logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಇಲ್ಲಿರುವ ಕುಂಬಳಕಾಯಿ ರಾಶಿಯಲ್ಲಿ ಒಂದು ಮಾತ್ರ ಡಿಫ್ರೆಂಟಾಗಿದೆ; ಅದು ಯಾವುದು, 10 ಸೆಕೆಂಡ್‌ನಲ್ಲಿ ಹುಡುಕಿ

Optical Illusion: ಇಲ್ಲಿರುವ ಕುಂಬಳಕಾಯಿ ರಾಶಿಯಲ್ಲಿ ಒಂದು ಮಾತ್ರ ಡಿಫ್ರೆಂಟಾಗಿದೆ; ಅದು ಯಾವುದು, 10 ಸೆಕೆಂಡ್‌ನಲ್ಲಿ ಹುಡುಕಿ

Reshma HT Kannada

Nov 01, 2023 01:04 PM IST

google News

ಇಲ್ಲಿರುವ ಕುಂಬಳಕಾಯಿಯಲ್ಲಿ ಯಾವುದು ಭಿನ್ನವಾಗಿದೆ ಹೇಳಿ?

    • ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ನಿಮ್ಮ ತಲೆಗೆ ಹುಳ ಬಿಡುವುದು ಖಂಡಿತ. ಈ ಚಿತ್ರದಲ್ಲಿ ಒಂದು ಡಿಫ್ರೆಂಟ್‌ ಆಗಿರುವ ಕುಂಬಳಕಾಯಿ ಇದೆ. ಆ ಕುಂಬಳಕಾಯಿ ಯಾವುದು? 10 ಸೆಕೆಂಡ್‌ನಲ್ಲಿ ಹುಡುಕುವುದು ನಿಮಗಿರುವ ಚಾಲೆಂಜ್‌. 
ಇಲ್ಲಿರುವ ಕುಂಬಳಕಾಯಿಯಲ್ಲಿ ಯಾವುದು ಭಿನ್ನವಾಗಿದೆ ಹೇಳಿ?
ಇಲ್ಲಿರುವ ಕುಂಬಳಕಾಯಿಯಲ್ಲಿ ಯಾವುದು ಭಿನ್ನವಾಗಿದೆ ಹೇಳಿ?

ನಿಮಗೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಸವಾಲು ಸ್ವೀಕರಿಸೋದು ಇಷ್ಟ ಆದ್ರೆ ಇಲ್ಲೊಂದು ಅಪರೂಪದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಚಿತ್ರದಲ್ಲಿ ಹ್ಯಾಲೋವಿನ್‌ ಅಲಂಕಾರದಲ್ಲಿರುವ ಒಂದಿಷ್ಟು ಕುಂಬಳಕಾಯಿಗಳಿವೆ. ಈ ಎಲ್ಲದರ ನಡುವೆ ಒಂದು ಸಿಂಗರಿಸಿಕೊಂಡಿರುವ ಗ್ಲಾಮರಸ್‌ ಕುಂಬಳಕಾಯಿ ಇದೆ. ಹಾಗಾದರೆ ಆ ಕುಂಬಳಕಾಯಿ ಯಾವುದು, ಅದನ್ನು ಕಂಡುಹಿಡಿಯುವ ಚಾಲೆಂಜ್‌ ನಿಮ್ಮ ಮುಂದಿದೆ.

ಇದೀಗ ಈ ಹ್ಯಾಲೋವಿನ್‌ ಕುಂಬಳಕಾಯಿಯ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಹಲವರು ಇದಕ್ಕೆ ಉತ್ತರ ಕಂಡು ಹಿಡಿಯಲು ಸೋತಿದ್ದಾರೆ. ಕಾರಣ ಚಿತ್ರದಲ್ಲಿರುವ ಎಲ್ಲಾ ಕುಂಬಳಕಾಯಿಗಳು ಒಂದೇ ರೀತಿ ಗೋಚರವಾಗುತ್ತಿದೆ. ಆದರೂ ಇದರಲ್ಲಿ ಗ್ಲಾಮರಸ್‌ ಕುಂಬಳಕಾಯಿ ಇರುವುದಂತೂ ಸತ್ಯ.

ಹ್ಯಾಲೋವಿನ್‌ ಸಮಯದಲ್ಲಿ ಕ್ಯಾಪಿಟಲ್‌ ಹೇರ್‌ ಮತ್ತು ಬ್ಯೂಟಿ ತಜ್ಞರು ಈ ಇಂಟೆರೆಸ್ಟಿಂಗ್‌ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ರಚಿಸಿದ್ದರು. ಈ ಗ್ಲಾಮರಸ್‌ ಬೊಂಬೆಯು ಧಾಳವಾದ ಲಿಪ್‌ಸ್ಟಿಕ್‌ ಹಾಗೂ ದಪ್ಪನೆಯ ಕಣ್ರಪ್ಪೆಯನ್ನು ಹೊಂದಿದೆ. ಇದು ನಿಮಗೆ ಕ್ಲೂ.

ಇಷ್ಟೆಲ್ಲಾ ಕ್ಲೂ ಕೊಟ್ಟ ಮೇಲೆ ಹ್ಯಾಲೋವಿನ್‌ ಅಲಂಕಾರ ಗ್ಲಾಮರಸ್‌ ಕುಂಬಳಕಾಯಿಯನ್ನು ಕಂಡು ಹಿಡಿಯುವುದು ನಿಮಗೆ ಕಷ್ಟ ಅನ್ನಿಸೋದಿಲ್ಲ ತಾನೆ.

ಹಾಗಂತ ನಿಮಗೆ ಬೇಕೆನಿಸಿದಷ್ಟು ಸಮಯ ತೆಗೆದುಕೊಂಡು ಈ ಚಿತ್ರವನ್ನು ನೋಡುವ ಹಾಗಿಲ್ಲ. ಕೇವಲ 10 ಸೆಕೆಂಡ್‌ಗಳಲ್ಲಿ ನೀವು ಈ ಉತ್ತರ ಕಂಡುಹಿಡಿಯಬೇಕು. ನಿಜಕ್ಕೂ ಹದ್ದಿನ ಕಣ್ಣು ನಿಮ್ಮದಾಗಿದ್ರೆ ನೀವು ಉತ್ತರ ಕಂಡುಕೊಳ್ಳುತ್ತೀರಿ.

ನೋಡಿದ್ರಾ.... ಅಂದದ ಕುಂಬಳಕಾಯಿ ಯಾವುದು ಕಾಣಿಸ್ತಾ, ಕಾಣಿಸಿಲ್ಲ ಅಂದ್ರೆ ನಾವು ನಿಮಗೆ ಸಹಾಯ ಮಾಡ್ತೀವಿ.

ಕೆಳಗಿನಿಂದ ಎಡಭಾಗದಿಂದ ಚಿತ್ರವನ್ನು ನೋಡಿಕೊಂಡು ಬನ್ನಿ ನಿಮಗೆ ಲಿಫ್‌ಸ್ಟಿಕ್‌ ಹಚ್ಚಿರುವ ಸುಂದರಿ ಕಾಣಿಸುವುದು ಖಂಡಿತ.

ಎಷ್ಟು ಹುಡುಕಿದ್ರೂ ಸಿಕ್ತಾನೆ ಇಲ್ಲ ಇದೇನಪ್ಪಾ ಇವರು ಸುಳ್ಳು ಹೇಳ್ತಾ ಇದಾರೇನೋ ಅಂದ್ಕೊಂಬೇಡಿ, ಖಂಡಿತ ಇದರಲ್ಲಿ ಲಿಪ್‌ಸ್ಟಿಕ್‌ ಹಚ್ಚಿರುವ ಸುಂದರಿ ಇದ್ದಾಳೆ, ಅವಳನ್ನು ನಾವು ತೋರಿಸ್ತೀವಿ ನೋಡಿ.

ಇಲ್ಲಿದೆ ನೋಡಿ ಗ್ಲಾಮರಸ್‌ ಕುಂಬಳಕಾಯಿ

ಇದನ್ನೂ ಓದಿ

Optical Illusion: 8 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಅಡಗಿರುವ ಕಳ್ಳನನ್ನು ಹುಡುಕಿ; ನಿಮ್ಮ ಜಾಣ್ಮೆಗಿದು ಸವಾಲು

ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ಹಾಕುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರಗಳು ನಮ್ಮ ಕಣ್ಣಿನ ವೀಕ್ಷಣಾ ಸಾಮಾರ್ಥ್ಯವನ್ನು ಪರೀಕ್ಷೆ ಮಾಡುವ ಜೊತೆಗೆ ಗ್ರಹಿಕೆಯ ಸಾಮರ್ಥ್ಯವನ್ನೂ ಅಳೆಯುತ್ತವೆ. ಕೆಲವು ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ವ್ಯಕ್ತಿತ್ವವನ್ನೂ ತಿಳಿಸುತ್ತವೆ. ಚಿತ್ರದಲ್ಲಿ ಕಳ್ಳನೊಬ್ಬ ಅಡಗಿದ್ದಾನೆ. ಅವನನ್ನು ಪೊಲೀಸ್‌ ಹುಡುಕುತ್ತಿದ್ದಾನೆ. ಆದರೆ ಅವನು ಸಿಗುತ್ತಿಲ್ಲ. 8 ಸೆಕೆಂಡ್‌ನಲ್ಲಿ ಪೊಲೀಸರಿಗೆ ಕಳ್ಳನನ್ನು ಹುಡುಕಲು ನೀವು ಸಹಾಯ ಮಾಡಿ. ನಿಮ್ಮ ಸಮಯ ಈಗ ಶುರು…

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ