logo
ಕನ್ನಡ ಸುದ್ದಿ  /  ಜೀವನಶೈಲಿ  /  Thursday Motivation: ಜೀವನದಲ್ಲಿ ಸಾಧನೆಗೆ ಅಡ್ಡಿಯಾಗುವ ಈ 6 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ

Thursday Motivation: ಜೀವನದಲ್ಲಿ ಸಾಧನೆಗೆ ಅಡ್ಡಿಯಾಗುವ ಈ 6 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ

Raghavendra M Y HT Kannada

Feb 15, 2024 06:50 AM IST

google News

ಜೀವನದಲ್ಲಿ ನಿಮ್ಮ ಸಾಧನೆಗೆ ಅಡ್ಡಿಯಾಗುವ ಕೆಲವೊಂದು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ

  • Thursday Motivation: ಯಾರೆಲ್ಲಾ ತಮ್ಮ ಇಷ್ಟದ ಕ್ಷೇತ್ರಗಳಲ್ಲಿ ಗೆಲ್ಲಬೇಕು, ಏನಾದರೂ ಸಾಧಿಸಬೇಕೆಂದು ಬಯಸುತ್ತಾರೋ ಅವರು ಮೊದಲು ತಮ್ಮಲ್ಲಿನ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಡಬೇಕಾಗುತ್ತದೆ.

ಜೀವನದಲ್ಲಿ ನಿಮ್ಮ ಸಾಧನೆಗೆ ಅಡ್ಡಿಯಾಗುವ ಕೆಲವೊಂದು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ
ಜೀವನದಲ್ಲಿ ನಿಮ್ಮ ಸಾಧನೆಗೆ ಅಡ್ಡಿಯಾಗುವ ಕೆಲವೊಂದು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ

ಪ್ರತಿಯೊಬ್ಬರು ಜೀವನದಲ್ಲಿ ಏನಾದರೂ ಸಾಧಿಸಬೇಕು, ಅದರಲ್ಲಿ ಯಶಸ್ಸು ಕಾಣಬೇಕೆಂದು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಗೊತ್ತಿದ್ದೋ ಇಲ್ಲವೇ ಗೊತ್ತಿಲ್ಲದೇ ಕೆಲವೊಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಆ ತಪ್ಪುಗಳಿಗೆ ಅವರ ಕೆಲವೊಂದು ಕೆಟ್ಟ ಅಭ್ಯಾಸಗಳೇ ಕಾರಣ. ಕೆಲವು ಲಕ್ಷಣಗಳು, ಕೆಲವು ಅಭ್ಯಾಸಗಳು ನಿಮ್ಮಿಂದ ನಿಮ್ಮ ಯಶಸ್ಸನ್ನು ದೂರವಿಡುತ್ತವೆ. ಇದು ಗೆಲ್ಲುವ ನಿಮ್ಮ ಆಸೆಗೆ ತಡೆಯಾಗುತ್ತವೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಮೊದಲು ನಿಮ್ಮ ಕೆಟ್ಟ ಅಭ್ಯಾಸಗಳನ್ನು ಗುರುತಿಸಿ ಅವುಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ.

ವಿಳಂಬ ಪ್ರವೃತ್ತಿ

ಆಲಸ್ಯವು ಒಂದು ದೊಡ್ಡ ಕೆಟ್ಟ ಅಭ್ಯಾಸವಾಗಿದೆ. ಆದರೆ ಇದನ್ನು ಕೆಟ್ಟದಾಗಿ ನೋಡುವವರ ಸಂಖ್ಯೆ ತೀರಾ ಕಡಿಮೆ. ಸ್ವಲ್ಪ ವಿಳಂಬ ಅಷ್ಟೇ ಅಲ್ವಾ ಅಂತ ಭಾವಿಸುತ್ತಾರೆ. ಆದರೆ ಇದೊಂದು ಕೆಟ್ಟ ಅಭ್ಯಾಸ ಅಂತ ಗುರುತಿಸುವುದಿಲ್ಲ. ನೀವು ವಿಳಂಬ ಮಾಡುತ್ತಿದ್ದರೆ ನಿಮ್ಮ ಯಶಸ್ಸನ್ನು ನೀವು ವಿಳಂಬ ಮಾಡಿದ್ದಂತೆಯೇ ಆಗುತ್ತದೆ. ಇದು ನಿಮ್ಮ ಯಶಸ್ಸಿಗೆ ಪ್ರಮುಖ ಅಡ್ಡಿಯಾಗಿರುತ್ತದೆ. ಹಾಗಾಗಿ ನಿಮ್ಮ ಆಲಸ್ಯವನ್ನು ಮೊದಲು ಬದಲಾಯಿಸಿಕೊಳ್ಳಿ. ನಿಗದಿತ ಕೆಲಸವನ್ನು ನಿಗದಿತ ಸಮಯಕ್ಕೆ ಮಾಡಲು ಪ್ರಯತ್ನಿಸಿ. ಅದಕ್ಕಿಂತ ಮುಂಚೆ ಮಾಡಿದರೆ ಇನ್ನೂ ಒಳ್ಳೆಯದು.

ಸೋಲುವ ಭಯ

ಕೆಲಸ ಆರಂಭಿಸುವ ಮೊದಲೇ ಸೋಲುವ ಭಯ ಮನಸ್ಸಿನಲ್ಲಿ ಬೇರೂರಿದ್ದರೆ ಮೊದಲು ಇದನ್ನು ತೊಡೆದು ಹಾಕಬೇಕು. ಭಯ ಇದ್ದಾಗ ಜೀವನದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಸೋಲಿಗೆ ಹೆದರುವುದಿಲ್ಲ ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕು. ಹಿಂದಿನ ಅನುಭವಗಳು ಮತ್ತು ತಪ್ಪುಗ್ರಹಿಕೆಗಳನ್ನು ನೆನಪಿಸಿಕೊಳ್ಳದೆ ಮುಂದೆ ಸಾಗಿರಿ. ನೀವು ಭಯಪಟ್ಟರೆ ನಿಮಗೆ ಯಶಸ್ಸು ಸಿಗುವುದಿಲ್ಲ.

ಸರಿಯಾದ ಗುರಿ

ಯಶಸ್ವಿಯಾಗಬೇಕಾದರೆ ಮೊದಲು ನಿಮ್ಮಲ್ಲೊಂದು ಸರಿಯಾದ ಗುರಿ ಇರೂಬೇಕು. ದಾರಿ ತುಂಡಾದ ಗಾಳಿಪಟದಂತೆ ಹಾರಾಡುತ್ತಿದ್ದರೆ ಎಲ್ಲಿಗೆ ಹೋಗಿ ಬೀಳುತ್ತೀರೋ ಯಾರಿಗೂ ತಿಳಿಯದು. ಆದ್ದರಿಂದ ಮೊದಲು ಗುರಿಯನ್ನು ಹಾಕಿಕೊಳ್ಳಬೇಕು. ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕು ಮತ್ತು ಆ ಗುರಿಯನ್ನು ತಲುಪಲು ಎಷ್ಟು ಕಷ್ಟ ಇರುತ್ತದೆ ಎಂಬುದನ್ನು ನಿರ್ಧರಿಸಿಕೊಳ್ಳಬೇಕು.

ಪ್ರಯತ್ನವನ್ನೇ ಮಾಡದಿರುವುದು

ಜೀವನದಲ್ಲಿ ಕೇವಲ ಗುರಿಯನ್ನು ಹಾಕಿಕೊಂಡರೆ ಸಾಕಾಗುವುದಿಲ್ಲ. ಅದನ್ನು ಸಾಧಿಸುವ ಪ್ರಯತ್ನವನ್ನು ಪ್ರಾರಂಭಿಸಬೇಕು. ಪ್ರಯತ್ನವಿಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಿಮ್ಮ ದಾರಿಯಲ್ಲಿ ಎಷ್ಟೇ ಅಡೆತಡೆಗಳು ಬಂದರೂ, ನೀವು ಅಂತಿಮವಾಗಿ ವಿಜಯಶಾಲಿಯಾಗುತ್ತೀರಿ. ನೀವು ಪ್ರಯತ್ನಿಸದಿದ್ದರೆ ನೀವು ಹೇಗೆ ಗೆಲ್ಲೋದಿಕ್ಕೆ ಸಾಧ್ಯವಾಗುತ್ತದೆ ಅನ್ನೋದನ್ನು ನೀವೇ ಯೋಚಿಸಿ ನೋಡಿ.

ಸವಾಲುಗಳನ್ನು ಎದುರಿಸದಿರುವುದು

ಹೆಚ್ಚು ಜನರು ಸವಾಲುಗಳನ್ನು ಎದುರಿಸಲು ಸಿದ್ಧರಿರುವುದಿಲ್ಲ. ಅವರಿಗೆ ಜೀವನ ಆರಾಮವಾಗಿ ನಡೆಯಬೇಕೆಂದು ಬಯಸುತ್ತಾರೆ. ಹೀಗಾಗಿ ಒಂದಿಷ್ಟು ಗೆರೆಗಳನ್ನು ಹಾಕಿಕೊಂಡು ಅದರ ವ್ಯಾಪ್ತಿಯಲ್ಲೇ ಜೀವಿಸುತ್ತಿರುತ್ತಾರೆ. ಆ ಗೆರೆಯನ್ನು ದಾಟಲು ಬಯಸುವುದಿಲ್ಲ. ಒಂದು ವೇಳೆ ಆ ಗೆರೆ ದಾಟಿದರೆ ಎಂತಹ ಸಂಕಷ್ಟ, ಸಮಸ್ಯೆಗಳು ಎದುರಾಗುತ್ತವೋ ಎಂಬ ಭಯ ಅವರಲ್ಲಿ ಇರುತ್ತದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ನಿಮ್ಮ ಗೆರೆಗಳ ಮಿತಿಯಿಂದ ಮೊದಲು ಹೊರಬರಬೇಕು. ಅಪಾಯ, ಸವಾಲುಗಳನ್ನು ಎದುರಿಸಿಬೇಕು. ಆಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ.

ಬಾಡಿ ಲಾಂಗ್ವೇಜ್

ನಿಮ್ಮ ಬಾಡಿ ಲಾಂಗ್ವೇಜ್ ನೀವು ಪಡೆಯುವ ಗೌರವವನ್ನು ನಿರ್ಧರಿಸುತ್ತದೆ. ನಿಮ್ಮ ದೇಹ ಭಾಷೆಯಿಂದ ಜನರು ನಿಮ್ಮ ನಿರ್ಣಯಿಸುತ್ತಾರೆ. ನಿಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮಾತುಗಳು, ನಡೆದುಕೊಳ್ಳುವ ರೀತಿ, ಕಾರ್ಯಗಳು ಕ್ರಮಬದ್ಧವಾಗಿ ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇತರರೊಂದಿಗೆ ಮಾತನಾಡುವಾಗ ಅವರ ಕಣ್ಣುಗಳನ್ನು ನೋಡುವ ಬದಲು ಬೇರೆ ಎಲ್ಲೋ ನೋಡಬೇಡಿ. ನಿಮ್ಮ ಧ್ವನಿ ಮೃದುವಾಗಿರಬೇಕು. ನಿಮ್ಮ ಬಾಯಿಂದ ಕೆಟ್ಟ ಪದಗಳು ಬಾರದಂತೆ ನೋಡಿಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ