logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

Reshma HT Kannada

Nov 15, 2024 10:33 AM IST

google News

ಬ್ರೈನ್ ಟೀಸರ್

    • ವಾರಪೂರ್ತಿ ವರ್ಕ್ ಫ್ರೆಶರ್ ಇದ್ದು ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರುವ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್‌, ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬ್ರೈನ್ ಟೀಸರ್‌ಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ದಿನಕ್ಕೊಂದು ರೀತಿಯ ಮೆದುಳಿಗೆ ಹುಳ ಬಿಡುವಂತಿರುವ ಪ್ರಶ್ನೆಗಳು ಈ ಬ್ರೈನ್ ಟೀಸರ್‌ನಲ್ಲಿರುತ್ತವೆ. ಇದಕ್ಕೆ ನಿರ್ದಿಷ್ಟ ಸಮಯದಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳು ತುಂಬಾನೇ ಚುರುಕಾಗುತ್ತದೆ. ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಏಕಾಗ್ರತೆಯ ಪ್ರಮಾಣ ವೃದ್ಧಿಯಾಗುತ್ತದೆ. ಇದೆಲ್ಲದರ ಜೊತೆಗೆ ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಟ್ರಿಕ್ಸ್‌ಗಳು ಬೆಳೆಯುತ್ತವೆ. ಜೊತೆಗೆ ಬ್ರೈನ್ ಟೀಸರ್‌ಗಳಿಂದ ಮೆದುಳಿಗೆ ರಿಲ್ಯಾಕ್ಸ್ ಸಿಗುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಸಮಯದಲ್ಲಿ ಮೆದುಳು ಒಂದಿಷ್ಟು ಹೊತ್ತು ಬೇರೇನೂ ಯೋಚಿಸದೇ ಒತ್ತಡ ಚಿಂತೆಗಳಿಂದ ದೂರಾಗುತ್ತದೆ. ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಕೊಳ್ಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ನೋಡಿ.

@Brainy_Bits_Hub ಎನ್ನುವ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. ಚಿತ್ರದಲ್ಲಿ ನಳ್ಳಿಯಿಂದ ನೀರು ಸುರಿಯುತ್ತಿದೆ. ಕೆಳಗಡೆ ಒಂದಿಷ್ಟು ಗ್ಲಾಸ್‌ಗಳನ್ನು ಇರಿಸಲಾಗಿದ್ದು, ಕೊಳವೆ ಮೂಲಕ ಗ್ಲಾಸ್‌ಗಳಿಗೆ ನೀರು ಸುರಿಯುತ್ತಿದೆ. ಹಾಗಾದರೆ ಇದರಲ್ಲಿ ಮೊದಲು ಯಾವ ಗ್ಲಾಸ್ ತುಂಬುತ್ತದೆ ಎಂದು ನೀವು ಹೇಳಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.

ನವೆಂಬರ್ 14 ರಂದು ಎಕ್ಸ್‌ ಪುಟದಲ್ಲಿ ಈ ಬ್ರೈನ್ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈಗಾಗಲೇ 1000ಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ. ಕೆಲವು ಲೈಕ್ ಮಾಡಿದ್ದು ಇನ್ನೂ ಕೆಲವು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಇದಕ್ಕೆ ಒಬ್ಬರೊಬ್ಬರು ಒಂದೊಂದು ರೀತಿ ಉತ್ತರ ಹೇಳಿದ್ದಾರೆ. ಕೆಲವರು 1 ಹಾಗೂ 3 ಮೊದಲು ತುಂಬುತ್ತೆ ಎಂದಿದ್ದಾರೆ. ಹಾಗಾದರೆ ಈ ಚಿತ್ರದಲ್ಲಿ ಮೊದಲು ಯಾವ ಗ್ಲಾಸ್‌ಗೆ ನೀರು ತುಂಬುತ್ತೆ ಅಂತ ನಿಮಗೆ ಅನ್ನಿಸುತ್ತೆ,ಉತ್ತರ ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ನಿಮಗೊಂದು ಚಾಲೆಂಜ್, ಚಿತ್ರದಲ್ಲಿ ಬೆಕ್ಕು ಎಲ್ಲಿದೆ ಹುಡುಕಿ

ಗಾರ್ಡನ್‌ನ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ ನಿಮ್ಮ ಕಣ್ಣಿಗೊಂದು ಸವಾಲಿದೆ. ನೀಲಿ ಹೂ ಬಿಡುವ ಗಿಡದ ಮಧ್ಯೆ ಬೆಕ್ಕೊಂದು ಅಡಗಿ ಕೂತಿದೆ. ಆ ಬೆಕ್ಕು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಶಾರ್ಪ್ ಆಗಿದ್ದರೆ ಮಾತ್ರ ಬೆಕ್ಕನ್ನು ಹುಡುಕಲು ಸಾಧ್ಯ.

Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಶನಿವಾರದ ಹೊತ್ತು ಮೆದುಳಿಗೆ ಹುಳ ಬಿಟ್ಕೋಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ನೀವು ಉತ್ತರ ಹೇಳಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ನೀವು ನಿಜಕ್ಕೂ ಜಾಣರಾಗಿದ್ರೆ ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿದಿವೆ ಹೇಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ