Yoga to cure Mental illness: ಖಿನ್ನತೆಯಿಂದ ಹೊರ ಬರಲು ಬಹಳ ಸಹಕಾರಿ ಈ ಯೋಗ ಭಂಗಿಗಳು
Sep 07, 2022 01:58 PM IST
ಮಾನಸಿಕ ಆರೋಗ್ಯಕ್ಕೆ ಯೋಗ
- ಈ ಖಿನ್ನತೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದರೆ ಯೋಗದಿಂದ ಮಾನಸಿಕ ಸ್ಥಿರತೆ ಸಾಧ್ಯ. ನಮ್ಮ ದೇಹಕ್ಕೆ ವ್ಯಾಯಾಮ ಹೇಗೆ ಅಗತ್ಯವೋ ಮನಸ್ಸಿಗೆ ಕೂಡಾ ಬಹಳ ಅಗತ್ಯ. ಕೆಲವೊಂದು ಯೋಗ ಭಂಗಿಗಳು ನಿಮಗೆ ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ.
ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷವಾಗಿರಲು ನೆಮ್ಮದಿ ಇರಬೇಕು, ಪ್ರತಿ ಹಂತದಲ್ಲೂ ಸಮಸ್ಯೆಗಳನ್ನು ಎದುರಿಸುತ್ತಾ ನಿಂತರೆ ಜೀವನದಲ್ಲಿ ಸುಖ, ಸಂತೋಷ, ಶಾಂತಿ ಎಂಬುದು ಕಿಂಚಿತ್ತೂ ಇರುವುದಿಲ್ಲ. ಖಿನ್ನತೆಯಿಂದ ಬಳಲುವ ಜನರು ಆಶಾವಾದಿಗಳಾಗಿರಬೇಕು ಮತ್ತು ಜೀವನದಲ್ಲಿ ಒಳ್ಳೆ ದಿನಗಳು ಬರುತ್ತದೆ ಎಂಬ ನಂಬಿಕೆಯನ್ನು ಹೊಂದಿರಬೇಕು. ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳು ಇರುತ್ತವೆ. ಜೀವನದಲ್ಲಿ ಕಷ್ಟಗಳು ಬಂದಾಗ ಕುಗ್ಗದೆ ಅದನ್ನು ಧೈರ್ಯವಾಗಿ ಎದುರಿಸುತ್ತೇನೆ ಎಂಬ ಛಲ ಇರಬೇಕು.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯಕರ ಜೀವನಶೈಲಿ, ಒತ್ತಡದ ಜೀವನ, ಹಾರ್ಮೋನ್ ಅಸಮತೋಲನ, ಒತ್ತಡ ಇವೆಲ್ಲವೂ ಈ ಮಾನಸಿಕ ಸಮಸ್ಯೆಗೆ ಕಾರಣ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಶಕ್ತಿ ಇಲ್ಲದಿರುವುದು ಇನ್ನೊಂದು ಪ್ರಮುಖ ಕಾರಣ. ಈ ಖಿನ್ನತೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದರೆ ಯೋಗದಿಂದ ಮಾನಸಿಕ ಸ್ಥಿರತೆ ಸಾಧ್ಯ. ನಮ್ಮ ದೇಹಕ್ಕೆ ವ್ಯಾಯಾಮ ಹೇಗೆ ಅಗತ್ಯವೋ ಮನಸ್ಸಿಗೆ ಕೂಡಾ ಬಹಳ ಅಗತ್ಯ. ಕೆಲವೊಂದು ಯೋಗ ಭಂಗಿಗಳು ನಿಮಗೆ ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ.
ಬಾಲಾಸನ (ಚೈಲ್ಡ್ ಪೋಸ್)
ಈ ಆಸನವು ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಜೊತೆಗೆ ನರಮಂಡಲವನ್ನು ಬಲಪಡಿಸುತ್ತದೆ.
ಹಾಲಾಸನ
ಹಾಲಾಸನ ಮಾಡುವುದರಿಂದ ಒತ್ತಡ ಮತ್ತು ಆಯಾಸ ಕಡಿಮೆಯಾಗುತ್ತದೆ. ನರಮಂಡಲವನ್ನು ಬಲಪಡಿಸುತ್ತದೆ.ಅಲ್ಲದೆ, ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ಶವಾಸನ
ಈ ಆಸನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ದೇಹ ಹಾಗೂ ಮನಸ್ಸಿಗೆ ಬಹಳ ರಿಫ್ರೆಷ್ ಎನ್ನಿಸುತ್ತದೆ. ವಾತ ದೋಷವನ್ನು ಕಡಿಮೆ ಮಾಡುತ್ತದೆ.
ಸೇತುಬಂಧಾಸನ
ಸೇತುಬಂಧಾಸನ ಮಾಡುವುದರಿಂದ ಒತ್ತಡ ಮತ್ತು ಆತಂಕ ಕಡಿಮೆ ಆಗುತ್ತದೆ. ಮನಸ್ಸು ಬಹಳ ಶಾಂತವಾಗುತ್ತದೆ. ಶ್ವಾಸಕೋಶವನ್ನು ಬಲಪಡಿಸುತ್ತದೆ. ಈ ಆಸನದಿಂದ ಥೈರಾಯ್ಡ್ ಸಮಸ್ಯೆ ಕೂಡಾ ಕಡಿಮೆಯಾಗುತ್ತದೆ.
ಈ ಯೋಗಾಸನಗಳ ಜೊತೆಗೆ ಪ್ರಶಾಂತವಾಗಿರುವ ಸ್ಥಳದಲ್ಲಿ ಕುಳಿತು ಕನಿಷ್ಠ 5 ನಿಮಿಷ ಧ್ಯಾನ ಮಾಡಿ. ಜೊತೆಗೆ ಉಜ್ಜಯೀ ಪ್ರಾಣಾಯಾಮ, ಕಪಾಲಬಾತಿ ಪ್ರಾಣಾಯಾಮ, ಅನುಲೋಮ ವಿಲೋಮ ಪ್ರಾಣಾಯಾಮ, ನಾಡಿ ಶೋಧನದಂತಹ ಉಸಿರಾಟದ ವ್ಯಾಯಾಮಗಳು ಕೂಡಾ ನಿಮ್ಮ ಖಿನ್ನತೆಯನ್ನು ದೂರ ಮಾಡುತ್ತದೆ.