logo
ಕನ್ನಡ ಸುದ್ದಿ  /  ಜೀವನಶೈಲಿ  /  ಚೀನಾದ ಪಿಜ್ಜಾ ಹಟ್‌ನಲ್ಲಿ ಕಪ್ಪೆ ಪಿಜ್ಜಾ ಮಾರಾಟ: ಯಪ್ಪಾ, ಇದೆಂಥ ಆಹಾರ ಎಂದ ನೆಟ್ಟಿಗರು; ವೈರಲ್ ಸುದ್ದಿ

ಚೀನಾದ ಪಿಜ್ಜಾ ಹಟ್‌ನಲ್ಲಿ ಕಪ್ಪೆ ಪಿಜ್ಜಾ ಮಾರಾಟ: ಯಪ್ಪಾ, ಇದೆಂಥ ಆಹಾರ ಎಂದ ನೆಟ್ಟಿಗರು; ವೈರಲ್ ಸುದ್ದಿ

Reshma HT Kannada

Nov 26, 2024 06:21 PM IST

google News

ಚೀನಾದ ಪಿಜ್ಜಾ ಹಟ್‌ನ ಕಪ್ಪೆ ಪಿಜ್ಜಾ

    • ಪಿಜ್ಜಾ ಹಟ್ ಹೊಸ ರುಚಿಯ ಪಿಜ್ಜಾವೊಂದನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಆದರೆ ಇದು ಭಾರತದವರಿಗೆ ಖಂಡಿತ ಇಷ್ಟ ಆಗೊಲ್ಲ. ಆದರೆ ಚೀನಾದವರಿಗೆ ಫೇವರಿಟ್ ಆಗೋದು ಪಕ್ಕಾ. ಹಾಗಾದರೆ ಇದೆಂಥಾ ಪಿಜ್ಜಾ ಅಂತೀರಾ, ಅದುವೆ ಕಪ್ಪೆ ಪಿಜ್ಜಾ. ಈ ಕಪ್ಪೆ ಪಿಜ್ಜಾ ಬಗ್ಗೆ ಇನ್ನಷ್ಟು ತಿಳಿಬೇಕು ಅಂದ್ರೆ ಮುಂದೆ ಓದಿ.
ಚೀನಾದ ಪಿಜ್ಜಾ ಹಟ್‌ನ ಕಪ್ಪೆ ಪಿಜ್ಜಾ
ಚೀನಾದ ಪಿಜ್ಜಾ ಹಟ್‌ನ ಕಪ್ಪೆ ಪಿಜ್ಜಾ

ನಮ್ಮಲ್ಲಿ ಹಲವರಿಗೆ ಪಿಜ್ಜಾ ಫೇವರಿಟ್‌. ನೀವು ಬಗೆ ಬಗೆಯ ಪಿಜ್ಜಾಗಳ ರುಚಿ ನೋಡಿರಬಹುದು. ಆದರೆ ಚೀನಾದಲ್ಲಿ ನಾವು ನೋಡಿರದ, ಊಹಿಸಲೂ ಸಾಧ್ಯವಾಗದ ಪಿಜ್ಜಾವೊಂದನ್ನು ತಯಾರಿಸಲಾಗಿದೆ. ಅದುವೆ ಕಪ್ಪೆ ‍ಪಿಜ್ಜಾ. ಸಿಕ್ಕದ್ದನ್ನೆಲ್ಲಾ ತಿನ್ನುವ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತೆ ಚೀನಾ. ಕಪ್ಪೆ, ಇರುವೆ ಈ ಎಲ್ಲವೂ ಚೀನಿಗರ ಆಹಾರವೇ.

ಇದೀಗ ಕಪ್ಪೆ ಪಿಜ್ಜಾ ಮಾಡಿ ಬಡಿಸುತ್ತಿರುವ ಸುದ್ದಿ ಚೀನಾ ಮತ್ತೆ ಹಾಟ್ ಟಾಪಿಕ್ ಆಗುವಂತೆ ಮಾಡಿದೆ. ಚೀನಾದ ಪಿಜ್ಜಾ ಹಟ್ ಕಪ್ಪೆ ಪಿಜ್ಜಾ ತಯಾರು ಮಾಡಿದೆ. ಸಂಪೂರ್ಣವಾಗಿ ಡೀಪ್ ಪ್ರೈ ಮಾಡಿದ ಕಪ್ಪೆಯನ್ನು ಪಿಜ್ಜಾದಲ್ಲಿ ಇರಿಸಿ ನೀಡಲಾಗುತ್ತದೆ. ಮದರ್‌ಶಿಪ್ ಎಂಬ ನ್ಯೂಸ್‌ ವೆಬ್‌ಸೈಟ್ ಪ್ರಕಾರ ಚೀನಾದ ಪಿಜ್ಜಾ ಹಟ್‌ನ 'ಗಾಬ್ಲಿನ್ ಪಿಜ್ಜಾ' ದಟ್ಟವಾಗಿ ಹುರಿದ ಬುಲ್‌ಫ್ರಾಗ್ ಅನ್ನು ಹೊಂದಿದೆ. ಈ ಪಿಜ್ಜಾದ ಬೆಲೆ 169 ಯುವಾನ್ ಅಂದರೆ ಸರಿಸುಮಾರು 2,000 ರೂ.

ಪಿಜ್ಜಾ ಸರಣಿಯು ನವೆಂಬರ್ 18ರಂದು WeChat ಪೋಸ್ಟ್‌ನಲ್ಲಿ ಭಕ್ಷ್ಯವನ್ನು ಘೋಷಿಸಿತು. ಈ ಪಿಜ್ಜಾ ಆಯ್ದ ಔಟ್‌ಲೆಟ್‌ಗಳಿಂದ ಮುಂಗಡ-ಕೋರಿಕೆಗೆ ಲಭ್ಯವಿದೆ. ಇದನ್ನು ಸಂಪೂರ್ಣ ಬುಲ್‌ಫ್ರಾಗ್‌ ಮತ್ತು ಕೊತ್ತಂಬರಿಯೊಂದಿಗೆ ಬಡಿಸಲಾಗುತ್ತದೆ. ಪಿಜ್ಜಾವನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಪಿಜ್ಜಾದ ಚಿತ್ರವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕಪ್ಪೆ ಪಿಜ್ಜಾ ನೋಡಿದ ಮೇಲೆ ಪಿಜ್ಜಾ ಪ್ರಿಯರು ಯಪ್ಪಾ ದೇವರೇ ನಾ ಇನ್ನೆಂದು ಪಿಜ್ಜಾ ತಿನ್ನೋಲ್ಲ, ಈ ಚೀನಾದವರು ತಾವು ಖುಷಿ ತಿನ್ನೋ ಆಹಾರಕ್ಕೆ ಕಲ್ಲು ಹಾಕ್ತಾರೆ ಅಂತ ಶಾಪ ಹಾಕೋತಾ ಇದಾರಂತೆ. ಇದನ್ನು ಕಪ್ಪೆ ಪಿಜ್ಜಾದ ವೈರಲ್ ಚಿತ್ರ ನೋಡಿ ಹಲವರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ಕಪ್ಪೆ ಪಿಜ್ಜಾಗೆ ನೆಟ್ಟಿಗರ ಕಾಮೆಂಟ್

ಈ ಪೋಸ್ಟ್‌ಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರರು ‘ಇದನ್ನು ನೋಡಿದರೆ ಇಟಲಿಯ ಜನರು ಏನು ಯೋಚಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ‘ ಎಂದು ಬರೆದಿದ್ದಾರೆ, ‘ಇದನ್ನು ನೋಡಲಾಗುವುದಿಲ್ಲ. ಇದು ತುಂಬಾ ನಿಷ್ಪ್ರಯೋಜಕವಾಗಿದೆ‘ ಒಬ್ಬ ಬಳಕೆದಾರರು ವ್ಯಂಗ್ಯ ಮಾಡಿದ್ದಾರೆ. ‘ಕೊತ್ತಂಬರಿ ಮತ್ತು ಕಪ್ಪೆ? ಇದು ಇಂತಹ ಕಾಂಬಿನೇಷನ್‌‘ ಕಪ್ಪೆ ಮಾಂಸ ತಿನ್ನುವ ಕೆಲವು ಬಳಕೆದಾರರು ಇದು ಕೋಳಿ ಮತ್ತು ಮೀನಿನ ಮಾಂಸವನ್ನು ಹೋಲುತ್ತದೆ ಎಂದು ಹೇಳುತ್ತಿದ್ದಾರೆ.

ಆದ್ರೂ ಏನೋಪ್ಪಾ ಈ ಜನ ಇನ್ನು ಏನೇನು ತಿಂತಾರೋ, ಯಾವ ಯಾವ ಪ್ರಾಣಿಗಳನ್ನು ಹಿಡಿದು ತಂದು ಡೀಪ್ ಫ್ರೈ ಮಾಡಿ ಪಿಜ್ಜಾ ಮಾಡ್ತಾರೋ ಅಂತ ಕೋಪ ಮಾಡಿಕೊಳ್ಳುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ