೂಬ್‌ ಚಾನೆಲ್‌ ಕ್ಷಿಪ್ರವಾಗಿ ಮಾನಿಟೈಜೇಷನ್‌ ಹೇಗೆ?

ಆದರೆ, ಸಾಕಷ್ಟು ಬುದ್ದಿವಂತರು ಕೆಲವೇ ದಿನಗಳಲ್ಲಿ ಕ್ಷಿಪ್ರವಾಗಿ ಚಂದಾದಾರರನ್ನು ಮತ್ತು ವಾಚ್‌ ಅವರ್‌ ಹಂತವನ್ನು ದಾಟಿ ಮಾನಿಟೈಜೇಷನ್‌ ಹಂತ ತಲುಪುತ್ತಾರೆ. ಯೂಟ್ಯೂಬ್‌ ಚಾನೆಲ್‌ ಮಾನಿಟೈಜೇಷನ್‌ ಕ್ಷಿಪ್ರವಾಗಿ 1 ಸಾವಿರ ಚಂದಾದಾರರು, 4000 ಗಂಟೆ ವೀಕ್ಷಣೆ ಪಡೆಯಲು ಬಯಸಿದರೆ ಈ ಲೇಖನದಲ್ಲಿ ಒಂದಿಷ್ಟು ಸಲಹೆ ನೀಡಲಾಗಿದೆ. ಕೆಲವು ದಿನಗಳ ಕಾಲ ನಿರಂತರವಾಗಿ ಯೂಟ್ಯೂಬ್‌ ಚಾನೆಲ್‌ಗೆ ವಿಡಿಯೋ ಹಾಕಲು ಸಮಯ ಇರುವವರು ಮಾತ್ರ ಈ ಸಲಹೆಗಳನ್ನು ಪಾಲಿಸಬಹುದು.

ಹೆಚ್ಚು ಜನರು ವೀಕ್ಷಿಸುವಂತಹ ಕಂಟೆಂಟ್‌ ಹಾಕಿ

ಈಗ ಯಾವ ಕಂಟೆಂಟ್‌ಗೆ ಹೆಚ್ಚು ಬೇಡಿಕೆ ಇದೆ ಅಂತಹ ಕಂಟೆಂಟ್‌ ಅನ್ನು ಮಾನಿಟೈಜೇಷನ್‌ ಆಗುವ ತನಕ ಹಾಕಿ. ಸಿನಿಮಾ ನಟಿಯರು, ನಟರ ಸುದ್ದಿಗಳು, ಸೀರಿಯಲ್‌ ಸುದ್ದಿಗಳು, ವೈರಲ್‌ ಸುದ್ದಿಗಳ ಬಗ್ಗೆ ಮಾಹಿತಿ ನೀಡುವ ಕಂಟೆಂಟ್‌ಗಳನ್ನು ಹಾಕಿ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಇಂತಹ ಕಂಟೆಂಟ್‌ಗಳನ್ನು ಎಲ್ಲರಿಗಿಂತ ಮೊದಲು ಹಾಕಲು ಪ್ರಯತ್ನಿಸಿ. ಜನಪ್ರಿಯ ಸಿನಿಮಾ ನಟಿಯರು, ಸೀರಿಯಲ್‌ ನಟಿಯರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಿ. ಅವರ ಹೊಸ ಫೋಟೋಗಳು, ಸೀಮಂತದ ಫೋಟೋಗಳು, ಹೊಸ ಸಿನಿಮಾದ ಅಪ್‌ಡೇಟ್‌ಗಳ ವಿವರವನ್ನು ವಿಡಿಯೋ ಮತ್ತು ಶಾರ್ಟ್ಸ್‌ ರೂಪದಲ್ಲಿ ನೀಡಿ. ಕೆಲವೇ ದಿನಗಳಲ್ಲಿ ನಿಮ್ಮ ಫಾಲೋವರ್ಸ್‌ ಮತ್ತು ವಾಚ್‌ ಅವರ್‌ ಹೆಚ್ಚುವ ಪರಿಯನ್ನು ನೋಡಿರಿ. ಒಮ್ಮೆ ಮಾನಿಟೈಜೇಷನ್‌ ಆದ ಬಳಿಕ ನೀವು ನಿಮ್ಮ ಪ್ರತಿಭೆಗೆ ತಕ್ಕಂತಹ ವಿಡಿಯೋ ಹಾಕಲು ಆರಂಭಿಸಬಹುದು. ಅಂದರೆ, ಕೋಚಿಂಗ್‌, ಅಡುಗೆ ಅಥವಾ ನೀವು ಏನು ಚಾನೆಲ್‌ ಮಾಡಿ ಫೇಮಸ್‌ ಆಗಬೇಕೆಂದುಕೊಂಡಿದ್ದೀರೋ ಅಂತಹ ಕಂಟೆಂಟ್‌ ಹಾಕಲು ಆರಂಭಿಸಬಹುದು.

ದೊಡ್ಡ ಗಾತ್ರದ ವಿಡಿಯೋ ಹಾಕಲು ಆದ್ಯತೆ ನೀಡಿ

ಯೂಟ್ಯೂಬ್‌ನಲ್ಲಿ ತುಂಬಾ ಕಷ್ಟಪಟ್ಟು ಮಾಡಿರುವ ವಿಡಿಯೋ ನೂರು ಚಿಲ್ಲರೆ ವೀಕ್ಷಣೆ ಪಡೆದರೆ ಬೇಜಾರಾಗಬಹುದು. ಕೆಲವೊಮ್ಮೆ ಅತ್ಯುತ್ತಮ ಎಂದು ಯೂಟ್ಯೂಬ್‌ ಭಾವಿಸುವ ವಿಡಿಯೋಗಳನ್ನು ರೆಕಮಂಡೇಷನ್‌ನಲ್ಲಿ ಕಳುಹಿಸುತ್ತದೆ. ಅನಿರೀಕ್ಷಿತವಾಗಿ ನಿಮ್ಮ ದೊಡ್ಡ ವಿಡಿಯೋವೊಂದು ವೈರಲ್‌ ಆಗಬಹುದು. ಸಾಕಷ್ಟು ಜನರಿಗೆ ಇಂತಹ ಅನುಭವವಾಗಿದೆ. ಅರ್ಧ ಗಂಟೆಯ ವಿಡಿಯೋವೊಂದು ತನ್ನಷ್ಟಕ್ಕೆ ಹಲವು ಸಾವಿರ ವೀಕ್ಷಣೆ ಪಡೆದು ಮಾನಿಟೈಜೇಷನ್‌ ಹಂತ ತಲುಪಲು ನೆರವಾಗಿದೆ.

ಪಾಡ್‌ಕಾಸ್ಟ್‌ ಎಪಿಸೋಡ್‌ಗಳು

ನೀವು ಧ್ವನಿ ನೀಡಿ ಮಾಡುವ ಪಾಡ್‌ಕಾಸ್ಟ್‌ ವಿಡಿಯೋಗಳಿಗೆ ಬೇಡಿಕೆ ಹೆಚ್ಚಿರುತ್ತದೆ.

ಮಕ್ಕಳ ಕಂಟೆಂಟ್‌

ಮಕ್ಕಳು ಮತ್ತೆ ಮತ್ತೆ ನೋಡುವಂತಹ ಕಂಟೆಂಟ್‌ ಹಾಕಬಹುದು. ಪುಟಾಣಿ ಮಕ್ಕಳು ಕೇಳುವ ರೈಮ್ಸ್‌, ಹಾಡುಗಳು, ಕಥೆಗಳ ಕಂಟೆಂಟ್‌ ರಚಿಸಿ.

ಬೇಡಿಕೆಯಲ್ಲಿರುವ ಕಂಟೆಂಟ್‌ನ ವಿವರಣೆ

ಜನರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವ ವಿಷಯದ ಕುರಿತು ಪೂರ್ಣ ಮಾಹಿತಿ ನೀಡುವಂತಹ ವಿಡಿಯೋ ಹಾಕಿ. ನಿಮಗೆ ಪರಿಣತಿ ಇರುವ ವಿಷಯಗಳ ಕುರಿತು ಮಾತನಾಡಿ. ಇಂಗ್ಲಷ್‌ ಕಲಿಕೆ, ಕೋಡಿಂಗ್‌ ಕಲಿಕೆ, ಗಣಿತದಂತಹ ಕಷ್ಟದ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಡುವುದು... ಇಂತಹ ವಿಡಿಯೋಗಳನ್ನು ಹಾಕಿ.

ಲೈವ್‌ ಸ್ಟ್ರೀಮ್‌

ಯಾವುದಾದರೂ ಪ್ರಮುಖ ಜಾತ್ರೆ, ಹಬ್ಬ ಹರಿದಿನಗಳ ಲೈವ್‌ ವಿಡಿಯೋ ಮಾಡಬಹುದು. ನೀವು ಒಂದು ಗಂಟೆಯ ಲೈವ್‌ ವಿಡಿಯೋ ಮಾಡಿದ್ದರೆ, ಅದನ್ನು ಹತ್ತಿಪ್ಪತ್ತು ಜನರು ನೋಡಿದರೂ ನಿಮಗೆ ಸುಲಭವಾಗಿ ಹಲವು ಗಂಟೆ ವಾಚ್‌ ಅವರ್ಸ್‌ ಆಗುತ್ತದೆ. ಎಲ್ಲಾದರೂ ಲೈವ್‌ ವಿಡಿಯೋ ಹೆಚ್ಚಿನ ಬೇಡಿಕೆಯದ್ದಾಗಿದ್ದರೆ ಶೀಘ್ರದಲ್ಲಿ ನಿಮ್ಮ ವಾಚ್‌ ಅವರ್‌ ಹೆಚ್ಚಲಿದೆ.

ಜನರು ನೋಡುವಂತಹ ಆಕರ್ಷಕ ವಿಡಿಯೋಗಳನ್ನು ಹಾಕಿ. ಹಾಸ್ಯ ಅಥವಾ ಮಾಹಿತಿ ಇರುವಂತಹ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇತರರರು ಹಾಕುವ ವಿಡಿಯೋಗಳನ್ನು ಸ್ಟಡಿ ಮಾಡುತ್ತ ನೀವು ಬೇಗನೇ ವಾಚ್‌ ಅವರ್‌ ಮತ್ತು ಸಬ್‌ಸ್ಕ್ರೈಬರ್‌ಗಳನ್ನು ಪಡೆಯಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ