Wednesday Motivation: ನಿಜವಾದ ಪ್ರೇಮಿಗಳು ಎಂದೂ ದೂರವಾಗುವುದಿಲ್ಲ; ಒಂದು ವೇಳೆ ಹೀಗಾದರೆ ಅವರದ್ದು ಪ್ರೀತಿಯೇ ಅಲ್ಲ
Wednesday Motivation: ಪ್ರೀತಿ ಯಾವಾಗಲೂ ಭಾವನೆಗಳಲ್ಲಿ ವಿಭಿನ್ನವಾಗಿರುತ್ತದೆ. ನೀವು ಪ್ರೀತಿಸಿದ್ದರೆ ಖಂಡಿತವಾಗಿ ಅದರಲ್ಲಿ ಗೆಲ್ಲಿರಿ. ಮದುವೆ ಮಾಡಿಕೊಳ್ಳಿ. ಆಗ ಮಾತ್ರ ಅದು ನಿಜವಾದ ಪ್ರೀತಿಯಾಗಿರುತ್ತದೆ.
Wednesday Motivation in Kannada: ಪ್ರೀತಿ ಹುಟ್ಟಿದಾಗ ಗಾಳಿಯಲ್ಲಿ ತೇಲಾಡಿದಂತೆ ಆಗುತ್ತದೆ. ಅದೊಂದು ಅನಿರ್ವಚನೀಯ ಭಾವ. ವರ್ಣಿಸಲಾಗದ ಭಾವ. ಎದೆಯಲ್ಲಿ ಪುಳಕಿತ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದರೆ ಎಷ್ಟು ಪ್ರೀತಿಗಳು ಮದುವೆಯವರಗೆ ತಲುಪುತ್ತವೆ. ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಹಿರಿಯರ ಅನುಮತಿಯೊಂದಿಗೆ ಆ ಪ್ರೀತಿಯನ್ನು ಮದುವೆಯ ಪೀಠದ ವರೆಗೆ ತೆಗುದುಕೊಂಡು ಹೋಗಬೇಕು. ಇಲ್ಲದಿದ್ದರೆ ನಿಮ್ಮ ಕೇವಲ ಆಕರ್ಷಣೆಯಿಂದ ಹುಟ್ಟಿದ ಭಾವನೆ ಅಷ್ಟೇ.
ಪ್ರೀತಿ ಯಾರಿಗಾದರೂ ಯಾವಾಗ ಬೇಕಾದರೂ ಹುಟ್ಟಬಹುದು. ಕೆಲವರಿಗೆ ಸೌಂದರ್ಯ ಇಷ್ಟ. ಇನ್ನು ಕೆಲವರಿಗೆ ಅವರ ಗುಣಕ್ಕೆ ಫಿದಾ ಆಗುತ್ತಾರೆ. ಒಂದಷ್ಟು ಮಂದಿ ತಮ್ಮ ಸೊಬಗಿನಿಂದಲೇ ಆಕರ್ಷಿತರಾಗುತ್ತಾರೆ. ಯಾವುದನ್ನಾದರೂ ಪ್ರೀತಿಸುವ ಗುಣವಿದ್ದಾಗ ಅದು ವ್ಯಕ್ತಿಯನ್ನು ಬದಲಾಯಿಸುತ್ತದೆ. ಹೆಚ್ಚು ಸಂತೋಷ ಪಡಿಸುತ್ತದೆ. ಅವರ ವ್ಯಕ್ತಿತ್ವದಲ್ಲೂ ಸಾಕಷ್ಟು ಸೌಂದರ್ಯವನ್ನು ಕಾಣುತ್ತಾರೆ.
ನೀವು ಪ್ರೀತಿಯಲ್ಲಿ ಬಿದ್ದಾಗ ಮೆದುಳಿನಲ್ಲಿ ಸಾಕಷ್ಟು ಪ್ರಕ್ಷುಬ್ಧತೆ ಇರುತ್ತದೆ. ಅದೊಂದು ಮಾನಸಿಕ ಕಾಯಿಲೆಯಂತೆ. ಹೃದಯ ಬಡಿದ ಜೋರಾಗುತ್ತದೆ, ಕೈಕಾಲು ಕೆಲ ಕ್ಷಣಗಳು ಬೆವರುವುದು ಪ್ರೀತಿಯಲ್ಲಿ ಬೀಳುವ ಎಲ್ಲಾ ಲಕ್ಷಣಗಳಾಗಿವೆ.
ಪ್ರೀತಿಯಲ್ಲಿ ಬೀಳುವುದಕ್ಕೆ ಪ್ರಮುಖ 3 ಹಾರ್ಮೋನ್‌ಗಳಿವು
ಪ್ರೀತಿಯಲ್ಲಿ ಬೀಳಲು ವಿಶೇಷವಾಗಿ ಕಾರಣವಾದ ಮೂರು ಹಾರ್ಮೋನಗಳು ಇವೆ. ಯಾವ ಮನುಷ್ಯನನ್ನ ಕಂಡನೆ ನಿಮಗೆ ಈ ಹಾರ್ಮೋನ್‌ಗಳು ಹೆಚ್ಚು ಉತ್ಪಾತಿಯಾಗುತ್ತವೆಯೋ ಆ ಮನುಷ್ಯನ ಮೇಲೆ ಪ್ರೀತಿ ಹುಟ್ಟುತ್ತದೆ. ಆ ಮೂರು ಹಾರ್ಮೋನ್‌ಗಳನ್ನು ನೋಡುವುದಾದರೆ ಡೋಪಮೈನ್, ಸೆರೂಟೋನಿನ್ ಹಾಗೂ ನೊರ್ಪೈನ್ಫ್ರಿನ್. ಈ ಮೂರು ಹಾರ್ಮೋನ್‌ಗಳು ಸೇರಿ ವ್ಯಕ್ತಿಯನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ.
ಇವುಗಳಲ್ಲಿ ಮುಖ್ಯವಾದದ್ದು ಸೆರೊಟೋನಿನ್. ಪ್ರೀತಿಯಲ್ಲಿ ಬಿದ್ದ ನಂತರ ನೀವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹುಚ್ಚರಾಗುವಂತೆ ಮಾಡುತ್ತದೆ. ಅವರೊಂದಿಗೆ ಇದ್ದಂತೆ ಅನಿಸುತ್ತದೆ. ಡೋಪಮೈನ್ ನೀವು ಇಬ್ಬ ವ್ಯಕ್ತಿಯನ್ನು ಇಷ್ಟಪಟ್ಟರೆ ಅವರಿಗೆ ನೀವು ರಿಸರ್ವ್ ಆಗುವಂತೆ ಮಾಡುತ್ತದೆ. ಮೂರನೆಯದು ನೊರ್ಪೈನ್ಫ್ರಿನ್. ನೀವು ಇಷ್ಟಪಡುವ ಅಥವಾ ಪ್ರೀತಿಸುವವರನ್ನು ನೋಡಿದಾಗ ಹೃದಯ ಬಡಿತ ಜೋರಾಗುತ್ತದೆ. ಹೃದಯಲ್ಲಿ ಅನೋ ಒಂದು ರೀತಿ ಅನಿಸುತ್ತಿರುತ್ತದೆ. ಈ ಮೂರು ಹಾರ್ಮೋನ್‌ಗಳು ಒಟ್ಟಾಗಿ ನಿಮ್ಮನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ.
ಪ್ರೀತಿ ವಿಫಲವಾದರೆ ಈ ಮೂರು ಹಾರ್ಮೋನ್‌ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗುತ್ತದೆ. ನಿಮ್ಮ ಪ್ರೀತಿಯನ್ನು ಗೆಲ್ಲಲು ನೀವು ಅನೇಕ ತ್ಯಾಗಗಳನ್ನು ಮಾಡಬೇಕಾಗಬಹುದು. ಎಲ್ಲದಕ್ಕೂ ತಯಾರಿ ಇರಬೇಕು. ಪ್ರೀತಿಸಿದಷ್ಟೇ ಸಾಕಾಗುವುದಿಲ್ಲ. ಪ್ರೀತಿಯನ್ನು ಗೆಲ್ಲುವ ಶಕ್ತಿಯೂ ನಿಮ್ಮಲ್ಲಿರಬೇಕು.
ಪ್ರೀತಿ ಎಂದರೆ ಕೇವಲ ಕೊಡುವುದಷ್ಟೇ ಅಲ್ಲ ಇತರರಿಂದ ಪ್ರೀತಿಯನ್ನು ಪಡೆಯುವುದೂ ಆಗಿರುತ್ತದೆ. ನಿಮ್ಮ ಅಗತ್ಯಗಳಿಗಾಗಿ ಅಥವಾ ಆರ್ಥಿಕ ಲಾಭಕ್ಕಾಗಿ ಯಾರನ್ನೂ ಪ್ರೀತಿಸಬೇಡಿ. ನಿಮ್ಮ ಜೀವನಕ್ಕಾಗಿ ಪ್ರಾಮಾಣಿಕವಾಗಿ ಪ್ರೀತಿಸಿ. ಆ ಪ್ರೀತಿಯನ್ನು ಗೆಲ್ಲಿ. ಪ್ರಾಣಿಕವಾಗಿ ಪ್ರೀತಿ ಗೆದ್ದರೆ ಎರಡು ಜೀವಗಳು ಮತ್ತು ಎರಡು ಕುಟುಂಬಗಳು ಗೆದ್ದಂತೆ ಆಗುತ್ತದೆ.
ಪ್ರೀತಿ ಒಂದು ಸುಂದರ ಪ್ರಕ್ರಿಯೆ. ಸಂತೋಷ, ಆರಾಧನೆ. ಮನಸ್ಸಿಗೆ ಮಾತ್ರ ಗೊತ್ತಿರುವ ಕೊನೆಯಿಲ್ಲದ ಸಂತೋಷ. ಜನರನ್ನು ಪ್ರೀತಿಸುವುದು ತಪ್ಪಾಗಿರಬಹುದು. ಪ್ರೀತಿ ಎಂದಿಗೂ ತಪ್ಪಲ. ಆ ಪ್ರೀತಿಯನ್ನು ಗೆದ್ದ ದಿನವೇ ನೀವು ಗೆದ್ದಂತಾಗುತ್ತದೆ. ನಿಜವಾದ ಪ್ರೀತಿ ಮಾನವನ ದೋಷಗಳನ್ನು ಸಹಿಸಿಕೊಳ್ಳುತ್ತದೆ. ಒಳ್ಳೆಯ ಹೃದಯದಿಂದ ಪ್ರೀತಿಸಿ. ನೀವು ಪ್ರೀತಿಸುವವರು ನಿಮ್ಮ ಪ್ರೀತಿಸುವಂತೆ ನೋಡಿಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ