logo
ಕನ್ನಡ ಸುದ್ದಿ  /  ಜೀವನಶೈಲಿ  /  ಹಿತ್ತಲಿನಲ್ಲಿ ನೆಡುವ ನಿಂಬೆ ಗಿಡವನ್ನು ಹೂಕುಂಡದಲ್ಲಿಯೇ ಬೆಳೆಸಬಹುದು; ಜಾಗ ಉಳಿಸುವ ಬೊಂಬಾಟ್ ಟಿಪ್ಸ್ ನಿಮಗಾಗಿ‌

ಹಿತ್ತಲಿನಲ್ಲಿ ನೆಡುವ ನಿಂಬೆ ಗಿಡವನ್ನು ಹೂಕುಂಡದಲ್ಲಿಯೇ ಬೆಳೆಸಬಹುದು; ಜಾಗ ಉಳಿಸುವ ಬೊಂಬಾಟ್ ಟಿಪ್ಸ್ ನಿಮಗಾಗಿ‌

Priyanka Gowda HT Kannada

Oct 11, 2024 12:51 PM IST

google News

ಹೂವಿನ ಗಿಡಗಳಂತೆ ಕುಂಡ ಅಥವಾ ಪಾಟ್‍ನಲ್ಲಿಯೂ ನಿಂಬೆ ಗಿಡವನ್ನು ನೆಡಬಹುದು.

    • ಹೂವಿನ ಗಿಡಗಳನ್ನು ಹೇಗೆ ಹೂದಾನಿಯಲ್ಲಿ ನೆಡುತ್ತಿರೋ, ಅದೇ ರೀತಿ ಈ ನಿಂಬೆ ಗಿಡಗಳನ್ನು ಸಹ ನೆಡಬಹುದು. ಆದರೆ, ಆ ಸ್ಥಳಕ್ಕೆ ಸರಿಹೊಂದುವ ಸಸಿಯನ್ನು ತಂದು ನೆಡಬೇಕು. ಮೆಯೆರ್ ನಿಂಬೆಹಣ್ಣುಗಳು (ಸಿಟ್ರಸ್ ಲಿಮನ್) ಮತ್ತು ಯುರೇಕಾ ನಿಂಬೆಹಣ್ಣುಗಳು (ಸಿಟ್ರಸ್ ಲಿಮನ್ 'ಅಲೆನ್-ನ್ಯೂಮನ್') ಕುಂಡದಲ್ಲಿ ಬೆಳೆಸಲು ಉತ್ತಮವಾಗಿದೆ. 
ಹೂವಿನ ಗಿಡಗಳಂತೆ ಕುಂಡ ಅಥವಾ ಪಾಟ್‍ನಲ್ಲಿಯೂ ನಿಂಬೆ ಗಿಡವನ್ನು ನೆಡಬಹುದು.
ಹೂವಿನ ಗಿಡಗಳಂತೆ ಕುಂಡ ಅಥವಾ ಪಾಟ್‍ನಲ್ಲಿಯೂ ನಿಂಬೆ ಗಿಡವನ್ನು ನೆಡಬಹುದು. (freepik)

ಹಿಂದೆಲ್ಲಾ ಮನೆಮುಂದೆ ನಿಂಬೆ ಗಿಡವನ್ನು ನೆಡಬಾರದು ಎಂದು ಹೇಳುತ್ತಿದ್ದರು. ಯಾಕೆಂದರೆ ಸಂಜೆ ನಂತರ ಬರಿಗಾಲಿನಲ್ಲಿ ಹೋಗುವುದರಿಂದ ಇದರ ಮುಳ್ಳುಗಳು ಚುಚ್ಚುತ್ತವೆ ಎಂಬ ಕಾರಣಕ್ಕೆ ಈ ರೀತಿ ಹೇಳಲಾಗುತ್ತಿತ್ತು. ವಿಟಮಿನ್ ಸಿ ಅಧಿಕವಾಗಿರುವ ನಿಂಬೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇಂದು ಬಹುತೇಕರ ಮನೆಗಳ ಕೈ ತೋಟದಲ್ಲಿ, ಹೊಲದಲ್ಲಿ ಇತ್ಯಾದಿ ಕಡೆಗಳಲ್ಲಿ ನಿಂಬೆ ಗಿಡವನ್ನು ನೆಡುತ್ತಾರೆ. ನಗರಗಳಲ್ಲಿ ಇರುವ ಜನರು ಏನು ಮಾಡುವುದು? ಇರು ಕಡಿಮೆ ಜಾಗದಲ್ಲೇ ಮನೆ ಕಟ್ಟಿದ್ರೆ, ಇನ್ನು ನಿಂಬೆ ಗಿಡವನ್ನು ಎಲ್ಲಿ ನೆಡುವುದು ಎಂದು ಯೋಚಿಸುತ್ತಿರಬಹುದು. ಹೂವಿನ ಗಿಡಗಳಂತೆ ಕುಂಡ ಅಥವಾ ಪಾಟ್‍ನಲ್ಲಿಯೂ ನಿಂಬೆ ಗಿಡವನ್ನು ನೆಡಬಹುದು ಎಂಬುದು ನಿಮಗೆ ಗೊತ್ತೇ?

ಹೌದು, ಹೂವಿನ ಗಿಡಗಳನ್ನು ಹೇಗೆ ಹೂದಾನಿಯಲ್ಲಿ ನೆಡುತ್ತಿರೋ, ಅದೇ ರೀತಿ ಈ ನಿಂಬೆ ಗಿಡಗಳನ್ನು ಸಹ ನೆಡಬಹುದು. ಆದರೆ, ಆ ಸ್ಥಳಕ್ಕೆ ಸರಿಹೊಂದುವ ಸಸಿಯನ್ನು ತಂದು ನೆಡಬೇಕು. ಮೆಯೆರ್ ನಿಂಬೆಹಣ್ಣುಗಳು (ಸಿಟ್ರಸ್ ಲಿಮನ್) ಮತ್ತು ಯುರೇಕಾ ನಿಂಬೆಹಣ್ಣುಗಳು (ಸಿಟ್ರಸ್ ಲಿಮನ್ 'ಅಲೆನ್-ನ್ಯೂಮನ್') ಕುಂಡದಲ್ಲಿ ಬೆಳೆಸಲು ಉತ್ತಮವಾಗಿದೆ. ಏಕೆಂದರೆ ಅವು 10 ಅಡಿಗಿಂತ ಕಡಿಮೆ ಎತ್ತರವಿರುವ ಅರೆ-ಕುಬ್ಜ ಸಸ್ಯಗಳು ಎಂದು ತಜ್ಞರು ವಿವರಿಸಿದ್ದಾರೆ.

ಕುಂಡದಲ್ಲಿ ನಿಂಬೆ ಗಿಡವನ್ನು ಬೆಳೆಯಲು ಸಲಹೆಗಳು

ಸರಿಯಾದ ಗಾತ್ರದ ಪಾಟ್ ಅನ್ನು ಆರಿಸಿ: ತುಂಬಾ ದೊಡ್ಡದಾದ ಕುಂಡದಲ್ಲಿ ನಿಂಬೆ ಗಿಡವನ್ನು ನೆಡಬಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಂಬೆ ಗಿಡವನ್ನು ದೊಡ್ಡ ಕುಂಡದಲ್ಲಿ ಹಾಕುವುದರಿಂದ ಬೇರು ಕೊಳೆತಕ್ಕೆ ಕಾರಣವಾಗಬಹುದು. ಹೀಗಾಗಿ ತಂದಿರುವ ನಿಂಬೆ ಗಿಡದ ಗಾತ್ರಕ್ಕಿಂದ ಶೇ. 15ರಷ್ಟು ಕುಂಡ ದೊಡ್ಡದಾಗಿದ್ದರೆ ಸಾಕು.

ಅತಿಯಾಗಿ ನೀರು ಹಾಕಬೇಡಿ: ನಿಂಬೆ ಗಿಡಕ್ಕೆ ನೀರು ಹಾಕುವುದು ಅತಿ ಮುಖ್ಯ. ಹಾಗಂತ ಅತಿಯಾಗಿ ನೀರು ಹಾಕಬಾರದು. ಇದೊಂದು ಉಷ್ಣವಲಯದ ಸಸ್ಯವಾಗಿರುವುದರಿಂದ ಕಡಿಮೆ ನೀರು ಸಾಕಾಗುತ್ತದೆ. ಸೂಕ್ತ ತೇವಾಂಶವು ನಿಂಬೆ ಗಿಡದ ಬೆಳವಣಿಗೆಗೆ ಪೂರಕವಾಗಿದೆ. ಹೀಗಾಗಿ ಮಣ್ಣಿನ ತೇವಾಂಶವನ್ನು ಪರಿಶೀಲಿಸುತ್ತಿರಿ. ಮೇಲಿನ ಇಂಚಿನ ಮಣ್ಣು ಒಣಗಿದಾಗ ನೀರು ಹಾಕಿ. ಕುಂಡದಲ್ಲಿ ಹಲವು ರಂಧ್ರಗಳಿರಬೇಕು. ಈ ಮೂಲಕ ನೀರು ಹೊರಬರುತ್ತಿದಿಯೇ ಎಂಬುದನ್ನು ಗಮನಿಸಿ. ಯಾವುದೇ ಕಾರಣಕ್ಕೂ ನೀರು ನಿಂತಿರಬಾರದು. ಅತಿಯಾಗಿ ನೀರು ಹಾಕುತ್ತಿದ್ದರೆ ಎಲೆಗಳ ಬಣ್ಣ ಹಳದಿಯಾಗುತ್ತದೆ.

ಮಣ್ಣಿನ ತೇವಾಂಶವನ್ನು ಪರಿಶೀಲಿಸಿ: ನಿಂಬೆ ಸಸ್ಯದ ಬೆಳವಣಿಗೆಗೆ ಮಣ್ಣಿನ ತೇವಾಂಶವನ್ನು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ. ತೇವಾಂಶದ ಮಟ್ಟವನ್ನು ಪರಿಶೀಲಿಸುವುದು ತುಂಬಾನೇ ಸುಲಭ. ಬೆರಳನ್ನು ಸುಮಾರು ಒಂದು ಇಂಚು ಮಣ್ಣಿನಲ್ಲಿ ಸೇರಿಸಿ. ಅದು ಒಣಗಿದ್ದರೆ, ನೀರು ಹಾಕಬೇಕು. ತೇವವಾಗಿದ್ದರೆ, ಕೆಲವು ದಿನಗಳವರೆಗೆ ನೀರುಹಾಕಬಾರದು. ನಿಖರವಾಗಿ ತಿಳಿದುಕೊಳ್ಳಲು ಮಣ್ಣಿನ ತೇವಾಂಶ ಮೀಟರ್ ಅನ್ನು ಅಳವಡಿಸಬಹುದು.

ಸೂರ್ಯನ ಕಿರಣಗಳು ಸರಿಯಾಗಿ ಬೀಳಲಿ: ನಿಂಬೆ ಸಸ್ಯಗಳಿಗೆ ಸಂಪೂರ್ಣ ಸೂರ್ಯನ ಬೆಳಕಿನ ಅಗತ್ಯವಿರುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ ಆರು ಗಂಟೆಗಳ ಸೂರ್ಯನ ಬೆಳಕನ್ನು ಪಡೆಯುವ ಸ್ಥಳದಲ್ಲಿ ಕುಂಡವನ್ನು ಇರಿಸಬೇಕು. ವಸಂತ, ಬೇಸಿಗೆ ಮತ್ತು ಶರತ್ಕಾಲದಲ್ಲಿ ಅವುಗಳನ್ನು ಹೊರಾಂಗಣದಲ್ಲಿ ಇರಿಸಬಹುದು. ಈ ಮೂಲಕ ದಿನವಿಡೀ ಸೂರ್ಯನ ಕಿರಣಗಳನ್ನು ಪಡೆಯಬಹುದು. ಬೇರೆ ಋತುವಿನಲ್ಲೂ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳುವುದು ಮುಖ್ಯ.

ವರ್ಷಕ್ಕೆ ಮೂರು ಬಾರಿ ಗೊಬ್ಬರ ಹಾಕಿ: ಫ್ಲೆಮಿಂಗ್ ನಿಮ್ಮ ನಿಂಬೆ ಸಸಿಗೆ ವರ್ಷಕ್ಕೆ ಮೂರು ಬಾರಿ ಗೊಬ್ಬರವನ್ನು ಹಾಕಬೇಕು. ಚಳಿಗಾಲದ ಕೊನೆಯಲ್ಲಿ ಒಂದು ಬಾರಿ, ವಸಂತಕಾಲದಲ್ಲಿ ಎರಡನೇ ಬಾರಿ, ಮತ್ತು ಚಳಿಗಾಲದಲ್ಲಿ ಅದರ ಬೆಳವಣಿಗೆ ನಿಧಾನಗೊಳ್ಳುವ ಮೊದಲು ಶರತ್ಕಾಲದಲ್ಲಿ ಮೂರನೇ ಬಾರಿಗೆ ಗೊಬ್ಬರವನ್ನು ಹಾಕಬೇಕು.

ಸರಿಯಾದ ರಸಗೊಬ್ಬರವನ್ನು ಆರಿಸಿ: ನಿಂಬೆ ಸಸ್ಯಗಳು ಇತರ ಸಸ್ಯಗಳಿಗಿಂತ ಹೆಚ್ಚು ಸಾರಜನಕವನ್ನು ಹೀರಿಕೊಳ್ಳುತ್ತವೆ. ಸಾರಜನಕದ 2 ರಿಂದ 1 ಅಥವಾ 3 ರಿಂದ 1 ಅನುಪಾತದೊಂದಿಗೆ ರಸಗೊಬ್ಬರವನ್ನು ಆರಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೀಟಗಳು ಮತ್ತು ರೋಗಗಳ ಬಗ್ಗೆ ಗಮನವಿರಲಿ: ಹುಳಗಳು, ಜೇಡ, ಶಿಲೀಂಧ್ರ ರೋಗಗಳು ಇತ್ಯಾದಿ ಕೀಟಗಳ ಬಗ್ಗೆ ಗಮನವಿರಲಿ. ವಾರಕ್ಕೊಮ್ಮೆ ನಿಂಬೆ ಗಿಡವನ್ನು ಪರಿಶೀಲಿಸುತ್ತಿರಿ. ಕೀಟಗಳು ಅಥವಾ ಕೀಟಗಳ ಹಾನಿಯ ಲಕ್ಷಣಗಳನ್ನು ನೋಡಿದ ತಕ್ಷಣ ಸಸ್ಯವನ್ನು ಬೇವಿನ ಎಣ್ಣೆ ಅಥವಾ ಕೀಟನಾಶಕ ಸಿಂಪಡಿಸಿ. ಶಿಲೀಂಧ್ರದ ಲಕ್ಷಣಗಳು ಕಂಡು ಬಂದರೆ, ರೋಗಪೀಡಿತ ಎಲೆಗಳನ್ನು ಕತ್ತರಿಸಿ. ಸಸ್ಯದ ಗಾಳಿಯ ಪ್ರಸರಣವನ್ನು ಸುಧಾರಿಸಲು ಮರದ ಮಧ್ಯಭಾಗವನ್ನು ಕತ್ತರಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ