Cleaning Hacks: ನಿಂಬೆಹಣ್ಣು ಒಂದಿದ್ರೆ ಸಾಕು ಅಡುಗೆಮನೆ ಪಳಪಳ ಹೊಳೆಯುತ್ತೆ; ಕಿಚನ್‌ ಕ್ಲೀನಿಂಗ್‌ಗೆ ನಿಂಬೆಯನ್ನ ಹೀಗೆಲ್ಲಾ ಬಳಸಬಹುದು-kitchen tips easy tips and tricks to clean your kitchen with lemon kitchen cleaning hacks with lemon juice rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Cleaning Hacks: ನಿಂಬೆಹಣ್ಣು ಒಂದಿದ್ರೆ ಸಾಕು ಅಡುಗೆಮನೆ ಪಳಪಳ ಹೊಳೆಯುತ್ತೆ; ಕಿಚನ್‌ ಕ್ಲೀನಿಂಗ್‌ಗೆ ನಿಂಬೆಯನ್ನ ಹೀಗೆಲ್ಲಾ ಬಳಸಬಹುದು

Cleaning Hacks: ನಿಂಬೆಹಣ್ಣು ಒಂದಿದ್ರೆ ಸಾಕು ಅಡುಗೆಮನೆ ಪಳಪಳ ಹೊಳೆಯುತ್ತೆ; ಕಿಚನ್‌ ಕ್ಲೀನಿಂಗ್‌ಗೆ ನಿಂಬೆಯನ್ನ ಹೀಗೆಲ್ಲಾ ಬಳಸಬಹುದು

ಚಿತ್ರಾನ್ನ ಮಾಡಲೆಂದು ತಂದ ನಿಂಬೆಹಣ್ಣಿನಿಂದ ಇಡೀ ಅಡುಗೆಮನೆಯನ್ನು ಸ್ವಚ್ಛ ಮಾಡಬಹುದು, ಮಾತ್ರವಲ್ಲ ಇದರಿಂದ ಅಡುಗೆಮನೆಯು ಪಳಪಳ ಹೊಳೆಯುವಂತೆ ಹಾಗೂ ಪರಿಮಳ ಬೀರುವಂತೆ ಮಾಡಬಹುದು. ನಿಂಬೆಹಣ್ಣಿನ ಅಡುಗೆಯನ್ನು ಹೇಗೆಲ್ಲಾ ಸ್ವಚ್ಛ ಮಾಡಬಹುದು ನೋಡಿ.

ಅಡುಗೆಮನೆ ಸ್ವಚ್ಛ ಮಾಡಲು ನಿಂಬೆಹಣ್ಣನ್ನ ಹೀಗೆಲ್ಲಾ ಬಳಸಬಹುದು ನೋಡಿ
ಅಡುಗೆಮನೆ ಸ್ವಚ್ಛ ಮಾಡಲು ನಿಂಬೆಹಣ್ಣನ್ನ ಹೀಗೆಲ್ಲಾ ಬಳಸಬಹುದು ನೋಡಿ

ಆಹಾರ ಖಾದ್ಯಗಳಿಗೆ ಹುಳಿ ರುಚಿ ನೀಡುವ ನಿಂಬೆಹಣ್ಣು ಅಡುಗೆಯ ಘಮವನ್ನೂ ಹೆಚ್ಚಿಸುತ್ತದೆ. ಚಿತ್ರನ್ನಾ, ಪಾನಕ, ಉಪ್ಪಿನಕಾಯಿ ಸೇರಿದಂತೆ ಹಲವು ಆಹಾರಗಳ ತಯಾರಿಕೆಗೆ ನಿಂಬೆಹಣ್ಣು ಬೇಕೇ ಬೇಕು. ನಿಂಬೆಹಣ್ಣು ಅಡುಗೆಗೆ ಮಾತ್ರವಲ್ಲ ಸ್ವಚ್ಛತೆಗೂ ಅವಶ್ಯ.

ನಿಂಬೆಹಣ್ಣಿನಿಂದ ಅಡುಗೆಮನೆಯನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. ಇದು ಅಡುಗೆಮನೆ ಸ್ವಚ್ಛ ಮಾಡಲು ಇರುವ ಪರಿಣಾಮಕಾರಿ ವಿಧಾನ. ನಿಂಬೆಹಣ್ಣಿನ ಬಳಕೆಯಿಂದ ಅಡುಗೆಮನೆಯನ್ನು ಹೊಳೆಯುವಂತೆ ಹಾಗೂ ತಾಜಾವಾಗಿ ಇರುವಂತೆ ಮಾಡಬಹುದು. ನಿಂಬೆರಸವು ಅಡುಗೆಮನೆಯಲ್ಲಿರುವ ಮೊಂಡುತನ ಕಲೆಯನ್ನು ನಿವಾರಿಸುತ್ತದೆ. ಅಹಿತಕರ ವಾಸನೆಯನ್ನು ಇದರಿಂದ ತೊಡೆದು ಹಾಕಬಹುದು. ಲೋಹದ ವಸ್ತುಗಳಿಗೆ ಇದು ಹೊಳಪು ನೀಡುತ್ತದೆ. ಒಟ್ಟಾರೆ ಅಡುಗೆಮನೆಯ ಸ್ವಚ್ಛವಾಗಿಸಲು ನಿಂಬೆಹಣ್ಣನ್ನು ಹೇಗೆಲ್ಲಾ ಬಳಸಬಹುದು ನೋಡಿ.

ಸ್ಟೀಲ್ ಪಾತ್ರೆಗಳನ್ನು ನಿಂಬೆಯಿಂದ ಸ್ವಚ್ಛಗೊಳಿಸಿ

ಅಡುಗೆ ಮಾಡುವಾಗ ನಿರಂತರವಾಗಿ ಸ್ಟೀಲ್ ಪಾತ್ರೆಗಳನ್ನು ಬಳಸುವುದರಿಂದ ಇದರ ನೈಸರ್ಗಿಕ ಹೊಳಪು ಕಳೆದು ಹೋಗಬಹುದು. ಆದರೆ ಪಾತ್ರೆ ತೊಳೆಯುವಾಗ ಒಂದೆರಡು ಹನಿ ನಿಂಬೆರಸವನ್ನು ಬಳಸುವುದರಿಂದ ಸ್ಟೀಲ್‌ ಪಾತ್ರೆಯ ಹೊಳಪು ಮರಳುತ್ತದೆ. ನಿಮ್ಮ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಕೆಲವು ಹನಿ ನಿಂಬೆ ರಸವನ್ನು ಹಿಂಡಿ, ಮತ್ತು ಅವುಗಳ ಹೊಳಪು ಮತ್ತು ಒಟ್ಟಾರೆ ನೋಟದಲ್ಲಿ ಗಮನಾರ್ಹ ಸುಧಾರಣೆಯನ್ನು ನೀವು ಗಮನಿಸಬಹುದು. ಇದಲ್ಲದೆ, ನಿಮ್ಮ ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸಲು ನಿಂಬೆ ರಸವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ನಿಮ್ಮ ಸ್ಟೀಲ್-ಆಧಾರಿತ ಅಡಿಗೆ ವಸ್ತುಗಳ ಹೊಳಪು ಮರಳಿಸಲು ನಿಂಬೆಗಿಂತ ಉತ್ತಮ ಇನ್ನೊಂದಿಲ್ಲ.

ತರಕಾರಿ ಹೆಚ್ಚುವ ಬೋರ್ಡ್‌

ಪ್ರತಿದಿನ ಅಡುಗೆ ಮಾಡುವಾಗ ತರಕಾರಿ ಹೆಚ್ಚುವ ಬೋರ್ಡ್‌ ಬಳಕೆ ಸಾಮಾನ್ಯ. ನಿರಂತರ ಬಳಕೆಯಿಂದ ಈ ಬೋರ್ಡ್ ಮೇಲೆ ಜಿಡ್ಡುಗಟ್ಟಿದಂತೆ ಕಲೆಯಾಗಿರುತ್ತದೆ. ಇದನ್ನು ಸ್ವಚ್ಛ ಮಾಡಲು ನೀವು ನಿಂಬೆ ರಸ ಬಳಸಬಹುದು. ನಿಂಬೆಹಣ್ಣು ಕತ್ತರಿಸಿ, ಅದರ ರಸವನ್ನು ಚಾಪಿಂಗ್ ಬೋರ್ಡ್ ಅನ್ನು ಹಚ್ಚಿ, ನಂತರ ನಿಂಬೆ ತುಂಡಿನಿಂದ ಚೆನ್ನಾಗಿ ಉಜ್ಜಿ. ಕೆಲವು ನಿಮಿಷಗಳ ಕಾಲ ಹಾಗೇ ಬಿಡಿ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲೀಯ ಗುಣವು ಕಲೆಗಳನ್ನು ತೆಗೆದುಹಾಕಿ ವಾಸನೆಯನ್ನು ಹೋಗಲಾಡಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ನೀವು ತರಕಾರಿ ಹೆಚ್ಚುವ ಬೋರ್ಡ್ ಅನ್ನು ಬ್ರಷ್‌ ಹಾಗೂ ನೀರಿನಿಂದ ಚೆನ್ನಾಗಿ ಉಜ್ಜಿ ತೊಳೆಯಿರಿ. ಇದರಿಂದ ತರಕಾರಿ ಹೆಚ್ಚುವ ಬೋರ್ಡ್ ಹೊಸರಂತಾಗುತ್ತದೆ.

ನಿಂಬೆಹಣ್ಣಿನಿಂದ ಸ್ಟೌವ್ ಟಾಪ್ ಸ್ವಚ್ಛ ಮಾಡಿ

ನಿತ್ಯ ಅಡುಗೆ ಮಾಡುವುದರಿಂದ ಸ್ಟೌವ್ ಮೇಲೆ ಎಣ್ಣೆ ಹಾಗೂ ಜಿಡ್ಡಿನ ಅಂಶ ಶೇಖರಣೆಯಾಗುವುದು ಸಹಜ. ಕೆಲವೊಮ್ಮೆ ಇದನ್ನು ಸ್ವಚ್ಛ ಮಾಡುವುದು ಹರಸಾಹಸ ಎನ್ನಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ನಿಂಬೆರಸದಿಂದ ಇಂತಹ ಮೊಂಡುಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಸ್ವಲ್ಪ ತಾಜಾ ನಿಂಬೆ ರಸವನ್ನು ಸ್ಪಂಜಿನ ಮೇಲೆ ಹಿಂಡಿ, ನಂತರ ಆ ಸ್ಪಾಂಜಿನಿಂದ ಸ್ಟೌ ಮೇಲೆ ಚೆನ್ನಾಗಿ ಉಜ್ಜಿ. ನಿಂಬೆಹಣ್ಣು ಹಟಮಾರಿ ಜಿಡ್ಡಿನ ಕಲೆಗಳನ್ನೂ ನಿವಾರಿಸುತ್ತದೆ. ನಿಂಬೆಹಣ್ಣಿನಿಂದ ಉಜ್ಜಿದ ನಂತರ ಒಂದಿಷ್ಟು ಹೊತ್ತು ಹಾಗೆ ಬಿಡಿ. ನಂತರ ತೊಳೆಯಿರಿ, ಈಗ ಪಳಪಳ ಹೊಳೆಯುವ ಸ್ಟೌ ನಿಮ್ಮದಾಗುತ್ತದೆ.

ನಿಂಬೆಹಣ್ಣಿನಿಂದ ಚಾಕು ಸ್ವಚ್ಛ ಮಾಡಿ

ಚಾಕುಗಳು ಕೂಡ ನಿರಂತರ ಬಳಕೆಯಿಂದ ಮೊಂಡು ಹಿಡಿಯುತ್ತದೆ, ಅಂತಹ ಸಂದರ್ಭದಲ್ಲಿ ಚಾಕುವನ್ನು ಹರಿತಗೊಳಿಸಲು ನಿಂಬೆರಸ ಬಳಸಬಹುದು. ಇದು ಸುಲಭವಾಗಿ ತುಕ್ಕನ್ನು ತೊಡೆದು ಹಾಕುತ್ತದೆ. ನಿಂಬೆಯು ನಿಮ್ಮ ಚಾಕುಗಳಿಗೆ ತಾಜಾ ಹೊಳಪನ್ನು ನೀಡುವ ಮೂಲಕ ತುಕ್ಕುಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ ಮತ್ತು ಅವುಗಳನ್ನು ಹೊಚ್ಚಹೊಸದಾಗಿ ಕಾಣುವಂತೆ ಮಾಡುತ್ತದೆ. ನಿಂಬೆ ಸ್ಲೈಸ್‌ಗೆ ಸ್ವಲ್ಪ ಉಪ್ಪನ್ನು ಸೇರಿಸಿ ಚಾಕುವಿನ ಮೇಲೆ ಉಜ್ಜಿ, ಇದರಿಂದ ಚಾಕು ಹೊಸರಂತಾಗುತ್ತದೆ.

ನಿಮ್ಮ ಕಿಚನ್ ಟೈಲ್ಸ್ ಅನ್ನು ನಿಂಬೆಯಿಂದ ಸ್ವಚ್ಛಗೊಳಿಸಿ

ಬಾರಾಕ್ಸ್ ಪುಡಿಯನ್ನು ನಿಂಬೆರಸದ ಜೊತೆ ಬೆರೆಸಿ, ಇದನ್ನು ಅಡುಗೆ ಮನೆಯ ಗೋಡೆ, ನೆಲ, ರ್ಯಾಕ್ಸ್‌ ಮೇಲೆ ಚೆನ್ನಾಗಿ ಉಜ್ಜಿ. ಈ ಪೇಸ್ಟ್ ಮೂಲೆ ಮೂಲೆಯಲ್ಲಿರುವ ಕಲೆಗಳನ್ನು ನಿವಾರಿಸಲು ಕೂಡ ಪರಿಣಾಮಕಾರಿ. ಟೈಲ್ಸ್ ಮೇಲೆ ಜಿಡ್ಡು ಹಿಡಿದಂತಾಗಿದ್ದರೆ ಬೋರಾಕ್ ಪುಡಿ ಹಾಗೂ ನಿಂಬೆರಸ ಮಿಶ್ರಣ ಪೇಸ್ಟ್ ಅನ್ನು ಚೆನ್ನಾಗಿ ಉಜ್ಜಿ. ಇದರಿಂದ ಅಡುಗೆಮನೆಯ ಅಂದ ಬದಲಾಗುತ್ತದೆ. ಇದರಿಂದ ನಿಮ್ಮ ಅಡುಗೆ ಮನೆ ಕಂಡು ನಿಮಗೆ ಆಶ್ವರ್ಯವಾಗುವುದು ಖಂಡಿತ.

ನೋಡಿದ್ರಲ್ಲ, ಅಡುಗೆ ಮನೆಯನ್ನು ನಿಂಬೆಹಣ್ಣಿನಿಂದ ಹೇಗೆಲ್ಲಾ ಸ್ವಚ್ಛ ಮಾಡಬಹುದು ಎಂದು. ಅಡುಗೆಮನೆ ಕ್ಲೀನ್ ಮಾಡುವ ದುಬಾರಿ ಬೆಲೆಯ ರಾಸಾಯನಿಕಗಳನ್ನು ತರುವ ಬದಲು ನಿಂಬೆಹಣ್ಣು ತಂದರೆ ಸಾಕು, ಇದರಿಂದ ಅಡ್ಡಪರಿಣಾಮಗಳೂ ಕಡಿಮೆ.

mysore-dasara_Entry_Point