logo
ಕನ್ನಡ ಸುದ್ದಿ  /  ಜೀವನಶೈಲಿ  /  Food Business: ಕರ್ನಾಟಕದಲ್ಲಿ ಆರಂಭಿಸಬಹುದಾದ 10 ಫುಡ್‌ ಬಿಸ್ನೆಸ್‌ಗಳು; ಕಡಿಮೆ ಹೂಡಿಕೆ, ಹೆಚ್ಚು ಆದಾಯ

Food Business: ಕರ್ನಾಟಕದಲ್ಲಿ ಆರಂಭಿಸಬಹುದಾದ 10 ಫುಡ್‌ ಬಿಸ್ನೆಸ್‌ಗಳು; ಕಡಿಮೆ ಹೂಡಿಕೆ, ಹೆಚ್ಚು ಆದಾಯ

Praveen Chandra B HT Kannada

Dec 23, 2024 12:49 PM IST

google News

Food Business: ಕರ್ನಾಟಕದಲ್ಲಿ ಆರಂಭಿಸಬಹುದಾದ 10 ಫುಡ್‌ ಬಿಸ್ನೆಸ್‌ಗಳು

    • Top 10 Food Business Idea: ಕರ್ನಾಟಕದ ಯಾವುದಾದರೂ ನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ (ಕೆಲವೊಂದು ವ್ಯವಹಾರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ) ಏನಾದರೂ ಬಿಸ್ನೆಸ್‌ ಆರಂಭಿಸಲು ಬಯಸುವವರಿಗೆ ಇಲ್ಲಿ ಹತ್ತು ಫುಡ್‌ ಬಿಸ್ನೆಸ್‌ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.
Food Business: ಕರ್ನಾಟಕದಲ್ಲಿ ಆರಂಭಿಸಬಹುದಾದ 10 ಫುಡ್‌ ಬಿಸ್ನೆಸ್‌ಗಳು
Food Business: ಕರ್ನಾಟಕದಲ್ಲಿ ಆರಂಭಿಸಬಹುದಾದ 10 ಫುಡ್‌ ಬಿಸ್ನೆಸ್‌ಗಳು

Top 10 Food Business Idea: ಸ್ವಂತ ವ್ಯವಹಾರ ಆರಂಭಿಸಲು ಸಾಕಷ್ಟು ಜನರು ಬಯಸುತ್ತಾರೆ. ಯಾವ ಬಿಸ್ನೆಸ್‌ ಆರಂಭಿಸುವುದು ಎಂದು ಯೋಚಿಸುವವರು ಫುಡ್‌ ಬಿಸ್ನೆಸ್‌ ಕುರಿತು ಗಮನ ಹರಿಸಬಹುದು. ಭಾರತೀಯರು ಆಹಾರ ಪ್ರಿಯರು. ಇದೇ ಕಾರಣಕ್ಕೆ ಇದು ಅತ್ಯುತ್ತಮ ಬಿಸ್ನೆಸ್‌ ಐಡಿಯಾ. ಯಾವುದೇ ವ್ಯವಹಾರ ಆರಂಭಿಸುವ ಮೊದಲು ಸೂಕ್ತವಾದ ಯೋಜನೆ ಹಾಕಿಕೊಳ್ಳಿ. ಯಾವ ಸ್ಥಳದಲ್ಲಿ ಫುಡ್‌ ಬಿಸ್ನೆಸ್‌ ಮಾಡಬಹುದು? ಆ ಸ್ಥಳದಲ್ಲಿ ಸ್ಪರ್ಧೆ ಹೇಗಿದೆ? ಮಾರುಕಟ್ಟೆಯಲ್ಲಿ ಸ್ಪರ್ಧೆ ಹೇಗಿದೆ? ಯಾವೆಲ್ಲ ಸಲಕರಣೆಗಳು ಬೇಕು? ಕಚ್ಚಾ ವಸ್ತುಗಳು, ಲೈಸನ್ಸ್‌ ಇತ್ಯಾದಿ ವಿಷಯಗಳನ್ನು ಮೊದಲು ಬಗೆಹರಿಸಿಕೊಳ್ಳಿ. ಇದಾದ ಬಳಿಕ ಎಷ್ಟು ಹಣ ಹೂಡಿಕೆ ಮಾಡಬೇಕು ಎಂದು ಯೋಚಿಸಿ. ನಿಮ್ಮಲ್ಲಿರುವ ಬಜೆಟ್‌, ಪಡೆಯಬೇಕಾದ ಸಾಲ ಇತ್ಯಾದಿಗಳ ಕುರಿತು ಗಮನ ಹರಿಸಿ. ಇದಾದ ಬಳಿಕ ಬಿಸ್ನೆಸ್‌ ಸೆಟಪ್‌ ಬಗ್ಗೆ ಗಮನ ಹರಿಸಿ. ಈ ಎಲ್ಲಾ ವಿಷಯಗಳು ನಿಮಗೆ ತಿಳಿದಿರಬಹುದು ಅಥವಾ ಇತರರಿಂದ ತಿಳಿದುಕೊಳ್ಳಬಹುದು. ಅದಕ್ಕೂ ಮೊದಲು ಯಾವ ಫುಡ್‌ ಬಿಸ್ನೆಸ್‌ ಉತ್ತಮ ಯೋಚಿಸಿ. ನಿಮ್ಮ ಯೋಚನೆಗೆ ಅನುಕೂಲವಾಗುವಂತೆ ಮುಂದೆ 10 ಫುಡ್‌ ಬಿಸ್ನೆಸ್‌ ಐಡಿಯಾಗಳನ್ನು ನೀಡಲಾಗಿದೆ.

1. ಕಾಫಿ ಶಾಪ್‌: ನಿಮ್ಮ ಬಜೆಟ್‌ಗೆ ತಕ್ಕಂತೆ ಸಣ್ಣ ಚಹದಂಗಡಿ ಅಥವಾ ಚಂದದ ಕಾಫಿ ಶಾಪ್‌ ಹಾಕಬಹುದು. ನಗರಗಳಲ್ಲಿ, ಪಟ್ಟಣಗಳಲ್ಲಿ ಜನರಿಗೆ ಕಾಫಿ, ಚಹಾ ಬೇಕೇಬೇಕು. ಬೆಳಗ್ಗಿನಿಂದ ರಾತ್ರಿ ತನಕವೂ ಈ ಬಿಸ್ನೆಸ್‌ ಇರುತ್ತದೆ. ಕಾಫಿ ಶಾಪ್‌ನಲ್ಲಿ ಕೇವಲ ಕಾಫಿ ಮಾತ್ರ ಇರುವುದಲ್ಲ. ಇತರೆ ಆಹಾರಗಳನ್ನೂ ಇಡಬಹುದು. ಪುಟ್ಟ ಗೂಡಂಗಡಿ ರೀತಿ ಚಹದಂಗಡಿ ಇಟ್ಟು ಲಕ್ಷಾಂತರ ಹಣ ಸಂಪಾದನೆ ಮಾಡುವವರಿದ್ದಾರೆ. ಇದಲ್ಲದೆ ಸ್ವಲ್ಪ ಚಂದದ ಬ್ರಾಂಡೆಡ್‌ ಕಾಫಿ ಶಾಪ್‌ಗಳನ್ನೂ ಆರಂಭಿಸಬಹುದು. ಬಳಿಕ ಅಂತಹ ಹಲವು ಕಾಫಿ ಶಾಪ್‌ಗಳನ್ನು ಮಾಡಬಹುದು. ನಿಮ್ಮ ಬ್ರಾಂಡ್‌ ನೇಮ್‌ ಫೇಮಸ್‌ ಆದ್ರೆ ಕಾಫಿ ಶಾಪ್‌ ದೊಡ್ಡ ಉದ್ಯಮವೇ ಆಗಬಹುದು.

2. ಐಸ್‌ ಕ್ರೀಮ್‌ ಪಾರ್ಲರ್‌: ಈ ಚಳಿಗಾಲದಲ್ಲಿ ಐಸ್‌ಕ್ರೀಮ್‌ಗೆ ಬೇಡಿಕೆ ತುಸು ಕಡಿಮೆ ಇರಬಹುದು. ಆದರೆ, ಉಳಿದ ಬಹುತೇಕ ಸಮಯದಲ್ಲಿ ಐಸ್‌ಕ್ರೀಮ್‌ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಐಸ್‌ಕ್ರೀಮ್‌, ಜ್ಯೂಸ್‌ ಇತ್ಯಾದಿಗಳ ಶಾಪ್‌ ಹಾಕಬಹುದು. ನಿಮ್ಮ ಐಸ್‌ಕ್ರೀಮ್‌ ಮೆನು ಅತ್ಯಾಕರ್ಷಕವಾಗಿರಲಿ.

3. ಫುಡ್‌ ಟ್ರಕ್‌: ಬೆಂಗಳೂರಿನಂತಹ ನಗರಗಳಲ್ಲಿ ಗಾಡಿಗಳೇ ಸಂಚಾರಿ ಹೋಟೆಲ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಶೈನ್‌ ಶೆಟ್ಟಿಯ ಗಲ್ಲಿ ಕಿಚನ್‌ನಂತೆಯೂ ಫುಡ್‌ ಟ್ರಕ್‌ ಮಾಡಬಹುದು. ಇದೇ ರೀತಿಯ ಹಲವು ಫುಡ್‌ ಟ್ರಕ್‌ ಬಿಸ್ನೆಸ್‌ ಐಡಿಯಾಗಳನ್ನು ಮಾಡಬಹುದು.

4. ಫುಡ್‌ ಡೆಲಿವರಿ ಬಿಸ್ನೆಸ್‌: ಈಗ ಆನ್‌ಲೈನ್‌ನಲ್ಲಿ ಬುಕ್‌ ಆರ್ಡರ್‌ ಮಾಡುವವರು ಹೆಚ್ಚಾಗಿದ್ದಾರೆ. ಜೊಮೆಟೊದಂತಹ ಸಂಸ್ಥೆಗಳ ಜತೆ ಸೇರಿ ಫುಡ್‌ ಡೆಲಿವರಿ ಬಿಸ್ನೆಸ್‌ ಮಾಡಬಹುದು. ನೀವು ಸ್ವಂತ ಹೋಟೆಲ್‌ ಹೊಂದಿರಬೇಕಾಗಿಲ್ಲ. ನಿಮ್ಮ ಮನೆಯನ್ನೇ ಹೋಟೆಲ್‌ನಂತೆ ಮಾಡಿಕೊಂಡು ಗ್ರಾಹಕರಿಗೆ ಫುಡ್‌ ಡೆಲಿವರಿ ಮಾಡುವಂತಹ ಯೋಚನೆ ಮಾಡಬಹುದು.

5. ಬೇಕರಿ: ನಿಮಗೆ ಬೇಕರಿ ಕ್ಷೇತ್ರದಲ್ಲಿ ಐಡಿಯಾ ಇದ್ದರೆ ಒಳ್ಳೆಯ ಸ್ಥಳದಲ್ಲಿ ಬೇಕರಿ ಇಡಬಹುದು. ಈಗ ಒಂದು ರಸ್ತೆಯ ಪಕ್ಕ ನಾಲ್ಕೈದು ಬೇಕರಿಗಳಿದ್ದರೂ ಎಲ್ಲಾ ಬೇಕರಿಗಳಿಗೂ (ಗುಣಮಟ್ಟ ಉತ್ತಮವಾಗಿದ್ದರೆ) ಜನರು ಬರುತ್ತಾರೆ.

6. ಟಿಫಿನ್‌ ಸರ್ವೀಸ್‌: ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಟಿಫಿನ್‌ ಬಾಕ್ಸ್‌ಗಳಲ್ಲಿ ವಿವಿಧ ಆಫೀಸ್‌ಗಳಲ್ಲಿ ಇರುವವರಿಗೆ ನೀಡುವಂತಹ ಟಿಫಿನ್‌ ಸರ್ವೀಸ್‌ ಬಿಸ್ನೆಸ್‌ ಕೂಡ ಮಾಡಬಹುದು.

7. ಕ್ಲೌಡ್‌ ಕಿಚನ್‌: ಕೆಲವರು ಫುಡ್‌ ಡೆಲಿವರಿ ಮೂಲಕ ಆಹಾರ ಪಡೆಯಲು ಇಷ್ಟಪಡುವುದಿಲ್ಲ. ಹೋಟೆಲ್‌ನಲ್ಲಿಯೂ ತಿನ್ನಲು ಬಯಸುವುದಿಲ್ಲ. ಪಾರ್ಸೆಲ್‌ ರೂಪದಲ್ಲಿ ಆಹಾರ ಪಡೆಯಲು ಬಯಸುತ್ತಾರೆ. ಅಂದರೆ, ಡೆಲಿವರಿ ಓನ್ಲಿ ಸ್ಟೋರ್‌ಗಳಲ್ಲಿ ಆಹಾರ ಪಡೆಯಲು ಬಯಸುತ್ತಾರೆ. ಈ ಕ್ಲೌಡ್‌ ಕಿಚನ್‌ ಕಾನ್ಸೆಪ್ಟ್‌ ಬಗ್ಗೆಯೂ ಪರಿಶೀಲನೆ ನಡೆಸಬಹುದು.

8. ಸ್ನ್ಯಾಕ್ಸ್‌ ತಯಾರಿಕೆ: ಮಿಕ್ಸರ್‌, ಖಾರಕಡ್ಡಿ, ಕಡಲೆಬೀಜ ಇತ್ಯಾದಿ ಸ್ನ್ಯಾಕ್‌ಗಳನ್ನು ತಯಾರಿಸಿ ಪ್ಯಾಕೇಟ್‌ ಮಾಡಿ ಅಂಗಡಿಗಳಿಗೆ ಮಾರಾಟ ಮಾಡುವ ಬಿಸ್ನೆಸ್‌ ಕೂಡ ಮಾಡಬಹುದು.

9. ಫುಡ್‌ ಫ್ರಾಂಚೈಸಿ: ಈಗಾಗಲೇ ಹಲವು ಜನಪ್ರಿಯ ಫುಡ್‌ ಫ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಯಾವುದಾದರೂ ಕಂಪನಿಯಿಂದ ಫ್ರಾಂಚೈಸಿ ಪಡೆಯಬಹುದು.

10. ವೈನ್‌, ಬಿಯರ್‌: ಸಾಕಷ್ಟು ಜನರು ವೈನ್‌ ಬಿಸ್ನೆಸ್‌ ಮೂಲಕ ಯಶಸ್ಸು ಪಡೆಯುತ್ತಾರೆ. ದ್ರಾಕ್ಷಿ, ನೆಲ್ಲಿಕಾಯಿ, ನೇರಳೆ ಸೇರಿದಂತೆ ನಿಮ್ಮಲ್ಲಿ ಲಭ್ಯವಿರುವ ಹಣ್ಣುಗಳಿಂದ ವೈನ್‌ ಇತ್ಯಾದಿ ತಯಾರಿಸಿ ಮಾರಾಟ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ